Evening Digest: ನಟ ದಿಗಂತ್ ಕತ್ತಿಗೆ ಪೆಟ್ಟು; 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ, ಯಶವಂತ್ ಸಿನ್ಹಾ ರಾಷ್ಟ್ರಪತಿ ಅಭ್ಯರ್ಥಿ; ಇವು ಈ ಸಂಜೆಯ ಟಾಪ್‌ ನ್ಯೂಸ್‌ಗಳು

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ..

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ..

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ..

  • Share this:
ಗಂತ್ ಕುತ್ತಿಗೆಗೆ  ಪೆಟ್ಟು;  3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ

ನಟ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ. ಗೋವಾದ ಸಮುದ್ರ ತಟದಲ್ಲಿ ಸೋಮರ್ ಸಾಲ್ಟ್ ಹೊಡೆಯುವ ವೇಳೆ  ದಿಗಂತ್ ಕುತ್ತಿಗೆಗೆ  ಪೆಟ್ಟು ಬಿದ್ದಿದೆ. ಕುಟುಂಬದ ಜೊತೆ ನಟ ದಿಗಂತ್ ಗೋವಾ ಪ್ರವಾಸಕ್ಕೆ (Goa Tour) ತೆರಳಿದ್ದರು. ಈ ವೇಳೆ ದಿಗಂತ್ (Actor Diganth) ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ. ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿರುವ ಬಗ್ಗೆ ದಿಗಂತ್ ಆಪ್ತರಿಂದ ನ್ಯೂಸ್ 18ಗೆ  ಮಾಹಿತಿ  ದೊರೆತಿದೆ. ಅವರನ್ನು ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆ (Manipal Hospital) ದಾಖಲು ಮಾಡಲಾಗಿದೆ. ನಟ ದಿಗಂತ್​ ಅವರ ತಂದೆ-ತಾಯಿ ವೈದ್ಯರೊಂದಿಗೆ ಚರ್ಚೆ ನಡೆಸಿದ್ರು.  ವೈದ್ಯರು ದಿಗಂತ್​ರನ್ನು ಪರೀಕ್ಷಿಸಿ ಶಸ್ತ್ರ ಚಿಕಿತ್ಸೆಯನ್ನು (Surgery)  ಮಾಡುವ ಅವಶ್ಯಕತೆಯಿದೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾರೆ. 3 ಗಂಟೆಗಳ ಕಾಲ ಕತ್ತಿನ ಹುರಿ ಶಸ್ತ್ರಚಿಕಿತ್ಸೆ ನಡೆಯಲಿದೆ.

ಸಿದ್ದರಾಮಯ್ಯ, ಸುಳ್ಳು ಒಂದೇ ನಾಣ್ಯದ 2 ಮುಖಗಳು

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ (BJP National General Secretary CT  Ravi)  ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮೋದಿ  (PM Modi) ಪ್ರವಾಹದ ವೇಳೆ ಬರಲಿಲ್ಲ, ಆಕ್ಸಿಜನ್ ಕೊಡಲಿಲ್ಲ, ಈಗ ಯೋಗಕ್ಕೆ ಬಂದಿದ್ದಾರೆ ಎಂಬ ಸಿದ್ದರಾಮಯ್ಯ (Former CM Siddaramaiah) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು. ಸತ್ಯ ಮತ್ತು ಸಿದ್ದರಾಮಯ್ಯ ಎಣ್ಣೆ-ಸಿಗೇಕಾಯಿ ಇದ್ದಂತೆ ಎಂದು ವ್ಯಂಗ್ಯ ಮಾಡಿದರು. ಸುಳ್ಳು ಹೇಳುವುದರಲ್ಲಿ ಅವರಂತಹ ನಿಷ್ಟಾವಂತರು ಬೇರೆ ಯಾರೂ ಇಲ್ಲ. ಸುಳ್ಳಿಗೆ ಪ್ರಶಸ್ತಿ ನೀಡುವುದಾದರೆ ಸಿದ್ದರಾಮಯ್ಯ ಬಿಟ್ಟು ಬೇರೆ ಯಾರಿಗೂ ಸಿಗಲ್ಲ ಎಂದು ವಾಗ್ದಾಳಿ ನಡೆಸಿದರು.

SSLC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಶಿಕ್ಷಣ ಇಲಾಖೆ ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆಯ (SSLC Supplementary exam) ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮೇ 19ರಂದು ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟವಾಗಿತ್ತು. ಈ ಬಾರಿ ಶೇ.85.63ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ. 90.29ರಷ್ಟು ಬಾಲಕಿಯರು, ಶೇ. 81.30ರಷ್ಟು ಬಾಲಕರು ಪಾಸ್ ಆಗಿದ್ದರು. ಒಟ್ಟೂ 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 40,061 ಮಂದಿ ಗ್ರೇಸ್ ಮಾರ್ಕ್ ಮೂಲಕ ಪಾಸ್ ಆಗಿದ್ದರು. ಒಟ್ಟು 145 ಮಂದಿ ಈ ಬಾರಿ 625ಕ್ಕೆ 625 ಅಂಕ ಪಡೆದು, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದರು. ಈ ಬಾರಿಯೂ ಫಲಿತಾಂಶದಲ್ಲಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಮೆಲುಗೈ ಸಾಧಿಸಿದ್ದರು. ಗ್ರಾಮೀಣ ಪ್ರದೇಶದ ಶೇಕಡಾ 91.32ರಷ್ಟು ವಿದ್ಯಾರ್ಥಿಗಳು ಹಾಗೂ ನಗರ ಪ್ರದೇಶದ ಶೇಕಡಾ 86.64ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದರು.

ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ- ಡಿಕೆಶಿ

ದೆಹಲಿ (ಜೂ. 21): ರಾಜಕೀಯ ದ್ವೇಷದಿಂದ ಸುಳ್ಳು ಪ್ರಕರಣ ದಾಖಲಿಸಿ ಕಾಂಗ್ರೆಸ್ ಪಕ್ಷದ (Congress Party) ಧ್ವನಿ ಅಡಗಿಸಲು ಬಿಜೆಪಿ ಸರ್ಕಾರ (BJP Government) ಪ್ರಯತ್ನಿಸುತ್ತಿದ್ದು, ಇದು ಸಾಧ್ಯವಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (KPCC President DK Shivakumar) ಹೇಳಿದ್ದಾರೆ. ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ (Sonia Gandhi), ಪೂರ್ವಾಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಹಾಗೂ ಎಐಸಿಸಿ ಕಚೇರಿ (AICC Office) ಮೇಲೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ಮೂಲಕ ದಾಳಿ ನಡೆಸುತ್ತಿದೆ. ಪಕ್ಷದ ಕಚೇರಿ ನಮಗೆ ದೇವಾಲಯವಿದ್ದಂತೆ. ಆದರೆ ಕೇಂದ್ರ ಸರ್ಕಾರ ಪೊಲೀಸರನ್ನು ಬಳಸಿಕೊಂಡು, ಅಲ್ಲಿಗೆ ಯಾರೂ ಬರಬಾರದು, ಅಲ್ಲಿ ಯಾರೂ ಸೇರುವಂತಿಲ್ಲ ಎಂದು ದಬ್ಬಾಳಿಕೆ ನಡೆಸುತ್ತಿದೆ. ಅದನ್ನು ಖಂಡಿಸಿ ಪ್ರತಿಭಟನೆ ವ್ಯಕ್ತಪಡಿಸಲು ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದರು.

ಯಶವಂತ್ ಸಿನ್ಹಾ ವಿರೋಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ

ದೆಹಲಿ: ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ (NDA Government) ಕೇಂದ್ರ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದ್ದ ಯಶವಂತ್ ಸಿನ್ಹಾ (Yashwant Sinha) ವಿರೋಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಿ (President Candidate) ಕಣಕ್ಕಿಳಿಯಲಿದ್ದಾರೆ.  ರಾಷ್ಟ್ರಪತಿ ಚುನಾವಣೆಗೆ ಯಶವಂತ್ ಸಿನ್ಹಾ ಅವರ ಹೆಸರನ್ನು ವಿರೋಧ ಪಕ್ಷದ ಅಭ್ಯರ್ಥಿಯಾಗಿ (Opposition President Candidate) ಇಂದು ಹೆಸರಿಸಲಾಗಿದೆ. ಜುಲೈ ತಿಂಗಳಲ್ಲಿ ನಡೆಯಲಿರುವ ಚುನಾವಣೆಗೆ ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿಲ್ಲ. ಬಿಜೆಪಿ ಯಾರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.  ಸದ್ಯ ಕಾಂಗ್ರೆಸ್ ಸೇರಿ ಎಲ್ಲ ವಿರೋಧ ಪಕ್ಷಗಳೂ ಸಹ ಏಕಮತದಿಂದ ಯಶವಂತ್ ಸಿನ್ಹಾ ಅವರನ್ನು ಕಣಕ್ಕಿಳಿಸಿವೆ.
Published by:Pavana HS
First published: