Evening Digest: ಮೋದಿ ಕರ್ನಾಟಕ ಪ್ರವಾಸ, ಪವಿತ್ರಾ ಲೋಕೇಶ್ ಮದುವೆ ವದಂತಿ! ಇವು ಈ ಸಂಜೆಯ ಟಾಪ್‌ ನ್ಯೂಸ್‌ಗಳು

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ...

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಕನ್ನಡಿಗರಿಗೆ ಮೋಸ ಮಾಡಿ ರಾಜ್ಯಕ್ಕೆ ಯೋಗ ಮಾಡಲು ಬಂದ ಮೋದಿ- ಸಿದ್ದರಾಮಯ್ಯ

ಬೆಂಗಳೂರು (ಜೂ 20) : ಪ್ರಧಾನಿ ನರೇಂದ್ರ ಮೋದಿಯವರು (Narendra Modi) ರಾಜ್ಯ ಪ್ರವಾಸದಲ್ಲಿದ್ರೆ. ಇತ್ತ ಕಾಂಗ್ರೆಸ್​ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯನವರು ಸುದ್ದಿಗೋಷ್ಠಿಯನ್ನು ನಡೆಸಿ ನರೇಂದ್ರ ಮೋದಿ ಮತ್ತು ಬಿಜೆಪಿ ಕೇಂದ್ರ ಸರ್ಕಾರದಿಂದ (Central Government) ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ದ ಹರಿಹಾಯ್ದಿದ್ದಾರೆ.  2019 ಹಾಗೂ ನಂತರದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಭಾರಿ ಪ್ರಮಾಣದ ಪ್ರವಾಹ ಬಂತು, ಆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ (State) ಬಂದು ಜನರಿಗೆ ಸಾಂತ್ವನ ಹೇಳಿಲ್ಲ, ವಿಶೇಷ ಅನುದಾನ ನೀಡುವ ಕೆಲಸ ಮಾಡಿಲ್ಲ. ಇದರ ಜೊತೆಗೆ ರಾಜ್ಯಕ್ಕೆ ಯಾವೆಲ್ಲಾ ಅನ್ಯಾಯ ಆಗಿದೆ, ಜನದ್ರೋಹ ಆಗಿದೆ ಎಂದು ತಮಗೆಲ್ಲ ಗೊತ್ತಿದೆ ಎಂದು ಸಿದ್ದರಾಮಯ್ಯ (Siddaramaiah) ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಮೋದಿಯವರ ಸಹಕಾರದಿಂದ ನವ ಕರ್ನಾಟಕದ ಕನಸು ನನಸು

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ತಮ್ಮ ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿಯವರನ್ನು (PM Narendra Modi) ಹಾಡಿ ಹೊಗಳಿದ್ದಾರೆ. ಬೆಂಗಳೂರಿನ (Bengaluru) ಕೊಮ್ಮಘಟ್ಟದಲ್ಲಿ (Koammaghatta) ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಸಹಕಾರ (Co-Operation) ಮತ್ತು ಆಶೀರ್ವಾದದಿಂದ ನವ ಕರ್ನಾಟಕದ ಕನಸು ನನಸಾಗುತ್ತಿದೆ ಅಂತ ಹೇಳಿದ್ರು. ಇನ್ನು ಕೊಮ್ಮಘಟ್ಟದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ, ವಿವಿಧ ಸರ್ಕಾರಿ ಯೋಜನೆಗಳ ಲೋಕಾರ್ಪಣೆ (Government Project Inauguration) ಮಾಡಿದ್ರು. ಜೊತೆಗೆ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಇದನ್ನೂ ಓದಿ: Modi in Karnataka: ಮೋದಿಯವರ ಸಹಕಾರದಿಂದ ನವ ಕರ್ನಾಟಕದ ಕನಸು ನನಸು -ಭಾಷಣದಲ್ಲಿ ಪ್ರಧಾನಿ ಹೊಗಳಿದ ಸಿಎಂ

ಬೆಂಗಳೂರಿಗರನ್ನು ಹಾಡಿಹೊಗಳಿದ ಮೋದಿ

ಬೆಂಗಳೂರು (ಜೂ 20): ಕೊಮ್ಮಘಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ರು. ಸಬ್ ಅರ್ಬನ್  ರೈಲ್ವೆ (Suburban Railway) ಯೋಜನೆಯ ಅಂಚೆ ಚೀಟಿ ಬಿಡುಗಡೆ ಮಾಡಿದರು. ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳ (National Highway) ಯೋಜನೆಗಳ ಪ್ರದರ್ಶನವನ್ನು ವೀಕ್ಷಿಸಿ, ಬೆಂಗಳೂರಿನ ಸರ್. ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್, ಯಲಹಂಕ- ಪೆನುಕೊಂಡ ಮತ್ತು ಅರಸೀಕೆರೆ-ತುಮಕೂರು ಜೋಡಿ ರೈಲು ಮಾರ್ಗ ಹಾಗೂ 100% ವಿದ್ಯುದೀಕರಣಗೊಂಡ ಕೊಂಕಣ ರೈಲು ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇದೇ ವೇಳೆ ಕನ್ನಡದಲ್ಲೇ (Kannada) ಭಾಷಣ ಆರಂಭಿಸಿದ ಮೋದಿ ಬೆಂಗಳೂರಿಗರನ್ನು (Bengaluru) ಹಾಡಿ ಹೊಗಳಿದ್ದಾರೆ.

Pavitra Lokesh ಮದುವೆಯಾಗಿರುವ ಆ ನಟನ ಆಸ್ತಿ 6000 ಕೋಟಿಯಂತೆ! ಆತನಿಗೆ ಇದು ನಾಲ್ಕನೇ ಮದುವೆ

ಪವಿತ್ರ ಲೋಕೇಶ್ (Pavithra Lokesh)​ ಹೆಸರು ಕೇಳಿದವರೇ ಇಲ್ಲ. ಸ್ಯಾಂಡಲ್​ವುಡ್​ (Sandalwood)ನಲ್ಲಿ ತಮ್ಮದೇ ಆದ ಸ್ಪೇಸ್​ ಹೊಂದಿದ್ದಾರೆ ಪವಿತ್ರ ಲೋಕೇಶ್​. ತಮ್ಮ ಅಭಿನಯದ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ್ದರು. ಕೇವಲ ಕನ್ನಡ ಚಿತ್ರರಂಗಷ್ಟೇ ಅಲ್ಲದೇ, ತಮಿಳು (Tamil), ತೆಲುಗು (Telugu) , ಸಿನಿಮಾಗಳಲ್ಲೂ ತಮ್ಮ  ಪ್ರಭಾವ ಬೀರುತ್ತಿದ್ದಾರೆ. ಪವಿತ್ರ ಲೋಕೇಶ್ ಒಬ್ಬ ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ನಟಿ. ರಂಗಭೂಮಿ ಮತ್ತು ಚಲನಚಿತ್ರ ನಟ ಮೈಸೂರು ಲೋಕೇಶ್ ಅವರ ಮಗಳು. ಪವಿತ್ರ ಲೋಕೇಶ್ ತನ್ನ 16 ನೇ ವಯಸ್ಸಿನಲ್ಲಿ ಅಭಿನಯಿಸಿ ಎಲ್ಲರ ಮನಸ್ಸು ಗೆದ್ದಿದ್ದರು. 150 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. 2006ರಲ್ಲೀ ತೆರೆಕಂಡ ಕನ್ನಡದ ಚಿತ್ರವಾದ ನಾಯಿ ನೆರಳು ಚಿತ್ರದಲ್ಲಿನ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇದೀಗ ಪವಿತ್ರ ಲೋಕೇಶ್​ ಸಖತ್​ ಸುದ್ದಿಯಾಗ್ತಿದ್ದಾರೆ. ಮತ್ತೊಂದು ಮದುವೆ ಆಗಿದ್ದಾರೆ ಎಂಬ ಗುಸುಗುಸು ಹಬ್ಬಿದೆ.

ಇದನ್ನೂ ಓದಿ: Pavitra Lokesh: ಪವಿತ್ರಾ ಲೋಕೇಶ್‌ಗೆ ಸೌಂದರ್ಯ, ಪ್ರತಿಭೆ ಇದ್ದರೂ ಅಂದು ಸಿಗಲಿಲ್ಲ ಅವಕಾಶ! ಇಂದು ಪರಭಾಷೆಯಲ್ಲಿ ಇವರೇ ಸ್ಟಾರ್ ಅಮ್ಮ!

ಒಂದಲ್ಲ ಒಂದ್ ದಿನ ಸ್ಫೋಟ ಆಗುತ್ತೆ, ಯಾರನ್ಯಾರು ತಡೆಯೋಕಾಗಲ್ಲ; ಲಕ್ಷ್ಮಿ ಹೆಬ್ಬಾಳ್ಕರ್

ದೇಶದ ಪ್ರಧಾನಿ ನರೇಂದ್ರ ಮೋದಿ (PM Narendra Modi) ರಾಜ್ಯಕ್ಕೆ ಬಂದಿದ್ದಾರೆ ಅಂದ್ರೆ ಮರ್ಯಾದೆ ಕೊಡೋದು ಪ್ರತಿಯೊಬ್ಬರ ಕರ್ತವ್ಯ. ಕಾಂಗ್ರೆಸ್ ನವರು (Congress) ಆಗಿರಬಹುದು ಬೇರೆ ಯಾರೋ ಆಗಿರಬಹುದು. ಕಾನೂನು ಸುವ್ಯವಸ್ಥೆ ಹದಗೆಡಬಾರದು ಅಂತಾ ಪೊಲೀಸರು (Police) ಕ್ರಮ ಕೈಗೊಂಡಿರಬಹುದು. ಎಲ್ಲಾ ಕಡೆ ಬೆಂಕಿ ಹಚ್ಚೋದು ಕಲ್ಲು ಒಡೆಯೋದು ನಡೀತಿದೆ ಅದಕ್ಕೋಸ್ಕರ ಮುಂಜಾಗ್ರತೆ ತಗೆದುಕೊಂಡಿರಬಹುದು. ಆದ್ರೆ ಪ್ರತಿಭಟನೆ ಒಂದು ದಿನ ತಡೆಯಬಹುದು, ಎಷ್ಟು ದಿನ ಇರ್ತಾರೆ. ಶಿವಮೊಗ್ಗದಿಂದ (Shivamogga) ಱಪಿಡ್  ಆ್ಯಕ್ಷನ್ ಫೋರ್ಸ್ ತರಿಸಿದ್ದು ಎಷ್ಟು ದಿನ ಜಿಲ್ಲೆಯಲ್ಲಿ ಇರ್ತಾರೆ. ಒಂದಿಲ್ಲ ಒಂದ್ ದಿನ ಸ್ಫೋಟ ಆಗುತ್ತೆ, ಯಾರನ್ಯಾರು ತಡೆಯೋಕಾಗಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (MLA Laxmi Hebbalkar) ಹೇಳಿದರು.
Published by:Annappa Achari
First published: