• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Top-5 News: ದೇವೇಗೌಡರ ಆರೋಗ್ಯ ಹೇಗಿದೆ? ಬೆಂಗಳೂರಲ್ಲಿ ಬಾಡಿಗೆ ಮನೆ ದುಬಾರಿ; ಇಂದಿನ ಟಾಪ್‌ ನ್ಯೂಸ್ ಇಲ್ಲಿವೆ

Top-5 News: ದೇವೇಗೌಡರ ಆರೋಗ್ಯ ಹೇಗಿದೆ? ಬೆಂಗಳೂರಲ್ಲಿ ಬಾಡಿಗೆ ಮನೆ ದುಬಾರಿ; ಇಂದಿನ ಟಾಪ್‌ ನ್ಯೂಸ್ ಇಲ್ಲಿವೆ

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ

  • Share this:

ಬೆಂಗಳೂರು: ನಾನು ಆರಾಮಾಗಿದ್ದೇನೆ. ಕಾರ್ಯಕರ್ತರು, ನಾಯಕರು ಯಾರೂ ಗಾಬರಿಯಾಗಬೇಡಿ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (HD Deve Gowda) ಸ್ಪಷ್ಟಪಡಿಸಿದ್ದಾರೆ. ಇನ್ಮುಂದೂ ಜೆಡಿಎಸ್ ಪಕ್ಷದ (JDS) ಕಾರ್ಯಕಲಾಪಗಳಲ್ಲಿ ಮೊದಲಿನಂತೆಯೇ ಭಾಗವಹಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ವೈದ್ಯರು ವಿಶ್ರಾಂತಿ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದರು. ಹೀಗಾಗಿ ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದೇನೆ. ಇನ್ನೂ ಸ್ವಲ್ಪ ದಿನ ಮನೆಯಲ್ಲೇ ಉಳಿದು ವಿಶ್ರಾಂತಿ ((HD Deve Gowda Health Updates) ಪಡೆದುಕೊಳ್ಳುವೆ ಎಂದು ಅವರು ತಿಳಿಸಿದ್ದಾರೆ. ಮನೆಯಿಂದಲೇ ಪಕ್ಷದ ಕಾರ್ಯಚಟುವಟಿಕೆ ಮತ್ತು ಸಂಸದೀಯ ಕೆಲಸಗಳನ್ನು ನಡೆಸುತ್ತೇನೆ ಎಂದು ಅವರು ತಿಳಿಸಿದ್ದಾರೆ.


ಇದನ್ನೂ ಓದಿ: Gender Neutrality: 'ಸರ್‌' ಪದ ಬಳಕೆ ಕೈಬಿಡಲು ನಿರ್ಧಾರ: ಇದು ನಿಜಕ್ಕೂ ಮಹಿಳೆಯರ ಗೆಲುವು!


T20 World Cup 2022: ಟಿ20 ವಿಶ್ವಕಪ್​ 2022ಗೆ ಎಲ್ಲಾ ತಂಡಗಳು ಪ್ರಕಟ, ಯಾವ ಟೀಂ ಸಖತ್​ ಸ್ಟ್ರಾಂಗ್​? ಇಲ್ಲಿದೆ ಸಂಪೂರ್ಣ ಪಟ್ಟಿ


2022ರ ಐಸಿಸಿ ಟಿ20 ವಿಶ್ವಕಪ್‌ಗೆ (T20 World Cup 2022) ಸುಮಾರು ಒಂದು ತಿಂಗಳು ಬಾಕಿಯಿದೆ. ಇದರ ಭಾಗವಾಗಿ ಎಲ್ಲಾ ತಂಡಗಳು ತಮ್ಮ ಟೀಂ ಅನ್ನು ಪ್ರಕಟಿಸಿವೆ. ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸುತ್ತಿದೆ. ಐಸಿಸಿ (ICC)  ಟಿ20 ವಿಶ್ವಕಪ್ ಅಕ್ಟೋಬರ್ 16 ರಿಂದ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿದೆ. ನವೆಂಬರ್ 13 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಪಂದ್ಯಾವಳಿಯ ಮೊದಲ ಸುತ್ತಿನ ಪಂದ್ಯಗಳು ಅಕ್ಟೋಬರ್ 16 ರಿಂದ ಅಕ್ಟೋಬರ್ 21ರ ವರೆಗೆ ನಡೆಯಲಿದ್ದು, ಇದು ಅರ್ಹತಾ ತಂಡಗಳಾಗಿರುತ್ತದೆ.


ಟಿ20 ವಿಶ್ವಕಪ್​ ತಂಡಗಳು:


ಗುಂಪು A- ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ನ್ಯೂಜಿಲೆಂಡ್, ಇಂಗ್ಲೆಂಡ್


ಗುಂಪು B- ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ


ಉಳಿದ 4 ತಂಡಗಳು ಅಹರ್ತಾ ಸುತ್ತಿನ ಮೂಲಕ ಸೂಪರ್ 12 ತಂಡಗಳ ಜೊತೆ ಸೇರಿಕೊಳ್ಳಲಿದೆ.


ಬೆಂಗಳೂರಲ್ಲಿ ಮನೆ ಬಾಡಿಗೆ ತುಟ್ಟಿ
ಐಟಿ ಸಿಟಿ ಬೆಂಗಳೂರು (Bengaluru) ಮತ್ತಷ್ಟು ದುಬಾರಿಯಾಗಿದೆ. ಅದರಲ್ಲೂ ಕೊರೋನಾ ಬಂದು ಹೋದ ಮೇಲಂತೂ ಇನ್ನಷ್ಟು ಕಾಸ್ಟ್ಲಿಯಾಗಿದೆ. ಇಲ್ಲಿನ ಐಷಾರಾಮಿ ಮನೆಗಳ ಬಾಡಿಗೆ ಏರುಗತಿಯಲ್ಲಿ ಸಾಗಿದೆ. ಬೇರೆ ಮೆಟ್ರೋ ಸಿಟಿಗಳಿಗೆ (Metro City) ಹೋಲಿಸಿದರೆ ಇಲ್ಲಿನ ಬಂಡವಾಳ ಮೌಲ್ಯ ಕೂಡ ಹೆಚ್ಚಾಗಿದೆ. ಹೌದು, ಸುದ್ದಿಸಂಸ್ಥೆಯೊಂದರ ವರದಿಯ ಪ್ರಕಾರ ಕಳೆದ ಎರಡು ವರ್ಷಗಳಲ್ಲಿ ಏಳು ಪ್ರಮುಖ ನಗರಗಳಲ್ಲಿ ಮಾಸಿಕ ಬಾಡಿಗೆಗಳು (Home Rents In Bengaluru) ಮತ್ತು ಐಷಾರಾಮಿ ವಸತಿ ಪ್ರಾಪರ್ಟಿಗಳ ಬೇಡಿಕೆ ಹೆಚ್ಚಾಗಿದೆ. ದೆಹಲಿ-ಎನ್‌ಸಿಆರ್, ಮುಂಬೈ ಮೆಟ್ರೋಪಾಲಿಟನ್ ಪ್ರದೇಶ , ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್ ಮತ್ತು ಪುಣೆ ಈ ಸಿಟಿಗಳಲ್ಲಿ ಬಾಡಿಗೆ ದರದಲ್ಲಿ ಭಾರೀ ಹೆಚ್ಚಳವಾಗಿದೆ.


ಇದನ್ನೂ ಓದಿ: Home Rent In Bengaluru: ಬೆಂಗಳೂರಿನಲ್ಲಿ ತುಟ್ಟಿ ಆಯ್ತು ಬಾಡಿಗೆಮನೆ! ಯಾವ ಏರಿಯಾದಲ್ಲಿ ಎಷ್ಟು ರೇಟ್?


ಮೈಸೂರಿನ ಜನರಿಗೆ ಖುಷಿಸುದ್ದಿ
ಮೈಸೂರು ನಗರದ ಮೊದಲ ಬೊಟಾನಿಕಲ್ ಗಾರ್ಡನ್ ದಸರಾಕ್ಕೆ ಸೆಪ್ಟೆಂಬರ್ 26 ರಂದು ಪ್ರವಾಸಿಗರಿಗೆ ಮುಕ್ತವಾಗಲಿದೆ. ಉದ್ಯಾನವು ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ತೆರೆದಿರುತ್ತದೆ.  ಸೆಪ್ಟೆಂಬರ್ 26ರಂದು ಕುಪ್ಪಣ್ಣ ಪಾರ್ಕ್ ನಲ್ಲಿ ದಸರಾ ಫಲಪುಷ್ಪ ಪ್ರದರ್ಶನ ಉದ್ಘಾಟನೆ ಸಂದರ್ಭದಲ್ಲಿ ಸಾಂಕೇತಿಕವಾಗಿ ಉದ್ಯಾನ ಉದ್ಘಾಟನೆ ನಡೆಯಲಿದೆ.


ದೇಶವೇ ಬೆಚ್ಚಿ ಬೀಳುವಂತಹ ಸುದ್ದಿ
ಲಕ್ನೋ: ದೇಶವೇ ಬೆಚ್ಚಿ ಬೀಳುವಂತಹ ಅತ್ಯಂತ ಆಘಾತಕಾರಿ ದುರ್ಘಟನೆಯೊಂದು (Shocking News) ನಡೆದಿದೆ. ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ 15 ವರ್ಷದ ಬಾಲಕಿಯ ಮೇಲೆ ಐವರು ಸಾಮೂಹಿಕ (Gang Rape In Uttar Pradesh) ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ಸಂತೃಸ್ತ ಬಾಲಕಿ ರಸ್ತೆಯಲ್ಲಿ ನಗ್ನವಾಗಿ ನಡೆಯುವಂತೆ ಮಾಡಿದ್ದಾರೆ. ಈ ಘಟನೆ ನಡೆದ 15 ದಿನಗಳ ನಂತರ ವಿಡಿಯೋ ಬಹಿರಂಗವಾಗಿದ್ದು, ಸಾಮಾಜಿಕ ಜಾಲತಾಣಗಳ ಬಳಕೆದಾರರು ವಿಡಿಯೋದಿಂದ ಶಾಕ್​ಗೆ ಒಳಗಾಗುವಂತಾಗಿದೆ. 30 ಸೆಕೆಂಡುಗಳ ವಿಡಿಯೋದಲ್ಲಿ, ಹುಡುಗಿ ರಸ್ತೆಯಲ್ಲಿ ನಗ್ನವಾಗಿ ನಡೆಯುತ್ತಿರುವುದು ಕಂಡುಬಂದಿದೆ. ಸಾಕಷ್ಟು ರಕ್ತಸ್ರಾವವಾಗುತ್ತಿದ್ದಾಗ ಬಾಲಕಿ ನಗ್ನ ಸ್ಥಿತಿಯಲ್ಲಿ ದುರುಳರಿಂದ ತಪ್ಪಿಸಿಕೊಳ್ಳಲು ರಸ್ತೆಯಲ್ಲಿ ಸುಮಾರು 2 ಕಿಲೋಮೀಟರ್ ಓಡಿದ್ದಾಳೆ.

Published by:ಗುರುಗಣೇಶ ಡಬ್ಗುಳಿ
First published: