ಸುಧಾ ಮೂರ್ತಿ ಪಿಎಂ ಕೇರ್ಸ್ ಫಂಡ್ಗೆ ನೇಮಕ
ದೇಶದ ತುರ್ತು ಪರಿಸ್ಥಿತಿಯಲ್ಲಿ ಸಹಾಯಕ್ಕೆಂದು ಪಿಎಂ ಕೇರ್ಸ್ ಫಂಡ್ ಸೃಷ್ಟಿಸಲಾಗಿದೆ. ಇದೀಗ ರತನ್ ಟಾಟಾ ಅವರ ಜೊತೆ ಸುಧಾ ಮೂರ್ತಿ ಅವರನ್ನು ಈ ಟ್ರಸ್ಟ್ಗೆ ನೇಮಿಸಲಾಗಿದೆ.ಪಿಎಂ ಕೇರ್ಸ್ ಫಂಡ್ ಟ್ರಸ್ಟಿಯಾಗಿ ರತನ್ ಟಾಟಾ, ಸಲಹಾ ಮಂಡಳಿಗೆ ಸುಧಾ ಮೂರ್ತಿ ನೇಮಕಗೊಂಡಿದ್ದಾರೆ. ಪ್ರಧಾನ ಮಂತ್ರಿಗಳ ಕಾರ್ಯಾಲಯ ಈ ಟ್ರಸ್ಟಿಗಳನ್ನು ಪಿಎಂ ಕೇರ್ಸ್ ಫಂಡ್ನ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸಲು ಸ್ವಾಗತಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಿಎಂ ಕೇರ್ಸ್ ಫಂಡ್ ಇತರ ಟ್ರಸ್ಟಿಗಳಾಗಿದ್ದಾರೆ. ಪ್ರಧಾನಮಂತ್ರಿ ಕೇರ್ಸ್ ಫಂಡ್ ಟ್ರಸ್ಟ್ಗೆ ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಕೆ ಟಿ ಥಾಮಸ್, ಮಾಜಿ ಡೆಪ್ಯೂಟಿ ಸ್ಪೀಕರ್ ಕರಿಯಾ ಮುಂಡಾ ನಾಮನಿರ್ದೇಶನಗೊಂಡಿದ್ದಾರೆ.
ಇದನ್ನೂ ಓದಿ: Sudha Murthy: ಕನ್ನಡಿಗರಿಗೆ ಶುಭಸುದ್ದಿ! ಸುಧಾ ಮೂರ್ತಿ ಪಿಎಂ ಕೇರ್ಸ್ ಫಂಡ್ಗೆ ನೇಮಕ
ಧಗಧಗನೇ ಉರಿಯುತ್ತಿದೆ ಇರಾನ್
ಹಿಜಾಬ್ ವಿರೋಧಿಸಿ ಇರಾನ್‌ನಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಮಹ್ಸಾ ಅಮಿನಿಯ ಹಿಜಾಬ್ ಧರಿಸದೆ ಬಂಧನಕ್ಕೊಳಗಾಗಿ ಸಾವನ್ನಪ್ಪಿದ ಬಳಿಕ ಇರಾನ್‌ನಲ್ಲಿ ಪ್ರತಿಭಟನೆಗಳು ಮತ್ತಷ್ಟು ಹಿಂಸಾಚಾರಕ್ಕೆ ತಿರುಗಿವೆ. ಟೆಹ್ರಾನ್ ನಗರದ ಉತ್ತರದ ಸಾರಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಮಹಿಳೆಯರು ತಮ್ಮ ಹಿಜಾಬ್‌ಗಳನ್ನು ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ದೇವೇಗೌಡರ ಆರೋಗ್ಯ ವಿಚಾರಿಸಿದ ಸಿಎಂ ಬೊಮ್ಮಾಯಿ
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಮನೆಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ರು. ಎಚ್ಡಿಡಿ ಆರೋಗ್ಯ ವಿಚಾರಿಸಲು ಸಿಎಂ ಬಸವರಾಜ ಬೊಮ್ಮಾಯಿ ಅವ್ರು ಸಂಪುಟ ಸಚಿವರ ಜೊತೆ ಪದ್ಮನಾಭನಗರದಲ್ಲಿರೋ ನಿವಾಸಕ್ಕೆ ಭೇಟಿ ನೀಡಿದ್ರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಂಪುಟದ ಸಹೋದ್ಯೋಗಿಗಳು ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ರು. ಸಿಎಂ ಬೊಮ್ಮಾಯಿ ಜೊತೆಗೆ ಸಚಿವರಾದ ಆರ್. ಅಶೋಕ್, ಸೋಮಣ್ಣ, ಭೈರತಿ ಬಸವರಾಜ, ಮುನಿರತ್ನ, ಮಾಧುಸ್ವಾಮಿ ಹಾಗೂ ಆನಂದ್ ಸಿಂಗ್ ಸೇರಿ ಹಲವು ಸಚಿವರು ಆಗಮಿಸಿದ್ದರು.
ಬೆಂಗಳೂರಿನ ಗೋಡೆ ಮೇಲೆ ಪೇಸಿಎಂ ಪೋಸ್ಟರ್
ಇಂದು ಬೆಂಗಳೂರಿನ ಗೋಡೆಗಳ ಮೇಲೆ ಪೇ ಸಿಎಂ ಎಂಬ ಪೋಸ್ಟರ್ (PAY CM Poster) ಅಂಟಿಸಲಾಗಿದೆ. ಪೇಸಿಎಂ ಪೋಸ್ಟರ್ನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರ ಫೋಟೋ ಸಹ ಹಾಕಲಾಗಿದೆ. ಹೈದರಾಬಾದ್ ಘಟನೆ ಬಳಿಕ ಮುಖ್ಯಮಂತ್ರಿಗಳಿಗೆ ಭಾರೀ ಮುಜುಗರ ಉಂಟಾಗಿದೆ. ನಗರದ ಮೇಕ್ರಿ ಸರ್ಕಲ್ ಮತ್ತು ಸಿಎಂ ಬೊಮ್ಮಾಯಿ ಅವರ ನಿವಾಸದ ವ್ಯಾಪ್ತಿಯಲ್ಲಿಯೇ ಈ ಪೋಸ್ಟರ್ಗಳನ್ನು ಅಂಟಿಸಲಾಗಿದೆ. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಕಾಂಗ್ರೆಸ್ ಖಾತೆ ಓಪನ್ ಆಗುತ್ತದೆ. ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿರುವ ಕಾಂಗ್ರೆಸ್ ಮತ್ತೊಂದು ಹಂತಕ್ಕೆ ಹೋರಾಟಕ್ಕೆ ಮುಂದಾಗಿದೆ. ಇದರ ಭಾಗವಾಗಿಯೇ ಕಾಂಗ್ರೆಸ್ ಈ ಪೋಸ್ಟರ್ಗಳನ್ನು ಅಂಟಿಸಿದೆ.
ಸೈಮಾ ಪಾರ್ಟಿಯಲ್ಲಿ ಮೈಮರೆತ ಸೆಲೆಬ್ರಿಟಿಗಳು! FIR ದಾಖಲು
ಸೈಮಾ ಅವಾರ್ಡ್ಸ್ ಫಂಕ್ಷನ್ ನಂತರ ಸೈಮಾ ಪಾರ್ಟಿಯೂ ಜೋರಾಗಿ ನಡೆಯುತ್ತದೆ. ಈ ಬಾರಿ ಬೆಳಗಿನ ಮೂರು ಗಂಟೆಯ ತನಕ ಪಾರ್ಟಿ ನಡೆದಿದ್ದು ಈಗ ಎಫ್ಐಆರ್ ದಾಖಲಿಸಲಾಗಿದೆ. ಅಂತೂ ಇಂತೂ ಅದ್ಧೂರಿ ಸೈಮಾ 2022 ಅವಾರ್ಡ್ ಕಾರ್ಯಕ್ರಮಕ್ಕೆ ಸಿಲಿಕಾನ್ ಸಿಟಿ ಸಾಕ್ಷಿಯಾಗಿದೆ. ಮೊದಲ ಬಾರಿಗೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ ಕಾರ್ಯಕ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. 10ನೇ ಅವಾರ್ಡ್ ಕಾರ್ಯಕ್ರಮ ಆಗಿದ್ದ ಕಾರಣ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಇದನ್ನು ಅರ್ಪಣೆ ಮಾಡಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ