Evening Digest: ಅರೆಸೇನಾ ಯೋಧರ ಪರಿಹಾರ ₹35 ಲಕ್ಷಕ್ಕೆ ಏರಿಕೆ; ‘ಜೈ ಭೀಮ್’ ವಿವಾದದಿಂದ ಸಂಭಾವನೆ ವಾಪಸ್: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ಅರೆಸೇನಾ ಯೋಧರ ಪರಿಹಾರ ₹35 ಲಕ್ಷಕ್ಕೆ ಏರಿಕೆ: ಕಾರ್ಯಾಚರಣೆಗಳಲ್ಲಿ ಅರೆಸೇನಾ ಪಡೆಗಳ (Paramilitary Forces) ಯೋಧರು ಮೃತಪಟ್ಟರೆ ಅವರ ಹತ್ತಿರದ ಸಂಬಂಧಿಗಳಿಗೆ ನೀಡಲಾಗುವ ಪರಿಹಾರ ಹಣವನ್ನು (Financial Aid) ಕೇಂದ್ರ ಸರ್ಕಾರ 35 ಲಕ್ಷ ರೂಪಾಯಿಗೆ ಹೆಚ್ಚಿಸಿದೆ. ಗಮನಿಸಿಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ ಈ ಪರಿಹಾರ ಹಣ ಎಲ್ಲಾ ಅರೆಸೇನಾ ಪಡೆಗಳಿಗೆ ಸಮಾನವಾಗಿ ಅನ್ವಯ ಆಗಲಿದೆ. ಇದೇ ನವೆಂಬರ್ 1ರಿಂದ ಈ ಹೊಸ ಸೌಲಭ್ಯ ಅಳವಡಿಕೆ ಆಗಲಿದೆ. ಎಲ್ಲಾ ಪ್ಯಾರಾಮಿಲಿಟರಿ ಪಡೆಗಳ ಯೋಧರಿಗೆ ಸಮಾನ ಪರಿಹಾರ ನೀಡುವ ಸೌಲಭ್ಯವನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ (Central Ministry of Home Affairs) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದು ಎನ್​ಕೌಂಟರ್, ಗುಂಡಿನ ಕಾಳಗ ಇತ್ಯಾದಿ ಸೇನಾ ಪಡೆ ಕಾರ್ಯಾಚರಣೆಗಳಲ್ಲಿ ಹುತಾತ್ಮರಾಗುವ ಅರೆಸೇನಾ ಪಡೆಗಳ ಯೋಧರಿಗೆ ಮಾತ್ರ 35 ಲಕ್ಷ ರೂ ಪರಿಹಾರ ಹಣದ ಸೌಲಭ್ಯ ಇರಲಿದೆ. ಬೇರೆ ಕಾರಣಗಳಿಂದ ಮೃತಪಡುವ ಯೋಧರಿಗೆ ಆಯಾ ಅರೆಸೇನಾ ಪಡೆಯ ಮಾಮೂಲಿಯ ಪರಿಹಾರ ಹಣ ಸಿಗುವುದು ಮುಂದುವರಿಯಲಿದೆ.

ಹಾಸನದಲ್ಲಿ Suraj Revanna ನಾಮಪತ್ರ ಸಲ್ಲಿಕೆ

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆ ಮೂಲಕ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ (HD Deve Gowda) ಮತ್ತೊಬ್ಬ ಮೊಮ್ಮಗನ ರಾಜಕೀಯ ಪ್ರವೇಶವಾಗುತ್ತಿದೆ. ಮಾಜಿ ಸಚಿವ ಎಚ್​.ಡಿ.ರೇವಣ್ಣ ಪುತ್ರ ಸೂರಜ್​ (Suraj Revanna) ರೇವಣ್ಣಗೆ ಜೆಡಿಎಸ್​ ಟಿಕೆಟ್​ ನೀಡಿರುವ ಹಿನ್ನೆಲೆ ಇಂದು ಮತ್ತೊಂದು ನಾಮಪತ್ರ (Nomination Filled ) ಹಾಗೂ ಅಫಿಡೆವಿಟ್ ಸಲ್ಲಿಸಿದದರು. ಬಿಜೆಪಿ ಅಭ್ಯರ್ಥಿ ಎಚ್.ಎಂ.ವಿಶ್ವನಾಥ್ ಕೂಡ ನಾಮಪತ್ರ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು ಪ್ರತಿಸ್ಪರ್ಧಿ ಸೂರಜ್​ ರೇವಣ್ಣ ಸ್ಪರ್ಧೆ ಬಗ್ಗೆ ವ್ಯಂಗ್ಯವಾಡಿದರು. ಪರಿಷತ್​ ಹಿರಿಯರು ಇರುವ ವಿಧಾನ ಮಂಡಲದ ಮೇಲ್ಮನೆಗೆ ಕಿರಿಯರನ್ನೇ ಏಕೆ ಕಳುಹಿಸುತ್ತೀರಾ, ಹಿರಿಯರನ್ನೇ ಕಳುಹಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು. ಸಹಜವಾಗಿ ಜೆಡಿಎಸ್ ನಮ್ಮ ಪ್ರತಿಸ್ಪರ್ಧಿ. ಅಧಿಕಾರ ಒಂದೇ ಕಡೆ ಕೇಂದ್ರಿಕೃತವಾಗಬಾರದು, ಅದು ವಿಕೇಂದ್ರಿಕರಣವಾಗಬೇಕು ಎನ್ನುವ ಮೂಲಕ ಜೆಡಿಎಸ್​ ಕುಟುಂಬ ರಾಜಕಾರಣದ ವಿರುದ್ಧ ಪರೋಕ್ಷ ತಿರುಗೇಟು ನೀಡಿದರು.

ರೈತರ ಪ್ರತಿಭಟನೆಯಲ್ಲಿ Urban Naxals, CAA ಹೋರಾಟಗಾರರು

ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಸುದ್ದಿಗೋಷ್ಠಿ ನಡೆಸಿ ವಿವಾದಿತ 3 ಕೃಷಿ ಕಾಯ್ದೆಗಳನ್ನು (Farmers Law ) ಕೇಂದ್ರ ಸರ್ಕಾರ (Central Government) ಹಿಂಪಡೆದ ನಿರ್ಧಾರವನ್ನು ಸಮರ್ಥಿಸಿಕೊಂಡು, ವಿರೋಧಿಸುವವರಿಗೆ ತಿರುಗೇಟು ನೀಡಿದರು. ಕೇಂದ್ರ ಸರ್ಕಾರದಿಂದ ಸುಧಾರಿತ ಎಪಿಎಂಸಿ ಕಾಯ್ದೆ ಜಾರಿಗೆ ತರಲಿದೆ, ಈ ಬಗ್ಗೆ ಪ್ರಧಾನಿಗಳು ಈಗಾಗಲೇ ಹೇಳಿದ್ದಾರೆ. ಸುಧಾರಿತ ಕಾಯ್ದೆಯನ್ನ ಜಾರಿಗೆ ತರಲಿದ್ದಾರೆ. ಪಂಚರಾಜ್ಯ ಚುನಾವಣೆಯಿಂದ ಕೃಷಿ ಕಾಯ್ದೆಗಳನ್ನು ಹಿಂಪಡೆದಿಲ್ಲ. ಅಮಾವಾಸ್ಯೆ, ಹುಣ್ಣಿಮೆಗೆಲ್ಲಾ‌ ಚುನಾವಣೆ ನಡೆಯುತ್ತಿರುತ್ತವೆ, ಅದಕ್ಕೆಲ್ಲ ಬಿಜೆಪಿ ತಲೆಕೆಡಿಸಿಕೊಳ್ಳುವುದಿಲ್ಲ. 2014ರ ಅಧಿಕಾರಾವಧಿ ಕೊನೆಯಲ್ಲಿ ಮತ್ತೆ ಬಿಜೆಪಿ ಬರೋದೇ ಇಲ್ಲ ಅಂದ್ರು. ಆದ್ರೆ, 2019ರಲ್ಲಿ ಸಿಂಗಲ್ ಮೆಜಾರಿಟಿ ಸರ್ಕಾರ ಬಂತು. ಜಾತಿ ಇಟ್ಟು, ಓಲೈಕೆ ರಾಜಕಾರಣ ಎಂದಿಗೂ ಬಿಜೆಪಿ ಮಾಡಲಿಲ್ಲ ಎಂದು ಸಮರ್ಥಿಸಿಕೊಂಡರು.

ರಾಜಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಯಲು ಬೃಹತ್ ಯೋಜನೆ

ರಾಜಕಾಲುವೆಗಳನ್ನು (Drainage Canal) ಅಗಲೀಕರಣಗೊಳಿಸಿ ಹೊಸ ಚರಂಡಿ ವ್ಯವಸ್ಥೆಯ ಜತೆಗೆ ಸಂಪರ್ಕ ಕಾಲುವೆಗಳನ್ನು ನಿರ್ಮಿಸಲು ಬೃಹತ್ ಯೋಜನೆಯನ್ನು (Project) ರೂಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ತಿಳಿಸಿದರು. ಎರಡು ಗಂಟೆ ಅವಧಿಯಲ್ಲಿ 138 ಮಿಮಿ ಮಳೆ ಬಿದ್ದಿದೆ, ಗ್ರಾಮೀಣ ಪ್ರದೇಶ, ಯಲಹಂಕ ಸೇರಿದಂತೆ ನಗರ ಪ್ರದೇಶಗಳಲ್ಲಿ ಏಕರೀತಿಯಲ್ಲಿ ಮಳೆ ಬಂದಿದೆ. ಎಲ್ಲಾ ಕೆರೆಗಳು ತುಂಬಿವೆ. ಮೇಲ್ಭಾಗದಲ್ಲಿರುವ  ಕೆರೆಗಳು ಮತ್ತು ಚರಂಡಿಗಳನ್ನು ಬೇರೆ ದಿಕ್ಕಿಗೆ ತಿರುಗಿಸಲು ಸೂಚನೆ ನೀಡಲಾಗಿದೆ. ಈ ಬಾರಿಯ ಮಳೆ ರಾಜಕಾಲುವೆಯನ್ನೂ ಮೀರಿ ಹರಿದಿರುವ ದೊಡ್ಡ ಪ್ರಮಾಣದ ಅಕಾಲಿಕ ಮಳೆ. ಯಲಹಂಕದಿಂದ ಜಕ್ಕೂರು, ರಾಚೇನಹಳ್ಳಿ ಕೆರೆ, ನಂತರ ಕಡೆ ಆರ್ ಪುರ ದಿಂದ ಪಿನಾಕಿನಿ  ನದಿಗೆ ಸೇರಿ  ತಮಿಳುನಾಡಿಗೆ ಹೋಗುವ ಕಾಲುವೆ 8 ರಿಂದ 10 ಅಡಿಮಾತ್ರ ಅಗಲವಿದ್ದು ಬಹಳ ಚಿಕ್ಕದಾಗಿದೆ. ಈ ಕೂಡಲೇ ನೀರು ನುಗ್ಗಿದ ಮನೆ, ವಸತಿ ಸಂಕೀರ್ಣ, ಸಂಸ್ಥೆಗಳಲ್ಲಿಯೂ ಡೈವರ್ಷನ್ ಗೆ  ಕ್ರಮ ತೆಗೆದುಕೊಳ್ಳಲು ಸೂಚಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಜೈ ಭೀಮ್​​ ವಿವಾದದಿಂದ ಸಂಭಾವನೆ ವಾಪಸ್

ನಟ ಸೂರ್ಯ  (Actor Suriya)ಅವರ ಅಭಿನಯದ ಇತ್ತೀಚೆಗೆ ಬಿಡುಗಡೆ ಆದ ‘ಜೈ ಭೀಮ್’  (Jai Bheem) ತಮಿಳು ಸಿನಿಮಾ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ಓಟಿಟಿಯಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಸಾಮಾಜಿಕ ಮಾಧ್ಯಮದಲ್ಲಿ ಈಗಲೂ ಚರ್ಚೆಯಲ್ಲಿದೆ. ಜೈ ಭೀಮ್’ ಕೇವಲ ಹೊಗಳಿಕೆಯನ್ನು ಮಾತ್ರ ತನ್ನ ಮುಡಿಗೇರಿಸಿಕೊಂಡಿದೆ ಎಂದರೆ ತಪ್ಪಾಗುತ್ತದೆ. ಏಕೆಂದರೆ, ಅದು ಈ ದಿನಗಳಲ್ಲಿ ವಿವಾದಕ್ಕೆ ಕಾರಣವಾದ ಚಿತ್ರವು ಕೂಡ. ಹೌದು, ಸಿನಿಮಾ ಸಮುದಾಯಗಳ ನಡುವೆ ದ್ವೇಷ ಕೆರಳಿಸಬಲ್ಲದು ಎಂಬ ಆರೊಪಕ್ಕೆ ಒಳಗಾಗಿದೆ. ಇದೀಗ ‘ಜೈ ಭೀಮ್’ ಸಿನಿಮಾದ ವಿವಾದಕ್ಕೆ ಇನ್ನೊಂದು ವಿಷಯ ಸೇರ್ಪಡೆ ಆಗಿದೆ; ಚಿತ್ರದ ಸಂಭಾಷಣೆ ಬರಹಗಾರ ಕಣ್ಮಣಿ ಗುಣಶೇಖರನ್, ಈ ಸಿನಿಮಾಗಾಗಿ ತಾವು ತೆಗೆದುಕೊಂಡಿದ್ದ ಸಂಭಾವನೆಯನ್ನು ಹಿಂದಿರುಗಿಸಿದ್ದಾರೆ.
Published by:Kavya V
First published: