Evening Digest: ಮಗನ ಪ್ರೇಮಿಯ ‘ಹಸಿಬಿಸಿ’ ಫೋಟೋ ಸೆರೆ ಹಿಡಿದ ತಂದೆ: ಹರ್ಷನ ಕೊಲೆಯಲ್ಲಿ ಹುಡುಗಿಯರ ನೆರಳು? ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಮಗನ ಗರ್ಲ್ ಫ್ರೆಂಡ್​​ನ 'ಹಸಿಬಿಸಿ' ಫೋಟೋಗಳನ್ನೇ ಸೆರೆ ಹಿಡಿದ ತಂದೆ : ಜಗತ್ತಿನಲ್ಲಿ ಬಹುತೇಕ ತಂದೆ (Father), ತಾಯಿ (Mother) ತಮ್ಮ ಮಕ್ಕಳ ಪ್ರೀತಿಯನ್ನು (Love) ವಿರೋಧಿಸುವವರೇ ಆಗಿರುತ್ತಾರೆ. “ನಾವು ಗೊತ್ತು ಮಾಡಿದವರನ್ನೇ ಮದುವೆಯಾಗಿ ನಮ್ಮ ಮಗ (Son) ಅಥವಾ ಮಗಳು (Daughter) ಸುಖವಾಗಿರಲಿ ಎನ್ನುವುದು ಎಲ್ಲಾ ತಂದೆ, ತಾಯಂದಿರ ಆಸೆ. ಇದಕ್ಕಾಗಿ ಮಕ್ಕಳ ಪ್ರೀತಿ, ಪ್ರೇಮವನ್ನು ಹೆತ್ತವರು ವಿರೋಧಿಸುತ್ತಾರೆ. ಇದನ್ನೇನೋ ಸಹಜ ಅಂದುಕೊಳ್ಳಬಹುದು. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಪಾಪಿ ತಂದೆಯೊಬ್ಬ ಮಗನನ್ನು ಆತನ ಗೆಳತಿಯಿಂದ ದೂರ ಮಾಡಲು ಖತರ್ನಾಕ್ ಪ್ಲಾನ್ (Plan) ಮಾಡಿದ್ದಾನೆ. ಮಾಡಬಾರದನ್ನು ಮಾಡಿ, ಇದೀಗ ಪೊಲೀಸರ (police) ಅತಿಥಿಯಾಗಿದ್ದಾನೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ತಂದೆಯೊಬ್ಬ ತನ್ನ ಮಗ ಹಾಗೂ ಆತನ ಗೆಳೆತಿಯನ್ನು ಬೇರೆ ಮಾಡಲು ಖತರ್ನಾಕ್ ಪ್ಲಾನ್ ಮಾಡಿದ್ದಾನೆ. ಅವರಿಬ್ಬರನ್ನು ಬೇರೆ ಮಾಡುವ ಕೆಲಸವನ್ನು ರೌಡಿ ಶೀಟರ್ ಒಬ್ಬನಿಗೆ ವಹಿಸಿದ್ದಾನೆ. ಆದರೆ ಆತ ಮಾಡಬಾರದ್ದು ಮಾಡಿ ಜೈಲು ಸೇರಿದ್ದಾನೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:Bengaluru: ಮಗನ ಗರ್ಲ್‌ ಫ್ರೆಂಡ್‌ನ 'ಹಸಿಬಿಸಿ' ಫೋಟೋಗಳನ್ನೇ ಸೆರೆ ಹಿಡಿದ ತಂದೆ! ಆ ಕಾಮುಕ ಯಾರು ಗೊತ್ತಾ?

Harsha Mobileಗೆ ಇಬ್ಬರು ಹುಡುಗಿಯರಿಂದ ವಿಡಿಯೋ ಕಾಲ್
ಭಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆ (Harsha Murder case) ಪ್ರಕರಣದ ಕಾವು ರಾಜ್ಯದಲ್ಲಿ ಇನ್ನೂ ಕಡಿಮೆಯಾಗಿಲ್ಲ. ರಾಜ್ಯಾದ್ಯಂತ ಹತ್ಯೆ ಖಂಡಿಸಿ ಪ್ರತಿಭಟನೆಗಳು (Protest) ನಡೆಯುತ್ತಿದ್ದು, ಇತ್ತ ಪೊಲೀಸರು(Police) ಕೂಡ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಹೊಸದಾಗಿ ಹೊರ ಬಿದ್ದಿರುವ ಮಾಹಿತಿ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಘಟನೆ ನಡೆದ ಸಮಯದಲ್ಲಿ ಮೃತ ಹರ್ಷನಿಗೆ ಇಬ್ಬರು ಹುಡುಗಿಯರ ವಿಡಿಯೋ ಕಾಲ್ (Video Call) ಮಾಡಿರುವುದು ಬೆಳಕಿಗೆ ಬಂದಿದೆ. ಸಾವಿಗೂ ಮುನ್ನ ಹರ್ಷ ಜೊತೆಗಿದ್ದ ಗೆಳೆಯನ ಹೇಳಿಕೆಯಿಂದ ಹೊಸ ವಿಷಯ ಬಯಲಾಗಿದೆ. ಸಹಾಯ ಕೇಳುವ ನೆಪದಲ್ಲಿ ಇಬ್ಬರು ಹುಡುಗಿಯರು ಕಾಲ್ ಮಾಡಿದ್ದರು ಎನ್ನಲಾಗುತ್ತಿದೆ. ಕೊಲೆ ನಡೆಯುವುದಕ್ಕೂ ಮೊದಲು ಇಬ್ಬರು ಹುಡುಗಿಯರು ಕರೆ ಮಾಡಿದ್ದಾರೆ. ನಮಗೆ ಸಮಸ್ಯೆಯಾಗಿದೆ ಸಹಾಯ ಮಾಡಿ ಎಂದು ಕೇಳಿದ್ದರಂತೆ. ಸಹಾಯಕ್ಕಾಗಿ ತೆರಳಿದಾಗ ಹರ್ಷನನ್ನು ಹತ್ಯೆ ಮಾಡಲಾಗಿದೆ ಎನ್ನಲಾಗ್ತಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:ಕೊಲೆಗೂ ಮುನ್ನ Harsha Mobileಗೆ ಇಬ್ಬರು ಹುಡುಗಿಯರಿಂದ ವಿಡಿಯೋ ಕಾಲ್: ಯಾರವರು? ಹೊಸ ತಿರುವು!

ಆಧಾರ್ ಕಾರ್ಡ್​​ನಲ್ಲಿ ಹಿಜಾಬ್ ಧರಿಸದ ಫೋಟೋ ಇದೆ
ಕರ್ನಾಟಕ ಹೈಕೋರ್ಟ್ನ (High Court of Karnataka) ಪೂರ್ಣ ಪೀಠವು ರಾಜ್ಯದ ಕೆಲ ಕಾಲೇಜುಗಳಲ್ಲಿ (Collage) ಹಿಜಾಬ್ (Hijab) ಧರಿಸುವುದನ್ನು ನಿಷೇಧಿಸುವುದರ ವಿರುದ್ಧ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಮುಂದುವರಿಸಿದೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಜೆಎಂ ಖಾಜಿ ಅವರನ್ನೊಳಗೊಂಡ ಪೀಠವು ಇಂದೂ ವಾದ-ಪ್ರತಿವಾದವನ್ನು ಆಲಿಸಿ ಮುಂದಿನ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2:30ಕ್ಕೆ ನಡೆಸಲಿದೆ. ಇಂದು ಸರ್ಕಾರಿ ಕಾಲೇಜುಗಳ ಪರವಾಗಿ ವಕೀಲ ನಾಗಾನಂದ್ ವಾದ ಮಂಡನೆ ಮಾಡಿದರು. ಅರ್ಜಿದಾರರ ಆಧಾರ್ ಕಾರ್ಡ್ ನಲ್ಲಿ ಹಿಜಾಬ್ ಧರಿಸದ ಫೋಟೋ ಇರುವುದರ ಬಗ್ಗೆ ವಕೀಲರು ಉಲ್ಲೇಖಿಸಿದರು. ಈ ಮೂಲಕ ಅವರು ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ಧರಿಸದ ಬಗ್ಗೆ ಪ್ರಶ್ನೆ ಉದ್ಭವ ಆಗುತ್ತೆ ಎಂದು ಹಿರಿಯ ವಕೀಲರಾದ ನಾಗಾನಂದ್ ವಾದ ಮಂಡಿಸಿದರು.

ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ ಬಂಧನ
ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ (Navab Mallik) ಅವರನ್ನು ಜಾರಿ ನಿರ್ದೇಶನಾಲಯ (Enforcement Directorate) ಬಂಧಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ (Money Laundering Case) ಸಂಬಂಧಿಸಿದ್ದಂತೆ ಎನ್ಸಿಪಿ ನಾಯಕರನ್ನು (NCP Leader) ವಶಕ್ಕೆ ಪಡೆಯಲಾಗಿದೆ. ಮುಂಬೈ ಭೂಗತ ಲೋಕ, ಪರಾರಿಯಾಗಿರುವ ದರೋಡೆಕೋರ ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಗೆ ಬಂಧಿಸಲಾಗಿದೆ. ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್ ಪ್ರದೇಶದಲ್ಲಿರುವ ಇಡಿ ಕಚೇರಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.

ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್
ಜೇಮ್ಸ್ ಚಿತ್ರದ ಟೀಸರ್ ನೋಡಿ ಥ್ರಿಲ್ ಆಗಿದ್ದ ಅಭಿಮಾನಿಗಳು ಈ ಚಿತ್ರದ ಅಪ್ಡೇಟ್ ಬಗ್ಗೆ ಕಾಯ್ತಿದ್ರು.. ಈಗ ಜೇಮ್ಸ್ ಚಿತ್ರದ ಭರ್ಜರಿ ಅಪ್ಡೇಟ್ ನ್ಯೂಸ್ 18 ಕನ್ನಡಕ್ಕೆ ಸಿಕ್ಕಿದೆ. ಚೇಮ್ಸ್ ಚಿತ್ರದ ಚಿಕ್ಕ ಝಲಕ್ ಬಿಟ್ಟು ಅಪ್ಪು ಅಭಿಮಾನಿಗಳಲ್ಲಿ ಕಾತರ ಹೆಚ್ಚಿಸಿದ್ದ ನಿರ್ದೇಶಕ ಚೇತನ್ ಕುಮಾರ್ ಈಗ "ಜೇಮ್ಸ್" ಚಿತ್ರದ ಪುನೀತ್ ರಾಜ್ ಕುಮಾರ್ ಇಂಟ್ರೋಡಕ್ಷನ್ ಸಾಂಗ್ ಅನ್ನು ಅಭಿಮಾನಿಗಳ ಅಂಗಳಕ್ಕೆ ತಲುಪಿಸಲು ಪ್ಲಾನ್ ಮಾಡಿಕೊಂಡಿದ್ದಾರೆ. ಫೆಬ್ರವರಿ ಕೊನೆಯಲ್ಲಿ ಇಲ್ಲ ಮಾರ್ಚ್ 1 ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ 5 ಭಾಷೆಗಳಲ್ಲಿ ಈ ಹಾಡನ್ನು ರಿಲೀಸ್ ಮಾಡಲು ಪ್ಲಾನ್ ಮಾಡಿದ್ದೇವೆ ಎಂದು ಚೇತನ್ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ. ಇನ್ನು ಈ ಹಾಡು " ಟ್ರೇಡ್ ಮಾರ್ಕ್" ಅನ್ನೋ ಸಾಹಿತ್ಯದಿಂದ ಶುರುವಾಗಲಿದ್ದು ,ಚರಣ್ ರಾಜ್ ಸಂಗೀತಕ್ಕೆ ಚೇತನ್ ಸಾಹಿತ್ಯ ಬರೆದಿದ್ದಾರೆ.
Published by:Kavya V
First published: