Evening digest sep 23: ಮತ್ತೊಂದು ಅಗ್ನಿ ಅವಘಡಕ್ಕೆ ಮೂವರು ಬಲಿ; ಅಮೆರಿಕಾದಲ್ಲಿ ಮೋದಿ ಹವಾ ಹೇಗಿದೆ? ಇಂದಿನ ಪ್ರಮುಖ ಸುದ್ದಿಗಳು

Today Kannada news: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ಮತ್ತೊಂದು ಅಗ್ನಿ ಅವಘಡಕ್ಕೆ ಮೂವರು ಬಲಿ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ(Fire Accident) ಸಂಭವಿಸಿದೆ. ಸ್ಪೋಟದ(Blast) ರಭಸಕ್ಕೆ ಮೂವರು ಸಾವನ್ನಪ್ಪಿರುವ ಘಟನೆ  ಚಾಮರಾಜಪೇಟೆಯ (Chamarajapete) ನಗರತ್ ಪೇಟೆಯಲ್ಲಿ ನಡೆದಿದೆ. ಸ್ಥಳಕ್ಕೆ ವಿವಿಪುರಂ ಪೊಲೀಸರು ಹಾಗೂ ಅಗ್ನಿಶಾಮಕ ವಾಹನ ದೌಡಾಯಿಸಿದ್ದಾರೆ. ಮೃತರನ್ನು ಮನೋಹರ್ (29-ತಮಿಳುನಾಡು ಮೂಲದವನು), ಅಸ್ಲಂ (45), ಫಯಾಜ್(50) ಎಂದು ಗುರುತಿಸಲಾಗಿದೆ. ಶ್ರೀ ಮಹಾಕಾಳಿ ಅಮ್ಮ ಎನ್ನುವ ಗೋಡಾನ್​ನಲ್ಲಿ ಈ  ಘಟನೆ ಸಂಭವಿಸಿದೆ. ಸದ್ಯ ಘಟನಾ ಸ್ಥಳದಿಂದ ಗೋಡಾನ್​ ಮಾಲೀಕ ಪರಾರಿಯಾಗಿದ್ದಾನೆ. ಆತ ಗೋದಾಮಿನಲ್ಲಿ ಪಟಾಕಿಗಳನ್ನು ಶೇಖರಿಸಿ ಇಟ್ಟಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಅಮೆರಿಕಾದಲ್ಲಿ ಮೋದಿ ಹವಾ

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಇಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ (Australian PM Scott Morrison) ಜೊತೆ ಸೇರಿದಂತೆ ಎಂಟು ಸಭೆಗಳನ್ನು ನಡೆಸಲಿದ್ದಾರೆ. ಕೊರೋನಾ ವೈರಸ್ ಸಾಂಕ್ರಾಮಿಕ ರೋಗವು 2020 ರಲ್ಲಿ ಆರಂಭವಾದ ನಂತರ ಇಬ್ಬರು ಪ್ರಧಾನಿಗಳು ವೈಯಕ್ತಿಕವಾಗಿ ಭೇಟಿಯಾಗುತ್ತಿರುವುದು ಇದೇ ಮೊದಲು. ಈ ಭೇಟಿಯ ವೇಳೆ ಭಾರತದ ಪ್ರಧಾನಮಂತ್ರಿ  ಮೋದಿ ಅವರು ಮಾರಿಸನ್ ಅವರಿಗೆ 'ಸ್ಕೋಮೋಸಾಸ್' ಬದಲಿಗೆ ದೇಸಿ ಸಮೋಸಾ ಆತಿಥ್ಯ ನೀಡಲಿದ್ದಾರೆ.

ಸ್ಪೀಕರ್​ ಭಾಷಣ ಬಾಯ್ಕಟ್​​ಗೆ ಕಾಂಗ್ರೆಸ್​ ನಿರ್ಧಾರ

ವಿಧಾನಸಭೆ ಅಧಿವೇಶನದ ಕೊನೆಯ ದಿನವಾದ ನಾಳೆ ಜಂಟಿ ಸದನವನ್ನು(Joint session )  ಉದ್ದೇಶಿಸಿ ಲೋಕಸಭೆ ಸ್ಪೀಕರ್​ ಓಂ ಬಿರ್ಲಾ (Loksabha speaker OM Birla) ಭಾಷಣ ಮಾಡಲಿದ್ದಾರೆ. ಹೀಗಾಗಿ ಎಲ್ಲ ಸದಸ್ಯರು ಹಾಜರಿರುವಂತೆ ಈ ಸದನದ ಆರಂಭದಲ್ಲಿಯೇ ಸ್ಪೀಕರ್​ ಸದಸ್ಯರಿಗೆ ತಿಳಿಸಿದ್ದರು. ಆದರೆ, ಲೋಕಸಭಾ ಸದಸ್ಯರ ಜಂಟಿ ಅಧಿವೇಶನವನ್ನು ಕಾಂಗ್ರೆಸ್ ​ ಬಾಯ್ಕಟ್​ ಮಾಡಲು ಮುಂದಾಗಿದೆ. ಜಂಟಿ ಸದನ ಉದ್ದೇಶಿಸಿ ಲೋಕಸಭಾ ಸ್ಪೀಕರ್​ ಮಾತನಾಡುವುದಕ್ಕೆ ಕಾಂಗ್ರೆಸ್​ ವಿರೋಧವಿದೆ. ಈ ಹಿನ್ನಲೆಯಲ್ಲಿ ತಾವು ಇದನ್ನು ಬಾಯ್ಕಟ್​ ಮಾಡಲು ಮುಂದಾಗಿರುವುದಾಗಿ ಪ್ರತಿಪಕ್ಷ ಕಾಂಗ್ರೆಸ್ (opposition Party congress​) ನಾಯಕರು ತಿಳಿಸಿದ್ದಾರೆ

1ನೇ ತರಗತಿಯಿಂದ ಶಾಲೆ ಪುನಾರಾರಂಭಕ್ಕೆ ಪೋಷಕರು ಆಸಕ್ತಿ

ನವೆಂಬರ್ 1 ರಿಂದ ಗ್ರೇಡ್ 1 ಮತ್ತು ಅದಕ್ಕಿಂತ ಹೆಚ್ಚಿನ ತರಗತಿಗಳನ್ನು ಪುನರಾರಂಭಿಸಲಾಗುವುದು ಎಂದು ಕೇರಳ ಘೋಷಿಸಿರುವುದರಿಂದ, ಕರ್ನಾಟಕ ಸರ್ಕಾರವೂ ರಾಜ್ಯದಲ್ಲಿ 1ನೇ ತರಗತಿಯಿಂದ ಎಲ್ಲಾ ಶಾಲೆಗಳನ್ನು ಆರಂಭಿಸಬೇಕು ಎಂದು ಪೋಷಕರು ಆಶಿಸಿದ್ದಾರೆ ಎನ್ನಲಾಗಿದೆ. ಕರ್ನಾಟಕದಲ್ಲಿ 9 ರಿಂದ 12 ನೇ ತರಗತಿಗಳನ್ನು ತೆರೆಯಲು ಈಗಾಗಲೇ ಅನುಮತಿ ನೀಡಲಾಗಿದೆ. ಅಲ್ಲದೆ, 6 ರಿಂದ 8 ನೇ ತರಗತಿಗಳಿಗೆ ಸೆಪ್ಟೆಂಬರ್ 6 ರಂದು ಪುನರಾರಂಭಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಕಿರಿಯ ಪ್ರಾಥಮಿಕ ಶಾಲೆಗಳ ಆರಂಭಕ್ಕೂ ಒತ್ತಾಯಗಳು ಕೇಳಿ ಬರುತ್ತಿವೆ. ಸೆಪ್ಟೆಂಬರ್ 11 ರಂದು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, "ಈ ವಿಷಯದ ಕುರಿತು ಸರ್ಕಾರವು ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಚರ್ಚೆ ನಡೆಸುತ್ತಿದೆ. ಚರ್ಚೆಯ ನಂತರ ಪ್ರಾಥಮಿಕ ತರಗತಿಗಳ ಆರಂಭಕ್ಕೆ ಅನುಮತಿ ನೀಡಲಾಗುವುದು" ಎಂದು ತಿಳಿಸಿದ್ದರು.

7 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ

ಚೆನ್ನೈನಲ್ಲಿ ಏಳು ವರ್ಷದ ಪುಟ್ಟ ಮಗುವಿನ ಮೇಲೆ ಸ್ವಂತ ತಾತ, ಮಾವ ಮತ್ತು ಅಣ್ಣನಿಂದಲೇ ಲೈಂಗಿಕ ಕಿರುಕುಳ ನಡೆದಿರುವ ಪ್ರಕರಣ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ. ಹಲವು ಬಾರಿ, ಪ್ರತ್ಯೇಕವಾಗಿ ಮೂವರೂ ಮಗುವಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂಬ ದೂರಿನ ಮೇಲೆ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ಥ ಬಾಲಕಿಯನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಸೇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ ಮಗುವನ್ನು ತಾತ, ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾಗ ಈ ಕೃತ್ಯ ನಡೆದಿದೆ.
Published by:Kavya V
First published: