• Home
 • »
 • News
 • »
 • state
 • »
 • Evening Digest: 4 ಜಿಲ್ಲೆಗಳ ಅನ್​ಲಾಕ್​ನಿಂದ ಕಾರ್ಮಿಕರಿಗೆ ಶಿವಣ್ಣನ ಕೊಡುಗೆವರೆಗೆ ಓದಲೇಬೇಕಾದ ಈ ದಿನದ ಸುದ್ದಿಗಳು

Evening Digest: 4 ಜಿಲ್ಲೆಗಳ ಅನ್​ಲಾಕ್​ನಿಂದ ಕಾರ್ಮಿಕರಿಗೆ ಶಿವಣ್ಣನ ಕೊಡುಗೆವರೆಗೆ ಓದಲೇಬೇಕಾದ ಈ ದಿನದ ಸುದ್ದಿಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ ಮತ್ತು ವಿದೇಶದಲ್ಲಿ ಈ ದಿನ ನಡೆದ ಬೆಳವಣಿಗೆ ಕುರಿತು ಓದಲೇಬೇಕಾದ ಸುದ್ದಿಗಳು

 • Share this:

  ಮತ್ತೆ ನಾಲ್ಕು ಜಿಲ್ಲೆಗಳು ಅನ್​ಲಾಕ್​
  ಕೋವಿಡ್​ ಸೋಂಕು ಇಳಿಕೆ ಕಾಣುತ್ತಿರುವ ಹಿನ್ನಲೆ ಮತ್ತೆ ನಾಲ್ಕು ಜಿಲ್ಲೆಗಳಿಗೆ ಲಾಕ್​ಡೌನ್​ನಿಂದ ಅಲ್ಪ ಪ್ರಮಾಣದ ರಿಲೀಫ್​ ನೀಡಿ ಸರ್ಕಾರ ಆದೇಶಿಸಿದೆ. ಪಾಸಿಟಿವಿಟಿ ರೇಟ್​​ ಶೇ 5ಕ್ಕಿಂತ ಕಡಿಮೆ ಇರುವ ದಕ್ಷಿಣ ಕನ್ನಡ, ಹಾಸನ, ದಾವಣಗೆರೆ ಮತ್ತು ಚಾಮರಾಜನಗರದಲ್ಲಿ ಲಾಕ್​ಡೌನ್​ ನಿಯಮ ಸಡಿಲಿಕೆ ಮಾಡಲಾಗಿದೆ. ಬೆಳಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆವರೆಗೂ ಅಗತ್ಯ ವಸ್ತುಗಳ ವಹಿವಾಟಿಗೆ ಅವಕಾಶ ನೀಡಲಾಗಿದೆ.


  ಸರ್ಕಾರಕ್ಕೆ ವರದಿ ಸಲ್ಲಿಸಿದ ಡಾ. ದೇವಿ ಶೆಟ್ಟಿ ಸಮಿತಿ
  ಕೋವಿಡ್ ಮೂರನೇ ಅಲೆ ಮಕ್ಕಳನ್ನು ಹೆಚ್ಚಾಗಿ ಬಾಧಿಸುವ ಸಾಧ್ಯತೆ ಇದೆ ಎಂಬ ಕುರಿತು ಈ ಹಿಂದೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನಲೆ ಯಾವ ರೀತಿ ಮುಂಜಾಗ್ರತೆವಹಿಸಬೇಕು. ಎಂಬ ಕುರಿತು ಹೃದಯತಜ್ಞ ಡಾ. ದೇವಿ ಶೆಟ್ಟಿ ಅವರ ನೇತೃತ್ವದ 16 ಸದಸ್ಯರ ಸಮಿತಿ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದೆ. ಕೋವಿಡ್​ ಮೂರನೇ ಅಲೆಯಲ್ಲಿ ರಾಜ್ಯದಲ್ಲಿ ಸುಮಾರು 3.4 ಲಕ್ಷ ಮಕ್ಕಳು ಕೋವಿಡ್​ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. 0-18 ವರ್ಷದ ಒಳಗಿನ 32.21 ಲಕ್ಷ ಜನರು ಮೂರನೇ ಅಲೆಯಲ್ಲಿ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ,


  ದೇವೇಗೌಡರಿಗೆ 2 ಕೋಟಿ ದಂಡ
  ನೈಸ್ ಕಂಪನಿ (NICE) ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಮಾಜಿ ಪ್ರಧಾನಮಂತ್ರಿ ಹೆಚ್​.ಡಿ. ದೇವೇಗೌಡರು (HD Deve Gowda) ತಮ್ಮ ಆರೋಪವನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ. ಈ ಕಾರಣಕ್ಕೆ ನೈಸ್ ಕಂಪನಿಗೆ ದೇವೇಗೌಡರು 2 ಕೋಟಿ ರೂ. ಪರಿಹಾರ ನೀಡಬೇಕೆಂದು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್​ ಆದೇಶ ನೀಡಿದೆ.


  ಹೈ ಕಮಾಂಡ್​ ಮೊರೆ ಹೋದ ರಮೇಶ್​ ಜಾರಕಿಹೊಳಿ
  ಮತ್ತೆ ಸಚಿವ ಸ್ಥಾನ ಪಡೆಯುವ ಮಹತ್ವಾಕಾಂಕ್ಷೆಯೊಂದಿಗೆ ಮುಂಬೈಗೆ ತೆರಳಿದ್ದ ರಮೇಶ್​ ಜಾರಕಿಹೊಳಿ ಅಲ್ಲಿನ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್​ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಸಿಡಿ ನ ಕೇಸ್ ಮುಗಿಸಿ ಮತ್ತೆ ಸಚಿವ ಸ್ಥಾನ ಕೊಡಿಸುವಂತೆ ಮನವಿ ಮಾಡಿದ್ದಾರೆ. ಆದರೆ, ರಮೇಶ್ ಜಾರಕಿಹೊಳಿ ಮನವಿಗೆ ಫಡ್ನವಿಸ್ ನಿರೀಕ್ಷಿತ ಉತ್ತರ ನೀಡಿಲ್ಲ. ಬದಲಾಗಿ "ನಾನು ಕರ್ನಾಟಕ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಹೈಕಮಾಂಡ್ ಗೆ ಸಂದೇಶವನ್ನು ಮಾತ್ರ ತಲುಪಿಸಲು ಪ್ರಯತ್ನಿಸುತ್ತೇನೆ. ಉಳಿದದ್ದು ಹೈಕಮಾಂಡ್ ಗೆ ಬಿಟ್ಟ ವಿಚಾರ" ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ ಎನ್ನಲಾಗಿದೆ


  ಎರಡು ತಿಂಗಳಲ್ಲಿ ಕೊರೊನಾ ವೈರಸ್​ ಬದಲಾವಣೆ
  ಮುಂದಿನ ಎರಡು ತಿಂಗಳಲ್ಲಿ ಕೊರೊನಾವೈರಸ್ ಡೆಲ್ಟಾ ರೂಪಾಂತರವು ಬದಲಾಗುವ ಸಾಧ್ಯತೆಯಿದೆ ಎಂದು ಐಸಿಎಂಆರ್ ಸಿರೋಸರ್ವೇಯಲ್ಲಿ ತಿಳಿಸಲಾಗಿದೆ. ಕೋವಿಡ್-19 ಹರಡುವಿಕೆಯನ್ನು ನಿರ್ಣಯಿಸಲು ರಾಷ್ಟ್ರೀಯ ಸಿರೋ ಸರ್ವೇಗಳನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಡೆಸುತ್ತದೆ ಮತ್ತು ಎಲ್ಲಾ ಭೌಗೋಳಿಕ ಮಾಹಿತಿಯನ್ನು ಪಡೆಯಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಸಹ ಅವುಗಳನ್ನು ನಡೆಸಬೇಕು ಎಂದು ಸೂಚಿಸಲಾಗಿದೆ


  ಅತಿ ಹೆಚ್ಚು ಮಕ್ಕಳು ಮಾಡಿಕೊಂಡರೆ ಬಹುಮಾನ
  ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾ ದೇಶದಲ್ಲಿ ತಮ್ಮ ದೇಶದ ಜನಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಲು ಅನುಮತಿ ನೀಡುವ ಮೂಲಕ ಇತ್ತೀಚೆಗೆ ಸುದ್ದಿಯಾಗಿತ್ತು. ಇದೀಗ ಭಾರತದ ಮಿಜೋರಾಂ ರಾಜ್ಯದ ಸಚಿವರೊಬ್ಬರು ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾರು ಅತಿಹೆಚ್ಚು ಮಕ್ಕಳನ್ನು ಹೊಂದಿದ್ದಾರೋ ಅವರಿಗೆ ಬರೋಬ್ಬರಿ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಮಿಜೋರಾಂ ರಾಜ್ಯದ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ಘೋಷಣೆ ಮಾಡಿದ್ದಾರೆ.


  ಕಾರ್ಮಿಕರಿಗಾಗಿ 10 ಲಕ್ಷ ನೀಡಿದ ಶಿವಣ್ಣ
  ಗೀತಾ ಶಿವರಾಜ್ ಕುಮಾರ್ ಅವರು ಮನೆಯಲ್ಲಿ ಸರಳವಾಗಿ ಕೇಕ್​ ಕತ್ತರಿಸುವ ಮೂಲಕ ಹುಟ್ಟುಹಬ್ಬದ ಆಚರಿಸಿಕೊಂಡಿದ್ದಾರೆ. ಪತ್ನಿಯ ಹುಟ್ಟುಹಬ್ಬದ ಅಂಗವಾಗಿ ಸಿನಿ ಕಾರ್ಮಿಕರಿಗೆ 10 ಲಕ್ಷ ನೀಡುವ ಮೂಲಕ ನೆರವಾಗಿದ್ದಾರೆ ಶಿವರಾಜ್​ಕುಮಾರ್

  Published by:Seema R
  First published: