Evening Digest: ಸೋಮವಾರದಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ? ನಟನ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಇಂದಿನ ಪ್ರಮುಖ ಸುದ್ದಿ

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಸೋಮವಾರದಿಂದ ರಾಜ್ಯದಲ್ಲಿ ನೈಟ್​ ಕರ್ಫ್ಯೂ? : ಹೆಚ್ಚು ಕಮ್ಮಿ ಕೊರೊನಾ ಮೂರನೇ ಅಲೆ (Corona 3rd Wave) ಮುನ್ಸೂಚನೆ ಸಿಕ್ಕಂತಿದೆ. ಈಗಾಗಲೇ ಆರೋಗ್ಯ ಇಲಾಖೆಯ (Health Department) ಮಾಹಿತಿಯ ಪ್ರಕಾರ 31 ಓಮೈಕ್ರಾನ್ ಕೇಸ್ ಗಳು (Omicron Cases) ಹಾಗೂ ಒಂದು ಪ್ರಕರಣ ಇಂದು ಬೆಳಕಿಗೆ ಬಂದಿದೆ. ಈ ಮೂಲಕ ದಿನದಿಂದ ದಿನಕ್ಕೆ ಓಮೈಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆ ನೈಟ್ ಕರ್ಫ್ಯೂ ಜಾರಿ ಮಾಡಬೇಕು ಎಂಬ ಬೇಡಿಕೆ ಹೆಚ್ಚಾಗಿದೆ. ಈ ವಿಚಾರದ ಕುರಿತು ನಾಳೆ CM ಅಧಿಕಾರಿಗಳ ಜೊತೆ ಸಭೆ ನಡೆಸಲು ತೀರ್ಮಾನ ಮಾಡಿದ್ದಾರೆ. ಪ್ರಕರಣಗಳ ಸಂಖ್ಯೆ ಕ್ಷಣ ಮಾತ್ರದಲ್ಲಿ ಏರಿಕೆಯಾಗುವ ಸಂಭವವೂ ಇದೆ. ಈ ಹಿನ್ನೆಲೆ ತಾಂತ್ರಿಕ ಸಲಹಾ ಸಮಿತಿಯಿಂದ ಈಗೀಂದಿಗಲೇ ಕೆಲವೊಂದು ಕಠಿಣ ಕ್ರಮ ಜಾರಿ ಮಾಡಲು ಸರ್ಕಾರಕ್ಕೆ ಸಲಹೆಗಳು ಹೋಗಿದೆ‌. ಈ ಪೈಕಿ ನೈಟ್ ಕರ್ಫ್ಯೂ ಕೂಡ ಒಂದು.

ನಟನ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಹಾಲಿವುಡ್(Hollywood)​ ಸಿನಿಮಾ ರಂಗದಲ್ಲಿ ಲೈಂಗಿಕ ಕಿರುಕುಳ(Sexual Harrasment) ಪ್ರಕರಣಗಳು ಹೆಚ್ಚು. ಇಲ್ಲಿಂದಲೇ ಮಿಟೂ ಅಭಿಯಾನವೂ ಶುರುವಾಗಿತ್ತು. ಪ್ರತಿದಿನ ಹೆಸರಾಂತ ನಟರ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳು ಕೇಳಿಬಂದಿತ್ತು. ಅದು ಈಗ ಮುಂದುವರೆದಿದ. ಒಂದೇ ನಟನ ವಿರುದ್ಧ ಹಲವಾರು ಮಹಿಳೆಯರಿಂದ ಲೈಂಗಿಕ ಕಿರುಕುಳ ಆರೋಪಗಳು ಕೇಳಿಬಂದಿದೆ.  ಗಾಯಕಿ ಲಿಸಾ ಜೆಂಟೈಲ್(Lisa Gentile)ಅವರು ಅಮೆರಿಕನ್ ನಟ ಕ್ರಿಸ್ ನಾತ್(American Actor  Chris Noth)ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಇದೀಗ ಖ್ಯಾತ ನಟನ ವಿರುದ್ಧ ನಾಲ್ಕನೇ ಮಹಿಳೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ತನ್ನ ವಕೀಲೆ ಗ್ಲೋರಿಯಾ ಅಲೆರ್ಡ್ ಜೊತೆ ಮಾತನಾಡಿದ ನಟಿ, ಸೆಕ್ಸ್ & ದಿ ಸಿಟಿ(Sex And The City) ನಟ 2002ರಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದಾರೆ. ಇದೇ ನಟನ ವಿರುದ್ಧ ಈ ಹಿಂದೆ ಮೂರು ಮಹಿಳೆಯರು ಲೈಂಗಿಕ ಆರೋಪ ಕೇಳಿಬಂದಿತ್ತು. ಇದೀಗ ಖ್ಯಾತ ಸಿಂಗರ್​​ ನಟನ ವಿರುದ್ಧ ಆರೋಪ ಮಾಡಿದ್ದಾರೆ.  ಕ್ರಿಸ್​ ನೋತ್​ ಸಿಂಗರ್ ​ಅನ್ನು ಬಲವಂತವಾಗಿ ಎಳೆದು ಕಿಸ್(Kiss)​ ಮಾಡಿ ಎದೆಗೆ ಕೈ ಹಾಕಿದ್ದಾರೆ ಎಂದು ಲಿಸಾ ಗಂಭೀರ ಆರೋಪ ಮಾಡಿದ್ದಾರೆ.

 ಕೇವಲ 22 ವರ್ಷಕ್ಕೆ ಹಾರ್ಟ್​ ಅಟ್ಯಾಕ್​..!

ಕೇವಲ 22 ವರ್ಷದ ಯುವಕ ಆಟವಾಡುವಾಗ ಮೈದಾನದಲ್ಲೇ ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿರುವ ಶಾಕಿಂಗ್​ ಘಟನೆ ನಡೆಸಿದೆ. ಹೃದಯಾಘಾತದಿಂದ ಹಾಕಿ ಕ್ರೀಡಾಪಟು ಸೋಮಯ್ಯ (22) ಮೈದಾನದಲ್ಲೇ ಮೃತಪಟ್ಟಿದ್ದಾರೆ. ಮಡಿಕೇರಿ ತಾಲ್ಲೂಕಿನ ಮೂರ್ನಾಡಿನಲ್ಲಿ ನಡೆಯುತ್ತಿದ್ದ ಸ್ಥಳೀಯ ಹಾಕಿ ಪಂದ್ಯದ ವೇಳೆ ದುರ್ಘಟನೆ ನಡೆದಿದೆ. ಹಾಕಿ ಹಾಡುತ್ತಿರುವಾಗಲೇ ಹೃದಯಾಘಾತದಿಂದ ಸೋಮಯ್ಯ ಕುಸಿದು ಬಿದ್ದಿದ್ದಾರೆ. ಮೈದಾನದಲ್ಲಿ ಕುಸಿದು ಬಿದ್ದ ಸೋಮಯ್ಯರನ್ನು ಮಡಿಕೇರಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಸಾವು ಸಂಭವಿಸಿದೆ. ವಿಠಲ್ ದೇವಯ್ಯ ಎಂಬುವವರ ಪುತ್ರ ಸೋಮಯ್ಯ ಸಾವು ಎಲ್ಲರನ್ನೂ ಅಘಾತಕ್ಕೀಡು ಮಾಡಿದೆ.

ಯತ್ನಾಳ್ ಹಿಂದೂ ಹುಲಿ, ಡಬಲ್ ಇಂಜಿನ್ ಇರುವ ಮನುಷ್ಯ

ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​​​( Basanagouda Patil Yatnal) ಹಿಂದೂ ಹುಲಿ(Hindu Tiger), ನಮ್ಮೆಲ್ಲರ ಆತ್ಮೀಯ ಎಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಶಬ್ಬಾಶ್​ ಗಿರಿ ನೀಡಿದರು. ಬಸನಗೌಡ ಪಾಟೀಲ ನೇರನುಡಿಯ ಮನುಷ್ಯ, ಅವರ ಬಗ್ಗೆ ನಮಗೆ ಗೌರವ ಇದೆ. ವಿಜಯಪುರಕ್ಕೆ ಬರಲು ನನಗೆ ಸಂತಸವಾಗಿದೆ. ವಿಜಯಪುರದ ಜನತೆ ಕಾಯಕಯೋಗಿಗಳು, ನೇರ ನುಡಿಯವರು, ಗಂಡು ಮೆಟ್ಟಿದ ನಾಡಿನವರು. ಈ ಗಂಡು ಮೆಟ್ಟಿದ ನಾಡನ್ನು ಪ್ರತಿನಿಧಿಸುವ ಯತ್ನಾಳ್​​​​ ಅವರು ಡಬಲ್‌ ಇಂಜಿನ್ ಇರುವವರು. ಬರಗಾಲ ಜಿಲ್ಲೆ ಎನ್ನುವ ಹಣೆಪಟ್ಟಿಯನ್ನು ವಿಜಯಪುರ ಜಿಲ್ಲೆ ಹೊತ್ತುಕೊಳ್ಳಬಾರದು. ನೆಲ, ಜಲ ಅಭಿವೃದ್ಧಿಗಾಗಿ ನಾವು ಒಕ್ಕಟ್ಟಾಗಿ ಕೆಲಸ‌ ಮಾಡಬೇಕು, ಒಗ್ಗಟ್ಟಿನ ಕೊರತೆಯಿಂದ ಅಭಿವೃದ್ಧಿ ಆಗಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ, ಒಂದು ತಿಂಗಳು ರಾಜಕಾರಣ ಮಾಡೋಣ. ಗೋಡಾ ಹೈ ಮೈದಾನ್ ಹೈ (ಕುದುರೆನೂ ಇದೆ, ಮೈದಾನನೂ ಇದೆ) ಜನ್ರು ಯಾರು ಬೇಕು ಎಂದು ತೀರ್ಮಾನ ಮಾಡ್ತಾರೆ. ಆಗ ಆಡಳಿತ ತಾನೆ ಸುಧಾರಣೆ ಆಗುತ್ತೆ ಎಂದರು.

ಬಿಜೆಪಿಗೆ 1000 ರೂ ನೀಡಿದ ಪ್ರಧಾನಿ ಮೋದಿ

ಸದೃಢ ಭಾರತ ನಿರ್ಮಾಣಕ್ಕಾಗಿ ಪಕ್ಷ ಬಲಗೊಳಿಸಲು ಭಾರತೀಯ ಜನತಾ ಪಕ್ಷಕ್ಕೆ (BJP) ಸೂಕ್ಷ್ಮ ದೇಣಿಗೆ ಸಂಗ್ರಹಿಸಲು ಮುಂದಾಗಿದೆ. ಕಾರ್ಯಕರ್ತರಿಗೆ, ಜನರಿಗೆ ಹೊರೆಯಾಗದಂತೆ ಸಣ್ಣ ಪ್ರಮಾಣದಲ್ಲಿ ಹಣವನ್ನು (Donation) ಸಂಗ್ರಹ ಮಾಡಲಾಗುತ್ತಿದ್ದು, ಈ ಅಭಿಯಾನಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಕ್ಷದ ಬಲವರ್ಧನೆಗೆ 1000 ರೂ ದೇಣಿಗೆ ನೀಡಿದ್ದು, ಕಾರ್ಯಕರ್ತರಿಗೂ ದೇಣಿಗೆ ನೀಡುವಂತೆ ಪ್ರೋತ್ಸಾಹಿಸಿದ್ದಾರೆ. ಅಟಲ್ ಬಿಹಾರ್ ವಾಜಪೇಯಿ ಜನ್ಮ ದಿನವಾದ ಇಂದಿನಿಂದ ರಾಷ್ಟ್ರಾದ್ಯಾಂತ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಫೆ. 11ರಂದು ದೀನ್ ದಯಾಳ್​ ಉಪಾಧ್ಯಾಯ ಅವರ ಪುಣ್ಯತಿಥಿಯಂದು ಕೊನೆಗೊಳ್ಳಲಿದೆ.

ಒಂದೇ ಒಂದು ಚಾನ್ಸ್​ ಕೊಡಿ ಅಂದಿದ್ಯಾಕೆ ಜಗ್ಗೇಶ್

ನಟ ಜಗ್ಗೇಶ್‌ ಅವರಿಗೆ 18ನೇ ವರ್ಷ ವಯಸ್ಸು ಇದ್ದಾಗ ಏನು ಮಾಡ್ತಿದ್ದರು, ಚಿತ್ರರಂಗಕ್ಕೆ ಎಂಟ್ರಿ ಕೊಡಲು ಯಾವ ಟ್ರಿಕ್‌ ಬಳಸುತ್ತಿದ್ದರು ಎನ್ನುವುದನ್ನು ಹೇಳಿಕೊಂಡಿದ್ದಾರೆ. ಫೇಸ್​​ ಆ್ಯಪ್​ ಮೂಲಕ ತಮ್ಮ ಮುಖವನ್ನು ಎಡಿಟ್ ಮಾಡಿದ್ದಾರೆ. 18 ವರ್ಷದಂತೆ ಯುವಕನಂತೆ ಕಾಣುವ ಜಗ್ಗೇಶ್​ ಸಖತ್​ ಡೈಲಾಗ್ಸ್​ ಹೊಡೆದಿದ್ದಾರೆ. ಜಗ್ಗೇಶ್​ ಸಿನಿಮಾಗೆ ಬರುವ ಮುನ್ನ ಹೇಗೆಲ್ಲಾ ಡವ್​ ಮಾಡುತ್ತಿದ್ದರು ಎದು ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋ ಇದಿಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.
Published by:Kavya V
First published: