Evening Digest: ಹರ್ಷ ಕೊಲೆ ಆರೋಪಿಗಳು ಬೆಂಗಳೂರಿಗೆ ಎಸ್ಕೇಪ್? ಹೆಂಡ್ತಿಯ ಅಣ್ಣ, ತಮ್ಮನಿಗೆ ಚಾಕು ಇರಿದ ಗಂಡ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಹರ್ಷ ಕೊಲೆ ಆರೋಪಿಗಳು ಬೆಂಗಳೂರಿಗೆ ಎಸ್ಕೇಪ್? : ನಗರದಲ್ಲಿ ಯುವಕನ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸುದ್ದಿ ಮಾಡುತ್ತಿದ್ದು, ಬೆಂಗಳೂರಿನಲ್ಲು (Bengaluru) ಪೊಲೀಸರು (Police) ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹರ್ಷ ಕೊಲೆ ಬಳಿಕ ಆರೋಪಿಗಳು ಬೆಂಗಳೂರು ಕಡೆಗೆ ಎಸ್ಕೇಪ್ (Escape) ಆಗಿರುವ ಶಂಕೆ ವ್ಯಕ್ತವಾಗಿದ್ದು ನಗರದಲ್ಲಿ ಅನುಮಾನಸ್ಪದ ವ್ಯಕ್ತಿಗಳನ್ನು ಪೊಲೀಸರು ತೀವ್ರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಶಿವಮೊಗ್ಗದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣ ಸೇರಿ ಹಲವು ಕಡೆಗಳಲ್ಲಿ ನಿಗಾ ಇರಿಸಿದ್ದಾರೆ. ಈ ವೇಳೆ ಕೆಲವು ಯುವಕರನ್ನ ವಶಕ್ಕೆ (Custody) ಪಡೆದು ಪೊಲೀಸರ ವಿಚಾರಣೆ ನಡೆಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಭಜರಂಗದಳದಲ್ಲಿ (Bhajarangdal) ಗುರುತಿಸಿಕೊಂಡಿದ್ದ ಹಿಂದೂ ಕಾರ್ಯಕರ್ತ ಹರ್ಷ ಕೊಲೆಯ ನಂತರ ಶಿವಮೊಗ್ಗದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು ಪೊಲೀಸರು ಪ್ರದೇಶದ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ. ಘಟನೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಬಹಳಷ್ಟು ಜನ ಈಗಾಗಲೇ ಪ್ರತಿಭಟನೆ ಮಾಡಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:Shivamogga Murder: ಹರ್ಷ ಕೊಲೆ ಆರೋಪಿಗಳು ಬೆಂಗ್ಳೂರಿಗೆ ಎಸ್ಕೇಪ್? ತೀವ್ರ ತಪಾಸಣೆ

ಸಿಎಂ ವಿರುದ್ಧ MP Pratap Simha ಕೆಂಡಾಮಂಡಲ!
ಭಜರಂಗದಳದ ಕಾರ್ಯಕರ್ತ ಹರ್ಷ (Bajrangdal Activist Harsha) ಕೊಲೆ (Murder) ಸಂಬಂಧ ತಮ್ಮದೇ ಬಿಜೆಪಿ ಸರ್ಕಾರದ (BJP Govt) ವಿರುದ್ಧ ಬಿಜೆಪಿ ಸಂಸದ ಪ್ರತಾಪ್ ಸಿಂಹ (MP Pratap Simha) ಆಕ್ರೋಶ ವ್ಯಕ್ತಪಡಿಸಿದರು. ಹರ್ಷ ಕೊಲೆ ಪ್ರಕರಣ ನನಗೆ ಅತೀವ ನೋವು ತಂದಿದೆ. ನಮ್ಮ ಸರ್ಕಾರ ಬಂದ ಮೇಲೂ ಕೊಲೆ ಆಗಿರೋದು ನನಗೆ ನಾಚಿಕೆ ತರ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ಪ್ರತಿ ಹತ್ಯೆ ಆದಾಗಲೂ ಸಿದ್ದರಾಮಯ್ಯರನ್ನು ಬೈಯುತ್ತಿದ್ದೆವು. ಇವತ್ತು ನಮ್ಮದೇ ಸರ್ಕಾರ ಇದೆ, ನಮ್ಮ ಕಾರ್ಯಕರ್ತ ಒಬ್ಬ ಹತ್ಯೆ ಆಗಿದ್ದಾನೆ ಎಂದು ಅಸಮಾಧಾನ ಹೊರ ಹಾಕಿದರು. ಹಿಜಾಬ್ ವಿಚಾರ ಬಂದಾಗ ರಾಜ್ಯಾದ್ಯಂತ ಅಶಾಂತಿ ವಾತಾವರಣ ಸೃಷ್ಟಿಯಾಗಿದೆ, ಹೈಕೋರ್ಟ್ನ ಮಧ್ಯಂತರ ಆದೇಶದ ಪಾಲನೆ ಆಗ್ತಿಲ್ಲ. ಶಾಂತಿಗೆ ಭಂಗ ತರೋರ ಮೇಲೆ ಕ್ರಮ ತೆಗೆದುಕೊಳ್ಳುತ್ತಿಲ್ಲ. 144 ಸೆಕ್ಷನ್ ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಪಾದಿಸಿದರು.

ಟ್ರೈಲರ್ ಅಷ್ಟೇ, ಇನ್ನೂ ಸಿನಿಮಾ ಬಾಕಿ ಇದೆ
ಭಜರಂಗದಳದ ಕಾರ್ಯಕರ್ತ ಹರ್ಷ (Bajrangdal Activist Harsha) ಕೊಲೆ (Murder) ಸಂಬಂಧ ಶಿವಮೊಗ್ಗ (Shivamogga) ಜಿಲ್ಲೆ ಉದ್ವಿಗ್ನಗೊಂಡಿದೆ. ಕೊಲೆ ಪ್ರಕರಣದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ (Ex CM HD Kumaraswamy) ನೀಡಿರುವ ಹೇಳಿಕೆ ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್ಡಿಕೆ, ಎರಡು ವರ್ಷದ ಹಿಂದೆಯೇ ಹತ್ಯೆಗೆ ಪ್ಲಾನ್ ನಡೆದಿದೆ. ಎರಡು ವರ್ಷಗಳ ಹಿಂದೆಯೇ ಇದು ಹೊರಬಿದ್ದಿದೆ. ಇದು ಬಿಜೆಪಿ ನಾಯಕರಿಗೆ ಗೊತ್ತಿರಲಿಲ್ವೇ. ನಿಮ್ಮ ಸದಸ್ಯನನ್ನ ರಕ್ಷಣೆ ಮಾಡೋಕೆ ನಿಮಗೆ ಆಗಲಿಲ್ವೇ. ಎರಡು ವರ್ಷಗಳಹಿಂದೆಯೇ ಈ ಮಾಹಿತಿ ನಿಮಗಿದೆ. ಯಾಕೆ ಯುವಕನ ರಕ್ಷಣೆ ಮಾಡಿಕೊಳ್ಳಲಿಲ್ಲ ಎಂದು ಬಿಜೆಪಿಗರ ನಡೆಯನ್ನು ಪ್ರಶ್ನಿಸಿದರು. ಇದು ಸ್ಯಾಂಪಲ್ಲೋ ಏನೋ ಗೊತ್ತಿಲ್ಲ, ಟ್ರೈಲರ್ ಬಿಡ್ತಾರೆ ನಂತರ ಪಿಕ್ಚರ್ ಬಿಡ್ತಾರೆ. ಈ ಕೊಲೆಯನ್ನು ನೋಡಿದ್ರೆ ಇದು ಪ್ರಾರಂಭಿಕ ಅನ್ನಿಸುತ್ತೆ. ಸರ್ಕಾರ ಇದನ್ನ ಮೊದಲೇ ಅರ್ಥ ಮಾಡಿಕೊಳ್ಳಬೇಕು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಚೋದನೆ ಮಾಡ್ತಾರೆ ಅಂತ ಬಿಜೆಪಿಗರು ಹೇಳ್ತಾರೆ. ಅದನ್ನ ಹೇಗೆ ಹತೋಟಿ ತರಬೇಕು ಅಂತ ನಿಮಗೆ ಗೊತ್ತಿಲ್ವಾ? ಯಾಕೆ ನೀವು ಸುಮ್ಮನಾಗಿದ್ದು ಎಂದು ಪ್ರಶ್ನಿಸಿದರು.

ಹೆಂಡ್ತಿಯ ಅಣ್ಣ, ತಮ್ಮನಿಗೆ ಚಾಕು ಇರಿದ ಗಂಡ
ಕೌಟುಂಬಿಕ ಕಲಹ ಹಿನ್ನಲೆ ಭಾವ ಚಾಕುವಿನಿಂದ ಇರಿದು ಭಾಮೈದುನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಫೆ.20ರಂದು ರಾತ್ರಿ ನಡೆದಿದೆ. ಇಲ್ಲಿನ ಗೌತಮ್ ನಗರದ ನಿವಾಸಿಯಾದ ಬಿಜಿಪಿ (BJP) ಯುವ ಮುಖಂಡ (Youth Leader) ಬಾಬು, ಪತ್ನಿ ಸುನಿತಾ ಅವರ ಅಣ್ಣ ಸುರೇಶ್ ಗೆ ಚಾಕು ಇರಿದು ಕೊಲೆ ಮಾಡಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೆ ಸುರೇಶ್ (36) ಸಾವನ್ನಪ್ಪಿದ್ದಾರೆ. ಮೃತ ಸುರೇಶ್ ತಮ್ಮ ಹರೀಶ್ (33) ಗು ಆರೋಪಿ ಬಾಬು ಚಾಕು ಇರಿದಿದ್ದು, ಕೋಲಾರದ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ಹರೀಶ್ ನನ್ನ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಹರೀಶ್ ಅವರ ಸ್ತಿತಿ ಗಂಭೀರವಾಗಿದ್ದು, ಐ.ಸಿ.ಯು ನಲ್ಲಿ (ICU) ಚಿಕಿತ್ಸೆ ನೀಡುತ್ತಿರುವ ವೈದ್ಯರು ಮುಂದಿನ 48 ಗಂಟೆ ಕಳೆಯುವವರೆಗು ಆರೋಗ್ಯ ಪರಿಸ್ತಿತಿ ಕುರಿತು ಯಾವುದೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:Kolar Murder: ಹೆಂಡ್ತಿಯ ಅಣ್ಣ, ತಮ್ಮನಿಗೆ ನಡು ರಸ್ತೆಯಲ್ಲೆ ಚಾಕು ಇರಿದ ಬಿಜೆಪಿ ಮುಖಂಡ..!

Big Boss ನಿರೂಪಣೆಗೆ ಈ ಸ್ಟಾರ್ ನಟ ಗುಡ್ ಬೈ
ತಮಿಳು ಬಿಗ್ ಬಾಸ್ ನಿರೂಪಕನ ಸ್ಥಾನಕ್ಕೆ ವಿದಾಯ ಹೇಳಲು ಕಮಲ್ ಹಾಸನ್ ತೀರ್ಮಾನಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಕಮಲ್ ಹಾಸನ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ, ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಕೇವಲ ನಟನೆಯಷ್ಟೇ ಅಲ್ಲದೇ ನಿರ್ದೇಶನ, ನಿರ್ಮಾಣ, ರಾಜಕೀಯ ರಂಗದಲ್ಲೂ ಕಮಲ್ ಹಾಸನ್ ಬ್ಯುಸಿ. ಇದೆಲ್ಲದರ ನಡುವ ಬಿಗ್ ಬಾಸ್ ತಮಿಳು ಅಲ್ಟಿಮೇಟ್ ಕಾರ್ಯಕ್ರಮದ ನಿರೂಪಣ ಮಾಡುತ್ತಿದ್ದರು. ಇದು ತಮಿಳು ಬಿಗ್ಬಾಸ್ ಒಟಿಟಿ ವರ್ಷನ್, ಆದರೆ, ಈಗ ಅವರು ಈ ಶೋ ನಿರೂಪಣೆಯಿದ ಹೊರಬುರುವುದಾಗಿ ತಿಳಿಸಿದ್ದಾರೆ.
Published by:Kavya V
First published: