Evening Digest: ರಾಜ್ಯದಲ್ಲಿ ಶಾಲೆಗಳು ಆರಂಭ ಯಾವಾಗ? SSLC ಪರೀಕ್ಷೆ ಸಂಬಂಧ ಮಹತ್ವದ ಮಾಹಿತಿ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ರಾಜ್ಯದಲ್ಲಿ ಶಾಲೆಗಳು ಆರಂಭ ಯಾವಾಗ? : ಕೊರೊನಾ ವೈರಸ್ ಮತ್ತು ಓಮೈಕ್ರಾನ್ (Corona Virus And Omicron) ಸಂಬಂಧ ಶಾಲೆಗಳನ್ನು (Schools) ಬಂದ್ ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಗಳಿಗೆ ನೀಡಲಾಗಿದೆ. ಅಂತೆಯೇ ರಾಜ್ಯದಲ್ಲಿ ತಾಲೂಕುವಾರು ಶಾಲೆಗಳನ್ನು ಬಂದ್ ಮಾಡಲಾಗಿದೆ. ಇತ್ತ ಬೆಂಗಳೂರಿನಲ್ಲಿ (Bengaluru School) ಜನವರಿ 31 ರವರೆಗೆ 1 ರಿಂದ 9ನೇ ತರಗತಿಗಳನ್ನು ಬಂದ್ ಮಾಡಿ, ಆನ್ ಲೈನ್ ಕ್ಲಾಸ್ (Online Class) ಗೆ ಉತ್ತೇಜನ ನೀಡಲಾಗಿದೆ. ಇಂದು ಶಾಲೆಗಳನ್ನು ಪುನರಾರಂಭಿಸುವ ಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Education Minister B.C.Nagesh) ಮಾಹಿತಿ ನೀಡಿದರು.

ಪೂರ್ತಿ ಓದಿಗಾಗಿ ಕ್ಲಿಕ್ ಮಾಡಿ:B.C.Nagesh: ರಾಜ್ಯದಲ್ಲಿ ಶಾಲೆ ಆರಂಭ ಯಾವಾಗ? ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವರ ಮಾಹಿತಿ

SSLC ಪೂರ್ವ ಸಿದ್ದತಾ ಪರೀಕ್ಷೆ ವೇಳಾಪಟ್ಟಿ
ಕೊರೊನಾ, ಓಮಿಕ್ರಾನ್ ಪ್ರಕರಣ ಹೆಚ್ಚಳದ ಮಧ್ಯೆಯೂ ರಾಜ್ಯದಲ್ಲಿ SSLC ಪರೀಕ್ಷೆಗಳಿಗೆ ಸಿದ್ಧತೆ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ 2021-22ನೇ ಸಾಲಿನ SSLC ಪೂರ್ವ ಸಿದ್ದತಾ ಪರೀಕ್ಷೆ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಮಾಡದ್ದು, ಫೆಬ್ರವರಿ 21 ರಿಂದ 26 ರವರೆಗೆ SSLC ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದೆ ನಡೆಯಲಿದೆ. SSLC ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿ ಹೀಗಿದೆ. ಫೆ.21 ಸೋಮವಾರ - ಪ್ರಥಮ ಭಾಷೆ - ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್(NCERT), ಸಂಸ್ಕೃತ ಪರೀಕ್ಷೆ ಇರಲಿದೆ.

ಪೂರ್ತಿ ಮಾಹಿತಿಗಾಗಿ ಕ್ಲಿಕ್ ಮಾಡಿ: SSLC Preparatory Exam: ಎಸ್​ಎಸ್​ಎಲ್​​ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಟೈಮ್ ಟೇಬಲ್

ದ್ವೇಷ ಮರೆತು ಒಂದಾದ ರೇಣುಕಾಚಾರ್ಯ, ಯತ್ನಾಳ್
ಹಾವು, ಮುಂಗುಸಿಯಂತಿದ್ದ ಬಿಜೆಪಿ(BJP) ನಾಯಕರಿಬ್ಬರು ಈಗ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬಿ.ಎಸ್.ಯಡಿಯೂರಪ್ಪ (BS Yediyurappa) ಸಿಎಂ ಆಗಿದ್ದ ಅವಧಿಯಲ್ಲಿ ಪರಸ್ಪರ ವಾಕ್ಸಮರ, ಏಕವಚನದಲ್ಲೇ ವಾಗ್ದಾಳಿಗಳನ್ನು ನಡೆಸುತ್ತಿದ್ದ ಬಿಜೆಪಿ ಶಾಸಕರುಗಳಾದ ಎಂ.ಪಿ.ರೇಣುಕಾಚಾರ್ಯ(MP Renukacharya), ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಈಗ ದೋಸ್ತಿಗಳಾಗಿದ್ದಾರೆ. ಈಗಿನ ಬೊಮ್ಮಾಯಿ ಸರ್ಕಾರದಲ್ಲಿ ಇಬ್ಬರು ಈಗ ಗೆಳೆತನದ ಹಸ್ತಚಾಚಿದ್ದಾರೆ. ಹಳೆ ಸಿಟ್ಟು ಮರೆತು ಇಬ್ಬರೂ ನಾಯಕರು ಒಂದಾಗಿದ್ದಾರೆ. ಶಾಸಕ ಬಸನಗೌಡ ಯತ್ನಾಳ್, ರೇಣುಕಾಚಾರ್ಯ ನಡುವೆ ರಾಜಿ ಪಂಚಾಯ್ತಿ ಆದಂತೆ ಕಾಣುತ್ತಿದೆ. ವಿಕಾಸಸೌಧದ ಕಚೇರಿಯಲ್ಲಿ ಉಭಯ ನಾಯಕರ ಮಿಲನ ಆಗಿದೆ. ರೇಣುಕಾಚಾರ್ಯ ಕಚೇರಿಗೆ ತೆರಳಿ ಯತ್ನಾಳ್ ಇಂದು ಸುಮಾರು ಅರ್ಧಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದರು. ಹಳೆಯ ಜಿದ್ದಿಗೆ ಇಬ್ಬರಿಂದಲೂ ವಿರಾಮ ಹಾಕಿದ್ದು, ಬೇರೆಯವರ ಅನುಕೂಲಕ್ಕಾಗಿ ನಾವ್ಯಾಕೆ ಕಚ್ಚಾಡಬೇಕು. ನಮಗೆ ಅದರಿಂದ ಯಾವುದೇ ಲಾಭ ಇಲ್ಲ. ಇನ್ಮುಂದೆ ಸೌಹಾರ್ದವಾಗಿ ಇರೋಣ ಎಂದು ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಬೊಮ್ಮಾಯಿ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಇಬ್ಬರೂ ನಾಯಕರಿಂದ ಲಾಬಿ ನಡೆಸುತ್ತಿದ್ದಾರೆ.

SP ಮುಖಂಡ ಅಖಿಲೇಶ್ ಯಾದವ್ ಸ್ಪರ್ಧೆ ಎಲ್ಲಿಂದ?
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Samajwadi Party Chief Akhilesh Yadav) ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ (Uttar Pradesh Assembly Elections) ಸ್ಪರ್ಧೆ ಮಾಡಲಿದ್ದಾರೆ ಎಂಬ ಸುಳಿವು ಬಿಟ್ಟುಕೊಟ್ಟ ಬೆನ್ನಲ್ಲೇ ಹಲವು ರೀತಿಯ ಕುತೂಹಲ ಹುಟ್ಟುಕೊಂಡಿವೆ. ಕಳೆದ ಬಾರಿ ಸ್ಪರ್ಧೆ ಮಾಡದಿದ್ದ ಅಖಿಲೇಶ್ ಯಾದವ್ ಈ ಬಾರಿ ಏಕೆ ಸ್ಪರ್ಧಿಸುತ್ತಿದ್ದಾರೆ ಎಂಬ ಕುತೂಹಲದಿಂದ ಹಿಡಿದು ಅವರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬಹುದು ಎಂಬ ಕುತೂಹಲ ಹುಟ್ಟುಹಾಕಿದೆ. ಇಲ್ಲಿಯವರೆಗೆ ಕ್ಷೇತ್ರಗಳ ಹೆಸರುಗಳು ಕೇಳಬರತೊಡಗಿವೆ.

'ಕಿರಾತಕ' ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರದೀಪ್ ರಾಜ್ ನಿಧನ
ಕಿರಾತಕ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರದೀಪ್ ರಾಜ್ ನಿಧನ ಹೊಂದಿದ್ದಾರೆ. ಪ್ರದೀಪ್ ರಾಜ್ ಹಲವು ವರ್ಷಗಳಿಂಡ ಡಯಾಬಿಟಿಸ್ ನಿಂದ ಬಳಲುತ್ತಿದ್ದರು. ಕೆಲ ದಿನಗಳ ಹಿಂದೆ ಪ್ರದೀಪ್ ರಾಜ್ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ ಮೂರು ಗಂಟೆಗೆ ಪಾಂಡಿಚೇರಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ ಎಂದು ಸೋದರ ಪ್ರಶಾಂತ್ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರದೀಪ್ ರಾಜ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪ್ರದೀಪ್ ರಾಜ್ ಅವರಿಗೆ 46 ವರ್ಷ ವಯಸ್ಸು ಆಗಿತ್ತು. ಪಾಂಡಿಚರಿಯಲ್ಲಿ ಇಂದು ಮದ್ಯಾಹ್ನ ಮೃತರ ಅಂತ್ಯಕ್ರಿಯೆ ನೆರೆವೇರಿಸಲಾಗವುದು ಎಂದು ಕುಟುಂಬಸ್ಥರು ಹೇಳಿದ್ದಾರೆ.
Published by:Kavya V
First published: