Evening Digest: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು, ಅತ್ತ ಮಹಾ ಹೈಡ್ರಾಮಾ! ದಿಗಂತ್ ಆರೋಗ್ಯದ ಬಗ್ಗೆ ಐಂದ್ರಿತಾ ಮಾಹಿತಿ, ಇಂದಿನ ಟಾಪ್ ನ್ಯೂಸ್‌ಗಳು ಇಲ್ಲಿವೆ

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ...

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
Uttara Karnataka: 2024ರ ನಂತರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ; ಸಚಿವ ಉಮೇಶ್ ಕತ್ತಿ ಬಾಂಬ್

ಬೆಳಗಾವಿ: 2024 ರ ಲೋಕಸಭೆ ಚುನಾವಣೆ ನಂತ್ರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ  ಎಂದು   ಬೆಳಗಾವಿಯಲ್ಲಿ (Belagavi) ಆಹಾರ ಮತ್ತು ಅರಣ್ಯ ಸಚಿವ ಉಮೇಶ ಕತ್ತಿ (Umesh Katti) ಹೇಳಿಕೆ ನೀಡಿದ್ದಾರೆ.  ಈಮೂಲಕ ಮತ್ತೊಮ್ಮೆ ಕರ್ನಾಟಕ ಇಬ್ಬಾಗದ ಮಾತೆತ್ತಿದ್ದಾರೆ ಸಚಿವ ಉಮೇಶ ಕತ್ತಿ.  2024ರ ನಂತರ ದೇಶದಲ್ಲಿ 50 ಹೊಸ ರಾಜ್ಯಗಳು ಉದಯಿಸಲಿವೆ. ಆಗ ಕರ್ನಾಟಕವೂ ಎರಡು ರಾಜ್ಯಗಳಾಗಲಿವೆ. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ಟ್ರಾಫಿಕ್ ಸಮಸ್ಯೆ (Bengaluru Traffic) ಹೆಚ್ಚಾಗಿದೆ. ಈ ಅಂಶಗಳೆಲ್ಲವೂ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲು (Uttara Karnataka) ಕಾರಣವಾಗಲಿದೆ ಎಂದು ಅವರು ವಿವಾದಿತ ಹೇಳಿಕೆ ನೀಡಿದ್ದಾರೆ.

Maharashtra Politics: ಶಿವಸೇನೆ ಶಾಸಕರಿಗೆ ಇಂಜೆಕ್ಷನ್ ಕೊಟ್ಟು, ಕಿಡ್ನಾಪ್ ಮಾಡಿದ್ರಾ?

ಮುಂಬೈ: ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾ (Maharashtra Political High drama) ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ. ಏಕ್‌ನಾಥ್‌ ಶಿಂಧೆ (Ekanath Shidhe) ಜೊತೆ ಸೇರಿರುವ ಶಿವಸೇನೆಯ (Shiv Sene) ರೆಬೆಲ್ ಶಾಸಕರು (Rebel MLA’s) ಮಹಾ ವಿಕಾಸ್ ಅಗಾಡಿ ಸರ್ಕಾರ (Maha Vikas Aghadi Government) ಬೀಳಿಸಲು ಶತಪ್ರಯತ್ನ ನಡೆಸಿದ್ದಾರೆ. ಈ ನಡುವೆ ರೆಬೆಲ್ ಶಾಸಕರ ಗುಂಪು ಸೇರಿದ್ದ ಶಿವಸೇನೆ ಶಾಸಕರೊಬ್ಬರು ಬಾಂಬ್ ಸಿಡಿಸಿದ್ದಾರೆ. ಗುಜರಾತ್‌ನ (Gujarat) ಸೂರತ್‌ನಿಂದ (Surat) ಮುಂಬೈಗೆ (Mumbai) ಬಂದಿರುವ ಶಿವಸೇನೆ ಶಾಸಕ ನಿತಿನ್ ದೇಶಮುಖ್ (Nitin Deshmukh), ರೆಬೆಲ್ ನಾಯಕ ಏಕನಾಥ್ ಶಿಂಧೆ ಹಾಗೂ ತಂಡದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮತ್ತು ಬರುವ ಔಷಧಿಯನ್ನು ನನಗೆ ಇಂಜೆಕ್ಟ್ ಮಾಡಿ, ನನ್ನನ್ನು ಬಲವಂತವಾಗಿ ಕಿಡ್ನಾಪ್ (Kidnap) ಮಾಡಲಾಯಿತು. ನನ್ನ ನಿಷ್ಠೆ ಯಾವಾಗಿದ್ದರೂ ಉದ್ಧವ್ ಠಾಕ್ರೆ (Uddhav Thackeray) ಹಾಗೂ ಶಿವಸೇನೆಗೆ ಅಂತ ಹೇಳಿದ್ದಾರೆ.

ಇದನ್ನೂ ಓದಿ: Maharashtra Politics: ಶಿವಸೇನೆ ಶಾಸಕರಿಗೆ ಇಂಜೆಕ್ಷನ್ ಕೊಟ್ಟು, ಕಿಡ್ನಾಪ್ ಮಾಡಿದ್ರಾ? ಇದು 'ಮಹಾ' ಹೈಡ್ರಾಮಾದ ಸ್ಫೋಟಕ ನ್ಯೂಸ್

ನಾಳೆ ವಿಚಾರಣೆಗೆ ಹಾಜರಾಗ್ತಾರಾ ಸೋನಿಯಾಗಾಂಧಿ?

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಹಗರಣದ (National Herald Scam) ತನಿಖೆ (Enquiry) ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED Officers) ನಾಳೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ (AICC President Sonia Gandhi) ಅವರ ವಿಚಾರಣೆ ನಡೆಸಲಿದ್ದಾರೆ. ಈಗಾಗಲೇ ರಾಹುಲ್ ಗಾಂಧಿ (Rahul Gandhi) ಅವರ ವಿಚಾರಣೆ ನಡೆಸುತ್ತಿರುವ ಇಡಿ ಅಧಿಕಾರಿಗಳು, ಸೋನಿಯಾ ಗಾಂಧಿ ಅವರನ್ನೂ ವಿಚಾರಣೆ ನಡೆಸಲಿದ್ದಾರೆ. ನಾಳೆ ಅಂದರೆ ಜೂನ್ 23ರಂದು ವಿಚಾರಣೆಗೆ ಹಾಜರಾಗುವಂತೆ ಸೋನಿಯಾ ಗಾಂಧಿ ಅವರಿಗೆ ಈಗಾಗಲೇ ನೋಟಿಸ್ (Notice) ಕೊಟ್ಟಿದ್ದಾರೆ. ಆದರೆ ಇನ್ನೆರಡು ದಿನ ಕಾಲಾವಕಾಶ ನೀಡುವಂತೆ ಸೋನಿಯಾ ಗಾಂಧಿ ಅವರು ಇಡಿಗೆ ಪತ್ರ (Letter) ಬರೆದಿದ್ದಾರೆ ಎನ್ನಲಾಗಿದೆ.

ಆಪರೇಷನ್ ಬಳಿಕ ದಿಗಂತ್ ಹೇಗಿದ್ದಾರೆ?

ನಿನ್ನೆ ಗೋವಾದಲ್ಲಿ (Goa) ಕುತ್ತಿಗೆಗೆ ಗಂಭೀರ ಗಾಯ ಮಾಡಿಕೊಂಡಿದ್ದ ಸ್ಯಾಂಡಲ್​ವುಡ್​ ನಟ ದಿಗಂತ್​​ (Diganth) ಆರೋಗ್ಯದ ಕುರಿತು ನಟ ದಿಗಂತ್ ಪತ್ನಿ ಐಂದ್ರಿತಾ ಮಾಧ್ಯಮಗಳ ಎದುರು ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಐಂದ್ರಿತಾ (Aindrita Ray), ‘ಈಗಾಗಲೇ ಸರ್ಜರಿ ಆಗಿದೆ. ಅಲ್ಲದೇ ದಿಗಂತ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಈಗಾಗಲೇ ಡಾಕ್ಟರ್​ಗೆ ದಿಗಂತ್ ನಾನು ಸಮ್ಮರ್ ಸಾಲ್ಟ್ ಗೆ ರೆಡಿ ಆಗಿದ್ದೀನಿ ಎಂದು ಹೇಳಿದ್ದಾರೆ. ಅವರು ನಿಧಾನವಾಗಿ ಚೇತರಿಸಿಕೋ್ಳುತ್ತಿದ್ದು, ವೈದ್ಯರು ಇಂದು ಅಥವಾ ನಾಳೆ ಅವರನ್ನು ಡಿಸ್ಚಾರ್ಜ್​ ಮಾಡುವುದಾಗಿ ಹೇಳಿದ್ದಾರೆ‘ ಎಂದು ಮಾಹಿತಿ ನೀಡಿದರು.  ಗೋವಾದಿಂದ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಗೆ ಏರ್​ ಲಿಫ್ಟ್​ ಮಾಡಿದ ಬಳಿಕ ನಿನ್ನೆ ದಿಗಂತ್​ಗೆ 3 ಗಂಟೆಗಳ ಕಾಲ ಆಪರೇಷನ್ ಮಾಡಲಾಗಿದೆ. ಸರ್ಜರಿ ಬಳಿಕ ದಿಗಂತ್​​ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: Diganth Health Update: ಆಪರೇಷನ್ ಬಳಿಕ ದಿಗಂತ್ ಹೇಗಿದ್ದಾರೆ? ಗಂಡನ ಆರೋಗ್ಯದ ಕುರಿತು ಮಾಹಿತಿ ನೀಡಿದ ಐಂದ್ರಿತಾ

ರಕ್ಷಿತ್​ಗೆ ಕಾಲ್ ಮಾಡಿದ ರಜನಿಕಾಂತ್, 777 Charlie ಬಗ್ಗೆ ಏನಂದ್ರು ಸೂಪರ್ ಸ್ಟಾರ್​?

ರಕ್ಷಿತ್ ಶೆಟ್ಟಿ (Rakshit Shetty) ಅಭಿನಯದ ಚಲನಚಿತ್ರ 777 ಚಾರ್ಲಿ (777 Charlie) ಈಗಾಗಲೇ ಬಿಡುಗಡೆಯಾಗಿ ಎಲ್ಲಡೆ ಭರ್ಜರಿ ಪ್ರದರ್ಶನ ತೋರುತ್ತಿದೆ. ಅಲ್ಲದೇ ಅನೇಖ ಗಣ್ಯರು ಈ ಸಿನಿಮಾವನ್ನು ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಕರ್ನಾಟಕ ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai), ಬಾಲಿವುಡ್​ನ ಜಾನ್​ ಅಬ್ರಹಾಂ ಸೇರಿದಂತೆ ಅನೇಕರು ಚಿತ್ರ ವೀಕ್ಷಿಸಿ ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಆದರೆ ಇದೀಗ ತಮಿಳಿನ ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಸಹ 777 ಚಾರ್ಲಿ ಚಿತ್ರವನ್ನು ನೋಡಿ ಮೆಚ್ಚಿಕೊಂಡು ನಟ ರಕ್ಷಿತ್ ಶೆಟ್ಟಿ ಅವರಿಗೆ ಸ್ವತಃ ರಜನಿಕಾಂತ್​ ಅವರೇ ಕಾಲ್ ಮಾಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರಂತೆ. ಹಾಗಿದ್ರೆ ರಜನಿಕಾಂತ್ ಏನಂದ್ರು ನೊಡೋನ ಬನ್ನಿ.
Published by:Annappa Achari
First published: