• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Evening Digest: ರಾಹುಲ್ ಗಾಂಧಿ ಕಚೇರಿ ಧ್ವಂಸ, ಇತ್ತ ಹಳ್ಳದಲ್ಲಿ 7 ಬ್ರೂಣಗಳ ಮೃತದೇಹ! ಈ ಸಂಜೆಯ ಟಾಪ್‌ ನ್ಯೂಸ್‌ಗಳು ಇಲ್ಲಿವೆ

Evening Digest: ರಾಹುಲ್ ಗಾಂಧಿ ಕಚೇರಿ ಧ್ವಂಸ, ಇತ್ತ ಹಳ್ಳದಲ್ಲಿ 7 ಬ್ರೂಣಗಳ ಮೃತದೇಹ! ಈ ಸಂಜೆಯ ಟಾಪ್‌ ನ್ಯೂಸ್‌ಗಳು ಇಲ್ಲಿವೆ

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ...

  • Share this:

ರಾಹುಲ್ ಗಾಂಧಿ ಕಚೇರಿ ಧ್ವಂಸ! ಪುಡಿಪುಡಿಯಾದ ಆಫೀಸ್ ವಿಡಿಯೋ ವೈರಲ್


ಕೇರಳ: ಶುಕ್ರವಾರ, ಜೂನ್ 24 ರಂದು ಕೇರಳದ ವಯನಾಡಿನಲ್ಲಿ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಸಂಸದ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ. ದಾಳಿಯಲ್ಲಿ(Rahul Gandhi's MP Office Vandalised) ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಪಾತ್ರವಿದೆ ಎಂದು ಕಾಂಗ್ರೆಸ್ ಪಕ್ಷ (Congress) ಆರೋಪಿಸಿದೆ. ರಾಹುಲ್ ಗಾಂಧಿ ಅವರ ವಯನಾಡ್ ಕಚೇರಿ ಮೇಲೆ ನಡೆದ ದಾಳಿಯ ದೃಶ್ಯಗಳನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸಿಪಿಐ(ಎಂ) ಕಾರ್ಯಕರ್ತರೇ ಹಲ್ಲೆ ನಡೆಸಿದ್ದಾರೆ   ಎಂದು ಸಂಸದ ಶಶಿ ತರೂರ್ ಆರೋಪಿಸಿದ್ದಾರೆ.


ಒಂದೇ ಆಸ್ಪತ್ರೆಯ 14 ನರ್ಸ್‌ಗಳು ಒಂದೇ ಸಮಯಕ್ಕೆ ಪ್ರಗ್ನೆಂಟ್! 


ವಾಷಿಂಗ್ಟನ್ ಡಿಸಿ, ಅಮೆರಿಕ: ಅದು ಮಹಿಳೆಯರ (Ladies) ಹೆರಿಗೆಯಲ್ಲಿ (Delivery) ಖ್ಯಾತಿ ಪಡೆದ ಅಮೆರಿಕದ ಆಸ್ಪತ್ರೆ (American Hospital) . ಆದರೆ ಆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಬೇಕಾದ ನರ್ಸ್‌ಗಳೇ (Nurse) ಗರ್ಭಿಣಿಯರಾಗಿದ್ದಾರಂತೆ. ಅದೂ ಒಬ್ಬರು, ಇಬ್ಬರಲ್ಲ, ಬದಲಾಗಿ ಬರೋಬ್ಬರಿ 14 ಮಂದಿ ನರ್ಸ್‌ಗಳು ಒಂದೇ ಸಮಯದಲ್ಲಿ ಗರ್ಭಿಣಿಯರಾಗಿದ್ದಾರಂತೆ. ಅಮೆರಿಕದ (America) ಮಿಸ್ಸೋರಿ (Missouri) ಎನ್ನುವ ರಾಜ್ಯದ ಕನ್ಸಾನ್‌ ಸಿಟಿಯಲ್ಲಿರುವ (Kansas City) ಸೇಂಟ್ ಲೂಕರ್ ಈಸ್ಟ್‌ ಆಸ್ಪತ್ರೆಯಲ್ಲಿ (St. Luke's East Hospital) 14 ಮಂದಿ ನರ್ಸ್‌ಗಳು ಏಕಕಾಲದಲ್ಲಿ ಗರ್ಭಿಣಿಯರಾಗಿದ್ದಾರೆ. ಈ ಪೈಕಿ ಕೆಲವರಿಗೆ ಇದೇ ಮೊದಲ ಹೆರಿಗೆಯಾದರೆ, ಇನ್ನು ಕೆಲವರಿಗೆ ಎರಡು, ಮೂರನೆಯ ಹೆರಿಗೆಯಂತೆ! ಇದೀಗ ಈ ದಾದಿಯರ ಬೇಬಿ ಬಂಪ್‌ (Baby Bump) ಫೋಟೋಗಳು (Photos) ಸೋಶಿಯಲ್ ಮೀಡಿಯಾಗಳಲ್ಲಿ (Social Media) ಸಖತ್ ವೈರಲ್ (Viral) ಆಗಿವೆ.


ಇದನ್ನೂ ಓದಿ: Pregnant: ಒಂದೇ ಆಸ್ಪತ್ರೆಯ 14 ನರ್ಸ್‌ಗಳು ಒಂದೇ ಸಮಯಕ್ಕೆ ಪ್ರಗ್ನೆಂಟ್! ವೈರಲ್ ಆಯ್ತು ಬೇಬಿ ಬಂಪ್ ಫೋಟೋಸ್


ಹಳ್ಳದಲ್ಲಿ ತೇಲಿ ಬಂತು 7 ಭ್ರೂಣಗಳ ಮೃತದೇಹ!


ಬೆಳಗಾವಿ (ಜೂ 24): 7 ಭ್ರೂಣಗಳ (Neonatal Babies) ಮೃತದೇಹವನ್ನು (Dead Body) ಹಳ್ಳದಲ್ಲಿ ತೇಲಿ ಬಿಟ್ಟಿರುವ ಹೀನ ಕೃತ್ಯ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. 7 ಭ್ರೂಣಗಳು ಮೃತದೇಹವನ್ನು ಕೀಚಕರು ಹಳ್ಳಕ್ಕೆ ಹಾಕಿ ಹೋಗಿದ್ದಾರೆ. ಡಬ್ಬದಲ್ಲಿ ಹಾಕಿ ಹಳ್ಳಕ್ಕೆ ಬಿಡಲಾಗಿದ್ದು, ಶವ ನೋಡಿದ ಜನ ಹೌಹಾರಿದ್ದಾರೆ. ಸ್ಥಳಕ್ಕೆ ಮೂಡಲಗಿ ಪೊಲೀಸರ (Police) ಭೇಟಿ ಪರಿಶೀಲನೆ ನಡೆಸಿದ್ದಾರೆ. ಡಿಎಚ್ಒ ಡಾ.ಮಹೇಶ ಕೋಣಿ (Mahesh Koni) ಪ್ರತಿಕ್ರಿಯೆ  ಈಗಾಗಲೇ ಗ್ರಾಮ ಪಂಚಾಯತಿಯಿಂದ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದೇವೆ. ಇವೆಲ್ಲವೂ ಐದು ತಿಂಗಳ ಭ್ರೂಣಗಳಾಗಿವೆ. ಭ್ರೂಣಗಳನ್ನು ಈಗಾಗಲೇ ಸ್ಥಳೀಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಕೇಸ್ ದಾಖಲಾದ ಬಳಿಕ ಅವುಗಳನ್ನ ಬೆಳಗಾವಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (Laboratory) ತಂದು ಪರೀಕ್ಷೆ ಮಾಡಲಾಗುತ್ತದೆ.


ಜನಸಾಮಾನ್ಯರೇ ಗಮನಿಸಿ, ಜುಲೈ 1ರಿಂದ ಈ ಎಲ್ಲಾ ರೂಲ್ಸ್ ಚೇಂಜ್ ಆಗುತ್ತೆ


ಜಗತ್ತಿನಲ್ಲಿ ಬದಲಾವಣೆ (Change) ಅನ್ನುವ ಪದ ಬಿಟ್ಟು ಉಳಿದಿದ್ದೆಲ್ಲವೂ ಬದಲಾಗುತ್ತೆ. ಪ್ರತಿ ವರ್ಷವೂ ಏನಾದರೂ ಒಂದು ಬದಲಾಗುತ್ತೆ.ಬೆಲೆ ಏರಿಕೆ (Price Hike) ಗಳ ಬಗ್ಗೆ ಕೇಳಲೇ ಬೇಡಿ. 6 ತಿಂಗಳಿಗೊಮ್ಮೆ ವಸ್ತುಗಳ ಬೆಲೆ ಏರಿಕೆಯಾಗುವುದು ಕಾಮನ್ (Common)​ ಆಗೋಗಿದೆ.  ವರ್ಷದ ಜನವರಿ (January) ಅಥವಾ ಮಾರ್ಚ್ (March)​ ತಿಂಗಳಿನಲ್ಲಿ ಹಲವು ಬದಲಾವಣೆಗಳಾಗುತ್ತವೆ.ಇದೇ ರೀತಿಯ ಬದಲಾವಣೆಗಳು ಮುಂಬರುವ ತಿಂಗಳುಗಳಲ್ಲಿ ನಡೆಯಲಿವೆ. ಅಂದರೆ ಜುಲೈ (July) ನಲ್ಲಿ ಸಾಕಷ್ಟು ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಈ ಎಲ್ಲಾ ಬದಲಾವಣೆಗಳು ಸಾಮಾನ್ಯ ಮನುಷ್ಯನಿಗೆ ಬಹಳ ಮುಖ್ಯ. ಇದನ್ನು ನಿರ್ಲಕ್ಷಿಸುವುದರಿಂದ ಆರ್ಥಿಕವಾಗಿ ಹೊಡೆತ ತಿನ್ನಬೇಕಾಗುತ್ತೆ. 6  ದಿನಗಳ ನಂತರ, ಜುಲೈ ತಿಂಗಳು ಪ್ರಾರಂಭವಾಗುತ್ತದೆ. ಇದೇ ಸಂದರ್ಭದಲ್ಲಿ ದೇಶೀಯ ಅನಿಲ (LPG Gas) ದ ಬೆಲೆ ಬದಲಾಗುತ್ತದೆ . ಆಧಾರ್ (Aadhaar) ಮತ್ತು ಪ್ಯಾನ್ ಕಾರ್ಡ್ ಲಿಂಕ್ (PAN Card Link) ಮಾಡದವರಿಗೆ ದಂಡ ವಿಧಿಸಲಾಗುತ್ತದೆ .


ಇದನ್ನೂ ಓದಿ: New Rules: ಜನಸಾಮಾನ್ಯರೇ ಗಮನಿಸಿ, ಜುಲೈ 1ರಿಂದ ಈ ಎಲ್ಲಾ ರೂಲ್ಸ್ ಚೇಂಜ್ ಆಗುತ್ತೆ!


ಅಂದು ಸುಚೇಂದ್ರ ಪ್ರಸಾದ್ ಜೀವ ಎಂದಿದ್ದ ಪವಿತ್ರಾ ಲೋಕೇಶ್, ಇಂದೆನಾಯ್ತು? 


ಸದ್ಯ ಬಹುಭಾಷಾ ನಟಿ ಪವಿತ್ರ ಲೋಕೇಶ್ (Pavitra Lokesh)​ ಅವರ ಸುದ್ದಿ ಸಖತ್​ ಸೌಂಡ್​ ಮಾಡುತ್ತಿದೆ. ಪವಿತ್ರ ಲೋಕೇಶ್​ ಅವರು ತೆಲುಗು ಚಿತ್ರರಂಗದ ಸೂಪರ್​​ ಸ್ಟಾರ್​ ಮಹೇಶ್​ ಬಾಬು (Super Star Mahesh Babu) ಅವರ ಅಣ್ಣ ನಟ ನರೇಶ್ ಅವರ ಜೊತೆ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಈವರೆಗೂ ಪವಿತ್ರಾ ಲೋಕೇಶ್ ನೇರವಾಗಿ ಸ್ಷಷ್ಟನೆ ನೀಡಿಲ್ಲ. ಪವಿತ್ರಾ ಲೋಕೇಶ್ ಮೂರನೇ ಮದುವೆ ಆಗಲಿದ್ದಾರೆ ಎಂಬ ಸುದ್ದಿಗಳು ಟಾಲಿವುಡ್‌ ಅಂಗಳದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದರ ನಡುವೆ ಪವಿತ್ರಾ ಲೋಕೇಶ್ ಅವರು ತೆಲುಗು (Telugu) ಚಾನೆಲ್ ಒಂದಕ್ಕೆ ನೀಡಿದ ಹಳೆಯ ಸಂದರ್ಶನವೊಂದು ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ. ಸಂದರ್ಶನದಲ್ಲಿ ಪವಿತ್ರಾ ಪತಿ ಸುಚೇಂದ್ರ ಪ್ರಸಾದ್ ಬಗ್ಗೆ ಹೇಳಿದ ಮಾತುಗಳೇ ವೈರಲ್ ಆಗುತ್ತಿವೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು