Evening Digest: ಪಿಯುಸಿ-ಸಿಇಟಿ ಫಲಿತಾಂಶ, ಕಾಂಗ್ರೆಸ್​ ಸೈಕಲ್​ ಜಾಥಾ: ಈ ದಿನದ ಸುದ್ದಿ ಸಾರಾಂಶ

ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ

evening digest

evening digest

 • Share this:
  ಪಿಯುಸಿ ಫಲಿತಾಂಶ
  ಕೊರೊನಾ (ಕಾರಣದಿಂದ ರದ್ದಾಗಿದ್ದ ದ್ವಿತೀಯ ಪಿಯುಸಿ(2nd PUC) ಫಲಿತಾಂಶಕ್ಕೆ ಚಾಲೆಂಜ್ ಮಾಡಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆ ಬರೆದಿರುವ ಹೊಸಬರಲ್ಲಿ 592 ವಿದ್ಯಾರ್ಥಿಗಳಲ್ಲಿ 556 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. 36 ವಿದ್ಯಾರ್ಥಿ ಫೇಲ್ ಆಗಿದ್ದರೆ, 351 ರಿಪೀರೆರ್ಸ್ ಪೈಕಿ 183 ಜನ ಪಾಸ್ ಆಗಿದ್ದು, 168 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಇನ್ನು 17470 ಖಾಸಗಿ ಅಭ್ಯರ್ಥಿ ಪೈಕಿ 4768 ಪಾಸ್ 12,702 ವಿದ್ಯಾರ್ಥಿಗಳ ಫೇಲ್ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ

  ಸಿಇಟಿ ಫಲಿತಾಂಶ
  ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆದಿದ್ದ ಕರ್ನಾಟಕ ಸಿಇಟಿ (KCET Result) ಫಲಿತಾಂಶ ಇಂದು ಪ್ರಕಟವಾಗಿದೆ. ಮೈಸೂರಿನ ಮೇಘನ್ ಹೆಚ್​​.ಕೆ - ಮೊದಲ ಸ್ಥಾನ ಪಡೆದರೆ, ಬೆಂಗಳೂರಿನ ಪ್ರೇಮಂಕುರ್ ಎರಡನೇ ಸ್ಥಾನ ಪಡೆದಿದ್ದಾರೆ, ಬಿಎಸ್ ಅನಿರುಧ್ ಮೂರನೇ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಫಲಿತಾಂಶ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉನ್ನ ತ ಶಿಕ್ಷಣ ಸಚಿವ ಡಾ. ಅಶ್ವಥ್​ ನಾರಾಯಣ, ಎಂಜಿನಿಯರಿಂಗ್​, ಬಿಫಾರ್ಮ್​, ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಯೋಗ ಮತ್ತು ನ್ಯಾಚುರೋಪಥಿ ಎಲ್ಲಾ ವಿಭಾಗದಲ್ಲೂ ಮೈಸೂರಿನ ಪ್ರಮತಿ ಹಿಲ್ ಅಕಾಡೆಮಿ ವಿದ್ಯಾರ್ಥಿ ಮೇಘನ್​ ಹೆಚ್​​.ಕೆ (Meghan H K) ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದರು.

  ಸದನದಲ್ಲಿ  ಬೆಲೆ ಏರಿಕೆ ಪ್ರಸ್ತಾಪಕ್ಕೆ ಸಿಎಂ ಉತ್ತರ
  ಪೆಟ್ರೋಲ್​, ಡಿಸೇಲ್​ ಮತ್ತು ಅಡುಗೆ ಏಣ್ಣೆ (petrol diesel Price) ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಕಾಂಗ್ರೆಸ್​ ಮಂಡಿಸಿದ್ದ ಪ್ರಸ್ತಾಪ ಕುರಿತು ಇಂದು ಸದನದಲ್ಲಿ (Karnataka Assembly) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಿಸಿದರು. . ಬೆಲೆ ಏರಿಕೆ ಕುರಿತ ವಿಪಕ್ಷಗಳ ಪ್ರಶ್ನೆಗೆ ಇಂದು ಸದನದಲ್ಲಿ ಉತ್ತರಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಬೆಲೆ ಇಳಿಕೆ ಕುರಿತು ಸರ್ಕಾರದ ನೈತಿಕತೆ ಪ್ರಶ್ನೆ ಮಾಡುವ ಹಕ್ಕು ಸಿದ್ದರಾಮಯ್ಯ ಅವರಿಗೆ ಇಲ್ಲ. ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ ಬೆಲೆ ಏರಿಕೆ ಆದಾಗ ಮಧ್ಯ ಪ್ರದೇಶದಲ್ಲಿ ಸೆಸ್ ಕಡಿಮೆ ಮಾಡಿತ್ತು. ಆಗ ಕಡಿಮೆ ಮಾಡಿ, ಅಂದ್ರೇ ನೀವು ಮಾಡಿಲ್ಲ. ಈಗ ನಾವು ಸೆಸ್ ಕಡಿಮೆ ಮಾಡಬೇಕು ಎಂದು ಒತ್ತಾಯಿಸುತ್ತೀರಾ. ಇದು ಯಾವ ನೈತಿಕತೆ ಎಂದು ಪ್ರಶ್ನಿಸಿದರು.

  ಕಾಂಗ್ರೆಸ್​ ಸೈಕಲ್​ ಜಾಥಾ
  ದಿನದಿಂದ ದಿನಕ್ಕೆ ತೆರಿಗೆ ಏರಿಸುತ್ತಿರುವುದೇ ಬೆಲೆ ಏರಿಕೆಗೆ ಕಾರಣವಾಗಿದ್ದು, ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಇಂದು ಕಾಂಗ್ರೆಸ್​  ನಾಯಕರು ಸೈಕಲ್ ಜಾಥ ನಡೆಸುವ ಮೂಲಕ ಪ್ರತಿಭಟಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ , ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ , ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ನೇತೃತ್ವದಲ್ಲಿ ಶಾಸಕರು ಕಾಂಗ್ರೆಸ್ ಕಚೇರಿಯಿಂದ ವಿಧಾನಸೌಧದವರೆಗೆ ಇಂದು ಸೈಕಲ್ ಜಾಥಾ (Cycle Jatha) ಮಾಡಿ, ಪ್ರತಿಭಟಿಸಿದ್ದಾರೆ.

  ಗೋವಾ ಮತ್ತೆ ಪ್ರವಾಸಿಗರಿಗೆ ಮುಕ್ತ
  ಕೊರೋನಾ ಕೇಸ್‌ಗಳು ಕಡಿಮೆಯಾಗುತ್ತಿದ್ದಂತೆ ಗೋವಾದಲ್ಲಿ ಪ್ರವಾಸೋದ್ಯಮ (Goa Tourism)ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ರಾಜ್ಯ ಕಾರ್ಯಪಡೆಯು ಸೆಪ್ಟೆಂಬರ್ 20ರಿಂದ ಅಂದರೆ ಇಂದಿನಿಂದ ಎಲ್ಲ ಪ್ರವಾಸೋದ್ಯಮ ಚಟುವಟಿಕೆಗಳನ್ನು ಪುನಃ ತೆರೆಯಲು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಸರ್ಕಾರ ಸಹ ಇದಕ್ಕೆ ಒಪ್ಪಿಗೆ ನೀಡಿದ್ದು, ಇಂದಿನಿಂದ ಗೋವಾದ ಪ್ರವಾಸೋದ್ಯಮ ಚಟುವಟಿಕೆಯಿಂದ ಕೂಡಿರಲಿದ್ದು, ಇದು ಇಲ್ಲಿಗೆ ಭೇಟಿ ನೀಡುವವರಿಗೆ ಮತ್ತಷ್ಟು ಕಿಕ್‌ ನೀಡಲಿದೆ. ಕ್ಯಾಸಿನೋ, ನೈಟ್‌ ಕ್ಲಬ್‌ಗಳ ಜತೆಗೆ ಸ್ಪಾಗಳು ಕೂಡ ಸೋಮವಾರದಿಂದ ಶೇಕಡಾ 50 ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬಲ್ಲವು. ಆದರೆ, ಓಪನ್‌ ಆಗುವ ಮುನ್ನ ಎಲ್ಲ ಸಿಬ್ಬಂದಿ ಸಂಪೂರ್ಣ ಲಸಿಕೆ ಪಡೆದಿರಬೆಕು ಅಥವಾ ಕೋವಿಡ್ - 19 RTPCR ನೆಗೆಟಿವ್‌ ರಿಪೋರ್ಟ್ ತೋರಿಸಬೇಕು ಎಂದೂ ಹೇಳಲಾಗಿದೆ.

  ರಾಜ್​ ಕುಂದ್ರಾಗೆ ಜಾಮೀನು
  ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲು ಸೇರಿದ್ದ ಬಾಲಿವುಡ್​ ಬೆಡಗಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್​ ಕುಂದ್ರಾಗೆ (Raj Kundra) ಮುಂಬಯಿ ನ್ಯಾಯಾಲಯ (Mubai Court) ಜಾಮೀನು ನೀಡಿದೆ. 50 ಸಾವಿರ ಶ್ಯೂರಿಟಿಯೊಂದಿಗೆ ನ್ಯಾಯಾಲಯ ಜಾಮೀನು ನೀಡಿದೆ. ಈ ಹಿಂದೆ ಜಾಮೀನು ಕೋರಿ ರಾಜ್​ ಕುಂದ್ರಾ ಸೆಷನ್ಸ್​ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಸೆಷನ್ಸ್​ ನ್ಯಾಯಾಲಯ ಈ ಅರ್ಜಿ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಅವರು ಬಾಂಬೆ ಹೈ ಕೋರ್ಟ್​ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ.
  Published by:Seema R
  First published: