HOME » NEWS » State » EVENING DIGEST 21 JUNE 2021 MUST READ TOP STORY IN KANNADA NEWS SESR

Evening Digest: 6 ಜಿಲ್ಲೆಗಳಲ್ಲಿ ಅನ್​ಲಾಕ್​ ನಿಂದ ತಾತಾ ಆಗುತ್ತಿರುವ ಸಂಭ್ರಮದಲ್ಲಿ ಎಚ್​ಡಿಕೆವರೆಗೂ ಓದಲೇಬೇಕಾದ ಈ ದಿನದ ಸುದ್ದಿ

ರಾಜ್ಯ, ದೇಶ -ವಿದೇಶದಲ್ಲಿ ಇಂದು ನಡೆದ ಘಟನಾವಳಿ ಕುರಿತಾದ ಮಾಹಿತಿ ಇಲ್ಲಿದೆ


Updated:June 21, 2021, 7:25 PM IST
Evening Digest: 6 ಜಿಲ್ಲೆಗಳಲ್ಲಿ ಅನ್​ಲಾಕ್​ ನಿಂದ ತಾತಾ ಆಗುತ್ತಿರುವ ಸಂಭ್ರಮದಲ್ಲಿ ಎಚ್​ಡಿಕೆವರೆಗೂ ಓದಲೇಬೇಕಾದ ಈ ದಿನದ ಸುದ್ದಿ
ಸಾಂದರ್ಭಿಕ ಚಿತ್ರ
  • Share this:
ಭರ್ಜರಿ ಕೊಡುಗೆ
ನಾಯಕತ್ವ ಬದಲಾವಣೆ ಕೂಗು ಮುಕ್ತಾಯವಾದ ಬಳಿಕ ಇಂದು ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಿತು. ಕೃಷಿ ಇಲಾಖೆಯಿಂದ ಬಿಎಸ್‌ಸಿ ಅಗ್ರಿ ಕೋರ್ಸ್‌ಗೆ ಶೇ. 40 ರಿಂದ ಶೇ. 50ಕ್ಕೆ ರೈತರ ಮಕ್ಕಳಿಗೆ ಮಿಸಲಾತಿ ಹೆಚ್ಚಳ ಮಾಡಲಾಗಿದೆ. ರಾಣಿ ಚೆನ್ನಮ್ಮ ವಿವಿ ಕಟ್ಟಡಕ್ಕೆ 110ಕೋಟಿ ಅನುದಾನ ನೀಡಲಾಗಿದೆ ನಾಯಕತ್ವದ ವಿಚಾರದಲ್ಲಿ ತನ್ನನ್ನು ಬೆಂಬಲಿಸಿದ ಶಾಸಕರು ಮತ್ತು ಸಚಿವರುಗಳ ಕ್ಷೇತ್ರಗಳಿಗೆ ಯಡಿಯೂರಪ್ಪ ಬರಪೂರ ಕೊಡುಗೆಗಳನ್ನು ಸಚಿವ ಸಂಪುಟ ಸಭೆಯಲ್ಲಿ ನೀಡಿದ್ದಾರೆ.

ಕೋವಿಡ್​ನಿಂದ ಮೃತಪಟ್ಟವರಿಗೆ 4 ಲಕ್ಷ ರೂ ಪರಿಹಾರ
ಕೋವಿಡ್‌ ಸಾಂಕ್ರಾಮಿಕ ಮತ್ತು ಕೋವಿಡ್‌ ನಂತರ ಬ್ಲ್ಯಾಕ್‌ ಫಂಗಸ್‌ ಸೇರಿದಂತೆ ಇತರೆ ಕಾರಣಗಳಿಗೆ ಮೃತಪಟ್ಟವರ ಕುಟುಂಬದವರಿಗೆ ರೂ. 4 ಲಕ್ಷ ಪರಿಹಾರ (ಕೃಪಾನುದಾನ) ನೀಡುವುದರ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಸೋಮವಾರ ಸುಪ್ರೀಂ ಕೋರ್ಟ್‌ ತೀರ್ಪು ಕಾಯ್ದಿರಿಸಿದೆ. ಕೃಪಾನುದಾನ ನೀಡುವಂತೆ ಕೋರಿರುವುದನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಪರಿಗಣಿಸಿದೆಯೇ ಎಂಬುದನ್ನು ಕೇಂದ್ರ ಸರ್ಕಾರದಿಂದ ತಿಳಿಯಲು ಬಯಸಿರುವುದಾಗಿ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌ ಮತ್ತು ಎಂ ಆರ್‌ ಶಾ ಅವರಿದ್ದ ರಜಾಕಾಲದ ವಿಭಾಗೀಯ ಪೀಠ ಹೇಳಿದ್ದು, ತೀರ್ಪು ಕಾಯ್ದಿರಿಸಿತು.

ಸಮುದ್ರಕ್ಕೆ ಬಿದ್ದ ಟ್ರಕ್​
ಚಾಲಕನ ನಿಯಂತ್ರಣ ತಪ್ಪಿದ ಟ್ರಕ್​ ಸಮುದ್ರಕ್ಕೆ ಉರುಳಿ ಬಿದ್ದಿರುವ ಘಟನೆ ನವಮಂಗಳೂರು ಬಂದರಿನ 14ನೇ ಬರ್ತ್​​ನಲ್ಲಿ ನಡೆದಿದೆ. ಟ್ರಕ್​ನಲ್ಲಿದ್ದ ಚಾಲಕ ಮತ್ತು ಕ್ಲೀನರ್ ಇಬ್ಬರೂ ಸಮುದ್ರದ ಪಾಲಾಗಿದ್ದಾರೆ. ಟ್ರಕ್ ಡ್ರೈವರ್​ ರಾಜೇಸಾಬ(26) ಮೃತದೇಹ ಪತ್ತೆಯಾಗಿದೆ. ಆದರೆ ಕ್ಲೀನರ್​​ ಭೀಮಪ್ಪನ(22) ಮೃತದೇಹ ಇನ್ನೂ ಸಿಕಿಲ್ಲ. ಭೀಮಪ್ಪನ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.

mYoga app ಬಿಡುಗಡೆವಿಶ್ವಯೋಗದಿನವಾದ ಇಂದು ಯೋಗದ ಪ್ರಾಮುಖ್ಯತೆಯನ್ನು ತಿಳಿಯಪಡಿಸುವ ಸಲುವಾಗಿ ಆಯುಷ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಜೊತೆಗೂಡಿಕೊಂಡು mYoga ಆ್ಯಪ್‌ ಅನ್ನು ಬಿಡುಗಡೆ ಮಾಡಿದೆ. ಈ ಆ್ಯಪ್‌ನ ಉದ್ದೇಶ ಪ್ರತಿಯೊಬ್ಬರೂ ಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದಕ್ಕಾಗಿದೆ. 7ನೇ ವಿಶ್ವಯೋಗ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು mYoga app ಅನ್ನು ಬಿಡುಗಡೆ ಮಾಡಿದ್ದಾರೆ. ಯೋಗ ಉತ್ಸಾಹಿಗಳು ಮತ್ತು ಯೋಗವನ್ನು ಅಭ್ಯಾಸ ಮಾಡಬೇಕೆಂಬ ಪ್ರಬಲ ಇಚ್ಛೆ ಉಳ್ಳವರು ಇನ್ನುಮುಂದೆ ಬೆರಳ ತುದಿಯಲ್ಲೇ ಯೋಗಾಭ್ಯಾಸವನ್ನು ಮಾಡಬಹುದು. ಈ ಆ್ಯಪ್‌ ಮೂಲಕ ಯೋಗ ತರಬೇತಿಯನ್ನು ಪಡೆದುಕೊಳ್ಳಬಹುದಾಗಿದೆ.

ಪಾಕ್​ ಪ್ರಧಾನಿ ವಿರುದ್ಧ ಟೀಕೆ
ಮಹಿಳೆ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಅತ್ಯಾಚಾರದಂತಹ ಘಟನೆಗಳಿಗೆ ಕಾರಣ ಅವರು ತೊಡುವ ಬಟ್ಟೆಯೇ ಕಾರಣ. ಮಹಿಳೆಯರು ಧರಿಸುವ ಧಿರಿಸಿಗಳಿಂದಲೇ ಅವರ ಮೇಲೆ ದೇಶದಲ್ಲಿ ಇಂದು ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಹೇಳಿಕೆ ನೀಡಿದ್ದಾರೆ. ದೇಶದ ಪ್ರಧಾನಿಯಾಗಿ ಈ ರೀತಿ ಹೇಳಿಕೆ ನೀಡುವ ಅವರ ನಡೆಗೆ ಸಾಕಷ್ಟು ಟೀಕೆ ಕೂಡ ವ್ಯಕ್ತವಾಗಿದೆ.

ಡಿಸೆಂಬರ್​ ಅಂತ್ಯದೊಳಗೆ ಎಲ್ಲರಿಗೂ ಕೊರೋನಾ ಲಸಿಕೆ
ದೇಶದ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಉಚಿತವಾಗಿ ಕೊರೋನಾ ಲಸಿಕೆ ನೀಡುವ ಲಸಿಕಾ ಮೇಳಕ್ಕೆ ಇಂದು ಚಾಲನೆ ನೀಡಲಾಗಿದೆ. ಈ ಲಸಿಕಾ ಮಹಾ ಅಭಿಯಾನಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ಕರ್ನಾಟಕದಲ್ಲಿ ಇಂದು ಒಂದೇ ದಿನ 7 ಲಕ್ಷ ಜನರಿಗೆ ಕೊರೋನಾ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದಿದ್ದಾರೆ.

ತಾತಾನಾಗುತ್ತಿರುವ ಎಚ್​ಡಿಕೆ
ದೇವೇಗೌಡರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ನಿಖಿಲ್​ ಹಾಗೂ ರೇವತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇಂದು ರೇವತಿ ಅವರ ಹುಟ್ಟುಹಬ್ಬ. ಈ ಖುಷಿಯ ಸಮಯದಲ್ಲೇ ಕುಮಾರಸ್ವಾಮಿ ಅವರು ತಾನು ತಾತನಾಗುತ್ತಿರುವ ವಿಷಯವನ್ನು ಮಾಧ್ಯಮದ ಜತೆ ಹಂಚಿಕೊಂಡಿದ್ದಾರೆ.
Published by: Seema R
First published: June 21, 2021, 7:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories