Top-5 News: ದೇವೇಗೌಡರ ಕಾಲು ಮುಟ್ಟಿ ನಮಸ್ಕರಿಸಿದ ಯಡಿಯೂರಪ್ಪ, ಬ್ಲಾಕ್​ಮೇಲ್ ಮಾಡಿ ನಗ್ನ ವಿಡಿಯೋ ರೆಕಾರ್ಡ್?; ಇಂದಿನ ಟಾಪ್‌ ನ್ಯೂಸ್ ಇಲ್ಲಿವೆ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ದೇವೇಗೌಡರ ಕಾಲು ಮುಟ್ಟಿ ನಮಸ್ಕರಿಸಿದ ಯಡಿಯೂರಪ್ಪ

ಬೆಂಗೂರಿನ ಪದ್ಮನಾಭನಗರದಲ್ಲಿರೋ HDD ನಿವಾಸಕ್ಕೆ ಭೇಟಿ ನೀಡಿದ ಬಿ.ಎಸ್​ ಯಡಿಯೂರಪ್ಪ, ದೇವೇಗೌಡರ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ದೇವೇಗೌಡರನ್ನ ಭೇಟಿ ಮಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಗೌಡರ ಆರೋಗ್ಯ ವಿಚಾರಿಸಿದ್ರು. ಕೆಲ ಕಾಲ ಮಾತುಕತೆ ನಡೆಸಿದ್ದಾರೆ. ಭೇಟಿ ಬಳಿಕ ಮಾತಾಡಿದ ಮಾಜಿ ಸಿಎಂ ಯಡಿಯೂರಪ್ಪ, ದೇವೇಗೌಡರ ಜ್ಞಾಪಕ ಶಕ್ತಿ ದೊಡ್ಡದು ಇಡೀ ರಾಜ್ಯದ ಉದ್ದಗಲಕ್ಕೂ ಸುತ್ತುತ್ತಿದ್ದಾರೆ ಎಂದ್ರು. ಈಗಲೂ ರಾಜ್ಯಾದ್ಯಂತ ಸುತ್ತಬೇಕು ಅನ್ನೋ ಆಸೆ ಅವರಲ್ಲಿದೆ. ಅನೇಕ ಹಳೆಯ ಸಂಗತಿಗಳನ್ನು ಅವರು ಮರೆತಿಲ್ಲ ಎಂದ್ರು.

ಡಿ.ಕೆ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು

ಬೆಂಗಳೂರು (ಸೆ. 20): ಅಕ್ರಮ ಹಣ ವರ್ಗಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಇಡಿ ವಿಚಾರಣೆಗೆ ಒಳಪಟ್ಟಿದ್ದ ಡಿ ಕೆ ಶಿವಕುಮಾರ್​ (D K Shivakumar) ಅವರಿಗೆ ಆರೋಗ್ಯದಲ್ಲಿ (Health) ದಿಢೀರ್ ಏರುಪೇರು ಉಂಟಾಗಿದೆ. ​ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ನವದೆಹಲಿಯಲ್ಲಿರುವ ಇಡಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗಿದ್ರು. ಈ ವೇಳೆ ತೀವ್ರ ಜ್ವರದಿಂದ (High Fever) ಬಳಲುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್​ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಪ್ರಯಾಣ ಮಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ಕಾಂಗ್ರೆಸ್​ ಟ್ವೀಟ್​ ಮಾಡಲಾಗಿದೆ.

ಇದನ್ನೂ ಓದಿ: D K Shivakumar: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಆರೋಗ್ಯದಲ್ಲಿ ಏರುಪೇರು; ಯಾವುದೇ​ ಕಾರ್ಯಕ್ರಮಕ್ಕೂ ಬರಲ್ವಂತೆ ಡಿಕೆಶಿ

ಬ್ಲಾಕ್​ಮೇಲ್ ಮಾಡಿ ವಿದ್ಯಾರ್ಥಿನಿಯರ ನಗ್ನ ವಿಡಿಯೋ ರೆಕಾರ್ಡ್?

ರಾಂಚಿ: ಚಂಡೀಗಢ ವಿಶ್ವವಿದ್ಯಾಲಯದ ಹಾಸ್ಟೆಲ್​ನ (Chandigarh University) ವಿದ್ಯಾರ್ಥಿನಿಯರು ಸ್ನಾನ ಮಾಡುತ್ತಿರುವ ವಿಡಿಯೋ ಲೀಕ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಈ ಪ್ರಕರಣಕ್ಕೆ ಬೇರೆಯದೇ ಆಯಾಮ ಸಿಗುತ್ತಿದ್ದ, ವಿಡಿಯೋ ರೆಕಾರ್ಡ್ ಮಾಡಿದ ವಿದ್ಯಾರ್ಥಿಯನ್ನು ಬ್ಲಾಕ್​ಮೇಲ್ ಮಾಡಿ (Student Blackmail)  ವಿಡಿಯೋ ಲೀಕ್ ಮಾಡಲಾಗಿದೆಯೇ ಎಂಬ ಅನುಮಾನ ಪೊಲೀಸರಿಗೆ ದೊರೆತಿದೆ. ಬಂಧಿತ ನಾಲ್ಕನೇ ಆರೋಪಿ ಹಾಸ್ಟೆಲ್‌ನಲ್ಲಿರುವ ಇತರ ಮಹಿಳಾ ವಿದ್ಯಾರ್ಥಿಗಳ ವಿಡಿಯೋಗಳನ್ನು ಹಂಚಿಕೊಳ್ಳದಿದ್ದರೆ ಆಕೆಯ ನಗ್ನ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಹೇಳುತ್ತಿರುವ ಕುರಿತು ಸಂಶಯ ವ್ಯಕ್ತವಾಗಿದೆ. ಸದ್ಯ ಈ ಆಯಾಮದಲ್ಲಿ  ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Student Blackmail: ಬ್ಲಾಕ್​ಮೇಲ್ ಮಾಡಿ ವಿದ್ಯಾರ್ಥಿನಿಯರ ನಗ್ನ ವಿಡಿಯೋ ರೆಕಾರ್ಡ್? ಪೊಲೀಸರಿಂದ ತೀವ್ರ ತನಿಖೆ

ಮದರಸಾ ಆಯ್ತು ಈಗ ವಕ್ಫ್ ಬೋರ್ಡ್ ಆಸ್ತಿಗಳ ಸಮೀಕ್ಷೆಗೆ ಆದೇಶ

ಲಕ್ನೋ(ಸೆ.20): ಯುಪಿಯಲ್ಲಿ (Uttar Pradesh) ಮದರಸಾಗಳ ನಂತರ, ರಾಜ್ಯದ ಯೋಗಿ ಸರ್ಕಾರವು ವಕ್ಫ್ ಮಂಡಳಿಯ ಆಸ್ತಿಗಳ ಸಮೀಕ್ಷೆಯನ್ನು ಸಹ ನಡೆಸಲಿದೆ. ಒಂದು ತಿಂಗಳೊಳಗೆ ಸಮೀಕ್ಷೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Chief Minister Yogi Adityanath) ಸೂಚಿಸಿದ್ದಾರೆ. ಇದೇ ವೇಳೆ ವಕ್ಫ್ ಮಂಡಳಿಯ (Waqf Board) ಆಸ್ತಿಗಳನ್ನು ಕಂದಾಯ ದಾಖಲೆಗಳಲ್ಲಿ ದಾಖಲಿಸಬೇಕು ಎಂದು ಸೂಚನೆ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ರಾಜ್ಯಾದ್ಯಂತ 75 ಜಿಲ್ಲೆಗಳಲ್ಲಿರುವ ಎಲ್ಲ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ದಾಖಲಿಸಬೇಕು ಎಂದಿದ್ದಾರೆ.

ಸುಮ್ಮನಹಳ್ಳಿ ಫ್ಲೈಓವರ್ ಮತ್ತೊಮ್ಮೆ ಕುಸಿತ

ಬೆಂಗಳೂರಿನ ಸುಮ್ಮನಹಳ್ಳಿಯ ಫ್ಲೈಓವರ್​ನಲ್ಲಿ ಕಾಂಕ್ರೀಟ್ ಕುಸಿತವಾಗಿದೆ. ಮೇಲ್ಸೇತುವೆ ಮೇಲೆ ದೊಡ್ಡ ಪ್ರಮಾಣದಲ್ಲಿ ಗುಂಡಿ ಬಿದ್ದಿದೆ. ಸಿಮೆಂಟ್ ಸ್ಲ್ಯಾಬ್‍ಗಳು ಕಿತ್ತು ಬಂದಿದ್ದು, ಗುಂಡಿಯಿಂದ ನೋಡಿದ್ರೆ ನೆಲ ಕಾಣಿಸುವಷ್ಟು ಕುಸಿತವಾಗಿದೆ. ಗುಂಡಿ ಬಿದ್ದರೂ ಯಾರು ಸಹ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಲೇ ಭೇಟಿ ನೀಡುತ್ತಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಬ್ಯಾರಿಕೇಡ್ ಹಾಕಿ, ಓರ್ವ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಫ್ಲೈಓವರ್ ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ. ಫ್ಲೈಓವರ್ ಕೆಳ ಭಾಗದ ರಸ್ತೆಯಿಂದ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
Published by:ಪಾವನ ಎಚ್ ಎಸ್
First published: