ನಾಟಿಕೋಳಿ ಸಾರು ತಿಂದು ದೇವಸ್ಥಾನಕ್ಕೆ ಹೋದ್ರಾ ಸಿದ್ದರಾಮಯ್ಯ?
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೆರೆ ಹಾನಿ (Flood Effect) ವೀಕ್ಷಣೆಗೆ ಮೊನ್ನೆ ಮೊನ್ನೆಯಷ್ಟೇ ಕೊಡಗಿಗೆ ಭೇಟಿ ನೀಡಿದ್ದರು. ಆದರೆ ಸಿದ್ದರಾಮಯ್ಯರ ಕೊಡಗಿನ ಭೇಟಿ ಹಲವು ವಿದ್ಯಮಾನಗಳಿಗೆ ಸಾಕ್ಷಿಯಾಗ್ತಿದೆ. ಸಿದ್ದರಾಮಯ್ಯರ ಕಾರಿನ ಮೇಲೆ ಮೊಟ್ಟೆ (Egg) ಎಸೆತ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಬಿಜೆಪಿ-ಕಾಂಗ್ರೆಸ್ (BJP Congress) ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ. ಇದರ ನಡುವೆ ಈಗ ಸಿದ್ದರಾಮಯ್ಯ ಮಾಂಸಾಹಾರ (Non veg Meals) ಸೇವಿಸಿ ದೇವಸ್ಥಾನಕ್ಕೆ (Temple) ತೆರಳಿದ್ದರು ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ. ಕೊಡಗಿಗೆ ಸಿದ್ದರಾಮಯ್ಯ ಭೇಟಿ ಕೊಟ್ಟಿದ್ದ ವೇಳೆ ಹಿಂದೂಗಳ ಭಾವನೆಗೆ ಧಕ್ಕೆ ಆಯ್ತಾ ಅನ್ನೋ ಪ್ರಶ್ನೆ ಮೂಡಿದೆ. ಮಾಂಸಾಹಾರ ತಿಂದು ಹೋದ್ರೆ ತಪ್ಪೇನು ಅಂತಾ ಸಿದ್ದರಾಮಯ್ಯರೇ ಪ್ರಶ್ನೆ ಮಾಡಿದ್ದಾರೆ.
ಮಹಾಕಾಲನಿಗೆ ಅಪಮಾನ ಮಾಡಿದ್ರಾ ಹೃತಿಕ್ ರೋಷನ್?
ನವದೆಹಲಿ: ಬಾಲಿವುಡ್‌ನ ಖ್ಯಾತ ನಟ (Bollywood Famous Actor) ಹೃತಿಕ್ ರೋಷನ್ (Hrithik Roshan) ಹಾಗೂ ಪ್ರಸಿದ್ಧ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆ (Online Food Delivery Company) ಜೊಮ್ಯಾಟೋ (Zomato) ವಿರುದ್ಧ ದೇಶಾದ್ಯಂತ ಈಗ ಆಕ್ರೋಶ ವ್ಯಕ್ತವಾಗಿದೆ. ಅದಕ್ಕೆ ಕಾರಣ ಹೃತಿಕ್ ರೋಷನ್ ಅಭಿನಯಿಸಿದ್ದ, ಜೊಮ್ಯಾಟೋ ಕಂಪನಿಯ ಜಾಹೀರಾತು ವಿಡಿಯೋ (Advertisement video). ಹೌದು, ಈ ಜಾಹೀರಾತಿನಲ್ಲಿ ಮಧ್ಯಪ್ರದೇಶದಲ್ಲಿರುವ (Madhya Pradesh) ಪ್ರಸಿದ್ಧ ಹಿಂದೂ ದೇವತೆ (Hindu God) ಮಹಾಕಾಲನಿಗೆ (Mahakala) ಅಪಮಾನ ಮಾಡಿಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. 30 ಸೆಕೆಂಡುಗಳ ಈ ಜಾಹೀರಾತಿನಲ್ಲಿ ಹೃತಿಕ್ ರೋಷನ್ ಅವರು, ‘ನನಗೆ ಪನ್ನೀರ್ ಥಾಲಿ ತಿನ್ನೋ ಹಾಗೇ ಆಗಿತ್ತು. ಇದನ್ನು ಮಹಾಕಾಲದಿಂದ ಆರ್ಡರ್ ಮಾಡಿದೆ’ ಎಂದು ವಿಡಿಯೋದಲ್ಲಿ ಹೇಳುತ್ತಾರೆ. ಇದು ಮಹಾಕಾಲನ ಭಕ್ತರ (Devotees) ಆಕ್ರೋಶಕ್ಕೆ ಕಾರಣವಾಗಿದೆ. ಈ ಜಾಹೀರಾತಿನಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಜೊಮ್ಯಾಟೋ ಹಾಗೂ ಹೃತಿಕ್ ರೋಷನ್ ಇಬ್ಬರಿಗೂ ಬೈಕಾಟ್ (Boycott) ಬಿಸಿ ತಟ್ಟಿದೆ.
ಇದನ್ನೂ ಓದಿ: Hrithik Roshan: ಮಹಾಕಾಲನಿಗೆ ಅಪಮಾನ ಮಾಡಿದ್ರಾ ಹೃತಿಕ್ ರೋಷನ್? ಜೊಮ್ಯಾಟೊ ಜಾಹೀರಾತಿಗೆ ಬೈಕಾಟ್ ಬಿಸಿ!
ವಿಷ್ಣುವರ್ಧನ್‌ರಿಗೆ ಆದ ಸ್ಥಿತಿಯೇ ನಂಗೂ ಆಗಿದೆ -ಅನಿರುದ್ಧ್
ಜೊತೆ ಜೊತೆಯಲಿ (Jote Joteyali) ಸೀರಿಯಲ್ನಿಂದ ನಟ ಅನಿರುದ್ಧ್ (Aniruddha) ಅವರನ್ನು ತೆಗೆದುಹಾಕಿದ್ದಾರೆ. ಸೀರಿಯಲ್ ಸೆಟ್ನಲ್ಲಿ ಅನಿರುದ್ಧ್ ಅವರ ವರ್ತನೆ ಅತಿರೇಕಕ್ಕೆ ತಿರುಗಿದ ಹಿನ್ನೆಲೆ ಅವರನ್ನು ಧಾರಾವಾಹಿಯಿಂದ ಕೈ ಬಿಡಲಾಗಿದೆ ಎಂದು ನಿರ್ಮಾಪಕ ಆರೂರು ಜಗದೀಶ್ ಹೇಳಿದ್ದರು. ಇವತ್ತು ಮತ್ತೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಅನಿರುದ್ಧ್ , ನನ್ನ ತಪ್ಪೇನು ಇಲ್ಲ ಅಂತಿದ್ದಾರೆ. ನಿರ್ಮಾಪಕ ಆರೋಪಗಳೆಲ್ಲಾ ಸುಳ್ಳು, ಜೊತೆ ಜೊತೆಯಲ್ಲಿ ಸೀರಿಯಲ್ (Serial) ಸೆಟ್ ನಲ್ಲಿ ಅಹಂಕಾರ ನೋಡಿದ್ದೀರಾ? ಸೆಟ್ ನಲ್ಲಿ ಕೆಲಸಕ್ಕಾಗಿ ಜಗಳ ಮಾಡಿದ್ದೀನಿ ಅಷ್ಟೇ, ಇದು ನಾಲ್ಕು ಗೋಡೆ ಮಧ್ಯೆ ಜಗಳವಾಡಿರೋದು ಆದ್ರೆ ಬೀದಿಗೆ ತರಬಾರದು ಎಂದ್ರು. ಇಷ್ಟು ರದ್ಧಾಂತ ಆದ ಮೇಲೂ ಅವರ ಜೊತೆ ಆಕ್ಟ್ ಮಾಡೋದು ಸುಲಭ ಅಲ್ಲ, ಆದರೂ ಅವರು ಕರೆದ್ರೆ ನಾನು ಅಭಿನಯಿಸಲು ಸಿದ್ಧ ಎಂದಿದ್ದಾರೆ.
ಸಿನಿಮಾ ನೋಡಿ ವಾಪಸ್ ಆಗ್ತಿದ್ದಾಗ ನವದಂಪತಿಗೆ ಅಪಘಾತ
ಅದು ಬದುಕಿನ ಸುಂದರ ಕನಸುಗಳನ್ನ ಹೊತ್ತ ನವಜೋಡಿ (New couple). ಕೇವಲ 4 ತಿಂಗಳ ಹಿಂದೆಯಷ್ಟೇ ಇಬ್ಬರೂ ಮದುವೆ (Marriage) ಸಂಭ್ರಮವನ್ನು ಮುಗಿಸಿದ್ರು. ಹೀಗಿರೋವಾಗ ನಿನ್ನೆ ರಾತ್ರಿ ಸಿನಿಮಾ (Movie) ನೋಡಿ ಖುಷಿ ಖುಷಿಯಿಂದ ಬೈಕ್ ಏರಿ ಮನೆಯತ್ತ (Home) ಹೊರಟಿದ್ರು. ಆದ್ರೆ ಆ ವೇಳೆಯೇ ಯಮರಾಜ ಅಟ್ಟಹಾಸ ಮೆರೆದಿದ್ದ. ನೋಡನೋಡ್ತಿದ್ದಂತೆ ಅಪರಿಚಿತ ವಾಹನವೊಂದು ನವಜೋಡಿಯ ಮೇಲೆ ಅಪ್ಪಳಿಸಿದೆ. ಈ ಭೀಕರ ರಸ್ತೆ (Accident) ಅಪಘಾತದಲ್ಲಿ ಪತ್ನಿ ಶ್ವೇತಾ ಸ್ಥಳದಲ್ಲೇ ಸಾವನ್ನಪ್ಪಿದ್ರೆ (Death), ಪತಿ ಆನಂದ್ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ಬಾಣಸವಾಡಿಯ ಕಲ್ಯಾಣನಗರದ ಬಳಿ ದುರ್ಘಟನೆ ನಡೆದುಹೋಗಿದೆ. ಹೆತ್ತವರ ಆಕ್ರಂದನ ಮುಗಿಲುಮುಟ್ಟಿತ್ತು.
ಇದನ್ನೂ ಓದಿ: Bengaluru Accident: ಸಿನಿಮಾ ನೋಡಿ ವಾಪಸ್ ಆಗ್ತಿದ್ದಾಗ ನವದಂಪತಿಗೆ ಅಪಘಾತ, ಪತ್ನಿ ಸಾವು ಪತಿ ಗಂಭೀರ
Love 360 Movie: ಥಿಯೇಟರ್ಗೆ ಬಂದು ಲವ್ 360 ಚಿತ್ರ ನೋಡಿ; ಕೈ ಮುಗಿದು ನಿರ್ದೇಶಕ ಶಶಾಂಕ್ ಮನವಿ
ಇತ್ತೀಚೆಗೆ ಬಿಡುಗಡೆಯಾದ 'ಲವ್ 360' (Love 360) ಸಿನಿಮಾ ನೋಡುವಂತೆ ಪ್ರೇಕ್ಷಕರಲ್ಲಿ ನಿರ್ದೇಶಕ ಶಶಾಂಕ್ ಮನವಿ ಮಾಡಿಕೊಂಡಿದ್ದಾರೆ. ಎಮೋಷನಲ್ ಪ್ರೇಮ ಕಥೆಯ (Emotional Love Story) ಈ ಸಿನಿಮಾ ಇದು. ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ. ಚಿತ್ರದಲ್ಲಿನ ರಾಮ್ ಹಾಗೂ ಜಾನಕಿ ಪ್ರೇಮಕಥೆ ಸಾಕಷ್ಟು ಜನರಿಗೆ ಇಷ್ಟವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಿನಿಮಾ ಮಂದಿರಗಳಿಗೆ (Theater) ತೆರಳಿ ಚಿತ್ರವನ್ನು ವೀಕ್ಷಣೆ ಮಾಡುವಂತೆ ಪ್ರೇಕ್ಷಕರಲ್ಲಿ ಕೈಮುಗಿದು ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ