• Home
  • »
  • News
  • »
  • state
  • »
  • Top-5 News: ಪೇಸಿಎಂ ಅಭಿಯಾನ ಡರ್ಟಿ ಪಾಲಿಟಿಕ್ಸ್ ಎಂದ್ರು ಬೊಮ್ಮಾಯಿ, ಬಿಗ್​ ಬಾಸ್​ ಮನೆಗೆ ಸ್ಪರ್ಧಿಗಳ ಬಿಗ್​ ಎಂಟ್ರಿ!​; ಇಂದಿನ ಟಾಪ್‌ ನ್ಯೂಸ್ ಇಲ್ಲಿವೆ

Top-5 News: ಪೇಸಿಎಂ ಅಭಿಯಾನ ಡರ್ಟಿ ಪಾಲಿಟಿಕ್ಸ್ ಎಂದ್ರು ಬೊಮ್ಮಾಯಿ, ಬಿಗ್​ ಬಾಸ್​ ಮನೆಗೆ ಸ್ಪರ್ಧಿಗಳ ಬಿಗ್​ ಎಂಟ್ರಿ!​; ಇಂದಿನ ಟಾಪ್‌ ನ್ಯೂಸ್ ಇಲ್ಲಿವೆ

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ

  • Share this:

ದೇವನೂರ ಮಹಾದೇವ ಸೇರಿದಂತೆ 7 ಲೇಖಕರ ಪಠ್ಯ ಕೈಬಿಟ್ಟ ಸರ್ಕಾರ


ಬೆಂಗಳೂರು (ಸೆ.24): ಪುಸ್ತಕ ಪರಿಷ್ಕರಣೆ ವಿವಾದದ ಬಳಿಕ ಅನೇಕ ಲೇಖಕರು ಶಾಲಾ ಪಠ್ಯ ಪುಸ್ತಕದಲ್ಲಿ ತಮ್ಮ ಪಠ್ಯಗಳನ್ನು ಕೈಬಿಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ರು, ಇದೀಗ ಶಿಕ್ಷಣ ಇಲಾಖೆ (Education Departmen) ವಿಶೇಷ ಸುತ್ತೋಲೆ ಹೊರಡಿಸುವ ಮೂಲಕ 7 ಲೇಖಕರ ಪಠ್ಯವನ್ನು ಕೈಬಿಟ್ಟಿದೆ. ಲೇಖಕ ದೇವನೂರ ಮಹಾದೇವ (Devanur Mahadeva) ಹಾಗೂ ಜಿ.ರಾಮಕೃಷ್ಣ ಸೇರಿ 7 ಲೇಖಕರ ಪಠ್ಯವನ್ನು ಕೈಬಿಟ್ಟಿರುವುದಾಗಿ ಶಿಕ್ಷಣ ಇಲಾಖೆ ತಿಳಿಸಿದೆ. ಈ ಲೇಖಕರು ಅನುಮತಿ ಹಿಂಪಡೆದಿರುವ ಹಿನ್ನೆಲೆಯಲ್ಲಿ ಪಠ್ಯದಲ್ಲಿದ್ದ ಈ ಸಾಹಿತಿಗಳ ಗದ್ಯ ಮತ್ತು ಪದ್ಯಗಳನ್ನು ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಶಿಕ್ಷಣ ಇಲಾಖೆ ವಿಶೇಷ ಸುತ್ತೋಲೆ ಹೊರಡಿಸಿದೆ.


ಪೇಸಿಎಂ ಅಭಿಯಾನ ಡರ್ಟಿ ಪಾಲಿಟಿಕ್ಸ್;


ಚಿತ್ರದುರ್ಗ (ಸೆ.24): ಸಿರಿಗೆರೆಯಲ್ಲಿ ಲಿಂ. ಶಿವಕುಮಾರ ಶಿವಾಚಾರ್ಯ ಶ್ರೀಗಳ 30ನೇ ಶ್ರದ್ಧಾಂಜಲಿ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ​ ಬೊಮ್ಮಾಯಿ (CM Basavaraj Bommai), ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ಮುಖಂಡರು ಭಾಗಿಯಾಗಿದ್ರು. ಇದೇ ವೇಳೆ ಮಾತಾಡಿದ ಸಿಎಂ ಬಸವರಾಜ ಬೊಮ್ಮಾಯಿ  ಕಾಂಗ್ರೆಸ್ (Congress)​ ವಿರುದ್ಧ ಕಿಡಿಕಾರಿದ್ರು. ಕಾಂಗ್ರೆಸ್​ನವರು ಮಾಡ್ತಿರೋ ಪೇಸಿಎಂ ಅಭಿಯಾನ ಡರ್ಟಿ ಪಾಲಿಟಿಕ್ಸ್ (Dirty Politics). ನೇರವಾಗಿ ಮಾತನಾಡುವ, ಎದುರಿಸುವ, ದಾಖಲೆ ನೀಡುವ ಬದಲು ಅನ್ಯ ಮಾರ್ಗ ತುಳಿದಿದೆ. ಇದು ಕಾಂಗ್ರೆಸ್ ನೈತಿಕತೆಯ ಅಧಃಪತನದ ಸೂಚಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: CM Basavaraj Bommai: ಪೇಸಿಎಂ ಅಭಿಯಾನ ಡರ್ಟಿ ಪಾಲಿಟಿಕ್ಸ್; ಕಾಂಗ್ರೆಸ್​ಗೆ ವಾರ್ನಿಂಗ್​ ಕೊಟ್ಟ ಸಿಎಂ ಬೊಮ್ಮಾಯಿ

PFI ವಿರುದ್ಧ ದಾಳಿ ನಡೆಸಿದ್ದೇಕೆ ಇಡಿ?


ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯನ್ನು ಗುರಿಯಾಗಿಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಯೋಜಿಸಿತ್ತು. ಅಲ್ಲದೇ ವಿವಾದಿತ ಸಂಘಟನೆಯು ಯುಪಿಯಲ್ಲಿನ ಸೂಕ್ಷ್ಮ ಸ್ಥಳಗಳು ಮತ್ತು ವ್ಯಕ್ತಿಗಳ ಮೇಲೆ ದಾಳಿ ನಡೆಸಲು ಭಯೋತ್ಪಾದಕ ಘಟಕಗಳು, ಮಾರಕ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳ ಸಂಗ್ರಹದಲ್ಲಿ ತೊಡಗಿಸಿಕೊಂಡಿತ್ತು ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಈ ವರ್ಷದ ಜುಲೈ 12 ರಂದು ಪ್ರಧಾನಿ ನರೇಂದ್ರ ಮೋದಿ ಪಾಟ್ನಾ ಭೇಟಿಯ ಸಂದರ್ಭದಲ್ಲಿ ಅವರ ಮೇಲೆ ದಾಳಿ ನಡೆಸಲು ಸಂಚು ರೂಪಿಸಿತ್ತು. ಈ ನಿಟ್ಟಿನಲ್ಲಿ ತರಬೇತಿ ಶಿಬಿರ ಆಯೋಜಿಸಿತ್ತು ಎಂದಿದೆ.


ಭಾರತ್ ಜೋಡೋ ಯಾತ್ರೆ ಪೂರ್ವ ಸಿದ್ಧತಾ ಸಭೆ


ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ಯಶಸ್ವಿಗೆ ಕಾಂಗ್ರೆಸ್ ನಾಯಕರು ಪಣ ತೊಟ್ಟಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಸಂಸದ ಡಿ.ಕೆ ಸುರೇಶ್ ನಿವಾಸದಲ್ಲಿ ಪೂರ್ವ ತಯಾರಿ ಸಭೆ ನಡೆಸಲಾಯ್ತು. ಪೂರ್ವ ತಯಾರಿ ಸಭೆಯಲ್ಲಿ ಕಾಂಗ್ರೆಸ್ ನಾಯರು ಹಾಗೂ ರಾಹುಲ್ ಗಾಂಧಿ ಆಪ್ತ ಸಹಾಯಕರು ಭಾಗಿಯಾಗಿದ್ದು ವಿಶೇಷವಾಗಿತ್ತು. ಈ ಕೊನೇ ಹಂತದ ಸಿದ್ಧತಾ ಸಭೆಯಲ್ಲಿ ರಾಹುಲ್ ಗಾಂಧಿ ಆಪ್ತ ಸಹಾಯಕರು ಭಾಗಿಯಾಗಿ ಮಾಹಿತಿ ಪಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಯಾತ್ರೆಯ ರಾಷ್ಟ್ರೀಯ ಸಂಯೋಜಕ ಕೆಬಿ ಬೈಜು, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ , ಸಂಸದ ಡಿಕೆ ಸುರೇಶ್ ಭಾಗಿಯಾಗಿದ್ರು.


ಇದನ್ನೂ ಓದಿ: Bharat Jodo Yatra: ಸಂಸದ ಡಿ ಕೆ ಸುರೇಶ್ ನಿವಾಸದಲ್ಲಿ ಪೂರ್ವ ಸಿದ್ಧತಾ ಸಭೆ; ರಾಹುಲ್​ ಗಾಂಧಿ ಆಪ್ತ ಸಹಾಯಕರು ಭಾಗಿ


ಬಿಗ್​ಬಾಸ್ ಮನೆಗೆ ಅನುಪಮಾ ಗೌಡ, ಪ್ರಶಾಂತ್ ಸಂಬರ್ಗಿ, ಅರುಣ್ ಸಾಗರ್


ಬಿಗ್ ಬಾಸ್ ಸೀಸನ್ 9ರ (Bigg Boss Season 9) ಪ್ರೋಮೋ (Promo) ಬಿಡುಗಡೆ ಮಾಡಲಾಗಿದ್ದು ಇದರಲ್ಲಿ ಅದ್ಧೂರಿ ಕಾರ್ಯಕ್ರಮದ ಒಂದು ಕಿರುನೋಟ ಲಭ್ಯವಾಗಿದೆ.  ನಟಿ ಅನುಪಮಾ ಗೌಡ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ಈ ಹಿಂದೆ ಶೋನಲ್ಲಿ ಭಾಗವಹಿಸಿ ಕನ್ನಡಿಗರ ಮನ ಗೆದ್ದಿದ್ದರು. ಸೀಸನ್​ 8ರಲ್ಲಿ ಸ್ಪರ್ಧಿಯಾಗಿದ್ದ ಅರುಣ್ ಸಂಬರ್ಗಿ ಕೂಡ ಸೀಸನ್​ 9 ನಲ್ಲಿ ಇರಲಿದ್ದಾರೆ. ಅರುಣ್ ಸಾಗರ್ ಬಿಗ್​ ಬಾಸ್ ಸೀಸನ್​ನಲ್ಲಿ ಮತ್ತೆ ಎಂಟ್ರಿ ಕೊಟ್ಟಿದ್ದು ಹಿಂದಿಗಿಂತ ಬಹಳಷ್ಟು ಭಿನ್ನವಾಗಿ ಅವರು ಕಾಣಿಸಿಕೊಂಡಿದ್ದಾರೆ.

Published by:ಪಾವನ ಎಚ್ ಎಸ್
First published: