Evening Digest: ವಿದ್ಯಾರ್ಥಿನಿ ಭಾರತ್ ಮಾತಾ ಕೀ ಜೈ ಎಂದು ಕೂಗಲಿಲ್ಲ ಏಕೆ? ಪೋಷಕರಿಗೂ ಡ್ರೆಸ್ ಕೋಡ್! ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಭಾರತ್ ಮಾತಾ ಕೀ ಜೈ ಎಂದು ಕೂಗಲಿಲ್ಲ ಏಕೆ?: ಕೆಲ ದಿನಗಳ ಹಿಂದೆ ಹಿಜಾಬ್ ವರ್ಸಸ್ ಕೇಸರಿ ಶಾಲು (Hijab vs Saffron Shawl) ಸಂಘರ್ಷದ ಸಮಯದಲ್ಲಿ ಜಿಲ್ಲೆಯ ವಿದ್ಯಾರ್ಥಿನಿ ಶ್ರೀರಾಮ್ ಘೋಷಣೆ ಕೂಗುತ್ತಿದ್ದ ಯುವಕರ ಗುಂಪಿನ ಎದುರು ಅಲ್ಲಾಹು ಅಕ್ಬರ್ (Allahu Akbar) ಎಂದು ಘೋಷಣೆ ಕೂಗಿದ್ದರು. ಆ ವಿಡಿಯೋ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ವಿದ್ಯಾರ್ಥಿನಿಗೆ ಮುಸ್ಲಿಂ ಸಂಘಟನೆಯೊಂದು 5 ಲಕ್ಷ ಬಹುಮಾನವನ್ನು ಘೋಷಿತ್ತು. ಯುವತಿಯ ಅಲ್ಲಾಹು ಅಕ್ಬರ್ ಘೋಷಣೆಗೆ ಹಿಂದೂ ಸಂಘಟನೆ ಮುಖಂಡ ಪ್ರಮೋದ್ ಮುತಾಲಿಕ್ (Pramod Muthalik) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಹುಡುಗಿ ಅಂದು ಭಾರತ್ ಮಾತಾ ಕೀ ಜೈ (Bharat Mata Ki Jai) ಎನ್ನಬಹುದಿತ್ತು, ಆದ್ರೆ ಆ ಹೆಣ್ಣುಮಗಳು ಅಲ್ಲಾಹು ಅಕ್ಬರ್ ಎಂದಳು. ಅದಕ್ಕೆ ಮಹಾರಾಷ್ಟ್ರ ಶಾಸಕ ಉಡುಗೊರೆ ನೀಡಿದ್ದಾನೆ, ಮತ್ತಷ್ಟು ಮುಸ್ಲಿಂ ಮುಖಂಡರು ಹಾಡಿ ಹೊಗಳಿದ್ದಾರೆ. 5-10 ಲಕ್ಷ ಅಲ್ಲ, ನಮ್ಮ ಹರ್ಷನ ಕುಟುಂಬಕ್ಕೆ 60-70 ಲಕ್ಷ ನೆರವು ಸಿಕ್ಕಿದೆ. ಆಕೆಗೆ ಸಿಕ್ಕಿದ್ದಕ್ಕಿಂತ ಹತ್ತು ಪಟ್ಟು ಹೆಚ್ಚಿಗೆ ಸಿಕ್ಕಿದೆ ಎಂದು ಶ್ರೀರಂಗಪಟ್ಟಣದಲ್ಲಿ ಮುತಾಲಿಕ್ ಹೇಳಿಕೆ ನೀಡಿದರು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ: Mandya: ‘ಅಂದು ವಿದ್ಯಾರ್ಥಿನಿ ಅಲ್ಲಾಹು ಅಕ್ಬರ್ ಬದಲು, ಭಾರತ್ ಮಾತಾ ಕೀ ಜೈ ಎಂದು ಕೂಗಲಿಲ್ಲ ಏಕೆ?’

ಈಗ ಪೋಷಕರಿಗೂ ಡ್ರೆಸ್ ಕೋಡ್!
ಸದ್ಯ ರಾಜ್ಯದಲ್ಲಿ ಹಿಜಾಬ್ (Hijab)ವಿವಾದ ದೊಡ್ಡದಾಗಿ ಬೆಳೆದುಕೊಂಡಿದೆ. ಶಾಲಾ-(School)ಕಾಲೇಜುಗಳ ಮಕ್ಕಳು ಹಿಜಾಬ್ ಧರಿಸಿ ಬರುತ್ತಿರುವುದು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.. ರಾಜಕೀಯ(Politics) ಸ್ವರೂಪ ಪಡೆದು ಕೊಂಡಿರುವ ಹಿಜಾಬ್ ವಿವಾದದ ಕುರಿತು ಪ್ರತಿ ನಿತ್ಯ ಒಬ್ಬರಲ್ಲಾ ಒಬ್ಬರು ರಾಜಕೀಯ ನಾಯಕರು(Politicians) ಪ್ರತಿಕ್ರಿಯೆ ನೀಡುತ್ತಲೇ ಇರುತ್ತಾರೆ.. ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತದ ವಸ್ತುಗಳನ್ನು ಧರಿಸದಂತೆ ಹೈಕೋರ್ಟ್(High Court) ಮಧ್ಯಂತರ ಆದೇಶ ನೀಡಿದೆ. ಅಲ್ಲದೆ ಹಿಜಾಬ್ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಹೈಕೋರ್ಟ್ ಸಹ ಹಿಜಾಬ್ ವಿವಾದದ ಕುರಿತು ವಿಚಾರಣೆ ನಡೆಸುತ್ತಿದೆ. ಈ ವಿವಾದ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಹೀಗಾಗಿ ಎಲ್ಲರೂ ಹೈಕೋರ್ಟ್ ತೀರ್ಮಾನದ ಕುರಿತು ಕಾಯುತ್ತಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳು ಇರುವಾಗಲೇ ಖಾಸಗಿ ಶಾಲೆಯನ್ನು ತೆಗೆದುಕೊಂಡಿರುವ ನಿರ್ಧಾರ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:Hijab ವಿವಾದ ಬಗೆಹರಿಯುವ ಮುನ್ನವೇ ಖಾಸಗಿ ಶಾಲೆಗಳಿಂದ ಪೋಷಕರಿಗೆ ಡ್ರೆಸ್ ಕೋಡ್

ನಾಳೆ ವಾದ ಮುಕ್ತಾಯಗೊಳಿಸಲು ಹೈಕೋರ್ಟ್ ಸೂಚನೆ.. ಸೋಮವಾರ ತೀರ್ಪು?
ಹಿಜಾಬ್ ಪ್ರಕರಣ ಸಂಬಂಧ 10ನೇ ದಿನವೂ ಹೈಕೋರ್ಟ್ನಲ್ಲಿ (High Court of Karnataka) ವಾದ-ಪ್ರತಿವಾದ ಮುಂದುವರೆಯಿತು. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ (Chief Justice Ritu Raj Awasthi) ನೇತೃತ್ವದ ಕರ್ನಾಟಕ ಹೈಕೋರ್ಟ್ನ ಪೂರ್ಣ ಪೀಠ ಗುರುವಾರ ಹಿಜಾಬ್ ವಿವಾದಕ್ಕೆ (Hijab Row) ಸಂಬಂಧಿಸಿದ ವಾದಗಳನ್ನು ಶುಕ್ರವಾರ ಮುಕ್ತಾಯಗೊಳಿಸಲು ಬಯಸುತ್ತದೆ ಎಂದು ಸೂಚಿಸಿದೆ. ಅಲ್ಲದೆ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ. ಇಂದು ಪೂರ್ಣ ಪೀಠ ವಿಚಾರಣೆ ಆರಂಭಿಸಿದ ಬಳಿಕ, ಕೆಲವು ಸಂಘಟನೆಗಳ ಸದಸ್ಯರಿಂದ ಬೆದರಿಕೆ ಇದೆ ಎಂದು ಆರೋಪಿಸಿ ಉಡುಪಿ ಕಾಲೇಜಿನ ಶಿಕ್ಷಕರು ನೀಡಿದ ದೂರಿಗೆ ಸಂಬಂಧಿಸಿದಂತೆ ಒಂದು ಎಫ್ಐಆರ್ ದಾಖಲಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ ನಾವದಗಿ ಹೇಳಿದ್ದಾರೆ. ವಿವರಗಳನ್ನು ಮುಚ್ಚಿದ ಕವರ್ನಲ್ಲಿ ಇರಿಸಲಾಗುವುದು ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಎಫ್ಐಆರ್ ಬಗ್ಗೆ ನಿನ್ನೆ ಸರ್ಕಾರಿ ಕಾಲೇಜುಗಳ ಪರವಾಗಿ ವಕೀಲ ನಾಗಾನಂದ್ ಉಲ್ಲೇಖಿಸಿದ್ದರು. ಆ ಬಗ್ಗೆ ಇಂದು ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿತು.

ತಾರಕಕ್ಕೇರಿದ ರಷ್ಯಾ-ಉಕ್ರೇನ್ ಬಿಕ್ಕಟ್ಟು
ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಆರ್ಥಿಕ ಪರಿಣಾಮ ಭಾರತದ ಮೇಲೆ ಪರಿಣಾಮ ಬೀರಲಿದೆ. ಅದರಲ್ಲೂ ಕಚ್ಛಾ ತೈಲ ಬೆಲೆ ಏರಿಕೆಯಾಗುವ ಹಿನ್ನಲೆ ಭಾರತದಲ್ಲೂ ಪೆಟ್ರೋಲ್, ಡಿಸೇಲ್ ಮತ್ತು ಅಡುಗೆ ತೈಲ ಬೆಲೆ ಏರಿಕೆ ಆಗಲಿದೆ. ಈ ಹಿನ್ನಲೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಎಲ್ಲಾ ಬೆಳವಣಿಗೆ ಕುರಿತು ಚರ್ಚೆ ನಡೆಸಲು ಸಭೆ ನಡೆಸಲು ಮುಂದಾಗಿದ್ದಾರೆ. ರಷ್ಯಾ ಉಕ್ರೇನ್ ಬಿಕ್ಕಟ್ಟಿನಿಂದ ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಯ ಪರಿಣಾಮವನ್ನು ತಗ್ಗಿಸುವ ಮಾರ್ಗಗಳ ಕುರಿತು ಸಂಜೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇತರ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಗಂಗೂಬಾಯಿ ಕಾಥಿಯಾವಾಡಿ’ಗೆ ಬಿಗ್ ರಿಲೀಫ್
ಗಂಗೂಬಾಯಿ ಕಥಿಯಾವಾಡಿ' (Gangubai Kathiawadi)ಚಿತ್ರದ ವಿರುದ್ಧದ ಎರಡು ಅರ್ಜಿಗಳನ್ನು ವಜಾಗೊಳಿಸಿದ ಬಾಂಬೆ ಹೈಕೋರ್ಟ್ (Bombay HC), ಚಿತ್ರದ ವಿರುದ್ಧದ ಮತ್ತೊಂದು ಅರ್ಜಿಯನ್ನು ವಜಾಗೊಳಿಸಿತ್ತು. 55 ಇತರ ಕಾಮಾಟಿಪುರ (Kamatipura) ನಿವಾಸಿಗಳ ಪರವಾಗಿ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಚಲನಚಿತ್ರದಿಂದಾಗಿ, ಆ ಪ್ರದೇಶದಲ್ಲಿ ವಾಸಿಸುವ ಮಹಿಳೆಯರನ್ನು ‘ವೇಶ್ಯೆ(Prostitute) ಎಂದು ಕರೆಯಲಾಗುವುದು ಮತ್ತು ಕುಟುಂಬಗಳು ಕಡಿಮೆ ಘನತೆಯಿಂದ ಬದುಕಬೇಕಾಗುತ್ತದೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕಾಂಗ್ರೆಸ್ ಶಾಸಕ ಅಮೀನ್ ಪಟೇಲ್ (Amin Patel) ಕೂಡ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (PIL) ಸಲ್ಲಿಸಿದ್ದರು. ಬಾಂಬೆ ಹೈ ಕೋರ್ಟ್ ಈ ಅರ್ಜಿಯನ್ನು ವಜಾಗಳಿಸಿದ್ದಕ್ಕೆ, ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್(Supreme Court) ಸಿನಿಮಾ ರಿಲೀಸ್ ಮಾಡುವಂತೆ ಚಿತ್ರತಂಡಕ್ಕೆ ಸೂಚನೆ ನೀಡಿದೆ. ಇದರಿಂದ ಗಂಗೂಬಾಯಿಗೆ ಬಿಗ್ ರಿಲಿಫ್(Big Relief) ಸಿಕ್ಕಂತಾಗಿದೆ.
Published by:Kavya V
First published: