Evening Digest: ಎಸಿಬಿ ದಾಳಿ ಸಂಪೂರ್ಣ ವಿವರ ಇಲ್ಲಿದೆ: ರಮೇಶ್ ಜಾರಕಿಹೊಳಿರನ್ನ ಟಾರ್ಗೆಟ್ ಮಾಡಿದ ಡಿಕೆಶಿ: ಇಂದಿನ ಪ್ರಮುಖ ಸುದ್ದಿಗಳು

Kannada news Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ಎಸಿಬಿ ದಾಳಿ ಸಂಪೂರ್ಣ ವಿವರ ಇಲ್ಲಿದೆ: ಇಂದು ಬೆಳಗ್ಗೆ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ (Karnataka) 60 ಕಡೆ ಏಕಕಾಲದಲ್ಲಿ ಭ್ರಷ್ಟಾಚಾರ ನಿಗ್ರಹ ದಾಳಿ (ACB) ನಡೆಸಿದೆ. ದಾಳಿಯ ಕುರಿತು ಎಸಿಬಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಹೇಳಿಕೆಯಲ್ಲಿ 15 ಭ್ರಷ್ಟ  ಅಧಿಕಾರಿಗಳ ವಿವರ (Officers Details) ಮತ್ತು ಅವರ ಮೇಲಿರುವ ಆರೋಪಗಳ (Allegation) ಮಾಹಿತಿಯನ್ನು ಬಿಚ್ಚಿಟ್ಟಿದೆ. ಈಗಾಗಲೇ ದಾಳಿಗೆ ಒಳಗಾದ ಅಧಿಕಾರಿಗಳ ಮನೆಯಲ್ಲಿರುವ ಚಿನ್ನಾಭರಣಗಳ ಫೋಟೋಗಳು ಹೊರ ಬರುತ್ತಿವೆ. ಒಬ್ಬೊಬ್ಬರು ಕೋಟಿಗಳ ಒಡೆಯರಾಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಅಧಿಕಾರಿಗಳ ನಿವಾಸ ಮತ್ತು ಬೇರೆ ಬೇರೆ ನಗರಗಳಲ್ಲಿರುವ ಕುಟುಂಬಸ್ಥರ ನಿವಾಸದ ಮೇಲೆಯೂ ದಾಳಿ ನಡದಿದೆ. ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ. ಪೂರ್ತಿ ಓದಿಗಾಗಿ ಇಲ್ಲಿ ಕ್ಲಿಕ್​ ಮಾಡಿ 

ರಮೇಶ್​ ಜಾರಕಿಹೊಳಿರನ್ನ ಟಾರ್ಗೆಟ್​ ಮಾಡಿದ ಡಿಕೆಶಿ

ಕಾಂಗ್ರೆಸ್​​ (Congress) ತೊರೆದು ಬಿಜೆಪಿಗೆ (BJP)ಹೋಗಿರುವ ಮಾಜಿ ಸಚಿವ ಎ.ಮಂಜು (A Manju) ಪುನಃ ಕಾಂಗ್ರೆಸ್​ ಬಾಗಿಲು ತಟ್ಟುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು. ಇದರ ಬೆನ್ನಲ್ಲೇ ಎ.ಮಂಜು ಅವರ ಪುತ್ರ ಮಂಥರ್​ ಗೌಡಗೆ (Mantar Gowda) ಕಾಂಗ್ರೆಸ್​​ ಟಿಕೆಟ್​ ನೀಡಿದೆ. ವಿಧಾನ ಪರಿಷತ್​ ಚುನಾವಣೆಗೆ ಕೊಡಗಿನಿಂದ ಮಂಥರ್​ ಗೌಡ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅಪ್ಪ ಬಿಜೆಪಿಯಲ್ಲಿರುವಾಗ, ಮಗ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡುತ್ತಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಮಂಥರ್​ ಗೌಡ ನಾಮಪತ್ರ ಸಲ್ಲಿಸುತ್ತಿದ್ದಂತೆ ಎ.ಮಂಜು ಅವರಿಗೆ ನಿನ್ನೆ ಬಿಜೆಪಿ ಶಾಕ್​ ಕೊಡ್ತು. ಬಿಜೆಪಿ ಪಕ್ಷ ನೀಡಿದ್ದ ಎಲ್ಲಾ ಜವಾಬ್ದಾರಿಗಳಿಂದ ಎ.ಮಂಜುರನ್ನು ಮುಕ್ತಿಗೊಳಿಸಿ ಆದೇಶ ಹೊರಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ​ ಎ.ಮಂಜು ಮೇಲೆ ಶಿಸ್ತು ಕ್ರಮ ತೆಗೆದುಕೊಂಡಂತೆ ಬೆಳಗಾವಿಯಲ್ಲಿ ರಮೇಶ್​ ಜಾರಕಿಹೊಳಿ ವಿರುದ್ಧ ಬಿಜೆಪಿ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ಬಿಜೆಪಿಯವರು ಮಂಜು ‌ಬಗ್ಗೆಯೇನೋ ನಿರ್ಧಾರ ತೆಗೆದುಕೊಂಡರು. ಆದರೆ ಬೆಳಗಾವಿ ವಿಚಾರವಾಗಿ ಯಾಕೆ ನಿರ್ಧಾರ ಮಾಡ್ತಿಲ್ಲ ಎಂದು ಪ್ರಶ್ನಿಸಿದರು. ಕ್ರಮ ತೆಗೆದುಕೊಳ್ಳೋಕೆ ಬಿಜೆಪಿಯವರಿಗೆ ಧಂ ಇಲ್ಲ ಎಂದರು.

ನಿಮ್ಮ ಉತ್ಸಾಹವನಷ್ಟೇ ಮೆಚ್ಚಬೇಕು

ಮಳೆಹಾನಿ (Rain Damage) ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai), ಇಂದು ಬಿಬಿಎಂಪಿ (BBMP) ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ಬಗ್ಗೆ‌ ಡಿಕೆಶಿ ವ್ಯಂಗ್ಯವಾಡಿದರು. ಈಗ ಮತ್ತೆ ದೊಡ್ಡ ಮಟ್ಟದ ಪ್ರವಾಹ ಎದುರಾಗಿದೆ. ರೈತ ಬೆಳೆದ ಬೆಳೆ ಕೊಳೆತು ಹೋಗಿದೆ. ಭತ್ತ, ತೊಗರಿ, ತರಕಾರಿ, ಹಣ್ಣು ಎಲ್ಲ ಕೊಳೆತು ಹೋಗಿದೆ, ಲಕ್ಷ ಹೆಕ್ಟೇರ್ ಗಟ್ಟಲೇ ಬೆಳೆ ನಾಶ ಆಗಿದೆ. ನಿಮ್ಮ ಸರ್ಕಾರ ಯಾರ ಪರವಾಗಿದೆ ಎಂದು ಉತ್ತರಿಸಿ. ಸಿಎಂ ಬೆಂಗಳೂರು ನಗರ ವೀಕ್ಷಣೆ ಮಾಡುತ್ತಿದ್ದಾರೆ. 10 ಸಾವಿರ ಪರಿಹಾರ ನೀಡುವುದಾಗಿ‌ ಸಿಎಂ ಹೇಳಿದ್ದಾರೆ. ಮುಖ್ಯಮಂತ್ರಿಗಳೇ ನಿಮ್ಮ ಉತ್ಸಾಹಕ್ಕೆ ಧನ್ಯವಾದ ಎಂದರು.

ಬಿಸ್ಕೆಟ್​​ಗಳ ಬೆಲೆ ಏರಿಕೆ

ಕೊರೋನಾ(Corona) ಕಪಿ ಮುಷ್ಠಿಯಲ್ಲಿ ಸಿಲುಕಿ ಇಡೀ ವಿಶ್ವ(World)ವೇ ನಲುಗಿಹೋಗಿದೆ. ಈಗ ಕೊರೋನಾದ ಪ್ರಮಾಣ ಕಡಿಮೆಯಾಗಿದೆ. ಆದರೆ ಕೊರೋನಾದಿಂದ ಆದ ಬದಲಾವಣೆಗಳು ಮಾತ್ರ ಜನಸಾಮನ್ಯರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದರಲ್ಲಿ ಬೆಲೆ ಏರಿಕೆ(Price Hike) ಹೊರೆಯನ್ನು ಹೊರಲಾಗದೆ ಜನರು ಒದ್ದಾಡುತ್ತಿದ್ದಾರೆ.  ಇದೀಗ ಪ್ರತಿಷ್ಠಿತ ಪಾರ್ಲೆ ಜಿ (Parle G) ಮತ್ತು ಪಾರ್ಲೆ ಕಂಪನಿಯ ಉತ್ಪನ್ನಗಳಾದ (Parle Products) ಕ್ರ್ಯಾಕ್ ಜಾಕ್ (Krackjack) ಬಿಸ್ಕೆಟ್‌ನ ಬೆಲೆಗಳು ಇನ್ನು ಮುಂದೆ ದುಬಾರಿಯಾಗಲಿವೆ. ಈ ಬಿಸ್ಕೆಟ್‌ಗಳ ಬೆಲೆಯಲ್ಲಿ ಸುಮಾರು 5-10 ಪ್ರತಿಶತದಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಕಂಪನಿ ತಿಳಿಸಿದೆ. ಪಾರ್ಲೆ ರಸ್ಕ್‌ನ ಬೆಲೆಯಲ್ಲಿ (Parle Rusk) ಕಂಪನಿಯು 300 ಗ್ರಾಂ ಪ್ಯಾಕ್‌ಗೆ ಸುಮಾರು 10 ರೂ ಮತ್ತು 400 ಗ್ರಾಂ ಪ್ಯಾಕ್‌ಗೆ ಸುಮಾರು 4 ರೂ. ಗಳಷ್ಟು ಬೆಲೆ ಹೆಚ್ಚಿಸಿದೆ.

ಸಮಂತಾಗೂ ಮುಂಚೆ ನಾಗ ಚೈತನ್ಯಗೆ ಈ ನಟಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ

(Samantha) ಈಗ ದೂರವಾಗಿದ್ದಾರೆ. ಒಬ್ಬರನ್ನೊಬ್ಬರು ಬಿಟ್ಟಿರಲಾಗದಷ್ಟು ಪ್ರೀತಿ ಮಾಡಿದ್ದ , ಈ ಜೋಡಿ ಇದ್ದಕ್ಕಿದ್ದ ಹಾಗೇ ದೂರವಾಗಿ ಬಿಟ್ಟಿದ್ದಾರೆ. ಇದು ಟಾಲಿವುಡ್​ನಲ್ಲಿಈ ಸುದ್ದಿ ಅಲ್ಲೋಲ, ಕಲ್ಲೋಲವನ್ನು ಸೃಷ್ಟಿ ಮಾಡಿತ್ತು. ಬೇರೆ ಆಗಿದ್ದಕ್ಕೆ ಕಾರಣ ಕೂಡ ಫ್ಯಾನ್ಸ್(Fans)​ ಹುಡುಕಿದ್ದರು. ಆದರೆ ಯಾವ ಕಾರಣವೂ ಅಷ್ಟು ಗಟಿಯಾಗಿ ಕಾಣಲಿಲ್ಲ. ಇದೀಗ ಹೊಸ ವಿಷಯ ಏನಪ್ಪಾ ಅಂದರೆ, ನಾಗಚೈತನ್ಯ ಅವರ ಹಳೇ ವಿಷಯವೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ. ಸಮಂತಾ ಅವರನ್ನು ಪ್ರೀತಿಸುವ ಮುನ್ನ ನಾಗಚೈತನ್ಯ ಮತ್ತೊಬ್ಬ ಟಾಪ್​ ನಟಿ(Top Heroin) ಜೊತೆ ಡೇಟಿಂಗ್​ (Dating)ಮಾಡುತ್ತಿದ್ದರು. ಅವರನ್ನೇ ಮದುವೆಯಾಗಬೇಕು ಅಂದುಕೊಂಡಿದ್ದರು. ಸಮಂತಾ ಅವರನ್ನು ಪ್ರೀತಿಸುವ ಮುನ್ನ ಭಾರತೀಯ ಸಿನಿಮಾ ರಂಗದ ಸ್ಟಾರ್​​ ನಟ ಕಮಲ್​ಹಾಸನ್​ ಅವರ ಪುತ್ರಿ ಶ್ರುತಿಹಾಸನ್​ ಅವರೊಂದಿಗೆ ನಾಗಚೈತನ್ಯ ರಿಲೇಷನ್​ಶಿಪ್​ನಲ್ಲಿ ಇದ್ದರು. ಒಬ್ಬರನೊಬ್ಬರು ಇಷ್ಟ ಪಟ್ಟಿದ್ದರು. ಮದುವೆ ಮಾಡಿಕೊಳ್ಳವ ಪ್ಲ್ಯಾನ್​ ಕೂಡ ಮಾಡಲಾಗಿತ್ತು. 2013ರಲ್ಲೇ ಇವರಿಬ್ಬರು ಪ್ರೀತಿಸುತ್ತಿದ್ದರು.
Published by:Kavya V
First published: