Evening Digest: ಮತಾಂತರಿಗಳ ತಲೆ ತೆಗೆಯಿರಿ ಎಂದ ಬಿಜೆಪಿ ನಾಯಕ; CM ಅಲೆ ಇಲ್ವಾ ಎಂದು ಸಿದ್ದರಾಮಯ್ಯ ವ್ಯಂಗ್ಯ; ಇಂದಿನ ಪ್ರಮುಖ ಸುದ್ದಿಗಳು

Kannada news Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

 • Share this:
  ಮತಾಂತರಿಗಳ ತಲೆ ತೆಗೆಯಿರಿ: ಸಾಮಾಜಿಕ ವೇದಿಕೆಯಲ್ಲಿ ಬಿಜೆಪಿ ನಾಯಕರು (BJP Leaders) ದ್ವೇಷ ಭಾಷಣ (Hate Speech) ಮಾಡುವುದು ಹೊಸ ವಿಚಾರ ಏನಲ್ಲ. ಆದರೆ, ಛತ್ತೀಸ್​ಗಢದ ಸ್ವಾಮಿ ಪರಮಾತ್ಮಾನಂದ ಒಂದು ಹೆಜ್ಜೆ ಮುಂದೆ ಹೋಗಿ, "ಮತಾಂತರ ಮಾಡಲು ಬಂದವರ ತಲೆ ತೆಗೆಯಿರಿ" ಎಂದು ಹೇಳುವ ಮೂಲಕ ಮತೀತ ದ್ವೇಷ ಹರಡಲು ಯತ್ನಿಸಿದ್ದಾರೆ. ವೈರಲ್ ಆಗಿರುವ (Viral Video) ವಿಡಿಯೋದಲ್ಲಿ  ಪರಮಾತ್ಮಾನಂದ (Paramatmananda), "ನಾನು ಸಂತನಾಗಿದ್ದರೂ ದ್ವೇಷವನ್ನು ಹರಡುತ್ತಿದ್ದೇನೆ ಎಂದು ನೀವು ಹೇಳಬಹುದು. ಆದರೆ ಕೆಲವೊಮ್ಮೆ ಬೆಂಕಿಯನ್ನು ಹೊತ್ತಿಸುವುದು ಮುಖ್ಯ. ನಾನು ನಿಮಗೆ ಹೇಳುತ್ತಿದ್ದೇನೆ, ನಿಮ್ಮ ಮನೆ, ರಸ್ತೆ, ನೆರೆಹೊರೆ, ಹಳ್ಳಿಗೆ ಯಾರೇ ಬಂದರು ಅವರನ್ನು ಕ್ಷಮಿಸಬೇಡಿ ತಲೆ ತೆಗೆಯಿರಿ’ ಎಂದು ಹೇಳುವ ಮೂಲಕ ಅಲ್ಪಸಂಖ್ಯಾತರ ಹತ್ಯೆಗೆ ಬಹಿರಂಗವಾಗಿ ಕರೆ ನೀಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.

  CM ಅಲೆ ಇಲ್ವಾ ಎಂದು ಸಿದ್ದರಾಮಯ್ಯ ವ್ಯಂಗ್ಯ

  ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (bs yediyurappa) ಬಂದ ಮೇಲೆ ಸುನಾಮಿ ಅಲೆ (tsunami wave) ಏಳುತ್ತಿದೆಯಾ..? ಹಾಗಾದ್ರೆ ಸಿಎಂ ಬೊಮ್ಮಾಯಿ (cm basavaraj bommai)  ಬಂದಾಗ ಅಲೆ ಇರಲಿಲ್ವಾ...? ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah )ಪ್ರಶ್ನಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣಾ (by election) ಪ್ರಚಾರಕ್ಕೆ ಯಡಿಯೂರಪ್ಪ ಬಂದ ನಂತರ ಸುನಾಮಿ ಅಲೆ ಏಳಲಿದೆ ಎಂಬ ಸಿಎಂ ಹೇಳಿಕೆಗೆ ಟಾಂಗ್ ಕೊಟ್ಟರು. ಯಡಿಯೂರಪ್ಪ ಪ್ರಚಾರಕ್ಕೆ ಬಂದ ನಂತರ ಸುನಾಮಿ ಅಲೆ ಏಳುತ್ತದೆ ಅನ್ನೋದಾದ್ರೆ ಸಿಎಂ ಬೊಮ್ಮಾಯಿ ಅವ್ರ ಅಲೆ ಏನೂ ಇಲ್ವಾ. ಹಾನಗಲ್ ನಲ್ಲಿ ಮತದಾರರು ಕಾಂಗ್ರೆಸ್ ಪರ ಒಲವು ತೋರುತ್ತಿದ್ದಾರೆ.

  ಸಿದ್ದರಾಮಯ್ಯಗೂ ಮೊದಲು ಯಾರೂ ಅಕ್ಕಿ ಕೊಟ್ಟಿರಲಿಲ್ವಾ

  ಉಪ ಚುನಾವಣೆ (by election) ಹಿನ್ನೆಲೆಯಲ್ಲಿ ಹಾನಗಲ್​​ ಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (cm basavaraj bommai) ಭರ್ಜರಿ ಮತಬೇಟೆಗೆ ಇಳಿದಿದ್ದಾರೆ. ಬಮ್ಮನಹಳ್ಳಿ ಗ್ರಾಮದಲ್ಲಿ ಪ್ರಚಾರದಲ್ಲಿ ಮಾತನಾಡಿದ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ (siddaramaiah) ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅನ್ನಭಾಗ್ಯ, ಅನ್ನಭಾಗ್ಯ ಅಂತಾರೆ(annabhagya scheme). ಸ್ವಾತಂತ್ರ್ಯ ಬಂದ್ಮೇಲೆ ಪಡಿತರದಲ್ಲಿ ಅಕ್ಕಿನೇ ಕೊಡ್ತಿರಲಿಲ್ಲವೇನೋ ಅನ್ನೋ ರೀತಿಯಲ್ಲಿ ಹೇಳ್ತಿದ್ದಾರೆ. ಅಕ್ಕಿಗೆ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಹಣ ಕೊಡ್ತಿದೆ. 29 ರುಪಾಯಿ ಕೊಟ್ಟವರನ್ನು ಬಿಟ್ಟು 3 ರುಪಾಯಿ ಕೊಟ್ಟವರ ಫೋಟೋ ಹಾಕ್ಕೊಂಡ್ರು. 30 ಕೆಜಿ‌ ಇದ್ದಿದ್ದು 7 ಕೆಜಿ ಆಯ್ತು, ನಂತರ 3 ಕೆಜಿ ಆಯ್ತು. ಚುನಾವಣೆ ಬಂದಾಗ ಏಳು ಕೆಜಿ ಅಂದರು. ಕೇಂದ್ರ ಸರ್ಕಾರವನ್ನ ಮರೆಮಾಚಿ ಅನ್ನಭಾಗ್ಯ ಅನ್ನಭಾಗ್ಯ ಅಂದರು. ಅವರ ಯೋಜನೆಗಳು ಜನರ ಮನೆ ಬಾಗಿಲಿಗೆ ಮುಟ್ಟಲಿಲ್ಲ. 2018ರಲ್ಲಿ ಜನರು ಅವರನ್ನ ಮನೆ ಬಾಗಿಲಿಗೆ ಬರಬೇಡಿ ಅನ್ನೋ ಫಲಿತಾಂಶ ನೀಡಿದರು ಎಂದು ವ್ಯಂಗ್ಯವಾಡಿದರು.

  ಕಾಂಗ್ರೆಸ್​ನಲ್ಲಿ ಭವಿಷ್ಯವಿಲ್ಲ, ಬಿಜೆಪಿ ಸೇರಿಕೊಳ್ಳಿ

  ಇಂದಿನಿಂದ ಹಾನಗಲ್ ಉಪಚುನಾವಣಾ (Hangal By Election) ಅಖಾಡಕ್ಕೆ ಇಳಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM BS Yediyurappa) ಇಂದು ಹಾನಗಲ್ ತಾಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡರು. ಇನ್ನು ಐವತ್ತು ವರ್ಷ ನಿಮ್ಮ (ಕಾಂಗ್ರೆಸ್) ಅಡ್ರೆಸ್ ಇರೋದಿಲ್ಲ. ಬರೆದಿಟ್ಟುಕೊಳ್ಳಿ. ಇದನ್ನ ನಿಮ್ಮ ಮೊಮ್ಮಕ್ಕಳಿಗೂ ಹೇಳ್ರಿ. ಕಾಂಗ್ರೆಸ್ ನಲ್ಲಿ ಭವಿಷ್ಯವಿಲ್ಲ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿಕೊಳ್ಳುವಂತೆ ಹೇಳ್ರಿ. ನಿಮಗೆ ಯಾವುದೇ ಅನುಮಾನ ಮಾಡಬೇಡಿ. ಟೀಕೆಗಾಗಿ ಟೀಕೆ ಮಾಡಬೇಡಿ. ಗೋಣಿ ಚೀಲದಲ್ಲಿ ದುಡ್ಡು ತುಂಬಿಕೊಂಡು ಹೋಗಿದ್ದೇವಂತೆ. ನಾಚಿಕೆ ಆಗಬೇಕು ನಿಮಗೆ. ಮತದಾರರಿಗೆ ಅಪಮಾನ ಮಾಡ್ತಿದ್ದೀರಿ. ನನಗೆ ತುಂಬಾ ಆನಂದ ಆಗಿದೆ ಎಂದರು.

  4 ವರ್ಷದ ಮಗುವಿನ ಮೇಲೆ ರೇಪ್

  ತೆಲಂಗಾಣದ ರಾಜಧಾನಿ ಹೈದರಾಬಾದಿನಲ್ಲಿ ಅಕ್ಟೋಬರ್​ 15ರಂದು ಮನೆಯಂಗಳದಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಮಗುವನ್ನು ಪುಸಲಾಯಿಸಿ ಕರೆದುಕೊಂಡು ಹೋದ ಪಕ್ಕದ ಮನೆಯಾತ ಮಗುವಿನ ಮೇಲೆ ಅತ್ಯಾಚಾವೆಸಗಿದ್ದಾನೆ. ಈ ಸಂಬಂಧ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಕ್ಕದ ಮನೆಯಾತ ಹಲವು ವರ್ಷಗಳಿಂದ ಮಗುವಿನ ಮನೆಯವರಿಗೆ ಪರಿಚಿತನಾಗಿದ್ದ. ಆಗಾಗ ಅವರ ಮನೆಗೆ ಬಂದು ಹೋಗಿ ಮಾಡುತ್ತಿದ್ದ. ಆರೋಪಿ 23 ವರ್ಷದವನಾಗಿದ್ದು, ಮಗು ಆಟವಾಡುತ್ತಿರುವಾಗ ಚಾಕಲೇಟ್​ ಕೊಡುತ್ತೀನೆಂದು ಮನೆಗೆ ಕರೆದೊಯ್ದಿದ್ದಾನೆ. ನಂತರ ಮಗುವಿನ ಮೇಲೆ ಅತ್ಯಾಚಾರ ಮಾಡಿ, ಯಾರಿಗೂ ಹೇಳದಂತೆ ಬೆದರಿಸಿ, ಆಕೆಯನ್ನು ವಾಪಸ್​ ಕಳಿಸಿದ್ದಾನೆ.
  Published by:Kavya V
  First published: