Evening Digest: ಕಾಫಿ ಮಂಡಳಿ ಮಾಜಿ ಅಧ್ಯಕ್ಷ ಬೋಜೇಗೌಡ ನಿಧನ; ಮ್ಯಾನ್​ಹೋಲ್​​ನಲ್ಲಿ ಬಿದ್ದ ಮಹಿಳೆ: ಈ ದಿನ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಪ್ರಮುಖ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ

ಸಂಜೆ ಸುದ್ದಿ

ಸಂಜೆ ಸುದ್ದಿ

 • Share this:
  ಪಿಎಸ್​ಐ ಅಕ್ರಮದ ಪ್ರಮುಖ ಆರೋಪಿ ಬಂಧನ
  ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಕಡೆಗೂ ಪೊಲೀಸರ ಕೈಗೆ ಸೆರೆ ಸಿಕ್ಕಿದ್ದಾನೆ. ಮಹಾರಾಷ್ಟ್ರದಲ್ಲಿ ಆರೋಪಿ ಆರ್. ಡಿ. ಪಾಟೀಲ್​ನನ್ನು ಸಿಐಡಿ ವಶಕ್ಕೆ ಪಡೆದಿದೆ. ಈತನ ಪತ್ತೆಗೆ ಮುಂದಾಗಿದ್ದ ಸಿಐಡಿ ಅಧಿಕಾರಿಗಳು ಈತ ಇರುವ ಮಾಹಿತಿ ಅರಿತು ಮಹಾರಾಷ್ಟ್ರಕ್ಕೆ ತೆರಳಿದ್ದರು. ಅಲ್ಲಿಯೇ ಬೀಡು ಬಿಟ್ಟಿದ್ದ ಅಧಿಕಾರಿಗಳು ಕಡೆಗೂ ಆತನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಆತನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿಯನ್ನು ಕಲಬುರಗಿಗೆ ಸಿಐಡಿ ಆರೋಪಿಗಳು ಕರೆತರಲು ಮುಂದಾಗಿದ್ದಾರೆ.

  ಭೋಜೇಗೌಡ ನಿಧನ
  ಹೆಜ್ಜೇನು ದಾಳಿಗೆ ಚಿಕ್ಕಮಗಳೂರು ಜಿಲ್ಲೆಯ ಕಾಫಿ ಮಂಡಳಿ ಮಾಜಿ ಅಧ್ಯಕ್ಷರು ಬಲಿಯಾದ ಘಟನೆ ನಡೆದಿದೆ. 73 ವರ್ಷದ ಎಂ.ಎಸ್.ಭೋಜೇಗೌಡ ಮೃತ ದುರ್ದೈವಿಯಾಗಿದ್ದು, ತಾಲೂಕಿನ ಕೃಷ್ಣಗಿರಿ ಕಾಫಿ ತೋಟದಲ್ಲಿ ಈ ದುರಂತ ಘಟನೆ ನಡೆದಿದೆ. ಸಾವಿರಾರು ಹೆಜ್ಜೇನುಗಳು ದಾಳಿ ಮಾಡಿದ್ದರಿಂದ ಭೋಜೇಗೌಡರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭೋಜೇಗೌಡರು ಸತತವಾಗಿ 2 ಬಾರಿ ಕಾಫಿ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು

  ಎಚ್​ಡಿಕೆ ಹೊಸ ಬಾಂಬ್​
  ಪಿಎಸ್​ಐ ನೇಮಕಾತಿ ಅಷ್ಟೇ ಅಲ್ಲ ಹಾಲು ಒಕ್ಕೂಟದ ನೇಮಕಾತಿಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಒಂದು ಸೀಟಿಗೆ 25 ಲಕ್ಷ ಹಣ ಪಡೆಯುತ್ತಿದ್ದಾರ. ಮೊದಲೇ ಹಣ ಕೊಟ್ಟು ಸೀಟು ಖರೀದಿಸುತ್ತಿದ್ದಾರೆ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಸಿಎಂ H.D ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರ 40 ಪರ್ಸೆಂಟ್ ಸರ್ಕಾರ ಅಲ್ಲ, 65 ಪರ್ಸೆಂಟ್ ಸರ್ಕಾರವಾಗಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

  ಎರಡನೇ ದಿನ ಪರೀಕ್ಷೆಗೂ ವಿದ್ಯಾರ್ಥಿಗಳು ಗೈರು
  ಎರಡನೇ ದಿನದ ದ್ವಿತೀಯ ಪಿಯುಸಿ ) ಪರೀಕ್ಷೆಯಲ್ಲಿ ಗೈರು ಹಾಜರಿ ಮುಂದುವರಿದೆ. ಇಂದು ಸಹ ಬರೋಬ್ಬರಿ 8,125 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ಇಂದು ಗಣಿತ ಮತ್ತು ಶಿಕ್ಷಣ ಶಾಸ್ತ್ರ ವಿಷಯಗಳಿಗೆ ಪರೀಕ್ಷೆ ನಡೆಯಿತು, ಇಂದು ಅನೇಕರು ಪರೀಕ್ಷೆಗೆ ಗೈರಾಗಿದ್ದಾರೆ. ಎರಡನೇ ದಿನವೂ ಬರೋಬ್ಬರಿ 8 ಸಾವಿರಕ್ಕೂ ಅಧಿಕ ಸ್ಟೂಡೆಂಟ್ಸ್ ಗೈರಾಗಿದ್ದು ಕಾರಣ ಮಾತ್ರ ತಿಳಿದು ಬಂದಿಲ್ಲ

  ಮಾಜಿ ನಕ್ಸಲರ ಮದುವೆ
  ಲಹಂಡಿ ಜಿಲ್ಲಾ ಪೊಲೀಸ್ ಮೀಸಲು ಕ್ಯಾಂಪಸ್‌ನಲ್ಲಿ ಶುಕ್ರವಾರ ನಡೆದ ಅಪರೂಪದ ಘಟನೆಯ ದೃಶ್ಯವಿದು. ಕವಾಯತು ಮೈದಾನದಲ್ಲಿ ಗಂಭೀರವಾಗಿ ಕಾಣುವ ಶಸ್ತ್ರಸಜ್ಜಿತ ಪೋಲೀಸ್‌ಸರು ಅದೇ ಮೈದಾನದಲ್ಲಿ ಸರಳ ವಿವಾಹವನ್ನು ಆಚರಿಸಲು ಡೆಕೊರೇಷನ್ ಮತ್ತು ಹೂವಿನಿಂದ ಅಲಂಕರಿಸಲ್ಪಟ್ಟ ಆಹಾರ ಮಳಿಗೆಗಳಿಂದ ಅಲಂಕರಿಸಿದ್ದರು. ವಿಶೇಷವೆಂದರೆ ಕವಾಯತು ಮೈದಾನದಲ್ಲಿ ಮದುವೆ ನಡೆಯುತ್ತಿದ್ದು, ಅದೂ ವಾಂಟೆಂಡ್ ಜೋಡಿಗಳದ್ದು. ಹೌದು ಪೊಲೀಸರಿಂದ ವಾಂಟೆಡ್ ಲಿಸ್ಟ್​​ನಲ್ಲಿದ್ದ ಮಾಜಿ ಮಾವೋಯಿಸ್ಟ್​ಗಳನ್ನು ಒಂದು ಮಾಡಿದ ಪೊಲೀಸರು ಸರಳವಾಗಿ ಅವರ ಮದುವೆ ಮಾಡಿದ್ದಾರೆ.

  ಕುಟುಂಬ ಸದಸ್ಯರ ಸಾಮೂಹಿಕ ಹತ್ಯೆ
  ಉತ್ತರ ಪ್ರದೇಶ ಪ್ರಯಾಗ್​ ರಾಜ್​ನಲ್ಲಿ ಬೆಳಂಬೆಳಗ್ಗೆ ಇಡೀ ಕುಟುಂಬವೊಂದು ಬರ್ಬರ ಹತ್ಯೆಯಾಗಿರುವ ಘಟನೆ ದೇಶದ ಜನರನ್ನು ಬೆಚ್ಚಿ ಬೀಳಿಸಿದೆ. ಎರಡು ವರ್ಷದ ಪುಟ್ಟ ಕಂದ ಸೇರಿದಂತೆ ಐವರನ್ನು ಭೀಕರ ಹತ್ಯೆ ಮಾಡಿ ಮನೆಗೆ ಬೆಂಕಿ ಹಚ್ಚಲಾಗಿದೆ. ಪ್ರಯಾಗ್‌ರಾಜ್‌ನ ಥರ್ವಾಯಿ ಪೊಲೀಸ್ ಠಾಣೆ ವ್ಯಾಪ್ತಿಯ ಖೇವರಾಜಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಆರೋಪಿಗಳು ಇಟ್ಟಿಗೆ ಮತ್ತು ಕಲ್ಲುಗಳಿಂದ ಕುಟುಂಬ ಸದಸ್ಯರನ್ನು ಬರ್ಬರವಾಗಿ ಹತ್ಯೆಗೈದ ನಂತರ ಮೃತರ ಮನೆಗೆ ಬೆಂಕಿ ಹಚ್ಚಿದ್ದಾರೆ

  ಮ್ಯಾನ್​ಹೋಲ್​​ನಲ್ಲಿ ಬಿದ್ದ ಮಹಿಳೆ
  ಬಿಹಾರ ಪಾಟ್ನಾ ಮುನ್ಸಿಪಲ್ ಕಾರ್ಪೋರೇಷನ್ ವ್ಯಾಪ್ತಿಯ ರಸ್ತೆ ಯೊಂದರಲ್ಲಿ ಮ್ಯಾನ್ ಹೋಲ್‌ನಲ್ಲಿ ಮಹಿಳೆ ಬಿದ್ದ ಘಟನೆ ನಡೆದಿದೆ. ಅಲಂಗಂಜ್ ಎಂಬ ಪ್ರದೇಶದ ರಸ್ತೆಯೊಂದರಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಮ್ಯಾನ್‌ಹೋಲ್‌ನೊಳಗೆ ಬೀಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉತ್ಕರ್ಷ್ ಸಿಂಗ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಹಿಳೆ ಮ್ಯಾನ್ ಹೋಲ್‌ ಒಳಗೆ ಬೀಳುತ್ತಿರುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ
  Published by:Seema R
  First published: