Evening Digest: ಲವರ್ ಮೇಲೆ ಆ್ಯಸಿಡ್ ಎರಚಿದ ಯುವತಿ; ಶೀಘ್ರದಲ್ಲೇ ‘ಅಪ್ಪು’ ಬಯೋಪಿಕ್? ಇಂದಿನ ಪ್ರಮುಖ ಸುದ್ದಿಗಳು

Kannada news Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ಲವರ್​ ಮೇಲೆ ಆ್ಯಸಿಡ್​ ಎರಚಿದ ಯುವತಿ: ಸಾಮಾಜಿಕ ಜಾಲತಾಣದ ಮೂಲಕ ಎರಡು ಮಕ್ಕಳ ತಾಯಿಯನ್ನು ಪರಿಚಯ ಮಾಡಿಕೊಂಡ ಯುವಕ ಆಕೆಯನ್ನು ಮದುವೆಯಾಗಲು ಮುಂದಾಗಿದ್ದ. ಆದರೆ ಆನಂತರ ತನ್ನ ನಿರ್ಧಾರ ಬದಲಿಸಿ, ಬೇರೆ ಹುಡುಗಿಯನ್ನು ಮದುವೆಯಾಗಲು ಮುಂದಾದಾಗ ಆಕೆ ಆ ಯುವಕನ ಮೇಲೆ ಆ್ಯಸಿಡ್ ದಾಳಿ (Acid Attack) ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಎರಡು ಮಕ್ಕಳ ತಾಯಿ, ಕೇರಳದ 35 ವರ್ಷದ ಮಹಿಳೆಯೊಬ್ಬರು (35 Year Old  Married Women Throw Acid Her Lover) ತಮ್ಮ ಮದುವೆಯ ಪ್ರಸ್ತಾವವನ್ನು ತಿರಸ್ಕರಿಸಿದ ವ್ಯಕ್ತಿಯ ಮೇಲೆ ಆ್ಯಸಿಡ್ ಎರಚಿದ ಆಘಾತಕಾರಿ ಘಟನೆ  ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶೀಬಾ ಎಂಬ ಮಹಿಳೆ ನವೆಂಬರ್ 16ರಂದು ತಿರುವನಂತಪುರದ ಅರುಣ್ ಕುಮಾರ್ (28) ಅವರ ಮೇಲೆ ಆ್ಯಸಿಡ್ ಎರಚಿದ್ದು ರಾಜ್ಯ ರಾಜಧಾನಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ್ಯಸಿಡ್ ಎರಚಿದ ಪರಿಣಾಮ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ದೃಷ್ಟಿ ಕಳೆದುಕೊಳ್ಳುವ ಅಪಾಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈಶ್ವರಪ್ಪ ಪೆದ್ದ ಎಂದ ಸಿದ್ದರಾಮಯ್ಯ

ಕಲ್ಪತರು ನಾಡಲ್ಲಿ ಇಂದು ಕಾಂಗ್ರೆಸ್​ ನಾಯಕರು (Congress Leaders) ಅಬ್ಬರಿಸಿದರು. ವಿಪಕ್ಷನಾಯಕ ಸಿದ್ದರಾಮಯ್ಯ ಹಾಗೂ (Siddaramaiah) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​​ (DK Shivakumar) ಅಬ್ಬರದ ಭಾಷಣದಲ್ಲಿ ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರಗಳ (BJP Govts) ವಿರುದ್ಧ ಗುಡುಗಿದರು. ಬಿಜೆಪಿಯವರು ಶಂಕು, ಕೊಂಬು, ಕಹಳೆ ಊದಿಕೊಂಡು ಜನಸ್ವರಾಜ್ಯ ಯಾತ್ರೆ ಹೊರಟಿದ್ದಾರೆ. ಕೊಂಬು-ಕಹಳೆಗೆ ತನ್ನದೇ ಆದ ಒಂದು ಮಹತ್ವ‌ಇದೆ, ಅದನ್ನೂ ತೆಗೆದುಬಿಡ್ತಾರೆ ಇವರು. ಈಶ್ವರಪ್ಪ‌ ಪೆದ್ದ, ಓಟ್ ಕೊಟ್ರೆ ಗ್ರಾಂಟ್ ಕೊಡ್ತೀವಿ ಅಂದಿದ್ದಾನೆ. ಏನ್ ಅವರ ತಾತನ ದುಡ್ಡಾ ಅದು ಕೋಡೋಕೆ, ಜನರ ದುಡ್ಡು ಎಂದು ಮಾತಿನಲ್ಲೇ ತಿವಿದರು. ಈ ಬಾರಿಯೂ ತುಮಕೂರಿನಿಂದ ರಾಜೇಂದ್ರನೇ ಅಭ್ಯರ್ಥಿ. ನೂರಕ್ಕೆ ನೂರರಷ್ಟು ರಾಜೇಂದ್ರ ಈ‌ ಬಾರಿ ಗೆದ್ದು, ಪರಿಷತ್ ಗೆ ಬರಬೇಕು ಎಂದರು.

ಜನ ಬರ್ಬಾದ್ ಎನ್ನುವ Siddaramaiahಗೆ ಕಾಂಗ್ರೆಸ್ ಬರ್ಬಾದ್ ಆಗಿರೋದು ಕಾಣೋದಿಲ್ವಾ

ರಾಜ್ಯದ ಬಹುತೇಕ ಕಡೆ ಮಳೆ (Rain) ಸುರಿಯುತ್ತಿದ್ದು, ಜನ ಸಂಕಷ್ಟದಲ್ಲಿದ್ದಾರೆ. ಇಂಥ ಸಮಯದಲ್ಲಿ ಬಿಜೆಪಿ ಸಚಿವರು (BJP Ministers) ಬಿಜೆಪಿ ಜನಸ್ವರಾಜ್​ ಯಾತ್ರೆ ನಡೆಸುತ್ತಾ ಬೇಜಾಬ್ದಾರಿತನ ತೋರುತ್ತಿದ್ದಾರೆ. ಅವರದ್ದು ಜನಸ್ವರಾಜ್​ ಯಾತ್ರೆ ಅಲ್ಲ ಜನ ಬರ್ಬಾದ್​ ಯಾತ್ರೆ ಎಂದು ಟ್ವೀಟ್​ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಟೀಕಿಸಿದ್ದಾರೆ. ಇದಕ್ಕೆ ಜಿಲ್ಲೆಯಲ್ಲಿ ನಡೆಯುದ ಜನಸ್ವರಾಜ್ ಯಾತ್ರೆ ಸಮಾವೇಶದಲ್ಲಿ ಸಚಿವ ಕೆ.ಎಸ್​.ಈಶ್ವರಪ್ಪ (KS Eshwarappa) ತಿರುಗೇಟು ನೀಡಿದರು.  ಇದು ಕಾಂಗ್ರೆಸ್ (Congress) ಬರ್ಬಾದ್​ ಯಾತ್ರೆ. ಕರ್ನಾಟಕದಲ್ಲಿ ಈಗಾಗಲೇ ಕಾಂಗ್ರೆಸ್ ಸರ್ಕಾರವನ್ನ ಕಿತ್ತು ಬಿಸಾಕಿದ್ದೀವಿ. ಲೋಕಸಭೆಯ 28 ಕ್ಷೇತ್ರದಲ್ಲಿ ಕಾಂಗ್ರೆಸ್ ಒಂದೇ ಕ್ಷೇತ್ರ ಗೆದ್ದಿರೋದು. ಕಾಂಗ್ರೆಸ್ ಬರ್ಬಾದ್​​ ಆಗಿದೆ. ಎಲ್ಲಾ ಕಡೆ ಕಾಂಗ್ರೆಸ್ ಸೋಲುತ್ತಿದೆ ಎಂದು ವ್ಯಂಗ್ಯವಾಡಿದರು.

ರೇಪ್​ ಮಾಡಿ ಸಂತ್ರಸ್ತೆಯನ್ನೇ ಮದುವೆಯಾದ್ರೂ ಕೇಸ್​ ರದ್ದಾಗಲ್ಲ

ಅತ್ಯಾಚಾರ ಎಸಗಿ‌ ಸಂತ್ರಸ್ತೆಯನ್ನು ಮದುವೆಯಾದರೂ ಕೇಸ್ ರದ್ದಾಗುವುದಿಲ್ಲ ಎಂಬ ಮಹತ್ವದ ಸ್ಪಷ್ಟನೆಯನ್ನು ಹೈ ಕೋರ್ಟ್ ನೀಡಿದೆ. ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಪೋಕ್ಸೋ ಪ್ರಕರಣ ಕೈಬಿಡಲು ಹೈಕೋರ್ಟ್ ನಿರಾಕರಿಸಿದೆ. ಅತ್ಯಾಚಾರ ಎಸಗಿ‌ ಸಂತ್ರಸ್ತೆಯನ್ನು ಮದುವೆಯಾದರೂ ಕೇಸ್ ರದ್ದಾಗುವುದಿಲ್ಲ ಎಂಬ ಮಹತ್ವದ ಸ್ಪಷ್ಟನೆಯನ್ನು ಹೈ ಕೋರ್ಟ್ ನೀಡಿದೆ. ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಪೋಕ್ಸೋ ಪ್ರಕರಣ ಕೈಬಿಡಲು ಹೈಕೋರ್ಟ್ ನಿರಾಕರಿಸಿದೆ. ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ಥೆಯನ್ನು ಆರೋಪಿ ಮದುವೆಯಾಗಿದ್ದರೂ ಕೂಡ ಅತ್ಯಾಚಾರ ಪ್ರಕರಣ ರದ್ದಾಗುವುದಿಲ್ಲವೆಂದು ಸ್ಪಷ್ಟಪಡಿಸಿದೆ.

ಶೀಘ್ರದಲ್ಲೇ ತೆರೆ ಮೇಲೆ ಅಪ್ಪು ಬಯೋಪಿಕ್?

ಅಪ್ಪು ನಮ್ಮ ಜೊತೆ ಇಲ್ಲ ಎನ್ನುವುದನ್ನು ನೆನಪಿಸಿಕೊಳ್ಳಲು ಆಗುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅಪ್ಪು ಇಲ್ಲದ ನೋವನ್ನು ಹೊರಹಾಕುತ್ತಿದ್ದಾರೆ. ಈ ಮಧ್ಯೆ ಅಪ್ಪು ಅಭಿಮಾನಿಯೊಬ್ಬ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಅವರಿಗೆ ಅಪ್ಪು ಅವರ ಬಯೋಪಿಕ್ ಸಿನಿಮಾ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಪವರ್​ ಸ್ಟಾರ್​ ಅಪ್ಪು ಅಭಿಮಾನಿಯೊಬ್ಬ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಅವರಿಗೆ ಒಂದು ಮನವಿಯನ್ನು ಮಾಡಿಕೊಂಡಿದ್ದಾನೆ. ಅದಕ್ಕೆ ಸಂತೋಷ್​ ಆನಂದ್​ ರಾಮ್​ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅಪ್ಪು ಅಭಿಮಾನಿಯೊಬ್ಬ ಅಪ್ಪು ಅವರ ಜೀವನವನ್ನು ಸಿನಿಮಾ ಮಾಡುವಂತೆ ಆನಂದ್​ ರಾಮ್​ ಅವರಿಗೆ ಟ್ವೀಟ್​ ಮೂಲಕ ಮನವಿ ಮಾಡಿಕೊಂಡಿದ್ದಾರೆ. ನೀವು ಅವರನ್ನು ಹತ್ತಿರದಿಂದ ನೋಡಿದ್ದೀರಾ. ದಯವಿಟ್ಟು ಅಪ್ಪು ಅವರ ಜೀವನವನ್ನು ತೆರ ಮೇಲೆ ತನ್ನಿ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂತೋಷ್​ ಆನಂದ್​ ರಾಮ್​, ತೆರೆ ಮೇಲೆ ಅಪ್ಪು ಅವರ ಜೀವನ ತೋರಿಸಲು ಪ್ರಯತ್ನಿಸುತ್ತೆನೆ ಎಂದು ಹೇಳಿದ್ದಾರೆ.
Published by:Kavya V
First published: