Evening Digest: ದ್ವಿಪತ್ನಿತ್ವದ ಬಗ್ಗೆ HDK ಸ್ಪಷ್ಟನೆ; ಕಾಂಗ್ರೆಸ್-ಬಿಜೆಪಿ ಮಧ್ಯೆ ‘ಹೆಬ್ಬೆಟ್ ಗಿರಾಕಿ’ ಫೈಟ್; ಇಂದಿನ ಪ್ರಮುಖ ಸುದ್ದಿಗಳು

Kannada news Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ಹೌದು ತಪ್ಪಾಗಿತ್ತು, ಆದರೆ ತಿದ್ದುಕೊಂಡಿದ್ದೇನೆ: RSS ಸಂಬಂಧ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ(hd kumaraswamy) ಹಾಗೂ ಬಿಜೆಪಿಗರ (BJP) ಮಧ್ಯೆ ವಾಕ್ಸಮರ ತಾರಕಕ್ಕೇರಿದೆ. ಸಿಂದಗಿ ಉಪ ಚುನಾವಣೆ(By election) ಪ್ರಚಾರದಲ್ಲಿ ತೊಡಗಿರುವ ಎಚ್​ಡಿಕೆ ಬಿಜೆಪಿಗರ ಹೇಳಿಕೆಗಳಿಗೆ ತಿರುಗೇಟು ನೀಡಿದರು. ದ್ವಿಪತ್ನಿತ್ವದ ಬಗ್ಗೆ ಪ್ರಶ್ನಿಸಿದ ಬಿಜೆಪಿ ಮುಖಂಡರ ವಿರುದ್ಧವೂ ಎಚ್​ಡಿಕೆ ಕೆಂಡಾಮಂಡಲರಾದರು. ಟೀಕೆಗಳು ವೈಯಕ್ತಿಕವಾಗಿ ಬೇಡ, ಎಲ್ಲರಿಗೂ ರಹಸ್ಯಗಳು ಇವೆ. ಒಂದೊಂದಾಗಿ ಹೇಳುತ್ತಾ ಹೋದರೆ, ಅವರ ಹತ್ತು ಪಟ್ಟು ನಾನು ಕೆಸರೆರಚಬಲ್ಲೆ ಎಂದು ಟಾಂಗ್ ಕೊಟ್ಟರು. ಅಭಿವೃದ್ಧಿ ಪರ ಚರ್ಚೆಗಳಲಿರಲಿ, ವೈಯಕ್ತಿಕ ಟೀಕೆಗಳು ಬೇಡ. RSS ಪ್ರಮುಖ ನಾಯಕರ ಕುಟುಂಬಗಳಿಗೇನಾಗಿದೆ ಎಲ್ಲವೂ ಗೊತ್ತು. ಬಿಜೆಪಿಯವರ ಬಂಡವಾಳ ಒಂದೊಂದಾಗಿ ಹೇಳ್ತಾ ಹೋದರೆ ಬಹಳ ಇವೆ ಎಂದು ಕಿಡಿಕಾರಿದರು.

ಬಿಜೆಪಿಗರ ವಿರುದ್ಧ ಡಿಕೆಶಿ ಕೆಂಡಾಮಂಡಲ

 ಬಿಜೆಪಿ ನಾಯಕರು ಇತ್ತೀಚೆಗೆ "ರಾಹುಲ್ ಗಾಂಧಿ ಹೆಬ್ಬಟ್​ ಗಿರಾಕಿ" ಎಂದು ಮಾಡಿದ್ದ ಟ್ವೀಟ್​ಗೆ ಪ್ರತಿಯಾಗಿ ನಿನ್ನೆ ಕಾಂಗ್ರೆಸ್​ ಸಹ ಪ್ರಧಾನಿ ನರೇಂದ್ರ ಮೋದಿಯವರೇ ನಿಜವಾದ "ಹೆಬ್ಬೆಟ್​ ಗಿರಾಕಿ" ಎಂದು ಟ್ವೀಟ್​ ಮಾಡಿತ್ತು. ಆದರೆ, ಕೆಲವೇ ನಿಮಿಷಗಳಲ್ಲಿ ಎಚ್ಚೆತ್ತಿದ್ದ ಕಾಂಗ್ರೆಸ್​ ನಾಯಕ ಡಿ.ಕೆ. ಶಿವಕುಮಾರ್ (DK Shivakumar)​ ಆ ಟ್ವೀಟನ್ನು ಡಿಲೀಟ್​ ಮಾಡಿ ಕ್ಷಮೆ ಕೋರಿದ್ದರು. ಆದರೆ, ಇಷ್ಟಕ್ಕೆ ಸುಮ್ಮನಾಗದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಳ್ (Nalin Kumar Katil) ಮತ್ತು ಬಸನಗೌಡ ಪಾಟೀಲ್ (Basanagowda Patil Yatnal) ಸೇರಿದಂತೆ ಅನೇಕ ನಾಯಕರು "ರಾಹುಲ್ ಗಾಂಧಿ ಮಾದಕ ವ್ಯಸನಿ" ಎಂದು ಮತ್ತೆ ವ್ಯಯಕ್ತಿಕ ದಾಳಿ ನಡೆಸಲು ಮುಂದಾಗಿದ್ದಾರೆ. ಈ ದಾಳಿಗೆ ವಿಷಾಧ ವ್ಯಕ್ತಪಡಿಸಿರುವ ಡಿ.ಕೆ. ಶಿವಕುಮಾರ್​ "ಬಿಜೆಪಿ (BJP) ನಾಯಕರು ಮೊದಲು ನಾಗರೀಕರಂತೆ ವರ್ತಿಸುವುದನ್ನು ಕಲಿಯಲಿ" ಎಂದು ಕಿಡಿಕಾರಿದ್ದಾರೆ.

RSS ವಿರುದ್ಧ ಜೆಡಿಎಸ್​ ಕಿಡಿಕಿಡಿ

ಆರ್​ಎಸ್​ಎಸ್ (RSS)​ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (Former CM HD Kumaraswamy) ಅವರು ಟೀಕಿಸಿ, ಕೆಲವು ಪ್ರಶ್ನೆಗಳನ್ನು ಎತ್ತಿದ್ದರು. ಇದೀಗ ಮುಂದುವರೆದ ಭಾಗವಾಗಿ ಜೆಡಿಎಸ್ (JDS) ಆರ್​ಎಸ್​ಎಸ್​ ಬಗ್ಗೆ ಹೆಚ್ಡಿಕೆ ಎತ್ತಿದ ಪ್ರಶ್ನೆಗಳಿಗೆ ಉತ್ತರ ನೀಡುವ ಎದೆಗಾರಿಕೆ ಏಕೆ ತೋರಲಿಲ್ಲ ಎಂದು ಕೇಳಿದೆ. ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಆರ್.ಎಸ್.ಎಸ್ ಬಗ್ಗೆ ಕೆಲ ಮೂಲಭೂತ ಪ್ರಶ್ನೆಗಳನ್ನು ಎತ್ತಿದ್ದರು. ಅವು ಸತ್ಯವೂ, ಜನರಿಗೆ ತಿಳಿಯಲೇಬೇಕಾದ ತುರ್ತು ಅಂಶಗಳೂ ಹೌದು. ಇವುಗಳಲ್ಲಿ ಐಎಎಸ್ ಅಧಿಕಾರಿಗಳಿಗೆ ಸಂಘದ ವತಿಯಿಂದ ತರಬೇತಿ ನೀಡಿ ಕಳಿಸಿದೆ ಎನ್ನುವುದೂ ಒಂದು ಅಂಶ ಎಂದು ಜೆಡಿಎಸ್​ ಟ್ವೀಟ್​ ಮೂಲಕ  ಹೇಳಿದೆ. 

ಅಮೆರಿಕದಲ್ಲಿ ರೈಲಿ​ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ

ಅಮೆರಿಕದ (America) ಫಿಲಿಡೆಲ್ಪಿಯಾದ ಸಬ್​ವೇ ಟ್ರೈನ್​ನಲ್ಲಿ (Philadelphia subway) ಯುವತಿಯ ಮೇಲೆ ಅತ್ಯಾಚಾರ (Rape) ಘಟನೆ ನಡೆದಿದ್ದು, ಇದನ್ನು ಸಹ ಪ್ರಯಾಣಿಕರು ವಿಡಿಯೋ ಚಿತ್ರೀಕರಣ ನಡೆಸುತ್ತಿದ್ದ ಅಮಾನವೀಯ ಘಟನೆ ನಡೆದಿದೆ. ಘಟನೆ ವೇಳೆ ಯಾರು ಕೂಡ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಆಗ್ನೇಯ ಪೆನ್ಸಿಲ್ವೇನಿಯಾ ಸಾರಿಗೆ ಪ್ರಾಧಿಕಾರ (Southeastern Pennsylvania Transportation Authority- Septa))ದ ರೈಲಿನಲ್ಲಿ ಅಕ್ಟೋಬರ್ 13 ರ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿ ಎಂದು ಸೆಪ್ಟಾ ಟ್ರಾನ್ಸಿಟ್ ಪೋಲಿಸ್ ಮುಖ್ಯಸ್ಥ ಥಾಮಸ್ ನೆಸ್ಟೆಲ್ ತಿಳಿಸಿದ್ದಾರೆ.

ವಿನಯ ಗುರೂಜಿ ಭೇಟಿ ಮಾಡಿದ ನಿಖಿಲ್​ ಕುಮಾರಸ್ವಾಮಿ

ಸ್ಯಾಂಡಲ್​​ವುಡ್​ ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರು ವಿಜಯ್ ಗರೂಜಿ ಅವರನ್ನು ಭೇಟಿ ಮಾಡಿದ್ದು, ಅವರ ಆಶೀರ್ವಾದ ಪಡೆದಿದ್ದಾರೆ. ಅವರ ಜತೆಗಿನ ಕೆಲವು ಚಿತ್ರಗಳನ್ನು ನಿಖಿಲ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸ್ಯಾಂಡಲ್​ವುಡ್​ ಯುವರಾಜ ನಿಖಿಲ್ ಕುಮಾರಸ್ವಾಮಿ ಅವರು ಮನೆಗೆ ಮಗನನ್ನು ಬರಮಾಡಿಕೊಂಡಿರುವ ಸಂತಸದಲ್ಲಿದ್ದಾರೆ.ಇದರ ಜೊತೆಗೆ ಅವರ ಸಿನಿಮಾ ರೈಡರ್​ ಚಿತ್ರದ ಕೆಲಸಗಳೂ ಸಹ ಆರಂಭವಾಗಿವೆ. ಇತ್ತೀಚೆಗಷ್ಟೆ ಚಿತ್ರ ಮೊದಲ ವಿಡಿಯೋ ಹಾಡು ರಿಲೀಸ್​ ಆಗಿದೆ.
Published by:Kavya V
First published: