Evening Digest: ಉದ್ಧವ್ ಠಾಕ್ರೆ ವಿರುದ್ಧ ಹೊಸ ಬಾಂಬ್​ ಸಿಡಿಸಿದ ಶಿಂಧೆ, ಮೊಬೈಲ್​ನಲ್ಲೇ ಮೆಟ್ರೋ ಟ್ರ್ಯಾಕ್ ಮಾಡಿ; ಇಂದಿನ ಟಾಪ್ ನ್ಯೂಸ್‌ಗಳು ಇಲ್ಲಿವೆ

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಪತನದತ್ತ 'ಮಹಾ' ಸರ್ಕಾರ; ಕಂಗನಾ ರನೌತ್ ಹಳೆ ವಿಡಿಯೋ ವೈರಲ್!

ಮುಂಬೈ: ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ಪತನದತ್ತ (Maharashtra Political Process) ಸಾಗುತ್ತಿದೆ. ಈ ಬೆನ್ನಲ್ಲೇ ನಟಿ ಕಂಗನಾ ರನೌತ್ ಅವರ ವಿಡಿಯೋವೊಂದು ವೈರಲ್ ಆಗುತ್ತಿದೆ. ಅರೇ! ಮಹಾರಾಷ್ಟ್ರದ ಉದ್ಧವ್ ಠಾಕ್ರೆ (Maha CM Uddhav Thackeray) ನೇತೃತ್ವದ ಶಿವಸೇನಾ-ಕಾಂಗ್ರೆಸ್-ಎನ್​ಸಿಪಿ ಮೈತ್ರಿಕೂಟದ ಸರ್ಕಾರ ಪತನಕ್ಕೂ ಕಂಗನಾ ರನೌತ್​​ಗೂ ಎತ್ತಣಿಂದೆತ್ತ ಸಂಬಂಧ ಅನಿಸದಿರದು. ಆದರೆ ನೆಟ್ಟಿಗರು ಕಂಗನಾ ರನೌತ್ ಅವರ (Kangana Ranaut Viral Video) ಹಳೆಯ ವಿಡಿಯೋವನ್ನು ಮತ್ತೆ ವೈರಲ್ ಮಾಡಿದ್ದಾರೆ. ಇಲ್ಲದೆ ಆ ವಿಡಿಯೋ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬುಧವಾರ ತಮ್ಮ ಅಧಿಕೃತ ನಿವಾಸ ವರ್ಷಾವನ್ನು ತೊರೆದು ತಮ್ಮ ಕುಟುಂಬ ನಿವಾಸ ಮಾತೋಶ್ರೀಗೆ ಮರಳಿದ್ದಾರೆ. ಕೂಡಲೇ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಬಾಲಿವುಡ್ ನಟಿ ಕಂಗನಾ ರನೌತ್ ಅವರ ಹಳೆಯ ವೀಡಿಯೊ ವೈರಲ್ ಆಗಿದೆ.

ಮಾಲ್ಡೀವ್ಸ್​ಗೆ ಹಾರಿದ ಪ್ರಿಯಾಂಕಾ

ಮುಂಬೈ: ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ-ಕಾಂಗ್ರೆಸ್-ಎನ್​ಸಿಪಿ ಸರ್ಕಾರ ಪತನದ ಅಂಚಿನಲ್ಲಿದೆ. ಮೈತ್ರಿಕೂಟದ ಸರ್ಕಾರದ ಭಾಗವಾದ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಗಾಂಧಿ (Priyanka Gandhi ವಿದೇಶ ಪ್ರಯಾಣ ಬೆಳೆಸಿದ್ದಾರೆ ಎಂದು ವರದಿಯಾಗಿದೆ. ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸಮ್ಮಿಶ್ರ (Maharashtra Government Crisis) ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಶಿವಸೇನಾ ನಾಯಕ ಏಕನಾಥ್ ಶಿಂಧೆ (Eknath Shinde) ಅವರ ಬಂಡಾಯದಿಂದ ಅಳಿವಿನ ಅಂಚಿನಲ್ಲಿದೆ. ಅಲ್ಲದೇ ಉದ್ಧವ್ ಠಾಕ್ರೆ ಕಳೆದ ಎರಡೂವರೆ ವರ್ಷಗಳಿಂದ ತಮ್ಮನ್ನು ಮನೆಯೊಳಗೂ ಬಿಟ್ಟುಕೊಂಡಿರಲಿಲ್ಲ ಎಂದು ಏಕನಾಥ್ ಶಿಂಧೆ ಆರೋಪಿಸಿದ್ದಾರೆ. ಈ ಬೆಳವಣಿಗೆಗಳ ನಡುವೆಯೇ ಪ್ರಿಯಾಂಕಾ ಗಾಂಧಿ ವಾದ್ರಾ ಮುಂಬೈನಿಂದ ಮಾಲ್ಡೀವ್ಸ್​ಗೆ ಹಾರಿದ್ದಾರೆ ಎಂದು ಹೇಳಲಾಗಿದೆ.

ಸಿಎಂ ಕೇಜ್ರಿವಾಲ್​ ಭೇಟಿಯಾದ ಮುಖ್ಯಮಂತ್ರಿ ಚಂದ್ರು

ನವದೆಹಲಿ, ಜೂ. 22: ಖ್ಯಾತ ನಟ ರಾಜಕರಣಿ , ಮಾಜಿ ಶಾಸಕ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು (Mukhyamantri Chandru) ಆಮ್ ಆದ್ಮಿ ಪಾರ್ಟಿಗೆ (Aam Admi Party) ಸೇರ್ಪಡೆಯಾಗಿದ್ದು ಎಎಪಿ ರಾಷ್ಟ್ರೀಯ ಸಂಚಾಲಕರು ಹಾಗೂ ದೆಹಲಿಯ ಮುಖ್ಯಮಂತ್ರಿ  ಅರವಿಂದ್ ಕೇಜ್ರಿವಾಲ್​​ ಅವರನ್ನು ಭೇಟಿ ಮಾಡಿದರು. ಇದೇ ವೇಳೆ ದೆಹಲಿಯ ಮೊಹಲ್ಲಾ ಕ್ಲಿನಿಕ್ ಹಾಗೂ ದೆಹಲಿ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ತಮ್ಮ ಅನುಭವವನ್ನು ಹಂಚಿಕೊಂಡರು. ತಾವು ಕೇಜ್ರಿವಾಲರ ಜನಸ್ನೇಹಿ ಕಾರ್ಯಕ್ರಮಗಳ ಬಗ್ಗೆ ಕೇಳಿದ್ದೆನು, ಈಗ ಕಣ್ಣಾರೆ ನೋಡಿ  ವಿಸ್ಮಿತನಾಗಿದ್ದೇನೆ ಎಂದರು. ಮುಂದಿನ ದಿನಗಳಲ್ಲಿ ಕರ್ನಾಟಕದಾದ್ಯಂತ ಸಂಚರಿಸಿ, ದೆಹಲಿಯ ಈ ಕಾರ್ಯಕ್ರಮಗಳ ಬಗ್ಗೆ ಕನ್ನಡಿಗರಿಗೆ ತಿಳಿಹೇಳುವುದಾಗಿ ಹೇಳಿ,  ಕರ್ನಾಟಕದ ಅಭಿವೃದ್ಧಿಗೆ ಆಮ್ ಆದ್ಮಿ ಪಾರ್ಟಿಯೇ ಅನಿವಾರ್ಯ ಎಂದು ಅಭಿಪ್ರಾಯ ಪಟ್ಟರು.

ನಿಮ್ಮ ಮೊಬೈಲ್​ನಲ್ಲೇ ಮೆಟ್ರೋ ಟ್ರೈನ್ ಟ್ರ್ಯಾಕ್ ಮಾಡಿ

ಬೆಂಗಳೂರು (ಜೂ​ 23): ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಗುಡ್​ ನ್ಯೂಸ್​, ಒಲಾ, ಊಬರ್, ಸ್ವಿಗ್ಗಿ, ಜೊಮಾಟೊ ಇತ್ಯಾದಿ ಅಪ್ಲಿಕೇಶನ್‌ಗಳಲ್ಲಿ ನೀವು ರಿಯಲ್ ಟೈಮ್‌ನಲ್ಲಿ (Real Time) ವಾಹನಗಳನ್ನು ಟ್ರ್ಯಾಕ್ ಮಾಡುವ ರೀತಿಯಲ್ಲೇ ಮೆಟ್ರೋ ರೈಲುಗಳ (Train) ಓಡಾಟವನ್ನು ಮೊಬೈಲ್‌ನಲ್ಲಿ ನೋಡಬಹುದಾಗಿದೆ. ಬೆಂಗಳೂರಿನ ಟ್ರಾಫಿಕ್ (Traffic)​ ನಡುವೆ ನಿಗದಿತ ಸಮಯಕ್ಕೆ ಅಂದುಕೊಂಡ ಸ್ಥಳಕ್ಕೆ ತಲುಪೋದು ದೊಡ್ಡ ಹರಸಾಹಸವೇ ಸರಿ. ಟ್ರಾಫಿಕ್​ ಕಿರಿಕಿರಿ ತಪ್ಪಿಸಿರುವ ನಮ್ಮ ಮೆಟ್ರೋ ಇದೀಗ ಸಿಲಿಕಾನ್​ ಸಿಟಿ ಜನರ ಅಚ್ಚುಮೆಚ್ಚಾಗಿದೆ. ಇದೀಗ ಜನರು ಓಡಾಡಲು ಹೆಚ್ಚಾಗಿ ಮೆಟ್ರೋ ರೈಲುಗಳನ್ನೇ ಬಳಸುತ್ತಿದ್ದಾರೆ. ಕೆಲಸಕ್ಕೆ ಟೈಮ್​ ಆಗಿದೆ ಎಂದು ಓಡೋಡಿ ಮೆಟ್ರೋ ನಿಲ್ದಾಣ ತಲುಪುವವರಿಗೆ ಅದೆಷ್ಟೋ ಬಾರಿ ಸೆಕೆಂಡ್​ಗಳ ಅಂತರದಲ್ಲಿ ಟ್ರೈನ್ ಮಿಸ್​  ಆಗಿರುತ್ತೆ.  ಇನ್ಮುಂದೆ ಅಯ್ಯೋ ಟ್ರೈನ್​ ಮಿಸ್​ ಆಯ್ತು ಎಂದು ಬೇಸರ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಮೆಟ್ರೋ ರೈಲುಗಳ ಓಡಾಟವನ್ನು ಮೊಬೈಲ್‌ನಲ್ಲಿ ನೋಡಬಹುದಾಗಿದೆ. ಗೂಗಲ್ ಮ್ಯಾಪ್ಸ್‌ನಲ್ಲಿ ಈ ಹೊಸ ಫೀಚರ್ (New Feature) ಲಭ್ಯವಿರಲಿದೆ.

ಪಠ್ಯ ಪರಿಷ್ಕರಣೆ ವಿವಾದ; ಇದೆಲ್ಲಾ ಸೇರಿಸಿದ್ದೇವೆ ಏನೀಗ- ಆರ್.ಅಶೋಕ್

ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ವಿವಾದ (Karnataka Textbook Row) ತಣ್ಣಗಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಇದೇ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ (Minister R Ashok) ಸುದ್ದಿಗೋಷ್ಠಿ ನಡೆಸಿ ಸರ್ಕಾರದ ನಿಲುವುಗಳನ್ನು ಸಮರ್ಥಿಸಿಕೊಂಡರು. ವಿಪಕ್ಷಗಳು (Congress) ವಿನಾಕಾರಣ ವಿವಾದ ಮಾಡಿದವರು ಎಂದು ಆರೋಪಿಸಿದರು.  ಹಿಂದೆ ತಮಗೆ ಬೇಕಾದಂತೆ ಅಜೆಂಡಾಗಳನ್ನು ತುರುಕಿದ್ದರು. ಆಗ ಯಾವುದೇ ಚರ್ಚೆ ಆಗುತ್ತಿರಲಿಲ್ಲ, ಈ ಬಾರಿ ಮಾತ್ರ ವಿವಾದ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಪಠ್ಯ ಚರ್ಚೆಗೆ ಒಳಗಾಗಿದೆ. ಹೆಡೆಗೇವಾರ್ ವಿಚಾರ ಸೇರಿಸಿರುವುದು ಚರ್ಚೆಗೆ ಒಳಗಾಗಿದೆ. ಹಿಡನ್ ಅಜೆಂಡಾ ಇರುವ ಕೆಲವು ಸಾಹಿತಿಗಳು ಹಿಂದೂ ಮಲಗಿದರೆ ದೇಶ ಮಲಗೀತು ಎಂಬ‌ ಭ್ರಮೆಯಲ್ಲಿದ್ದಾರೆ. ನಾವೆಲ್ಲಾ ವಿವೇಕಾನಂದರ ಫಾಲೋವರ್ಸ್. ಹಿಂದೂ ಎದ್ದರೆ ದೇಶ ಎದ್ದೀತು ಎಂದು ವಿವೇಕಾನಂದ ಹೇಳಿದ್ದರು ಎಂದು ಸಚಿವ ಅಶೋಕ್ ವಿರೋಧಿಗಳಿಗೆ ತಿರುಗೇಟು ನೀಡಿದರು.
Published by:Pavana HS
First published: