Evening Digest: ಶಿಕಾರಿಪುರ ಬಿಟ್ಟುಕೊಡುವ ಬಗ್ಗೆ ಉಲ್ಟಾ ಹೊಡೆದ ಬಿಎಸ್​​ವೈ; ಡಿಕೆಶಿಗೆ ಜಮೀರ್ ತಿರುಗೇಟು: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಶಿಕಾರಿಪುರ ಬಿಟ್ಟುಕೊಡುವ ಬಗ್ಗೆ ಉಲ್ಟಾ ಹೊಡೆದ ಬಿಎಸ್​ವೈ : ನಿನ್ನೆ ಚುನಾವಣೆ ನಿವೃತ್ತಿ ಘೋಷಣೆ ಮಾಡಿದ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಮನೆಗೆ ಬಿಜೆಪಿ ನಾಯಕರ ದಂಡೇ ಹರಿದು ಬರ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹಾಗೂ ಸಚಿವ ಆರ್​ ಅಶೋಕ್ (R Ashok) ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಕೆಲ ಕಾಲ ಮಾತುಕತೆ ನಡೆಸಿದ್ರು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತಾಡಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ನಿನ್ನೆ ನಾನು ನೀಡಿದ ಹೇಳಿಕೆ ಬಗ್ಗೆ ಸಾಕಷ್ಟು ಗೊಂದಲ ಆಗಿದೆ. ನಾನು ವಿಧಾನಸಭೆ ಚುನಾವಣೆಗೆ (Assembly Election) ನಿಲ್ಲಲ್ಲ. ನನ್ನನ್ನು ಶಿಕಾರಿಪುರದ ಜನ ಚುನಾವಣೆಗೆ ನಿಲ್ಲಲು ಒತ್ತಾಯ ಮಾಡಿದ್ರು. ಆದ್ರೆ ನಾನು ನಿಲ್ಲೋದಿಲ್ಲ, ವಿಜಯೇಂದ್ರ (Vijayendra) ನಿಲ್ತಾರೆ ಎಂದು ಹೇಳಿದೆ. ನಿನ್ನೆ ಅಲ್ಲಿಯ ಜನ ಒತ್ತಾಯ ಮಾಡಿದ ಕಾರಣ ನಾನು ಹಾಗೆ ಹೇಳಿದ್ದೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: B S Yediyurappa: ನಿನ್ನೆ ಶಿಕಾರಿಪುರ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಡ್ತೀನಿ ಅಂದ್ರು, ಇಂದು ಉಲ್ಟಾ ಹೊಡೆದ BSY!

ಬಾಯಿ ಮುಚ್ಕೊಂಡು ಕೆಲಸ ಮಾಡಿ; ಡಿಕೆಶಿ ಹೇಳಿಕೆಗೆ ಜಮೀರ್ ತಿರುಗೇಟು

ಇಂದು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (KPCC President DK Shivakumar) ನೀಡಿದ ಬಾಯಿ ಮುಚ್ಕೊಂಡು ಪಕ್ಷದ ಕೆಲಸ ಮಾಡಿ ಎಂಬ ಹೇಳಿಕೆಗೆ ಬೆಳಗಾವಿಯಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ (MLA Zameer Ahmed Khan) ಪ್ರತಿಕ್ರಿಯೆ ನೀಡುವ ಮೂಲಕ ಪರೋಕ್ಷವಾಗಿ ತಿರುಗೇಟು ನೀಡಿದರು ಇದಕ್ಕೆ ಚಾಲನೆ ಕೊಟ್ಟಿರೋರು ಯಾರು, ಒಕ್ಕಲಿಗ ಸಮಾವೇಶದಲ್ಲಿ ಹೇಳಿದೋರು‌ ಅವರೇ. ಅವರೇನು ನನ್ನ ಹೆಸರು ತೆಗೆದುಕೊಂಡು ಹೇಳಿದ್ದರಾ ಎಂದು ಮಾಧ್ಯಮಗಳಿಗೆ ಪ್ರಶ್ನೆ ಮಾಡಿದರು. ಎಲ್ಲರಿಗೂ ಸಿಎಂ ಆಗಬೇಕೆಂಬ ಆಸೆ ಇರುತ್ತೆ. ಕೆಲವರಿಗೆ ಮುಸ್ಲಿಂ ಸಮದಾಯದವರು ಸಿಎಂ ಆಗಬೇಕೆಂಬ ಆಸೆ ಇದೆ. ಅದೇ ರೀತಿ ನಾನು ಸಹ ಹೇಳಿದ್ದೇನೆ ಎಂದರು.   ಮೊದಲು ಕಾಂಗ್ರೆಸ್ ಪಕ್ಷ ಆಮೇಲೆ ಸಿದ್ದರಾಮಯ್ಯ ನಂತರ ಡಿಕೆಶಿನಾ ಪ್ರಶ್ನೆಗೆ ಉತ್ತರಿಸುವ ಮೂಲಕ ತಮ್ಮ ಹೇಳಿಕೆಯನ್ನು ಜಮೀರ್ ಅಹ್ಮದ್ ಸಮರ್ಥಿಸಿಕೊಂಡರು. ಮೊದಲು ಕಾಂಗ್ರೆಸ್ ಆಮೇಲೆ ಸಿದ್ದರಾಮಯ್ಯ ಎಂದು ಜಮೀರ್ ಅಹ್ಮದ್ ಪುನರುಚ್ಛಾರ ಮಾಡಿದರು.

ಕಾಣೆಯಾಗಿದ್ದ 7 ಕಾರ್ಮಿಕರು 3 ವಾರಗಳ ಬಳಿಕ ಪತ್ತೆ

ಅವರೆಲ್ಲಾ ಅರುಣಾಚಲ-ಚೀನಾದ ಗಡಿಯಲ್ಲಿ (Arunachal's China Border) ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಯ ಕೆಲಸಗಾರರು (Seven Labourers). ಈ ತಿಂಗಳ ಆರಂಭದಲ್ಲಿ ಈದ್​ ಹಬ್ಬಕ್ಕಾಗಿ ತಮ್ಮ ಊರು ಅಸ್ಸಾಂಗೆ (Assam) ಹೋಗಬೇಕು ಅಂದುಕೊಂಡಿದ್ದರು. ಆದರೆ ಗುತ್ತಿಗೆದಾರ ಈ ಕೆಲಸಗಾರರಿಗೆ ಅನುಮತಿಯನ್ನು ನಿರಾಕರಿಸಿದ್ದರು. ಹಬ್ಬಕ್ಕೆ ಹೋಗಲು ರಜೆ ನೀಡದ್ದಕ್ಕೆ ಕಾರ್ಮಿಕರು ಗುಂಪು ಹತಾಷೆಗೊಂಡಿತ್ತು. ಹೇಗಾದರೂ ಮಾಡಿ ಹಬ್ಬಕ್ಕಾಗಿ ಊರಿಗೆ ಹೋಗಲೇಬೇಕು ಎಂದು ಪಣತೊಟ್ಟರು. ಇದಕ್ಕಾಗಿ 8 ಮಂದಿ ಕಾರ್ಮಿಕರು ಕಾಲ್ನಡಿಗೆಯಲ್ಲೇ ಕೆಲಸದ ಜಾಗದಿಂದ ಪಾಲಾಯನ ಮಾಡಿದ್ದರು. ಊರು ತಲುಪುವ ದಾರಿ ಗೊತ್ತಾಗದೇ ದುರ್ಗಮ ಕಾಡಿನಲ್ಲಿ ತಮ್ಮನ್ನು ಮೂರು ಗುಂಪುಗಳಾಗಿ ವಿಂಗಡಿಸಿದರು. ಮೂರು ಗುಂಪುಗಳು ಬೇರೆ ಬೇರೆ ದಿಕ್ಕಿನಲ್ಲಿ ಹೋಗುವುದೆಂದು ನಿರ್ಧರಿಸಿದ್ದರು. ಆದರೆ ಅವರು ಕೈಗೊಂಡ ಪ್ರಯಾಣ ನಿಜಕ್ಕೂ ಅವರ ಪ್ರಾಣಕ್ಕೆ ಸಂಚಕಾರ ತರುವಂತಿತ್ತು. 8 ಕಾರ್ಮಿಕರು ಅಂದಿನಿಂದ ಕಾಣೆಯಾಗಿದ್ದರು. ಅದರಲ್ಲಿ ಒಬ್ಬಾತ ಸಾವಿನ ಮನೆ ಸೇರಿದ್ದರೆ, ಉಳಿದ 7 ಮಂದಿಯನ್ನು ಪತ್ತೆ ಹಚ್ಚಲಾಗಿದೆ.

ಆಪ್ತನ ಮನೆಯಲ್ಲಿ 20 ಕೋಟಿ! ಶಿಕ್ಷಕರ ನೇಮಕಾತಿ ಹಗರಣದಲ್ಲಿ ಸಚಿವ ಅರೆಸ್ಟ್

ಶಿಕ್ಷಕರ ನೇಮಕಾತಿ (Teachers Recruitment) ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (Enforcement Directorate) ಬಂಗಾಳ ಸಚಿವ (Bengal Minister) ಪಾರ್ಥ ಚಟರ್ಜಿ ಅವರನ್ನು ಬಂಧಿಸಿದೆ. ಶುಕ್ರವಾರ ಬೆಳಗ್ಗೆ ಆರಂಭವಾದ 26 ಗಂಟೆಗಳ ಕಾಲ ವಿಚಾರಣೆಯ ನಂತರ ಚಟರ್ಜಿಯ ಬಂಧನವಾಗಿದೆ. ಶುಕ್ರವಾರ ಬೆಳಗ್ಗೆಯಿಂದ ವಿಚಾರಣೆ ನಡೆಸುತ್ತಿದ್ದ ನಮ್ಮ ಅಧಿಕಾರಿಗಳಿಗೆ ಆತ ಸಹಕರಿಸುತ್ತಿಲ್ಲ. ಹಗಲಿನಲ್ಲಿ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಇಡಿ ಅಧಿಕಾರಿಯೊಬ್ಬರು (ED Officer) ತಿಳಿಸಿದ್ದಾರೆ.

ದೇಶಾದ್ಯಂತ ಅಬ್ಬರಿಸಲು ಸಜ್ಜಾಗಿದ್ದಾನೆ 'ವಿಕ್ರಾಂತ್ ರೋಣ

'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ತೆರೆಕಾಣುತ್ತಿರುವ ಕನ್ನಡದ ಸಿನಿಮಾ. ಹೀಗಾಗಿ ಈ ಸಿನಿಮಾ ದೇಶದಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಒಂದು ಮಾಹಿತಿ ಪ್ರಕಾರ ಚಿತ್ರವು ಈವರೆಗಿನ ಲೆಕ್ಕಾಚಾರದ ಪ್ರಕಾರ ಬರೋಬ್ಬರಿ 3500 ಸ್ಕ್ರೀನ್‌ ಗಳಲ್ಲಿ ತೆರೆಕಾಣಲಿದೆ. ಇದು ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆಯೂ ಇದೆ. ಏಕೆಂದರೆ ಚಿತ್ರ ಬಿಡುಗಡೆಗೆ ಇನ್ನೂ 5 ದಿನಗಳು ಬಾಕಿ ಇರುವ ಕಾರಣ ಸ್ಕ್ರೀನ್‌ ಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಚಿತ್ರತಂಡ ತಿಳಿಸಿದೆ. ಅಲ್ಲದೇ ವಿಕ್ರಾಂತ್ ರೋಣ ಚಿತ್ರ ಕರ್ನಾಟಕದಲ್ಲಿ 450 ಸ್ಕ್ರೀನ್‌ ಗಳಲ್ಲಿ ತೆರೆಕಾಣಲಿದೆ ಎಂದು ಹೇಳಲಾಗಿದೆ.
Published by:Kavya V
First published: