• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Evening Digest: 7 ಕೋಟಿ ಎಗರಿಸಿದ ಬೆಂಗಳೂರಿನ ಹ್ಯಾಕರ್; ತಾಳಿ ಕಟ್ಟುವಾಗ ವಧುವಿನ ಹೈಡ್ರಾಮಾ: ಇಂದಿನ ಪ್ರಮುಖ ಸುದ್ದಿಗಳು

Evening Digest: 7 ಕೋಟಿ ಎಗರಿಸಿದ ಬೆಂಗಳೂರಿನ ಹ್ಯಾಕರ್; ತಾಳಿ ಕಟ್ಟುವಾಗ ವಧುವಿನ ಹೈಡ್ರಾಮಾ: ಇಂದಿನ ಪ್ರಮುಖ ಸುದ್ದಿಗಳು

ಸಂಜೆ ಸುದ್ದಿ

ಸಂಜೆ ಸುದ್ದಿ

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

  • Share this:

7 ಕೋಟಿ ಎಗರಿಸಿದ ಬೆಂಗಳೂರಿನ ಹ್ಯಾಕರ್: ಇಂದು ತಂತ್ರಜ್ಞಾನ (Technology) ಎಷ್ಟು ಪ್ರಗತಿಯಾಗುತ್ತಿದೆಯೋ ಅದನ್ನು ದುರುಪಯೋಗ ಪಡಿಸಿಕೊಳ್ಳುವಂತಹ ತಾಂತ್ರಿಕ ಜ್ಞಾನ (Technical Knowledge) ಹೊಂದಿದ ಹ್ಯಾಕರ್ ಗಳು (Hacker) ಸಹ ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಈಗಾಗಲೇ ನಾವು ಸಾಕಷ್ಟು ಬಾರಿ ಸೈಬರ್ ಕ್ರೈಮ್ ಗಳ (Cyber Crime) ಬಗ್ಗೆ ಕೇಳಿದ್ದೇವೆ. ಅದೆಷ್ಟೋ ಜನರಿಗೆ ಹ್ಯಾಕರ್​ಗಳು ಬ್ಯಾಂಕುಗಳ (Bank) ಸೋಗಿನಲ್ಲಿ ಫೋನ್ ಮಾಡಿ ಅವರ ಅಕೌಂಟ್ ಸರಿ ಮಾಡಿಕೊಡುವುದಾಗಿ  ಕಾರ್ಡುಗಳಿಗೆ ಸಂಬಂಧಿಸಿದಂತೆ ಅಪ್ಡೇಟ್ ಮಾಡುವುದಾಗಿಯೋ ಸಬೂಬು ಹೇಳಿ ಓಟಿಪಿ (OTP) ಪಡೆಯುವ ಮೂಲಕ ಅವರ ಖಾತೆಗಳಲ್ಲಿನ ಹಣಕ್ಕೆ ಪಂಗನಾಮ ಹಾಕಿದ್ದಾರೆ. ಬೆಂಗಳೂರಿನ ಹ್ಯಾಕರ್ ಓರ್ವ (Bengaluru Hacker) ಮೂರು ತಿಂಗಳ ಅವಧಿಯಲ್ಲಿ 7.3 ಕೋಟಿ ರೂಪಾಯಿ ವಂಚನೆ ಎಸಗಲಾಗಿದೆ.


ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Bengaluru Hacker: 7 ಕೋಟಿ ಎಗರಿಸಿದ ಬೆಂಗಳೂರಿನ ಹ್ಯಾಕರ್! ಖದೀಮರನ್ನು ಪತ್ತೆಹಚ್ಚಲು ಪೊಲೀಸರ ಶತಪ್ರಯತ್ನ


ತಾಳಿ ಕಟ್ಟುವಾಗ ವಧುವಿನ ಹೈಡ್ರಾಮಾ: ಮೈಸೂರು ನಗರದ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಇಂದು ಒಂದು ಮದುವೆ ನಿಶ್ಚಯವಾಗಿತ್ತು.  ಹುಡುಗಿಯೊಬ್ಬಳು ಎಚ್‌ಡಿ ಕೋಟೆ ತಾಲೂಕಿನ ಗ್ರಾಮವೊಂದರ ಯುವಕನ ಕೈ ಹಿಡಿಯಬೇಕಿತ್ತು. ಮದುವೆಗೆ ಕಲ್ಯಾಣ ಮಂಟಪ ಸಜ್ಜಾಗಿದ್ದು, ವಧು, ವರನ ಸಮೇತ ಎರಡೂ ಕಡೆ ಕುಟುಂಬಸ್ಥರು, ನೆಂಟರು, ಅತಿಥಿಗಳು, ಸ್ನೇಹಿತರೆಲ್ಲ ಬಂದು ಸೇರಿದ್ದರು. ಆದರೆ ಮದುಮಗನು ಮದುಮಗಳಿಗೆ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಹೈಡ್ರಾಮನೇ ನಡೆದಿದೆ.


ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Marriage High Drama: ಇನ್ನೇನು ತಾಳಿ ಕಟ್ಬೇಕು, ಅಷ್ಟರಲ್ಲಿ ಮದುವೆನೇ ಕ್ಯಾನ್ಸಲ್ ಆಯ್ತು!


ಗಾಂಜಾ ಸೇದಿದ ನಂತರ ತನ್ನ ಮರ್ಮಾಂಗ ತಾನೇ ಕಟ್ ಮಾಡಿದ!


ಡ್ರಗ್ಸ್ (Drugs) ಕುರಿತು ಎಷ್ಟೇ ಜಾಗೃತಿ ಮೂಡಿಸಿದರೂ ಇದರಿಂದ ಜನರು ಹೊರಬರುತ್ತಿಲ್ಲ. ವಿಶೇಷವಾಗಿ ಯುವ ಜನಾಂಗವಂತೂ ಡ್ರಗ್ಸ್ ದಾಸರಾಗಿ ಬದಲಾಗುತ್ತಿದೆ. ನಾರ್ಕೋಟಿಕ್ಸ್ ತನಿಖೆ, ರೈಡ್​​ಗಳು ಆಘಾತಕಾರಿ ಫಲಿತಾಂಶವನ್ನು ಹೊರ ತರುತ್ತವೆ. ಹಲವಾರು 'ಡ್ರಗ್ಸ್' ವಿರೋಧಿ ಅಭಿಯಾನಗಳು (Anti Drugs Campaign) ಡ್ರಗ್ಸ್ ಬಳಕೆಯ ದುಷ್ಪರಿಣಾಮಗಳನ್ನು ತೋರಿಸುತ್ತವೆ. ಆದರೆ ಅಸ್ಸಾಂನಲ್ಲಿ ಮೇ 19 ರಂದು ಬೆಳಕಿಗೆ ಬಂದ ಈ ವಿಲಕ್ಷಣ ಘಟನೆ ಎಲ್ಲರಿಗಿಂತ ಹೆಚ್ಚು ಭಯ ಹುಟ್ಟಿಸುವಂತಿದೆ. ಎಂಡಿ ಸಹಜುಲ್ ಅಲಿ ಎಂಬ ವ್ಯಕ್ತಿ ಗಾಂಜಾ (Ganja) ಸೇದಿದ ನಂತರ ತನ್ನ ಶಿಶ್ನವನ್ನು ಕತ್ತರಿಸಿದ್ದಾನೆ. ಸೋನಿತ್‌ಪುರ ಜಿಲ್ಲೆಯ ದೇಕರ್ ​​ಗ್ರಾಮದವರಾದ ಅಲಿ ಮಾನಸಿಕವಾಗಿ ಅಸ್ತವ್ಯಸ್ತರಾಗಿದ್ದಾರೆ ಎಂದು ವರದಿಯಾಗಿದೆ. ಅವರು ಗಾಂಜಾ ಸೇದುತ್ತಿದ್ದರು ಮತ್ತು ಮನೋವಿಕಾರದ ಸ್ಥಿತಿಯಲ್ಲಿ ತಮ್ಮ ಶಿಶ್ನವನ್ನು ಕತ್ತರಿಸಿದರು. ಅಲಿ, ಗಾಂಜಾ ಸೇವಿಸುವುದು ಮಾತ್ರವಲ್ಲದೆ ಇತರ ಹಾರ್ಡ್ ಡ್ರಗ್ಸ್ ಕೂಡ ಬಳಸಿದ್ದಾರೆ. ಆದರೆ ಆತನ ಅಂಗಾಂಗ ಕಳೆದುಕೊಂಡ ಸೈಕೋಸಿಸ್ ಪ್ರಸಂಗ ಗಾಂಜಾದ ಅಮಲಿನಲ್ಲಿ ನಡೆದಿದೆ.


ಎಲಾನ್ ಮಸ್ಕ್​​ರಿಂದ ಇದೆಂಥಾ ಚಾಲೆಂಜ್!


ವಿಶ್ವದ ನಂಬರ್​​ 1 ಶ್ರೀಮಂತ ಬಿಲಿಯನೇರ್ ಎಲಾನ್​​ ಮಸ್ಕ್ (Elon Musk) ಅವರು 2016 ರಲ್ಲಿ ಖಾಸಗಿ ಜೆಟ್‌ನಲ್ಲಿ (Private Jet) ಫ್ಲೈಟ್ ಅಟೆಂಡೆಂಟ್‌ಗೆ (Flight Attendant) ಲೈಂಗಿಕ ಕಿರುಕುಳ (Sexually Harassed) ನೀಡಿದ್ದರು ಎಂಬ ಆರೋಪಿತ ವರದಿಯನ್ನು ಅಲ್ಲಗಳೆದಿದ್ದಾರೆ. ಫ್ಲೈಟ್ ಅಟೆಂಡೆಂಟ್‌ ಗೆಳತಿ ಎನ್ನಲಾದ ವ್ಯಕ್ತಿ ಮಸ್ಕ್​ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಖಾಸಗಿ ವಿಮಾನದಲ್ಲಿ ಬೆತ್ತಲೆಯಾಗುವಂತೆ, ಕಾಮೋದ್ರೇಕ ಮಸಾಜ್​ ಮಾಡುವಂತೆ, ಮತ್ತಷ್ಟು ಸಹಕರಿಸಿದ ಕುದುರೆ ಖರೀಸುವುದಾಗಿ ಆಮಿಷವೊಡ್ಡಿದ್ದಾರೆ. ಈ ವಿಷಯವನ್ನು ಹೊರಗೆ ಹೇಳದಂತೆ ಹಣದ ಆಮಿಷವನ್ನು ಒಡ್ಡಿದ್ದಾರೆ. ಈ ಬಗ್ಗೆ ಗೆಳತಿ ನನ್ನ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ಅಲ್ಲಗಳೆದಿರುವ ಮಸ್ಕ್​​​, ಆರೋಪಿತರಿಗೆ ಓಪನ್​ ಚಾಲೆಂಜ್​ ಹಾಕುವೆ. ಆಕೆ ನನ್ನನ್ನು ಬೆತ್ತಲೆ ನೋಡಿದ್ದರೆ ನನ್ನ ದೇಹದ ಮೇಲಿನ, ಸಾರ್ವಜನಿಕವಾಗಿ ತೋರಿಸದ ಯಾವುದಾದರೂ ಮಚ್ಚೆ/ಗುರುತನ್ನು ಹೇಳಲಿ ನೋಡೋಣ. ಆಕೆ ನನ್ನ ದೇಹದ ಮೇಲಿನ ಗುರುತು ಹೇಳಲು ಸಾಧ್ಯವಿಲ್ಲ. ಏಕೆಂದರೆ ನಾನು ಆಕೆಯ ಎದುರು ಬೆತ್ತಲೆಯಾಗಿಲ್ಲ. ಅವರು ಆರೋಪಿಸುತ್ತಿರುವ ಘಟನೆ ನಡೆದೇ ಇಲ್ಲ ಎಂದು ಟ್ವೀಟ್​ ಮೂಲಕ ಸ್ಪಷ್ಟನೆ ನೀಡಿದ್ದಾರೆ.


ಹೊಸ ಅವತಾರದಲ್ಲಿ ಬಂದ್ರು ವಸಿಷ್ಠ ಸಿಂಹ

top videos


    ತಮ್ಮ ಧ್ವನಿ ಹಾಗೂ ನಟನೆಯಿಂದ ವಿಲನ್ ಪಾತ್ರಗಳಿಂದ ಹೆಸರು ಮಾಡಿದ್ದ, ಸ್ಯಾಂಡಲ್​ವುಡ್​ನ ಕಂಚಿನ ಕಂಠದ ನಟ ವಸಿಷ್ಠ ಸಿಂಹ (Vasishta Simha) ವಿಭಿನ್ನ ಪಾತ್ರದ ಮೂಲಕ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಹೌದು, ವಸಿಷ್ಠ ಸಿಂಹ ನಟನೆಯ ಹೊಸ ಚಿತ್ರ ‘Love ಲಿ’ ಯ ಪೋಸ್ಟರ್ (Poster) ರಿಲೀಸ್ ಆಗಿದ್ದು, ವಸಿಷ್ಠ ಲುಕ್ ನೋಡಿ ಅಭಿಮಾನಿಗಳು (Fans) ಫಿದಾ ಆಗಿದ್ದಾರೆ.  ರಕ್ತಸಿಕ್ತ ಕೈಯಲ್ಲಿ ಲಾಂಗ್ ಹಿಡಿದು, ಧಮ್ ಎಳೆಯುತ್ತಾ ಎಂಟ್ರಿ ಕೊಟ್ಟ ವಸಿಷ್ಠ ಅವರ ಲುಕ್ ಬಹಳ ಅದ್ಭುತವಾಗಿದ್ದು, ಇದು ಅವರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ‘Love...ಲಿ’ ಪ್ರೇಮಕಥೆಯಾಗಿದ್ದು, ಜೊತೆಗೆ ರೌಡಿಸಂನ ವಿಭಿನ್ನ ಕಥಾಹಂದರವನ್ನು ಒಳಗೊಂಡಿದೆ ಎಂದು ಚಿತ್ರತಂಡ ತಿಳಿಸಿದೆ. ವಸಿಷ್ಠ ಸಿಂಹ ಅವರ ಗೆಳೆಯ, ‘ಮಫ್ತಿ’ ನಿರ್ದೇಶಕ ನರ್ತನ್ ಜೊತೆ ಕೆಲಸ ಮಾಡಿ ಅನುಭವವಿರುವ ಚೇತನ್ ಕೇಶವ್ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಬೆಂಗಳೂರು ಸುತ್ತಮುತ್ತ ಸಿನಿಮಾದ ಚಿತ್ರೀಕರಣ ಆಗಿದ್ದು, ಪೋಸ್ಟರ್ ಹೈಪ್ ಕ್ರಿಯೇಟ್ ಮಾಡಿದೆ.

    First published: