Evening Digest: ಹೊಸ ವರ್ಷಾಚರಣೆಗೆ ಬ್ರೇಕ್: DJ ಇಲ್ಲ, MG ರೋಡ್​​ಗೆ ಬರಂಗಿಲ್ಲ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಕೊರೊನಾದ ರೂಪಾಂತರಿ ಓಮಿಕ್ರಾನ್​​ (Corona Variant Omicron) ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆ ಹೊಸ ವರ್ಷದ ಸಂಭ್ರಮಾಚರಣೆಗೆ (New Year Celebration) ಕಡಿವಾಣ ಬಿದ್ದಿದೆ. ಮುಂಜಾಗ್ರತಾ ಕ್ರಮವಾಗಿ ಸಿಎಂ, ಆರೋಗ್ಯ ಸಚಿವರು ನ್ಯೂ ಇಯರ್​ ಸೆಲೆಬ್ರೆಷನ್​ ಗೆ ಮಾರ್ಗಸೂಚಿಯನ್ನು (Guidelines) ರೂಪಿಸಿದ್ದಾರೆ. ಯಾವುದಕ್ಕೆಲ್ಲಾ ಅನುಮತಿ? ಯಾವುದಕ್ಕೆಲ್ಲಾ ನಿರ್ಬಂಧ? ಸಂಪೂರ್ಣ ಮಾಹಿತಿ ಇಲ್ಲಿದೆ.

ಹೊಸ ವರ್ಷ ಆಚರಣೆಗೆ ಹೊಸ ಮಾರ್ಗಸೂಚಿ

  • *ಡಿಸೆಂಬರ್​​ 30ರಿಂದ ಜನವರಿ 2ನೇ ತಾರೀಖಿನವರೆಗೆ ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ.  • *ಬಹಿರಂಗ ಸಂಭ್ರಮಾಚರಣೆಗೆ ನಿರ್ಬಂಧವೇರಲಾಗಿದೆ. ಯಾರೂ ಮನೆಯಿಂದ ಹೊರಗಡೆ ಗುಂಪು ಗುಂಪಾಗಿ ನ್ಯೂ ಇಯರ್​  ಸೆಲೆಬ್ರೆಷನ್ (New year celebration)​ ಮಾಡುವಂತಿಲ್ಲ.  • *ರಾಜ್ಯದ್ಯಾಂತ 4 ದಿನಗಳು ಅಂದರೆ ಡಿ.30ರಿಂದ ಜ.2ರವರೆಗೆ ಡಿಜೆಗೆ ಅವಕಾಶ ಇಲ್ಲ.  • *ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಂತೆ ಯಾವುದೇ ಹೊಸ ವರ್ಷದ ಸಂಭ್ರಮಾಚರಣೆಗೆ ಅವಕಾಶ ಇಲ್ಲ.  • *ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ 50% ಜನರಿಗೆ ಮಾತ್ರ ಅವಕಾಶ.  • *ಬಾರ್ ಅಂಡ್ ರೆಸ್ಟೋರೆಂಟ್ ಸಿಬ್ಬಂದಿ ಎರಡು ಡೋಸ್​​ ಲಸಿಕೆ ಪಡೆದಿರಬೇಕಾಗಿರುವುದು ಕಡ್ಡಾಯ.

  • *ಕ್ರಿಸ್ ಮಸ್ ಆಚರಣೆಗೆ ಯಾವುದೇ ನಿಷೇಧ ಇಲ್ಲ


ಮತಾಂತರ ನಿಷೇಧ ವಿಧೇಯಕ ಮಂಡನೆ 

ವಿಪಕ್ಷಗಳ ಭಾರೀ ವಿರೋಧದ ಮಧ್ಯೆಯೂ ಇಂದು ವಿಧಾನಸಭೆ ಕಲಾಪದಲ್ಲಿ (Belagavi Session) ಮತಾಂತರ ನಿಷೇಧ ವಿಧೇಯಕವನ್ನು (Anti Conversion Bill) ಮಂಡಿಸಲಾಯಿತು. ಮಧ್ಯಾಹ್ನದ ಊಟದ ವಿರಾಮದ ಬಳಿಕ ಶುರುವಾದ ಕಲಾಪದಲ್ಲಿ ವಿಧೇಯಕ ಮಂಡನೆಗೆ ಸ್ಪೀಕರ್​ ಅವಕಾಶ ನೀಡಿದರು. ಗೃಹ ಸಚಿವ ಅರಗ ಜ್ಞಾನೇಂದ್ರ (Home Minister Araga Jnanendra) ವಿಧೇಯಕ ಮಂಡಿಸುತ್ತಿದ್ದಂತೆ ಕಾಂಗ್ರೆಸ್​ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜನ ವಿರೋಧಿ ಕಾಯಿದೆ ತಂದು ಅದನ್ನು ಪಾಸ್ ಮಾಡೋದು ಸರಿಯಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಕಿಡಿ ಕಾರಿದರು.

ಮತಾಂತರ ಆಗಬೇಕಾದಲ್ಲಿ ಪಾಲಿಸಬೇಕಾದ ನಿಯಮಗಳು

*ಮತಾಂತರವಾಗಲು‌ ಮುಂದಾಗಿರುವ ವ್ಯಕ್ತಿ  ಕನಿಷ್ಠ ಆರವತ್ತು ದಿನಗಳ ಮೊದಲು ಜಿಲ್ಲಾ ದಂಡಾಧಿಕಾರಿಗೆ ಈ ಬಗ್ಗೆ ತಿಳಿಸಬೇಕು.
*ಮತಾಂತರ ಮಾಡುವ ವ್ಯಕ್ತಿಯೂ ಈ ಬಗ್ಗೆ ಜಿಲ್ಲಾ ದಂಡಾಧಿಕಾರಿಗೆ 30 ದಿನಗಳ ಮೊದಲೇ  ಈ ಬಗ್ಗೆ ಮಾಹಿತಿ ಕೊಡಬೇಕು.
* ಈ ಮಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿ ಸೂಚನಾ ಫಲಕದಲ್ಲಿ ಹಾಕಬೇಕು. ಇದಕ್ಕೆ30 ದಿನಗಳ ಒಳಗಾಗಿ ಆಕ್ಷೇಪನೆ ಬಂದರೆ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆಯ ಮೂಲಕ ವಿಚಾರಣೆ ನಡೆಸಲು ಅವಕಾಶ ಇದೆ.
*ವಿಚಾರಣೆಯ ಸಂದರ್ಭದಲ್ಲಿ ತಪ್ಪು  ಕಂಡುಬಂದಲ್ಲಿ ಕ್ರಿಮಿನಲ್‌ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲು ಅವಕಾಶವಿದೆ.
*ಮತಾಂತರಗೊಂಡ ವ್ಯಕ್ತಿಯೂ ಮತಾಂತರಗೊಂಡ ದಿನಾಂಕದಿಂದ‌ ಹಿಡಿದು ಮೂಲ ಧರ್ಮ, ಮತಾಂತರಗೊಂಡ ಧರ್ಮ ಹಾಗೂ ಇನ್ನಿತರ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡಬೇಕು.
*ಅಪರಾಧಕ್ಕೆ ನೆರವು ಹಾಗೂ ದುಷ್ಪ್ರೇರಣೆ ನೀಡಿ ವ್ಯಕ್ತಿಯನ್ನು ಆರೋಪಿಯನ್ನಾಗಿ ಪರಿಗಣಿಸುವ ಅವಕಾಶವೂ ಇದೆ.
-ವಿಚಾರಣೆಯ ಸಂದರ್ಭದಲ್ಲಿ ತಪ್ಪು  ಕಂಡುಬಂದಲ್ಲಿ ಜಿಲ್ಲಾ ದಂಡಾಧಿಕಾರಿ ಕ್ರಿಮಿನಲ್‌ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲು ಅವಕಾಶವಿದೆ.

ಸ್ವ ಸಹಾಯ ಗುಂಪುಗಳಿಗೆ 1000 ಕೋಟಿ ರೂ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನಲೆ ಪದೇ ಪದೇ ವಿವಿಧ ಕಾರ್ಯಕ್ರಮಗಳ ನೆಪದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಇನ್ನು ಪ್ರಯಾಗ್​ ರಾಜ್​ಗೆ ಇಂದು ಭೇಟಿ ನೀಡಿರುವ ಪ್ರಧಾನಿ, ಮುಂಬರುವ ಚುನಾವಣೆಗೆ ಮಹಿಳಾ ಮತದಾರರ ಓಲೈಕೆಗೆ ಪ್ರಯತ್ನ ನಡೆಸಿದರು. ಮಹಿಳೆ ಶಕ್ತಿಯನನ್ನು ಪ್ರಧಾನ ಮಂತ್ರಿಗಳು ಸ್ವಸಹಾಯ ಗುಂಪುಗಳ (ಎಸ್‌ಎಚ್‌ಜಿಗಳ) ಬ್ಯಾಂಕ್ ಖಾತೆಗೆ 1,000 ಕೋಟಿ ರೂ.ಗಳನ್ನು ವರ್ಗಾಯಿಸಿದ್ದಾರೆ. ಇದರಿಂದ ಸುಮಾರು 16 ಲಕ್ಷ ಮಹಿಳಾ ಸದಸ್ಯರಿಗೆ ಪ್ರಯೋಜನವಾಗಿದೆ. ಈ ವರ್ಗಾವಣೆಯನ್ನು ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (DAY-NRLM) ಅಡಿಯಲ್ಲಿ ಮಾಡಲಾಗುತ್ತಿದೆ, 80,000 ಸ್ವಸಹಾಯ ಗುಂಪುಗಳು ಸಮುದಾಯ ಹೂಡಿಕೆ ಮಾಡಲಾಗಿದೆ. ಪ್ರತಿ ಸ್ವ ಸಹಾಯ ಗುಂಪಿಗೆ ತಾ 1.10 ಲಕ್ಷ ರೂ. ಮತ್ತು 60,000 ಸ್ವ ಸಹಾಯ ಗುಂಪು ಇದರ ಲಾಭ ಪಡೆಯಲಿದೆ.

ಪ್ರಿಯಾಂಕಾ ಗಾಂಧಿ ಮಕ್ಕಳ Instagram ಖಾತೆ ಹ್ಯಾಕ್

ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi Vadra) ಮಕ್ಕಳ ಇಬ್ಬರ ಇನ್​ಸ್ಟಾಗ್ರಾಂ (Instagram) ಖಾತೆ ಹ್ಯಾಕ್​ ಆಗಿದೆ ಎಂದು ಆರೋಪ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿನ ತಮ್ಮ ಮಕ್ಕಳ ಖಾತೆ ಮೇಲೂ ಸರ್ಕಾರ ದಾಳಿ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ರಾಜಕೀಯ ವಿರೋಧಿಗಳ ಮೇಲೆ ಚುನಾವಣಾ ಪೂರ್ವ ದಾಳಿಗಳು ಮತ್ತು ಅಕ್ರಮ ಫೋನ್ ಕಣ್ಗಾವಲು ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಫೋನ್​ ಟ್ಯಾಪ್​ ಆಗುವುದರ ಜೊತೆಗೆ ಮಕ್ಕಳ ಸಾಮಾಜಿಕ ಜಾಲತಾಣಗಳ ಖಾತೆಗಳು ಕೂಡ ಹ್ಯಾಕ್​ ಮಾಡಲಾಗುತ್ತಿದೆ. ಅವರಿಗೆ ಬೇರೆ ಏನು ಕೆಲಸ ಇಲ್ಲವಾ ಎಂದು ಪ್ರಶ್ನಿಸಿದ್ದಾರೆ.
Published by:Kavya V
First published: