Evening Digest: ಜಮ್ಮು ಕಾಶ್ಮೀರದಲ್ಲಿ ಪ್ರಧಾನಿ; ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ ಎಂದ ಬಿಎಸ್​ವೈ: ಈ ದಿನದ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಪ್ರಮುಖ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ

ಸಂಜೆ ಸುದ್ದಿ

ಸಂಜೆ ಸುದ್ದಿ

 • Share this:
  ಪ್ರಧಾನಿ ಮನ್​ ಕೀ ಬಾತ್​
  ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ಉದ್ದೇಶಿಸಿ ಮಾತನಾಡಿದ್ದಾರೆ. ಇದು ಮಾಸಿಕ ರೇಡಿಯೋ ಕಾರ್ಯಕ್ರಮದ 88 ನೇ ಸಂಚಿಕೆಯಾಗಿತ್ತು. ಮನ್ ಕಿ ಬಾತ್ ಎಂಬುದು ಪ್ರಧಾನ ಮಂತ್ರಿಗಳ ಮಾಸಿಕ ರೇಡಿಯೋ ಭಾಷಣವಾಗಿದ್ದು, ಇದನ್ನು ಪ್ರತಿ ತಿಂಗಳ ಕೊನೆಯ ಭಾನುವಾರದಂದು ಬೆಳಗ್ಗೆ 11 ಗಂಟೆಗೆ ಪ್ರಸಾರ ಮಾಡಲಾಗುತ್ತದೆ. ದೇಶಕ್ಕೆ 'ಪ್ರಧಾನ ಮಂತ್ರಿ ಸಂಘಾಲಯ' ಸಿಕ್ಕಿದೆ, ಅದನ್ನು ದೇಶದ ಜನರಿಗಾಗಿ ತೆರೆಯಲಾಗಿದೆ. ಪ್ರಧಾನಿಗಳ ಕೊಡುಗೆಯನ್ನು ನಾವು ಸ್ಮರಿಸುತ್ತಿದ್ದೇವೆ, ಇದು ದೇಶದ ಯುವಕರನ್ನು ಅವರೊಂದಿಗೆ ಸಂಪರ್ಕಿಸುತ್ತಿದೆ ಎಂಬುದು ಹೆಮ್ಮೆಯ ವಿಷಯ ಎಂದಿದ್ದಾರೆ.

  ಜಮ್ಮು ಕಾಶ್ಮೀರದಲ್ಲಿ ಪ್ರಧಾನಿ
  2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ ಇದೇ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು, ಅವರು 20,000 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಇದೇ ವೇಳೆ ಅವರು, ಜಮ್ಮು ಮತ್ತು ಕಾಶ್ಮೀರದ ಈ ಹಿಂದೆ ಜನರು ಎದುರಿಸಿದ ಸಮಸ್ಯೆಗಳನ್ನು ಅವರ ಮಕ್ಕಳು ಅನುಭವಿಸುವುದಿಲ್ಲ ಎಂಬ ಭರವಸೆ ನೀಡಿದರು.

  ಮೂಕ ಪ್ರಾಣಿಗೆ ವಿಷವಿತ್ತ ದುರುಳರು
  ಮೂಕ ಪ್ರಾಣಿಗಳ ಮೇಲೆ ಇದೆಂಥಾ ಕೋಪ ಇವರಿಗೆ, ಮಾನವೀಯತೆ ಮರೆತ ಜನ್ರು ಶ್ವಾನಗಳಿಗೆ ವಿಷ ಹಾಕಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್​ ಸಿಟಿ ಬಳಿ ಕಿಡಿಗೇಡಿಗಳು 9 ಶ್ವಾನಗಳಿಗೆ ವಿಷ ಹಾಕಿ ವಿಕೃತಿ ಮೆರೆದಿದ್ದಾರೆ. 4 ದಿನಗಳ ಹಿಂದೆಯೇ ಈ ಘಟನೆ ನಡೆದಿದೆ, ಬುಧವಾರ 9 ಶ್ವಾನಗಳಿಗೆ ತಿನ್ನೋ ಆಹಾರದಲ್ಲಿ ಪಾಪಿಗಳು ವಿಷ ಹಾಕಿದ್ದಾರೆ. ವಿಷ (Poison)ತಿಂದ ಮೂರು ಶ್ವಾನಗಳು ಬುಧವಾರವೇ ಸಾವನ್ನಪ್ಪಿದ್ರೆ, ಉಳಿದ 6 ನಾಯಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು ಆದ್ರೆ ಚಿಕಿತ್ಸೆ ಫಲಿಸದೇ ಎಲ್ಲಾ ಶ್ವಾನಗಳು ಸಾವನ್ನಪ್ಪಿವೆ. ಸೋಮವಾರ ಎಲ್ಲಾ ಶ್ವಾನಗಳ ಮರಣೋತ್ತರ ಪರೀಕ್ಷೆ ನಡೆಯಲಿದೆ.

  ಹಿಂದೂಗಳ ಅಂಗಡಿಯಲ್ಲೇ ಚಿನ್ನ ಖರೀದಿಸಿ
  ಹಿಜಾಬ್ ​ ಆಯ್ತು, ಹಲಾಲ್ ​ ಕಟ್​, ಜಟ್ಕಾ ಕಟ್​ ಆಯ್ತು ಈಗ ಚಿನ್ನ ಖರೀದಿ ವಿಚಾರಕ್ಕೂ ಹಿಂದೂ ಪರ ಸಂಘಟನೆಗಳು ಮಧ್ಯ ಪ್ರವೇಶಿಸಿದ್ದು, ಅಕ್ಷಯ ತೃತೀಯಕ್ಕೆ ಹಿಂದೂಗಳ ಜ್ಯುವೆಲ್ಲರಿ ಶಾಪ್​ಗಳಲ್ಲೇ ಚಿನ್ನ ಖರೀದಿಸುವಂತೆ ಕರೆ ನೀಡಿದ್ದಾರೆ. ಈ ಸಂಬಂಧ ಬಾಗಲಕೋಟೆಯಲ್ಲಿ ಮಾತಾಡಿದ ಹಿಂದೂ ಪರ ಸಂಘಟನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ , ಹಲಾಲ್ ಅಭಿಯಾನದ ಮೂಲಕ ಜಾಗೃತಿ ಮೂಡಿಸುವ ಕೆಲಸ ಯಶಸ್ವಿಯಾಗಿದೆ. ಈಗ ಅಕ್ಷಯ ತೃತೀಯ ಸಂದರ್ಭದಲ್ಲಿ ಈ ಅಭಿಯಾನ ನಡೆಸಲಾಗ್ತಿದ್ದು, ಎಲ್ಲರೂ ಬೆಂಬಲ ನೀಡಬೇಕೆಂದು ಕೇಳಿಕೊಂಡ್ರು. ರಾಜ್ಯದಲ್ಲಿ ಕೇರಳ ಮೂಲದ ಮುಸ್ಲಿಂರು ಜ್ಯುವೆಲ್ಲರಿ ಶಾಪ್​ ಹೊಂದಿದ್ದಾರೆ ಅವ್ರ ಅಂಗಡಿಗಳಲ್ಲಿ ಚಿನ್ನ ಖರೀದಿ ಮಾಡ್ಬೇಡಿ ಎಂದು ಕರೆ ನೀಡಿದ್ರು.

  ಸಹಾಯಕ ಪ್ರಾಧ್ಯಾಪಕ ನೇಮಕಾತಿ ಹುದ್ದೆಯಲ್ಲೂ ಅಕ್ರಮ
  ರಾಜ್ಯದಲ್ಲಿ ಪಿಎಸ್​ಐ ಪ್ರಶ್ನಾಪತ್ರಿಕೆ ಅಕ್ರಮ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ದೂರಿನ ಮೇರೆಗೆ ಮಲ್ಲೇಶ್ವರಂ ಠಾಣೆಯಲ್ಲಿ ಎಫ್​ಐಆರ್​​ ಕೂಡ ದಾಖಲು ಆಗಿದೆ

  ನನ್ನ ಹೆಸರು ಬೇಡ ಎಂದ ಬಿಎಸ್​ವೈ

  ಶಿವಮೊಗ್ಗ  ವಿಮಾನ ನಿಲ್ದಾಣಕ್ಕೆ  ಮಾಜಿ ಸಿಎಂ ಯಡಿಯೂರಪ್ಪ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ ಬೊಮ್ಮಾಯಿ  ಅವರಿಗೆ ಮಾಜಿ ಸಿಎಂ ಯಡಿಯೂರಪ್ಪ ಪತ್ರ ಬರೆದಿದ್ದಾರೆ. ನನ್ನ ಹೆಸರಿಡುವ ನಿರ್ಧಾರವನ್ನು ಪುನರ್​ ಪರಿಶೀಲಿಸಿ, ವಿಮಾನ ನಿಲ್ದಾಣಕ್ಕೆ ನನ್ನ ಹೆಸರಿಡೋದು ಬೇಡ, ವಿಮಾನ ನಿಲ್ದಾಣ ನಿರ್ಮಾಣ ಶಿವಮೊಗ್ಗದ ಬಹುದಿನಗಳ ಕನಸಾಗಿತ್ತು, ಸೋಗಾನೆಯಲ್ಲಿ ನೂತನವಾಗಿ ನಿರ್ಮಾಣವಾಗ್ತಿರೋ ವಿಮಾನ ನಿಲ್ದಾಣದ ಕಾಮಗಾರಿಯನ್ನು ತಾವು ಇತ್ತೀಚಿಗೆ ವೀಕ್ಷಣೆ ಮಾಡಿದ ಸಂದರ್ಭದಲ್ಲಿ ಕಾಮಗಾರಿಯನ್ನು ಶೀಘ್ರ  ಪೂರ್ಣಗೊಳಿಸಲು  ಅಗತ್ಯವಾದ  ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡುವುದಾಗಿ ತಿಳಿಸಿರುವುದಕ್ಕೆ ತಮಗೆ ಧನ್ಯವಾದಗಳು, ಆದ್ರೆ ವಿಮಾನ ನಿಲ್ದಾಣಕ್ಕೆ ನನ್ನ ಹೆಸರಿಡೋದು ಬೇಡ ಎಂದು ಪತ್ರದ ಮೂಲಕ ಯಡಿಯೂರಪ್ಪ ಮನವಿ ಮಾಡಿದ್ದಾರೆ.
  Published by:Seema R
  First published: