Evening Digest: ಕಾಫಿನಾಡು ಚಂದುಗೆ ಧಮ್ಕಿ, ರೋಗಿ ಹಣ ಕದ್ದ ನರ್ಸ್! ಇಲ್ನೋಡಿ ಯಶ್ ಫ್ಯಾನ್ಸ್‌ಗಿದೆ ಗುಡ್ ನ್ಯೂಸ್!

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಕಾಫಿನಾಡಿನಲ್ಲೇ ಚಂದುಗೆ ಜನರಿಂದ ಧಮ್ಕಿ!

ನಾನು ಶಿವಣ್ಣ(Shivanna) , ಪುನೀತ್ (Puneeth) ಅಣ್ಣನ ಅಭಿಮಾನಿ, ವಿಶ್​ ಯೂ ಹ್ಯಾಪಿ (Happy) ಬರ್ತ್‍ಡೇ (Birthday) ಅಣ್ಣನ ಬರ್ತ್​ ಡೇ, ಅಕ್ಕನ ಬರ್ತ್​ ಡೇ ಎಂದು ವಿಶ್​ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಬಹು ಬೇಗ ಸ್ಟಾರ್ ಎನಿಸಿಕೊಂಡಿರುವ ಕಾಫಿ ನಾಡು ಚಂದು ಎಲ್ಲೆಡೆ ಬಹಳ ಫೇಮಸ್. ಸೋಷಿಯಲ್​ ಮೀಡಿಯಾ (Social Media) ಓಪನ್​ ಮಾಡಿದರೆ ಸಾಕು ನಮಸ್ಕಾರ ನಾನು ಕಾಫಿ ನಾಡಿನ ಚಂದು (Coffee Nadu Chandu) ಎಂಬ ವಿಡಿಯೋಗಳು ಎಲ್ಲೆಲ್ಲೂ ಹರಿದಾಡುತ್ತಿದೆ. ದಿಲ್ಲಿಯಿಂದ ಹಳ್ಳಿವರೆಗೂ ಕಾಫಿನಾಡಿದ ಚಂದು ಹವಾ ಜೋರಾಗಿದೆ. ಎಲ್ಲೇಲ್ಲಿ ನೋಡಲಿ ನನನ್ನೇ ಕಾಣುವೆ ಅನ್ನುವ ಹಾಗಾಗಿದೆ ಚಂದು ಅಣ್ಣನ ಪರಿಸ್ಥಿತಿ. ಹೀಗಿದ್ದ ಚಂದು ಅಣ್ಣನ ಪರಿಸ್ಥಿತಿ ಈಗ ಹೇಗಾಗಿದೆ ನೋಡಿ. ಬರೀ ಬರ್ತ್​ಡೇ ಸಾಂಗ್​ಗಳಿಂದ ವೈರಲ್ ಆಗಿದ್ದ ಚಂದು ಅಣ್ಣ, ಈ ಬಾರಿ ಮತ್ತೊಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ.

ಕಾಮಿಸ್ವಾಮಿ ಕಳ್ಳಾಟಕ್ಕೆ ಪತ್ನಿಯೇ ಸಾಥ್!

ಬೆಂಗಳೂರು: ಆಕೆ ಮಾನಸಿಕವಾಗಿ (Mentally) ಕುಗ್ಗಿ ಹೋಗಿದ್ದಳು, ಸಾಂಸಾರಿಕವಾಗಿ ತೊಂದರೆಗೆ ಒಳಗಾಗಿದ್ದಳು. ಅಷ್ಟೇ ಅಲ್ಲ ಆರ್ಥಿಕವಾಗಿ (Financially) ಸಾಕಷ್ಟು ಸಂಕಷ್ಟ ಅನುಭವಿಸಿದ್ದಳು. ಅಷ್ಟರಲ್ಲಿ ಪರಿಚಯ ಆದವನೇ ಈ ಕಪಟ ಸ್ವಾಮೀಜಿ (Fake Swamiji). “ಐ ಆ್ಯಮ್ ಗಾಡ್, ಗಾಡ್ ಈಸ್ ಗ್ರೇಟ್” (I am God, God is great) ಅಂತ ಪುಂಗಿ ಬಿಟ್ಟು, ಆಕೆಯ ಭಕ್ತಿ ಹಾಗೂ ನಂಬಿಕೆಯನ್ನೇ ಅಸ್ತ್ರವನ್ನಾಗಿ ಬಳಸಿಕೊಂಡ. ಆಕೆಗೆ ಲೈಂಗಿಕ ದೌರ್ಜನ್ಯ (Harassment) ಕೊಡೋದಕ್ಕೆ ಶುರುಮಾಡಿದ್ದಾನೆ. ಇನ್ನೊಂದು ಆಘಾತಕಾರಿ ವಿಚಾರ ಅಂದ್ರೆ ಈ ಕಾಮಿ ಸ್ವಾಮಿಯ ಕಳ್ಳಾಟಕ್ಕೆ ಆತನ ಹೆಂಡತಿ (Wife) ಕೂಡ ಸಾಥ್ ನೀಡಿದ್ದಳು. ಹೀಗೆ ಕಳ್ಳ ಸ್ವಾಮಿ ಹಾಗೂ ಆತನ ಪತ್ನಿ ಸೇರಿಕೊಂಡು ಸಂತ್ರಸ್ಥ ಯುವತಿಗೆ ಐದಾರು ವರ್ಷಗಳಿಂದ ಕಿರುಕುಳ ನೀಡಿದ್ದಾರೆ. ಇದೀಗ ಅವರ ದೌರ್ಜನ್ಯ, ಕಿರುಕುಳದ ವಿರುದ್ಧ ಯುವತಿ ಸಿಡಿದೆದ್ದಿದ್ದಾಳೆ.

ಇದನ್ನೂ ಓದಿ: Fake Swamiji: ಕಷ್ಟ ಅಂತ ಬಂದ ಯುವತಿಗೆ ಕಿರುಕುಳ, ಕಾಮಿಸ್ವಾಮಿ ಕಳ್ಳಾಟಕ್ಕೆ ಪತ್ನಿಯೇ ಸಾಥ್!

ಪ್ರಜ್ಞಾಹೀನವಾಗಿದ್ದ ರೋಗಿಯ ಏಟಿಯಂನಿಂದ ಲಕ್ಷಾಂತರ ರೂಪಾಯಿ ಹಣ ಎಗರಿಸಿದ ನರ್ಸ್​!

ಬ್ರಿಟನ್‌ನಲ್ಲಿ ರೋಗಿಯೊಬ್ಬರನ್ನು ನೋಡಿಕೊಳ್ಳುತ್ತಿದ್ದ 57 ವರ್ಷದ ನರ್ಸ್, ರೋಗಿಯ ಎಟಿಎಂ ಕಾರ್ಡ್ ಅನ್ನು ಕದ್ದು ಲಕ್ಷಾಂತರ ರೂಪಾಯಿ ತೆಗೆದಿದ್ದಾಳೆ. ಈ ವಿಚಾರವಾಗಿ ಅನುಮಾನಗೊಂಡ ರೋಗಿಯ ಸಂಬಂಧಿಕರು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ನಿಜಾಂಶ ಏನೆಂದು ಬೆಳಕಿಗೆ ಬಂದಿದೆ. ನರ್ಸ್​ ರೋಗಿಯ ಪರ್ಸ್​ನಿಂದ ಹಣ ಎಗರಿಸಿದ್ದಾಳೆ ಎಂದು ಗೊತ್ತಾಗಿದೆ. ಆರೋಪಿ ನರ್ಸ್ ಅನ್ನು ಜೈಲಿಗೆ ಹಾಕಲಾಗಿದೆ. ಇರುವ ಕೆಲಸವನ್ನು ಕಳೆದುಕೊಂಡು ಇದೀಗ ನರ್ಸ್​ ಕಂಬಿ ಎಣಿಸುತ್ತಿದ್ದಾಳೆ.

ಸಿದ್ದರಾಮಯ್ಯ ಕಾರಿನ ಮೇಲೆ ಕಲ್ಲು ಎಸೆಯಲಾಗಿತ್ತಾ?

ಬೆಂಗಳೂರು: ಇದೇ ತಿಂಗಳ 18ರಂದು ಮಾಜಿ ಸಿಎಂ (Former CM) ಸಿದ್ದರಾಮಯ್ಯ (Siddaramaiah) ಪ್ರವಾಹ (Flood) ಪರಿಸ್ಥಿತಿ ವೀಕ್ಷಿಸಲು ಕೊಡಗಿಗೆ (Kodagu) ತೆರಳಿದ್ದರು. ಈ ವೇಳೆ ಮಡಿಕೇರಿಯಲ್ಲಿ (Madikeri) ಅವರ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಈ ಘಟನೆ ರಾಜ್ಯ ರಾಜಕೀಯದಲ್ಲಿ (State Politics) ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಮೊಟ್ಟೆ ಹೊಡೆದ ಆರೋಪಿ ಸಂಪತ್ (Sampat) ನಮ್ಮ ಪಕ್ಷದ ಕಾರ್ಯಕರ್ತನಲ್ಲ (Party Worker), ನಿಮ್ಮ ಪಕ್ಷದ ಕಾರ್ಯಕರ್ತ ಅಂತ ಕಾಂಗ್ರೆಸ್ (Congress) ಹಾಗೂ ಬಿಜೆಪಿ ನಾಯಕರು (BJP Leaders) ವಾಕ್ಸಮರ ನಡೆಸಿದ್ದಾರೆ. ಇದೀಗ ಮತ್ತೊಂದು ಆಘಾತಕಾರಿ ವಿಚಾರವನ್ನು ಖುದ್ದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಇಂದು ಬೆಂಗಳೂರಿನ (Bengaluru) ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ (Press Meet) ನಡೆಸಿದ ಅವರು, ಅಂದು ನನ್ನ ಕಾರಿನ ಮೇಲೆ ಕಲ್ಲು (Stone) ಎಸೆಯುವ ಪ್ರಯತ್ನ ಕೂಡ ನಡೆದಿತ್ತು ಎಂದಿದ್ದಾರೆ.

ಇದನ್ನೂ ಓದಿ: Siddaramaiah: ಸಿದ್ದರಾಮಯ್ಯ ಕಾರಿನ ಮೇಲೆ ಕಲ್ಲು ಎಸೆಯಲಾಗಿತ್ತಾ? ಮಾಂಸ ವಿವಾದದ ಬಗ್ಗೆ ಮಾಜಿ ಸಿಎಂ ಹೇಳಿದ್ದೇನು?

ಭಾರತದ ಟಾಪ್​ ಹೀರೋಗಳ ಪಟ್ಟಿಯಲ್ಲಿ ಯಶ್​ಗೆ ಎಷ್ಟನೇ ಸ್ಥಾನ?

ಕನ್ನಡ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದು ತೀರಾ ಕಡಿಮೆ. ಯಶ್​ ಅಭಿನಯದ ಕೆಜಿಎಫ್​ ಹಾಗೂ ಕೆಜಿಎಫ್​​ 2 ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಟಾಪ್ 10 ಪಟ್ಟಿಯಲ್ಲಿ ಕನ್ನಡ ಚಿತ್ರರಂಗದಿಂದ ಸ್ಥಾನ ಪಡೆದ ಏಕೈಕ ನಟ ಎಂಬ ಹೆಗ್ಗಳಿಕೆ ರಾಕಿಂಗ್ ಸ್ಟಾರ್​ಗೆ ಸಿಕ್ಕಿದೆ.
Published by:Annappa Achari
First published: