Evening Digest: ಮಾಂಸ ತಿಂದು ಅಂಬಾರಿಗೆ ಪೂಜೆ ಮಾಡಿದ್ರಾ ಸಿದ್ದು? ಆರ್ಯವರ್ಧನ್ ಪಾತ್ರ ಮಾಡ್ತಾರಾ ಸ್ಟಾರ್ ಡೈರೆಕ್ಟರ್? ಇಂದಿನ ಟಾಪ್ ನ್ಯೂಸ್ ಇಲ್ಲಿವೆ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಅನು ಜೊತೆ ಜೊತೆಯಾಗಲಿದ್ದಾರೆ ಸ್ಟಾರ್ ಡೈರೆಕ್ಟರ್

ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ (Jote Joteyali) ಧಾರಾವಾಹಿಯಲ್ಲಿ (Serial) ಅಲ್ಲೋಲ ಕಲ್ಲೋಲ ಆಗಿದೆ. ರೀಲ್ ಕಥೆಗೂ (Reel Story) ಟ್ವಿಸ್ಟ್ (Twist) ಮೇಲೆ ಟ್ವಿಸ್ಟ್ ಸಿಗುತ್ತಿದ್ದು, ರಿಯಲ್ ಕಥೆಗೂ (Real Story) ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಧಾರಾವಾಹಿಯಲ್ಲಿ ಇಡೀ ಕಥೆ ಸುತ್ತುವುದೇ ಆರ್ಯವರ್ಧನ್ (Aryavardhan) ಎನ್ನುವ ಕ್ಯಾರೆಕ್ಟರ್ (Character) ಮೇಲೆ. ಈ ಪಾತ್ರ ನಿರ್ವಹಿಸುತ್ತಾ ಇರುವವರು ಖ್ಯಾತ ನಟ, ಸಾಹಸಸಿಂಹ ವಿಷ್ಣು ವರ್ಧನ್ (Vishnuvardhan) ಅವರ ಅಳಿಯ ಅನಿರುದ್ಧ್ ಜತ್ಕರ್ (Aniruddh Jatkar). ಆದ್ರೆ ಇದೀಗ ಅನಿರುದ್ಧ್ ಅವರಿಗೆ ಜೊತೆ ಜೊತೆಯಲಿ ಧಾರಾವಾಹಿಯಿಂದ ಗೇಟ್ ಪಾಸ್ (Gate Pass) ನೀಡಲಾಗಿದೆ. ಆದ್ರೆ ಇದೀಗ ಹುಟ್ಟಿರೋ ಪ್ರಶ್ನೆ ಯಾರು ಅನಿರುದ್ಧ್​ ಪಾತ್ರ ನಿರ್ವಹಿಸುತ್ತಾರೆ ಅನ್ನೋದು. ಅನಿರುದ್ಧ್​ ಬದಲು ಆರ್ಯವರ್ಧನ್​  ಪಾತ್ರಕ್ಕೆ ಅನೂಪ್  ಭಂಡಾರಿ ಅವರು ಆಯ್ಕೆಯಾಗಿದ್ದಾರೆ ಅನ್ನೋ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದ್ರೆ ಈ ಬಗ್ಗೆ  ಧಾರಾವಾಹಿ ತಂಡವಾಗಲಿ ಅಥವಾ ಅನೂಪ್​ ಭಂಡಾರಿಯಾಗಲಿ ಅಧಿಕೃತವಾಗಿ ಎಲ್ಲೂ ಹೇಳಿಲ್ಲ.

ಮಾಂಸ ತಿಂದು ಅಂಬಾರಿಗೆ ಪೂಜೆ ಮಾಡಿದ್ರಾ ಸಿದ್ದರಾಮಯ್ಯ!?

ಮೈಸೂರು: ಸಿದ್ದರಾಮಯ್ಯನವರ (Siddaramaiah) ಮೇಲೆ ಮಡಿಕೇರಿಯಲ್ಲಿ (Madikeri) ಮೊಟ್ಟೆ (Egg) ಎಸೆದಿದ್ದ ಪ್ರಕರಣ ದಿನಕ್ಕೊಂದು ತಿರುವು (Twist) ಪಡೆಯುತ್ತಿದೆ. ಇದರ ಮಧ್ಯೆಯೇ ಸಿದ್ದರಾಮಯ್ಯ ಮಾಂಸಾಹಾರ (Non Veg) ಸೇವಿಸಿ ದೇವಸ್ಥಾನವೊಂದಕ್ಕೆ (Temple) ಹೋಗಿದ್ದರು ಎಂಬ ಆರೋಪ ಕೇಳಿ ಬಂದಿದ್ದು. ಇದು ರಾಜ್ಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಈ ಪ್ರಕರಣ ಬಿಸಿಯಾಗಿರುವಾಗಲೇ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. 2017ರಲ್ಲಿ ಸಿದ್ದರಾಮಯ್ಯ ಸಿಎಂ (CM) ಆಗಿದ್ದಾಗ ಮೈಸೂರು ದಸರಾದಲ್ಲಿ (Mysore Dasara) ಅಂಬಾರಿ ಪೂಜೆ (Ambari Pooje) ನೆರವೇರಿಸಿದ್ದರು. ಈ ವೇಳೆ ಅವರು ಮಾಂಸಾಹಾರ ಸೇವಿಸಿ ಅಂಬಾರಿಗೆ ಪೂಜೆ ಮಾಡಿದ್ದರು ಅನ್ನೋ ಆರೋಪ ಕೇಳಿ ಬಂದಿದೆ. ಮೈಸೂರು ಕೊಡಗು ಸಂಸದ (Mysore Kodagu MP) ಪ್ರತಾಪ್ ಸಿಂಹ (Pratap Simha) ಹಾಗೂ ಮೈಸೂರು ಮಾಜಿ ಮೇಯರ್ (Mysore Ex-Mayor) ರವಿಕುಮಾರ್ (Ravikumar) ಈ ರೀತಿ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Siddaramaiah: 2017ರಲ್ಲಿ ಮಾಂಸ ತಿಂದು ಮೈಸೂರು ದಸರಾ ಅಂಬಾರಿಗೆ ಪೂಜೆ ಮಾಡಿದ್ರಾ ಸಿದ್ದರಾಮಯ್ಯ!?

Praveen Nettar: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು‌ ಹಂತಕರನ್ನು ಬಂಧಿಸಿದ ತಂಡಕ್ಕೆ ಬಹುಮಾನ

ಬಿಜೆಪಿ ಮುಖಂಡ, ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen Nettar) ಹತ್ಯೆ ಪ್ರಕರಣ (Murder case) ಕೇವಲ ಕರ್ನಾಟಕ (Karnataka) ಮಾತ್ರವಲ್ಲದೇ ದೇಶದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ (BJP) ಯುವಮೋರ್ಚಾದ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳನ್ನು (Accused) ಪತ್ತೆಹಚ್ಚುವಲ್ಲಿ ಪೊಲೀಸ್ ಇಲಾಖೆ ಭಾರೀ ಪರಿಶ್ರಮಪಟ್ಟಿದೆ. ಹತ್ಯೆ ನಡೆದು 17 ದಿನಗಳಲ್ಲೇ ಪ್ರಕರಣಕ್ಕೆ ಸಂಬಂಧಿಸಿದ ಮೂರು ಪ್ರಮುಖ ಆರೋಪಿಗಳು ಸೇರಿ ಒಟ್ಟು 10 ಆರೋಪಿಗಳನ್ನು ಪೊಲೀಸ್ ತಂಡ ಬಂಧಿಸಿ ಕಾನೂನಿನ ಮುಂದೆ ತಂದು ನಿಲ್ಲಿಸಿದೆ. ಈಗ ಹಂತಕರನ್ನು ಬಂಧಿಸಿದ ತಂಡಕ್ಕೆ ಬಹುಮಾನ (Award) ನೀಡಲಾಗಿದೆ.

ಭಾರತದ ಮಹಾನಾಯಕನ ಹತ್ಯೆಗೆ ಸ್ಕೆಚ್

ಮಾಸ್ಕೋ, ರಷ್ಯಾ: ಐಸಿಸ್ ಉಗ್ರರು (ISIS Terrorist) ಭಾರತವನ್ನು ಟಾರ್ಗೆಟ್ (Target India) ಮಾಡುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ. ಭಾರತದ ಪ್ರಮುಖ ನಾಯಕರೊಬ್ಬರ (Main Leader) ಹತ್ಯೆಗೆ ಐಸಿಸ್ ಉಗ್ರರು ಸಂಚು ರೂಪಿಸಿದ್ದರು ಎಂಬ ಸ್ಫೋಟಕ ವಿಚಾರ ಇದೀಗ ಬೆಳಕಿಗೆ ಬಂದಿದೆ. ರಷ್ಯಾದಲ್ಲಿ (Russia) ಐಸಿಸ್ ಉಗ್ರ ಸಂಘಟನೆಗೆ ಸೇರಿದ ಭಯೋತ್ಪಾದಕನೊಬ್ಬನನ್ನು ಬಂಧಿಸಲಾಗಿದೆ. ಈತ ಆತ್ಮಾಹುತಿ ದಾಳಿಕೋರ (Suicide Bomber) ಎನ್ನಲಾಗಿದ್ದು, ಈತನನ್ನು ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವೀಸ್ ಘಟಕವು (Federal Security Service unit) ಬಂಧಿಸಿದ್ದು, ವಿಚಾರಣೆ ವೇಳೆ ಈತ ಸ್ಪೋಟಕ ವಿಚಾರ ಬಾಯ್ಬಿಟ್ಟಿದ್ದಾನೆ. ಭಾರತದ ಪ್ರಮುಖ ರಾಜಕೀಯ ನಾಯಕರೊಬ್ಬರ ಹತ್ಯೆಗೆ (Murder) ಐಸಿಸ್ ಉಗ್ರರು ಸಂಚು ರೂಪಿಸಿದ್ದಾರೆ ಅಂತ ಈತ ಹೇಳಿದ್ದಾನೆ.

ಇದನ್ನೂ ಓದಿ: ISIS Terrorist: ಭಾರತದ ಮಹಾನಾಯಕನ ಹತ್ಯೆಗೆ ಸ್ಕೆಚ್, ರಷ್ಯಾದಲ್ಲಿ ಐಸಿಸ್ ಬಾಂಬರ್ ಅರೆಸ್ಟ್!

ಕೊಹ್ಲಿ ಬಗ್ಗೆ ಭವಿಷ್ಯ ನುಡಿದ ಪಾಕ್​ ಮಾಜಿ ಕ್ಯಾಪ್ಟನ್​

ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರು ಟ್ವಿಟರ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಭಾರದತ ಸ್ಟಾರ್ ವಿರಾಟ್ ಕೊಹ್ಲಿಯ ಭವಿಷ್ಯದ ಬಗ್ಗೆ ಕೇಳಿದಾಗ ದೊಡ್ಡ ಟೀಕೆ ಮಾಡಿದ್ದು, 'ಅದು ವಿರಾಟ್ ಕೊಹ್ಲಿ ಕೈಯಲ್ಲಿದೆ' ಎಂದು ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಉತ್ತರಿಸಿದರು. ಕೊಹ್ಲಿ ಶತಕ ಬಾರಿಸಿ 1000 ದಿನಗಳಾಗಿವೆ.. ಅಫ್ರಿದಿ ಅವರ ಭವಿಷ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಅನುಯಾಯಿಯೊಬ್ಬರು ಕೇಳಿದರು. ಬದಲಾಗಿ 'ಕೊಹ್ಲಿ ಭವಿಷ್ಯ ಅವರ ಕೈಯಲ್ಲಿದೆ' ಎಂದು ಉತ್ತರಿಸಿದರು. ಇದಲ್ಲದೆ, ಕಠಿಣ ಸಂದರ್ಭಗಳಲ್ಲಿ ಅತ್ಯುತ್ತಮ ಆಟಗಾರರು ಹೊರಬರುತ್ತಾರೆ ಎಂದು ಶಾಹಿದ್​ ಅಫ್ರಿದಿ ಹೇಳಿದರು.
Published by:Annappa Achari
First published: