Evening Digest: ರೋಹಿಣಿ ಸಿಂಧೂರಿಗೆ ಸಂಕಷ್ಟ : ಸದನದಲ್ಲಿ ಅಕ್ಕ-ಪಕ್ಕ ಕುಳಿತ ಸಿದ್ದರಾಮಯ್ಯ-ಬಿಎಸ್​​ವೈ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ರೋಹಿಣಿ ಸಿಂಧೂರಿಗೆ ಸಂಕಷ್ಟ : ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿಗೆ (Rohini Sindhuri) ಸಂಕಷ್ಟ ಎದುರಾಗಿದೆ. ಮೈಸೂರಿನ (Mysore) ಜಿಲ್ಲಾಧಿಕಾರಿಯಾಗಿದ್ದ ವೇಳೆ ರೋಹಿಣಿ ವಿರುದ್ಧ ಬಟ್ಟೆ ಬ್ಯಾಗ್ (Cloth Bag)  ಖರೀದಿ ಹಗರಣ​ ಆರೋಪ ಕೇಳಿ ಬಂದಿತ್ತು. ಇದೀಗ ಹಗರಣದ ತನಿಖೆಗೆ ಸರ್ಕಾರ ಆದೇಶ (Order) ನೀಡಿದೆ. ಈ ಹಗರಣವನ್ನು ಶಾಸಕ ಸಾ.ರಾ ಮಹೇಶ್  (Sa.Ra Ma​hesh)​ ಬಯಲಿಗೆ ಎಳೆದಿದ್ರು. ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸತತ ಆರೋಪಗಳನ್ನು ಮಾಡುತ್ತಿದ್ದ ಜೆಡಿಎಸ್ ಶಾಸಕ ಸಾ.ರಾ ಮಹೇಶ್, ಮೈಸೂರನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಯೋಜನೆ ನೆಪದಲ್ಲಿ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿದ್ರು. ಇದಕ್ಕೆ ಅವರು ದಾಖಲೆಗಳನ್ನು ಕೂಡ ಪ್ರದರ್ಶಿಸಿದ್ರು.

ಪೂರ್ತಿ ಸುದ್ದಿ ಓದಲು ಕ್ಲಿಕ್​ ಮಾಡಿ: Mysore: ಬಟ್ಟೆ ಬ್ಯಾಗ್ ಖರೀದಿ ಹಗರಣ; ಸರ್ಕಾರದಿಂದ ತನಿಖೆಗೆ ಆದೇಶ, ರೋಹಿಣಿ ಸಿಂಧೂರಿಗೆ ಸಂಕಷ್ಟ

ಅಕ್ಕ-ಪಕ್ಕ ಕುಳಿತ ಸಿದ್ದರಾಮಯ್ಯ,-ಬಿಎಸ್​​ವೈ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Opposition Leader Siddaramaiah ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM Siddaramaiah) ಸದನದಲ್ಲಿ ಮುಖಾಮುಖಿಯಾದ್ರೆ ಅಲ್ಲಿ ದೀರ್ಘವಾದ ವಾಕ್ಸಮರವೇ ನಡೆಯುತ್ತದೆ. ಇಬ್ಬರು ರಾಜಕೀಯವಾಗಿ (Politics) ಎಷ್ಟೇ ವಿರೋಧಿಗಳಾಗಿದ್ರೂ, ವೈಯಕ್ತಿಕವಾಗಿ ಒಳ್ಳೆಯ ಸ್ನೇಹಿತರು (Friends) ಅನ್ನೋದು ಇಡೀ ಕರುನಾಡಿಗೆ ತಿಳಿದಿದೆ. ಸಿದ್ದರಾಮಯ್ಯನವರು ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಯಡಿಯೂರಪ್ಪನವರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದರು. ಇನ್ನು ಹಲವು ಖಾಸಗಿ ಕಾರ್ಯಕ್ರಮಗಳಲ್ಲಿ ಜೊತೆಯಾಗಿರೋದನ್ನು ನೋಡಿರಬಹುದು. ಇಂದು ಸದನದಲ್ಲಿ ಇಬ್ಬರು ನಾಯಕರು ಜೊತೆಯಾಗಿ ಕುಳಿತು ಚರ್ಚೆ ನಡೆಸಿದರು. ಕರ್ನಾಟಕದ ನಾಯಕರು ರಾಜಕೀಯದಾಚೆಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಪೂರ್ತಿ ಸುದ್ದಿ ಓದಲು ಕ್ಲಿಕ್​ ಮಾಡಿ:Session: ಸದನದಲ್ಲಿ ಅಕ್ಕ-ಪಕ್ಕ ಕುಳಿತು ಸಿದ್ದರಾಮಯ್ಯ, ಯಡಿಯೂರಪ್ಪ ಚರ್ಚೆ

ಅರ್ಧಕ್ಕೆ ನಿಂತ ವಂದೇ ಮಾತರಂ ಹಾಡು

ನಗರದ ಇಂಪೀರಿಯಲ್ ಗಾರ್ಡನ್​ನಲ್ಲಿ ಕಾಂಗ್ರೆಸ್​ನ (Congress) ಡಿಜಿಟಲ್ ನೊಂದಣಿ ಅಭಿಯಾನ ಪರಿಶೀಲನಾ ಸಭೆ ನಡೆದಿದೆ. ಸಭೆಯಲ್ಲಿ ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್, (D.K Shivakumar) ಈಶ್ವರ್​ ಖಂಡ್ರೆ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು (Congress Leadress) ಸಭೆಯಲ್ಲಿ ಭಾಗಿಯಾಗಿದ್ರು. ಈ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ವಂದೇ ಮಾತರಂ (Vande Mataram) ಗೀತೆಯನ್ನು ಅರ್ಧಕ್ಕೆ ನಿಲ್ಲಿಸಿ ಅಗೌರವ ತೋರಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿಯೇ ಈ ರೀತಿ ನಿರ್ಲಕ್ಷ್ಯ ತೋರಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ವಿಡಿಯೋ ಚಿತ್ರಿಕರಣ ವೇಳೆ ಕೈ ಕಾರ್ಯಕರ್ತರು ಗೂಂಡಾ ವರ್ತನೆ ತೋರಿದ್ದಾರೆ. ಮಾಧ್ಯಮದವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

ಹರ್ಷ ಕೊಲೆ ಹಿಂದಿನ ಸತ್ಯ ಜನರಿಗೆ ತಿಳಿಸಿ- HDK ಆಗ್ರಹ

ರಾಜ್ಯದಲ್ಲಿ ಕೋಲಾಹಾಲ ಎಬ್ಬಿಸಿದ್ದ ಹಿಜಾಬ್ (Hijab) ಸಂಘರ್ಷ ವಿಚಾರವನ್ನು ಸದನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ (Kumarsaway) ಪ್ರಸ್ತಾಪಿಸಿದ್ದು ಭಾರೀ ಗದ್ದಲಕ್ಕೆ ಕಾರಣವಾಗಿದೆ. ಉಡುಪಿ (Udupi) ಸರ್ಕಾರಿ‌ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್ ವಿಚಾರ ಇನ್ನೂ ಜೀವಂತವಾಗಿ ಮುಂದುವರೆಯುತ್ತಿದೆ. ಆಗ ಉಡುಪಿ ಕಾಲೇಜಿನ ಪ್ರಿನ್ಸಿಪಾಲ್ ಸರಿಯಾಗಿ ಪರಿಸ್ಥಿತಿ ನಿಭಾಯಿಸಿದ್ದಿದ್ರೆ. ಹಿಜಾಬ್ ವಿಚಾರ ಇಷ್ಟು ದೊಡ್ಡ ಮಟ್ಟಕ್ಕೆ ಹೋಗ್ತಿರ್ಲಿಲ್ಲ. ಉಡುಪಿ ಕಾಲೇಜಿನ ಪ್ರಿನ್ಸಿಪಾಲ್ ಕೇರ್ ಲೆಸ್ (Care less) ಆಗಿ ತೀರ್ಮಾನಗಳನ್ನು ಕೈಗೊಂಡ್ರು ಇದ್ರಿಂದ ಬೇರೆ ಜಿಲ್ಲೆಗಳಿಗೆ ಸಂಘರ್ಷ ಕಿಚ್ಚು ಹಬ್ಬಿತು. ಉಡುಪಿ‌ ಬಳಿಕ ಹಲವು ಜಿಲ್ಲೆಗಳಲ್ಲಿ ಇದೀಗ ಎರಡು ಸಮುದಾಯಗಳ ಮಧ್ಯೆ ಸಂಘರ್ಷ ಆರಂಭವಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ರು.

ದೆಹಲಿ ಸಿಎಂ ಕೇಜ್ರಿವಾಲ್ ಸವಾಲನ್ನು ಸ್ವೀಕರಿಸುತ್ತಾ ಕೇಸರಿ ಪಕ್ಷ?

ಪಂಜಾಬ್ ವಿಧಾನಸಭಾ (Punjab Assembly) ಚುನಾವಣೆಯ ಗೆಲುವಿನ ಹುಮ್ಮಸ್ಸಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Delhi Chief Minister Arvind Kejriwal) ಬುಧವಾರ ಭಾರತೀಯ ಜನತಾ ಪಕ್ಷಕ್ಕೆ (BJP) ಹೊಸ ಸವಾಲನ್ನು ಹಾಕಿದ್ದಾರೆ. ದೆಹಲಿ ಮಹಾನಗರ ಪಾಲಿಕೆ (MCD) ಚುನಾವಣೆ ಮುಂದೂಡಿರುವ ಸಂಬಂಧ ಬಿಜೆಪಿ ವಿರುದ್ಧ ಕೇಜ್ರಿವಾಲ್​​ ಕೆಂಡಾಮಂಡಲರಾಗಿದ್ದಾರೆ. ವಿಧಾನಸಭೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ಸಮಯಕ್ಕೆ ಸರಿಯಾಗಿ ಚುನಾವಣೆ ನಡೆದರೆ ಆಮ್ ಆದ್ಮಿ ಪಕ್ಷ (AAP) ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯನ್ನು ಕೆಳಗಿಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಂತರ ಕೇಜ್ರಿವಾಲ್ ಅವರು ತಮ್ಮ ಆಮ್ ಆದ್ಮಿ ಪಕ್ಷವು ಸ್ಥಳೀಯ ಚುನಾವಣೆಯಲ್ಲಿ ಸೋತರೆ ರಾಜಕೀಯ ತ್ಯಜಿಸುವುದಾಗಿ ಘೋಷಿಸಿದರು. ಆಪ್​​ ಗೆದ್ದೇ ಗೆಲ್ಲುತ್ತೆ, ಬಿಜೆಪಿಗೆ ಸೋಲು ಖಚಿತ. ನನ್ನ ಲೆಕ್ಕಾಚಾರ ತಪ್ಪಾದರೆ ರಾಜಕೀಯದಿಂದ ನಿವೃತ್ತಿ ಹೊಂದುವೆ ಎಂದು ಕೇಜ್ರಿವಾಲ್​ ಸವಾಲು ಹಾಕಿದರು.
Published by:Kavya V
First published: