Evening Digest: ರಾಜ್ಯದಲ್ಲಿ ಇನ್ನೂ 2 ದಿನ ಮಳೆ; ನಟ ಧನುಷ್ ಡಿವೋರ್ಸ್​​ಗೆ ಆ ನಟಿಯೇ ಕಾರಣವಂತೆ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ರಾಜ್ಯದಲ್ಲಿ ಇನ್ನೂ 2 ದಿನ ಮಳೆ: ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಇನ್ನು 2 ದಿನ ಮಳೆಯಾಗಲಿದ್ದು, ಕೆಲವೆಡೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಎರಡು ದಿನ ಮಳೆ ಮುಂದುವರೆಯಲಿದೆ. ಕೆಲವೆಡೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೋಲಾರ, ಮಂಡ್ಯ, ಮೈಸೂರು ಹಾಗೂ ರಾಮನಗರ ಜಿಲ್ಲೆಗಳ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Rain Update: ರಾಜ್ಯದಲ್ಲಿ ಇನ್ನೂ 2 ದಿನ ಗುಡುಗು ಸಹಿತ ಭಾರೀ ಮಳೆ

ಮಂಗಳೂರು ಕಿಸ್ಸಿಂಗ್ ಕೇಸ್​: ಮತ್ತೆ ಮೂವರು ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ

ಮಂಗಳೂರು ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ ಕಿಸ್ಸಿಂಗ್​ ಪ್ರಕರಣಕ್ಕೆ (Kissing Case) ಸಂಬಂಧಿಸಿದಂತೆ ಮತ್ತೆ ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ವಶಕ್ಕೆ ಪಡೆಯದ ವಿದ್ಯಾರ್ಥಿಗಳ  (Student) ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ನಗರದ ಬಾವುಟಗುಡ್ಡೆ ಸಮೀಪದ ಅಪಾರ್ಟ್‌ಮೆಂಟ್​​ (Apartment) ನಲ್ಲಿ ವಾಸವಿದ್ದ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರನ್ನು (Students) ರೂಮಿಗೆ ಕರೆಸಿಕೊಂಡು ಟ್ರುತ್ ಆ್ಯಂಡ್ ಡೇರ್ ಗೇಮ್ ಮೂಲಕ ಅವರಿಗೆ ಕಿಸ್ಸಿಂಗ್ ಮಾಡಿ ಅನುಚಿತವಾಗಿ ವರ್ತಿಸಿ ಅದರ ವಿಡಿಯೋ ಮಾಡಿದ್ದರು.

ಪ್ರಾಣ ಉಳಿಸಿದ ಗವರ್ನರ್ ತಮಿಳಿಸೈ ಸೌಂದರರಾಜನ್

ತೆಲಂಗಾಣದ ರಾಜ್ಯಪಾಲರಾದ (Telangana Governor) ತಮಿಳಿಸೈ ಸೌಂದರರಾಜನ್ (Tamilisai Soundarajan) ಅವರು ವಿಮಾನದಲ್ಲಿ ಪ್ರಯಾಣಿಸುವಾಗ ಐಪಿಎಸ್​ ಅಧಿಕಾರಿಯ (IPS officer) ಪ್ರಾಣ ಉಳಿಸಿದ್ದಾರೆ. ದೆಹಲಿಯಿಂದ ಹೈದ್ರಾಬಾದ್​ಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಶನಿವಾರ ದೆಹಲಿ-ಹೈದರಾಬಾದ್ ವಿಮಾನದಲ್ಲಿ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸಹ-ಪ್ರಯಾಣಿಕರಿಗೆ ಚಿಕಿತ್ಸೆ ನೀಡುವ ಮೂಲಕ ತುರ್ತು ಪರಿಸ್ಥಿತಿಯನ್ನು ತಮಿಳಿಸೈ ಸೌಂದರರಾಜನ್ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ತೆಲಂಗಾಣದ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಅವರು ತಮ್ಮ ರಾಜಕೀಯ ಪ್ರವೇಶಕ್ಕೂ ಮುನ್ನ ಸ್ತ್ರೀರೋಗ ತಜ್ಞೆ ಆಗಿದ್ದರು.

ನಟ ಧನುಷ್​ ಡಿವೋರ್ಸ್​ಗೆ ಆ ನಟಿಯೇ ಕಾರಣವಂತೆ

ತಮಿಳು ಜೊತೆಗೆ ಹಿಂದಿಯಲ್ಲೂ ಬ್ಯುಸಿಯಾಗಿರುವ ಹೀರೋ ಧನುಷ್ ವಿಚ್ಛೇದನ ಪಡೆಯುತ್ತಿರುವ ಬಗ್ಗೆ ಅಭಿಮಾನಿಗಳಿಗೆ ಶಾಕ್​ ಆಗಿದ್ದರು. ಈ ಹಿಂದೆ ಅವರು ತಮ್ಮ ಪತ್ನಿ ಐಶ್ವರ್ಯಾ ರಜನಿಕಾಂತ್ ಅವರಿಗೆ ವಿಚ್ಛೇದನ ನೀಡುವುದಾಗಿ ಘೋಷಿಸಿದ್ದರು. ಈ ಘೋಷಣೆ ಧನುಷ್ ಅಭಿಮಾನಿಗಳಷ್ಟೇ ಅಲ್ಲ, ರಜನಿಕಾಂತ್ ಅಭಿಮಾನಿಗಳಿಗೂ ಅಚ್ಚರಿ ಮೂಡಿಸಿತ್ತು. 18 ವರ್ಷಗಳ ನಂತರ ಧನುಷ್ ವಿಚ್ಛೇದನ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಆದರೆ ಇದೀಗ ನೆಟ್ಟಿಗರು ಧನುಷ್ ವಿಚ್ಛೇದನಕ್ಕೆ ಈ ನಾಯಕಿಯೇ ಕಾರಣ ಎಂದು ಟೀಕಿಸುತ್ತಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Dhanush: ಕೊನೆಗೂ ಧನುಷ್​-ಐಶ್ವರ್ಯಾ ಡಿವೋರ್ಸ್ ಕಾರಣ ಬಯಲು! ಸುಖಸಂಸಾರದಲ್ಲಿ ಹುಳಿ ಹಿಂಡಿದ್ದು ಆ ಬಾಲಿವುಡ್​ ನಟಿಯಂತೆ

ನನ್ನ ಗಂಡನ ಜೊತೆ ನಿಂಗೆ ಅಫೇರ್​ ಇದೆ, ನಟಿಗೆ ಗೂಸಾ ಕೊಟ್ಟ ನಟನ ಹೆಂಡತಿ

ಪ್ರಕೃತಿ ಮಿಶ್ರಾ (Prakruti Mishra), ಭಾರತೀಯ ನಟಿ (Heroine). ಒಡಿಯಾ ಚಲನಚಿತ್ರಗಳು ಮತ್ತು ಹಿಂದಿ ದೂರದರ್ಶನದಲ್ಲಿ ಕೆಲಸ ಮಾಡಿದ್ದಾರೆ. ಅವರು ಹಲೋ ಆರ್ಸಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಇತ್ತೀಚೆಗೆ ಜೈ ಕನ್ಹಯ್ಯಾ ಲಾಲ್ ಕಿ ಚಿತ್ರದಲ್ಲಿ ದೇವನಿಯಾಗಿ, ಬಿಟ್ಟಿ ಬಿಸಿನೆಸ್ ವಾಲಿಯಲ್ಲಿ ಬಿಟ್ಟಿಯಾಗಿ ಮತ್ತು ಏಸ್ ಆಫ್ ಸ್ಪೇಸ್ 2 ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಈಗ ನಾವು ಇವರ ಬಗ್ಗೆ ಹೇಳ್ತಿರೋದು ಇವರ ನಟನೆಯ ಬಗ್ಗೆ ಅಲ್ಲ. ಇವರಿಗೆ ರೋಡ್‍ನಲ್ಲೇ ಹೊಡೆದಿದ್ದಾರಂತೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ (National award winner) ಪ್ರಕೃತಿ ಮಿಶ್ರಾ ಮೇಲೆ ಬೀದಿಯಲ್ಲೇ ಸಹ ನಟನ ಪತ್ನಿ ಹಲ್ಲೆ (Assault) ಮಾಡಿದ್ದಾರೆ. ತನ್ನ ಪತಿಯ ಜೊತೆ ಅನೈತಿಕ ಸಂಬಂಧ ಇದೆ ಎಂದು ನಟಿಗೆ ಜನರ ಮುಂದೆಯೇ ಅವಮಾನ ಮಾಡಿದ್ದಾರೆ. ಅಲ್ಲದೇ ಥಳಿಸಿದ್ದಾರೆ ಕೂಡ. ನಟಿಗೆ ಹೊಡೆಯುತ್ತಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
Published by:Kavya V
First published: