Evening Digest: ಸರ್ವಪಕ್ಷ ಸಭೆ ಕರೆದ ಮುಖ್ಯಮಂತ್ರಿ; ಫುಟ್ಬಾಲ್​ ದಿಗ್ಗಜ ಇನ್ನಿಲ್ಲ; ಈ ದಿನದ ಓದಲೇಬೇಕಾದ ಸುದ್ದಿಗಳಿವು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

 • Share this:
  ಸರ್ವಪಕ್ಷ ಸಭೆ ಕರೆದ ಮುಖ್ಯಮಂತ್ರಿ

  ಅಂತರರಾಜ್ಯ ಜಲವಿವಾದಗಳಿಗೆ ಸಂಬಂಧಿಸಿದಂತೆ ಫೆಬ್ರವರಿ ಮೊದಲ ವಾರದಲ್ಲಿ ಸರ್ವಪಕ್ಷಗಳ ಸಭೆ ಕರೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದಾರೆ. ಈ ಸಂಬಂಧ ಇಂದು ತಜ್ಞರ ಜೊತೆ ಸಭೆನಡೆಸಿದ್ದು, ಜನವರಿ ಕೊನೆಯ ವಾರದಲ್ಲಿ ಮತ್ತೊಂದು ಸುತ್ತಿನ ಸಭೆಯನ್ನು ನಡೆಸಲಿದ್ದಾರೆ. ಈ ಸಂಬಂಧ ತಿಳಿಸಿದ ಅವರು, ಕೆಲವು ಪ್ರಕರಣಗಳು ಪ್ರಮುಖ ಘಟ್ಟದಲ್ಲಿರುವುದರಿಂದ ಮತ್ತೊಮ್ಮೆ ಕಾನೂನು ಪರಿಣಿತರು ಹಾಗೂ ವಿರೋಧ ಪಕ್ಷಗಳ ನಾಯಕರೊಂದಿಗೆ ಸಮಾಲೋಚನೆ ಮಾಡಿ ನಮ್ಮ ನಿಲುವಿನ ಬಗ್ಗೆ ಸರ್ವಪಕ್ಷಗಳ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

  ಮಾಜಿ ಪ್ರಧಾನಿಗೆ ಕೋವಿಡ್​
  ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಕೊರೊನಾ ಸೋಂಕು ತಗುಲಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ ರಾತ್ರಿ ದೇವೇಗೌಡರು ಆಸ್ಪತ್ರೆಗೆ ತೆರಳಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ ಆರೋಗ್ಯ ವಿಚಾರಿಸಿದ್ದು, ಶೀಘ್ರವಾಗಿ ಗುಣಮುಖರಾಗುವಂತೆ ಹಾರೈಸಿದರು

  ರಾಜಧಾನಿಯಲ್ಲಿ ಹೆಚ್ಚಾಗುತ್ತಿದೆ ಸೋಂಕು
  ರಾಜಧಾನಿ ಬೆಂಗಳೂರು ಈಗ ಕೊರೋನಾ ಹಾಟ್​ ಸ್ಪಾಟ್​ ಆಗಿದೆ. ಬೆಂಗಳೂರಲ್ಲಿ ನಿತ್ಯ ಅಧಿಕ ಕೊರೋನಾ ಪಾಸಿಟಿವ್​ ಕೇಸ್​ ದಾಖಲಾಗ್ತಿದ್ದು, ಜನರಲ್ಲಿ ಆತಂಕ ಹೆಚ್ಚಿಸಿ. ವೀಕೆಂಡ್​ ಲಾಕ್​ಡೌನ್​ ರದ್ದಾಯ್ತು ಅಂತ ಬೇಕಾಬಿಟ್ಟಿ ತಿರುಗಾಡಬೇಡಿ. ಬೆಂಗಳೂರಿನ ಹಲವು ನಗರಗಳು ಡೇಂಜರ್ ಹಂತದಲ್ಲಿದೆ. ಗಲ್ಲಿ, ಗಲ್ಲಿಗಳಲ್ಲೂ ಸೋಂಕ ಹರಡುತ್ತಿದ್ದು, ಅನೇಕ ವಾರ್ಡ್ ​ಗಳು ಸೋಂಕಿತರಿಂದ ತುಂಬಿ ಹೋಗಿವೆ. ಬೆಂಗಳೂರಿನಲ್ಲಿರೋ 198 ವಾರ್ಡ್​ಗಳ ಪೈಕಿ 101 ವಾರ್ಡ್​ಗಳು ಡೇಂಜರ್ ಹಂತದಲ್ಲಿವೆ. 33 ವಾರ್ಡ್​ಗಳಲ್ಲಿ ಕೊರೋನಾ ಸೋಂಕಿರ ಸಂಖ್ಯೆ ಸಾವಿರದ ಗಡಿ ದಾಟಿದೆ. ನಿತ್ಯ ಈ 33 ವಾರ್ಡ್​ಗಳಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಲೆ ಇದೆ.

  ದರೋಡೆ ಮಾಡಿದ ವಿದ್ಯಾರ್ಥಿ ಜೈಲು ಪಾಲು
  ಆನ್ ಲೈನ್ ಟ್ರೇಡಿಂಗ್ ನಲ್ಲಿ ಹಣ ಮಾಡಲು ಲಕ್ಷ ಲಕ್ಷ ಹಣ ಕಳೆದುಕೊಂಡು, ಬ್ಯಾಂಕ್ ದರೋಡೆ ಮಾಡಿದ್ದ ಯುವಕನನ್ನು ಪೊಲೀಸರು (Bengaluru Police) ಬಂಧಿಸಿದ್ದಾರೆ. ಜನವರಿ 14ರಂದು ಬೆಂಗಳೂರಿನ ಮಡಿವಾಳ ಠಾಣಾ ವ್ಯಾಪ್ತಿಯಲ್ಲಿರುವ SBI ಶಾಖೆಗೆ ನುಗ್ಗಿದ ಯುವಕ ಚಾಕು ತೋರಿಸಿ ಹಣ ಮತ್ತು ಚಿನ್ನಾಭರಣದ ಜೊತೆ ಪರಾರಿಯಾಗಿದ್ದನು. ಸದ್ಯ ದರೋಡೆಕೋರ ಯುವಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಮಾಕ್ಷಿಪಾಳ್ಯ ಮೂಲದ 28 ವರ್ಷದ ಧೀರಜ್ ಬಂಧಿತ ಆರೋಪಿ. ಈತ ಸುಮಾರು 30 ಲಕ್ಷಕ್ಕೂ ಅಧಿಕ ಹಣ ಸಾಲ (Loan) ಮಾಡಿಕೊಂಡಿರುವ ವಿಷಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

  ಫುಟ್ಬಾಲ್​ ದಿಗ್ಗಜ ಇನ್ನಿಲ್ಲ
  ಮಾಜಿ ಫುಟ್ಬಾಲ್​ ಆಟಗಾರ ಸುಭಾಷ್​ ಭೌಮಿಕ್​ ( ಇಹಲೋಕ ತ್ಯಜಿಸಿದ್ದಾರೆ. ಶನಿವಾರದಂದು ಕೋಲ್ಕತ್ತಾದಲ್ಲಿ ನಿಧನರಾಗಿದ್ದಾರೆ. 71 ವರ್ಷದ ಪ್ರಾಯದ ಅವರು 1970ರಲ್ಲಿ ಏಷ್ಯನ್​ ಗೇಮ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಆಟಗಾರ ಗುರುತಿಸಿಕೊಂಡಿರುವುದು ಮಾತ್ರವಲ್ಲದೆ ಉತ್ತಮ ತರಬೇತುದಾರನಾಗಿಯೂ ಗುರುತಿಸಿಕೊಂಡಿದ್ದರು. ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ ಸುಭಾಷ್​ ಸಾಕಷ್ಟು ಯಶಸ್ಸು ಗಳಿಸಿದ್ದಾರೆ.

  ಕರ್ಹಾಲ್​ ನಿಂದ ಅಖಿಲೇಶ್​ ಸ್ಪರ್ಧೆ
  ಮುಂದಿನ ತಿಂಗಳು ಎದುರಾಗಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್​ ಯಾದವ್ ​ ಕರ್ಹಾಲ್​ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಘೋಷಣೆ ಹೊರಡಿಸಿರುವ ಅವರು ತಮ್ಮ ಕುಟುಂಬದ ತವರು ಕ್ಷೇತ್ರದಲ್ಲಿರುವ ಮೈನ್‌ಪುರಿ ಜಿಲ್ಲೆಯ ಕರ್ಹಾಲ್ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

  ಮುಂಬೈನಲ್ಲಿ ಭಾರೀ ಬೆಂಕಿ ಅವಘಡ
  ವಾಣಿಜ್ಯ ನಗರಿ ಮುಂಬೈನಲ್ಲಿ ಇಂದು ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. 20 ಅಂತಸ್ತಿನ ಕಮಲಾ ಕಟ್ಟಡದ 18ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 7 ಮಂದಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಶನಿವಾರ ಬೆಳಗ್ಗೆ 7.30ರಲ್ಲಿ ಭಾಟಿಯಾ ಆಸ್ಪತ್ರೆಯ ಪಕ್ಕದಲ್ಲಿರುವ ಕಮಲಾ ಕಟ್ಟಡದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದರೆ, ಹಲವರು ಗಾಯಗೊಂಡಿದ್ದಾರೆ.
  Published by:Seema R
  First published: