Evening Digest: ಕೇಂದ್ರ ಸರ್ಕಾರದಿಂದ ರೈತರಿಗೆ ಬಂಪರ್; ತಂದೆ-ನಾಲ್ವರು ಮಕ್ಕಳ ಆತ್ಮಹತ್ಯೆ: ಇಂದಿನ ಪ್ರಮುಖ ಸುದ್ದಿಗಳು

Kannada news Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ಕೇಂದ್ರ ಸರ್ಕಾರದಿಂದ ರೈತರಿಗೆ ಬಂಪರ್: ದೇಶದ ಲಕ್ಷಾಂತರ ರೈತರಿಗೆ ಸರ್ಕಾರದಿಂದ ಶೀಘ್ರದಲ್ಲೇ ಕೇಂದ್ರ (Modi Government) ಶುಭ ಸುದ್ದಿ ನೀಡಲಿದೆ. ಡಿಸೆಂಬರ್ 15 ರ ಸುಮಾರಿಗೆ ಸರ್ಕಾರವು 10 ನೇ ಕಂತಿನ ಪಿಎಂ ಕಿಸಾನ್ ಯೋಜನೆಯನ್ನು ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ನೀವು ಕೃಷಿಕರಾಗಿದ್ದರೆ ಮತ್ತು ಪಿಎಂ ಕಿಸಾನ್ ಯೋಜನೆಯಡಿ (PM  Kisan Yojana) ನಿಮ್ಮನ್ನು ನೋಂದಾಯಿಸಿಕೊಂಡಿಲ್ಲದಿದ್ದರೆ, ಈಗಲೇ ನೋಂದಾಯಿಸಿಕೊಳ್ಳುವ ಮೂಲಕ ಇದರ ಲಾಭ ಪಡೆಯಬಹುದು. ನೀವು ಅರ್ಜಿ ಸಲ್ಲಿಸಿದ ನಂತರ ಮತ್ತು ನಿಮ್ಮ ಅರ್ಜಿಯನ್ನು ಸ್ವೀಕರಿಸಿದ ನಂತರ, ನಿಮ್ಮ ಬ್ಯಾಂಕ್ ಖಾತೆಗೆ (Farmers Bank Account) 2000 ರೂ ಹಣ ವರ್ಗಾವಣೆ ಆಗಲಿದೆ. ಈ ನಡುವೆ ತ್ರೈಮಾಸಿಕದಲ್ಲಿ ರೈತರ ಖಾತೆಗೆ ರೂ 2000 ಠೇವಣಿ ಮಾಡುವ ಬದಲು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ರೂ 4000 ಠೇವಣಿ ಮಾಡಲಾಗುವುದು ಎಂಬ ಕುರಿತು ಕೂಡ ಹಲವು ವರದಿಗಳು ತಿಳಿಸಿವೆ. ಈ ರೀತಿ ಆದಲ್ಲಿ, ರೈತರು ಪ್ರತಿ ವರ್ಷ ಈ ಹಿಂದೆ ಪಡೆದ 6000 ರೂಪಾಯಿಗಳಿಗಿಂತ 12,000 ರೂಗಳನ್ನು 3 ಕಂತುಗಳಲ್ಲಿ ಪಡೆಯ ಬಹುದು.

ತಂದೆ-ನಾಲ್ವರು ಮಕ್ಕಳ ಆತ್ಮಹತ್ಯೆ

ಆತ ಮಾಜಿ ಯೋಧ (ex servicemen), ನಿವೃತ್ತಿ ಬಳಿಕ ಬಂದ ಹಣದಿಂದ ಎರಡು ಅಂತಸ್ತಿನ ಮನೆ ಕಟ್ಟಿಸಿದ್ದರು. ಇನ್ನೇನು ಮನೆ ಗೃಹಪ್ರವೇಶ (new house ceremony)ಮಾಡಬೇಕು ಎನ್ನುವಷ್ಟರಲ್ಲಿ ಪತ್ನಿ ಕೊರೊನಾಗೆ ತುತ್ತಾಗಿ ಬ್ಲ್ಯಾಕ್​​ ಫಂಗಸ್​ ನಿಂದ ಪ್ರಾಣ  ಕಳೆದುಕೊಂಡಿದ್ದರು. ಪತ್ನಿ ಸಾವಿನಿಂದ ಮನನೊಂದಿದ್ದ ಆತ ತನ್ನ ನಾಲ್ವರು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ (suicide) ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬೆಳಗಾವಿಯ ಹುಕ್ಕೇರಿ ತಾಲೂಕಿನ‌ ಬೋರಗಲ್ (borgal,  hukkeri)  ಗ್ರಾಮದಲ್ಲಿ ನಡೆದಿದೆ. ಪತ್ನಿಯ ಅಕಾಲಿಕ ಮರಣದಿಂದ ಮನನೊಂದ ಮಾಜಿ ಸೈನಿಕನೋರ್ವ ತನ್ನ ನಾಲ್ವರು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವುದು ಕರುನಾಡನ್ನು ವಿಷಾದಕ್ಕೆ ದೂಡಿದೆ. ಬೋರಗಲ್ ಗ್ರಾಮದ ಗೋಪಾಲ ಹಾದಿಮನಿ (46) ಹಾಗೂ ಅವರ ಮಕ್ಕಳಾದ ಸೌಮ್ಯಾ ಹಾದಿಮನಿ (19), ಶ್ವೇತಾ ಹಾದಿಮನಿ (16), ಸಾಕ್ಷಿ ಹಾದಿಮನಿ (11), ಸೃಜನಾ ಹಾದಿಮನಿ (8) ಮೃತಪಟ್ಟಿದ್ದಾರೆ.

ಬಿಜೆಪಿ ಸರ್ಕಾರ ಬರಲು ಸಿದ್ದರಾಮಯ್ಯ ಕಾರಣ ಎಂದ ಎಚ್​ಡಿಕೆ

ಹುಬ್ಬಳ್ಳಿಯಲ್ಲಿ  ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಎಚ್​ ಡಿ ಕುಮಾರಸ್ವಾಮಿ ಅವರು , ಸಿದ್ದರಾಮಯ್ಯಗೆ ಕುಮಾರಸ್ವಾಮಿನೇ ಟಾರ್ಗೆಟ್. ಜೆಡಿಎಸ್​​​ನ ಸಮಸ್ಯೆ ಇಲ್ಲಾ ಅಂತಾ ಅವರ ಭಾವನೆ ಇರಬಹುದು. ನಾನು ಅವರಿಗೆ ಮನವಿ ಮಾಡ್ತೇನೆ. ಸಿದ್ದರಾಮಯ್ಯ ನಿಮ್ಮ ವರ್ಚಸ್ಸು ಹಾಗೂ ರಾಜಕೀಯ ಶಕ್ತಿ ಕುಂದಿಸಿಕೊಳ್ಳುವ‌ ಕೆಲಸ ಮಾಡಬೇಡಿ ಎಂದು ಮನವಿ ಮಾಡ್ತೇನೆ ಎಂದು ತಿರುಗೇಟು ನೀಡಿದರು. ನಾನು ಯಾರ ಮೇಲೂ ವೈಯಕ್ತಿಕ ನಿಂದನೆ ಮಾಡಿಲ್ಲ, ಆದರೆ ನಾನು ಎಲ್ಲ ನಾಯಕರಿಗೂ ಹೇಳ್ತೇನೆ. ಚುನಾವಣೆಯಲ್ಲಿ ಆಗಿರಬಹುದು ಅಥವಾ ಜನಪ್ರತಿನಿಧಿಯಾಗಿರಬಹುದು ಸರ್ಕಾರ ನಡೆಸಬೇಕಾದರೆ ಅದರ ಆಧಾರದ ಮೇಲೆ ಚರ್ಚೆ ಮಾಡಿ. ವೈಯಕ್ತಿಕವಾದ‌ ವಿಚಾರ ಚರ್ಚೆ ಮಾಡಲು ಹೋದರೆ ಪರಸ್ಪರ ಕೆಸರೆಚಾಟ ಮಾಡಿಕೊಂಡು ಹೋದರೆ ಅದಕ್ಕೆ ಅಂತಿಮ ಇರಲ್ಲ ಎಂದರು. ಬಿಜೆಪಿ 2018 ರಲ್ಲಿ 105 ಕ್ಕೆ ತಲುಪಲು ಸಿದ್ದರಾಮಯ್ಯನವರೇ ಕಾರಣ. ಈಗ ದರಿದ್ರ ಸರ್ಕಾರ ಅಂತ ಹೇಳ್ತಿರಿ, ಈ ದರಿದ್ರ ಸರ್ಕಾರ ತರಲು ಕಾರಣಿಭೂತ ಯಾರು ಎಂದು ಪ್ರಶ್ನಿಸಿದರು.

ಬದಲಾದ CISCE ವೇಳಾಪಟ್ಟಿ

ನವೆಂಬರ್ 15ರಿಂದ ಆರಂಭವಾಗಬೇಕಿದ್ದ 2022ರ ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (Council For Indian School Certificate Examinations- CISCE) ಬೋರ್ಡ್ ಪರೀಕ್ಷೆಗಳು(Board Exams) ಈಗ ನವೆಂಬರ್ 22ರಿಂದ ಆರಂಭವಾಗಲಿದೆ. ICSE ಮತ್ತು ISC ಎರಡಕ್ಕೂ ಪರಿಷ್ಕೃತ ದಿನಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2022ರ ಬೋರ್ಡ್ ಪರೀಕ್ಷೆಗಳಿಗೆ ಆನ್‍ಲೈನ್ ಮತ್ತು ಆಫ್‍ಲೈನ್ ಆಯ್ಕೆಗಳನ್ನು ನೀಡುವ ತನ್ನ ನಿರ್ಧಾರದ ಮೇಲೆ CISCE ಯು-ಟರ್ನ್ ತೆಗೆದುಕೊಂಡಿದೆ. CISCE ತನ್ನ ಇತ್ತೀಚಿನ ಸೂಚನೆಯಲ್ಲಿ ಬೋರ್ಡ್ ಪರೀಕ್ಷೆಗಳು 2022 ಅನ್ನು ಆಫ್‍ಲೈನ್‌ನಲ್ಲಿ(Offline) ಮಾತ್ರ ನಡೆಸಲಾಗುವುದು ಎಂದು ಹೇಳಿದೆ. CBSE ವಿದ್ಯಾರ್ಥಿಗಳು ಆನ್‍ಲೈನ್ ಮತ್ತು ಆಫ್‍ಲೈನ್ ಪರೀಕ್ಷೆಗಳ ಆಯ್ಕೆ ಕೋರಿದ ನಂತರ ಆಫ್‍ಲೈನ್ ಪರೀಕ್ಷೆಗಳನ್ನು ನಡೆಸುವ ನಿರ್ಧಾರ ತೆಗೆದುಕೊಂಡಿದೆ. CISCEಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ CBSE ಬೋರ್ಡ್ ಪರೀಕ್ಷೆಗಳಿಗಿಂತ ಕಡಿಮೆ.

ಧೋನಿಯಿಂದಲೇ ಥ್ರೋ ಪ್ರಾಕ್ಟೀಸ್

ಮೆಂಟಾರ್ ಆಗಿ ಎಂಎಸ್ ಧೋನಿ ಉಪಸ್ಥಿತಿ ಇರುವುದು ಟೀಮ್ ಇಂಡಿಯಾದ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಹಲವು ಆಟಗಾರರೇ ಇದನ್ನ ಬಹಿರಂಗವಾಗಿ ಒಪ್ಪಿಕೊಂಡಿದ್ಧಾರೆ. ಆಟಗಾರನಾಗಿದ್ದಾಗ ಮತ್ತು ನಾಯಕನಾಗಿದ್ದಾಗ ಮೈದಾನದಲ್ಲಿ ಒತ್ತಡದ ಸಂದರ್ಭಗಳನ್ನ ಸಮರ್ಪಕವಾಗಿ ನಿಭಾಯಿಸುತ್ತಿದ್ದ ಮಹೇಂದ್ರ ಸಿಂಗ್ ಧೋನಿ ಈಗ ಮೆಂಟಾರ್ ಆಗಿಯೂ ತಂಡದ ಆಟಗಾರರ ಅಗತ್ಯತೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಅಂತೆಯೇ, ಯಾವ ರೂಪದಲ್ಲಾದರೂ ಧೋನಿ ಇದ್ದರೆ ಆಟಗಾರರಿಗೆ ಆತ್ಮವಿಶ್ವಾಸ ಹೆಚ್ಚೇ ಮೂಡುತ್ತದೆ. ಟಿ20 ವಿಶ್ವಕಪ್​ನ ಸೂಪರ್-12 ಹಂತದಲ್ಲಿರುವ ಟೀಮ್ ಇಂಡಿಯಾದ ಬ್ಯಾಟುಗಾರರ ಅಭ್ಯಾಸಕ್ಕೆ ನೆಟ್ ಬೌಲರ್ಸ್ ತುಸು ಅಗತ್ಯ. ಆದರೆ, ಎಂಟು ನೆಟ್ ಬೌಲರ್ಸ್ ಪೈಕಿ ನಾಲ್ವರು ತಮ್ಮ ತವರಿಗೆ ವಾಪಸ್ ಹೋಗಿದ್ದಾರೆ. ಈ ಸಂದರ್ಭದಲ್ಲಿ ಮೆಂಟರ್ ಎಂಎಸ್ ಧೋನಿ ಅವರೇ ಖುದ್ದಾಗಿ ಥ್ರೋಡೌನ್ ಕೆಲಸದಲ್ಲಿ ತೊಡಗಿ ಆಟಗಾರರಿಗೆ ಸಹಾಯವಾಗುತ್ತಿದ್ಧಾರೆ.
Published by:Kavya V
First published: