Evening Digest: ಅಶ್ವಿನಿ ಪುನೀತ್ ರಾಜ್​​​ಕುಮಾರ್​​ಗೆ ಮತ್ತೆ ಆಘಾತ: Hijab, ಕೇಸರಿ ಶಾಲು ಬಳಿಕ ಸಿಂಧೂರ ಸಮರ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಅಶ್ವಿನಿ ಪುನೀತ್ ರಾಜ್​​ಕುಮಾರ್​ಗೆ ಮತ್ತೆ ಆಘಾತ: ನಟ ಪುನೀತ್​ ರಾಜ್​ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡ ನೋವು ಮಾಸುವ ಮುನ್ನವೇ ಅಶ್ವಿನಿ ಪುನೀತ್​ ರಾಜ್​ಕುಮಾರ್ ((Ashwini Puneeth Rajkumar) ಅವರಿಗೆ ಮತ್ತೊಂದು ಆಘಾತ ಎದುರಾಗಿದೆ. ​ಇಂದು ಅಶ್ವಿನಿ ತಂದೆ (Ashwini Father) ರೇವನಾಥ್​ ನಿಧನರಾಗಿದ್ದಾರೆ. 78 ವರ್ಷದ ರೇವನಾಥ್ (Reevanath) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ​ಅಶ್ವಿನಿ ಪುನೀತ್​ ರಾಜ್​ಕುಮಾರ್ ತಂದೆ ರೇವನಾಥ್​ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾಗಮನೆಯ ಮೂಲದವರಾಗಿದ್ದಾರೆ. ಇವರು ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇಂಜಿನಿಯರ್​ ಆಗಿ ಕಾರ್ಯನಿರ್ವಹಿಸಿದ್ರು. ಚೆನ್ನಾಗಿಯೇ ಓಡಾಡಿಕೊಂಡಿದ್ದ ರೇವನಾಥ್​ ದಿಢೀರನೇ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಅಶ್ವಿನಿ ಪುನೀತ್​ ರಾಜ್​ ಕುಮಾರ್​ಗೆ ದೊಡ್ಡ ಆಘಾತ ಉಂಟುಮಾಡಿದೆ.

ಹೆಂಡ್ತಿ ಪರಪುರುಷರಿಗೆ ಸೀಕ್ರೆಟ್ ಕಾಲ್ ಮಾಡಿದ್ರೆ ತಪ್ಪಾ?

ವೈವಾಹಿಕ ಸಂಬಂಧಗಳು (Marital Status) ಎಷ್ಟು ಸೂಕ್ಷ್ಮ ಎಂದರೆ ಎಷ್ಟು ನಿಯಮಗಳು ಬಂದರೂ ಸಾಲದು. ವೈವಾಹಿಕ ಸಂಬಂಧ (Marital Relationships), ದಾಂಪತ್ಯ, ಗಂಡ-ಹೆಂಡತಿ ಜಗಳಗಳು ಕೋರ್ಟ್ (Court) ಮೆಟ್ಟಿಲೇರಿದಾಗ ಅಲ್ಲಿ ಏನಾದರೊಂದು ಹೊಸ ತಗಾದೆ ಇದ್ದೇ ಇರುತ್ತದೆ. ಪ್ರತಿಯೊಂದಕ್ಕೂ ರೂಲ್ಸ್ ಮಾಡಿ ಅದನ್ನು ಫಾಲೋ ಮಾಡುವುದೇ ಆಯಿತು. ಆದರೆ ಇಂಥಹ ಸಮಸ್ಯೆಗಳು ಬರುತ್ತಲೇ ಇರುತ್ತವೆ, ಇದೀಗ ಕೇರಳದಲ್ಲಿ (Kerala) ಹೊಸ ಸಮಸ್ಯೆಯೊಂದರ ಬಗ್ಗೆ ಅಲ್ಲಿನ ಹೈಕೋರ್ಟ್ ಸಲಹೆಯೊಂದನ್ನು ಕೊಟ್ಟಿದೆ. ವಿವಾಹಿತ ಮಹಿಳೆ ಅಪರಾತ್ರಿಯಲ್ಲಿ ಪರ ಪುರುಷನಿಗೆ ಸೀಕ್ರೆಟ್ ಕಾಲ್​ಗಳನ್ನು (Secret Calls) ಮಾಡುವುದು ಸರಿಯಾ ? ಗಂಡ ಜೊತೆಗಿದ್ದರೂ ಕದ್ದು ಮುಚ್ಚಿ ಬೇರೆ ಪುರುಷನೊಂದಿಗೆ ಮಾತನಾಡುವುದು ಅಪರಾಧವಾ ? ಹೆಂಡ್ತಿಯರು ಈ ರೀತಿ ಮಾಡಿದರೆ ಗಂಡಂದಿರ ಕಥೆ ಏನು ? ಗಂಡಂದಿರು ಇದನ್ನು ಎಚ್ಚರಿಸಬೇಕಾ ? ಎಚ್ಚರಿಸಿದರೆ ಹೆಂಡ್ತಿಯರು ಅದನ್ನು ಫಾಲೋ ಮಾಡಬೇಕಾ ? ಗಂಡ ಎಚ್ಚರಿಕೆ ಕೊಟ್ಟ ಮೇಲೂ ಅದೇ ಚಾಳಿ ಮುಂದುವರಿಸಿದರೆ ಕಥೆ ಏನು ? ಈ ಬಗ್ಗೆ ಕೇರಳದ ಹೈಕೋರ್ಟ್ ಏನು ಹೇಳಿದೆ ಕೇಳಿ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Secret Calls: ಅಪರಾತ್ರಿಯಲ್ಲಿ ಹೆಂಡ್ತಿ ಪರಪುರುಷರಿಗೆ ಸೀಕ್ರೆಟ್ ಕಾಲ್ ಮಾಡಿದ್ರೆ ತಪ್ಪಾ? ಕೇರಳ ಹೈಕೋರ್ಟ್ ಹೇಳಿದ್ದಿಷ್ಟು

‘ಇಡೀ ಕರ್ನಾಟಕದಲ್ಲಿ Hijab ಪರವಾಗಿ 100 ಜನ ಕೂಡ ಇಲ್ಲ’

ಹಿಜಬ್ ವಿಚಾರದಲ್ಲಿ ಪೋಷಕರು ಶಾಪ ಹಾಕುತ್ತಿದ್ದಾರೆ ಎಂಬ ಯು.ಟಿ ಖಾದರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಅಶೋಕ್​​, ಹಿಜಾಬ್ ಹಾಕುವವರು ಶಾಪ ಹಾಕುತ್ತಿರಬಹುದು. ಹಿಜಾಬ್ ಪರ ಮಾತನಾಡುವವರು ಕೆಲವೇ ಕೆಲವು ಜನ. ಇಡೀ ಕರ್ನಾಟಕದಲ್ಲಿ ಗುಡ್ಡೆ ಹಾಕಿದರು 100 ಜನ ಸಿಗಲ್ಲ. ಹಿಜಾಬ್ ಪರ ಇರುವವರ ಓಟು ಬೇಡ ಸಿಂಪಥಿಯೂ ಬೇಡ. ಅಂಜುಮನ್ ಇಸ್ಲಾಂ ಇಡೀ ರಾಜ್ಯದ ದೊಡ್ಡ ಶಿಕ್ಷಣ ಸಂಸ್ಥೆ. ಹಿಜಾಬ್, ಕೇಸರಿ ಮುಖ್ಯ ಅಲ್ಲ ಅಂತ ಅವರೇ ಕರೆ ಕೊಟ್ಟಿದ್ದಾರೆ. ಬಹಳಷ್ಟು ಮೌಲ್ವಿಗಳು ಹಿಜಾಬ್ ಮುಖ್ಯ ಅಲ್ಲ ಎಂದಿದ್ದಾರೆ. ದೇಶದ ಮಾತು ಕೇಳೋದು ಬಿಟ್ಟು ವಿದೇಶದ ಮಾತು ಕೇಳುತ್ತಿದ್ದಾರೆ ಎಂದು ಆರೋಪಿಸಿದರು.

Hijab, ಕೇಸರಿ ಶಾಲು ಬಳಿಕ ಸಿಂಧೂರ ಸಮರ..

ಶಾಲಾ, ಕಾಲೇಜುಗಳಲ್ಲಿ (Schools and Colleges) ಹಿಂದೂ (Hindu) ಹೆಣ್ಣು ಮಕ್ಕಳು ಸಿಂಧೂರ, ಕುಂಕುಮ (Sindur) ಇಟ್ಟುಕೊಳ್ಳುವ ಬಗ್ಗೆ ಚರ್ಚೆ ಆಗುತ್ತಿರುವ ಹಿನ್ನೆಲೆಯಲ್ಲಿ ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್(Education Minister BC Nagesh), ಕೆಲವರು ಈ ಬಗ್ಗೆ ವಿವಾದ ಮಾಡೋಕೆ ಪ್ರಯತ್ನ ಮಾಡುತ್ತಿದ್ದಾರೆ. ಸಂವಿಧಾನದ, ಕೋರ್ಟಿನ ತೀರ್ಪುಗಳ ಮೂಲಕ ನಾವು ಆಡಳಿತ ಮಾಡುವಂತಾದ್ದು. ಯಾರ ಯಾರದ್ದೋ ಇಚ್ಚೆಯಂತೆ ಕೆಲಸ ಮಾಡಲ್ಲ. ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ವಿಚಾರಣೆ ಪೂರ್ಣಗೊಳ್ಳುವವರೆಗೆ ಹಿಜಾಬ್ , ಕೇಸರಿ ಬಣ್ಣದ ಶಾಲು ಧರಿಸುವಂತಿಲ್ಲ  ಅಂತ ಹೇಳಿದೆ. ಸರ್ಕಾರವೂ ಕೂಡ ಸಮವಸ್ತ್ರದ ಬಗ್ಗೆ ಮಾತ್ರ ಮಾತನಾಡಿದೆ. ಕುಂಕುಮ, ಹೂ ಮುಡಿದು ಬರಬೇಕು ಅಥವಾ ಬರಬಾರದು ಎಂಬ ಬಗ್ಗೆ ಸರ್ಕಾರ ಹೇಳಿಲ್ಲ. ಹಾಗೆ ಮಾತನಾಡಿರುವ ವಿದ್ಯಾರ್ಥಿಗಳ ಹಿಂದೆ ಪಿತೂರಿ ಇದೆ. ಮೊನ್ನೆ ಒಂದೇ ಒಂದು ಡಿಗ್ರಿ ಕಾಲೇಜಿನಲ್ಲಿ ಘಟನೆ ನಡೆದಿದೆ, ಕೂಡಲೇ ಪ್ರಿನ್ಸಿಪಲ್ ತಪ್ಪೊಪ್ಪಿಕೊಂಡಿದ್ದಾರೆ. ಮುಂದೆ ಈ ರೀತಿ ಆಗಲ್ಲ ಎಂದು  ಸಿದ್ದಗಂಗಾ ಮಠದಲ್ಲಿ‌ ಸಚಿವ ಬಿಸಿ ನಾಗೇಶ್ ಸ್ಪಷ್ಟನೆ ನೀಡಿದರು.

ಅಭಿಮಾನಿ ಮೇಲೆ ಹಲ್ಲೆ ಆರೋಪ.. ನಟ ಧನ್ವೀರ್​ ಮೊದಲ ಪ್ರತಿಕ್ರಿಯೆ

ನಟ ಧನ್ವೀರ್​ ಅಭಿಮಾನಿ(Fan)ಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಫ್​ಐಆರ್(FIR)​ ದಾಖಲಾಗಿದೆ. ಈ ವಿಚಾರಕ್ಕೆ ಇದೀಗ ನಟ ಧನ್ವೀರ್​ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಗುರುವಾರ ರಾತ್ರಿ ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದ್ದೆವು. ನಾಯಕಿ ಶ್ರೀಲೀಲಾ, ನಿರ್ದೇಶಕ ಹರಿ ಸಂತೋಶ್ ಸೇರಿ ಇನ್ನೂ ಕೆಲವರು ಜೊತೆ ಇದ್ದರು. ಅನುಪಮಾ ಚಿತ್ರದ ಒಳಗೆ ನಾವು ಕೆಲವು ವಿಡಿಯೋ ರೆಕಾರ್ಡ್‌ಗಳನ್ನು ಮಾಡಿಕೊಳ್ಳುತ್ತಿದ್ದೆವು. ಅದೇ ಸಮಯಕ್ಕೆ ಕೆಲವರು ಗೇಟ್‌ ಬಳಿ ಬಂದು ಪೋಟೋ ಬೇಕು ಎಂದು ಕೇಳಿದರು. ರೆಕಾರ್ಡಿಂಗ್​ ಮುಗಿದ ಮೇಲೆ ಬರುತ್ತೆನೆ ಎಂದು ಹೇಳಿದೆ.ಆದರೆ ಇಬ್ಬರು ಯುವಕರು ಅದರಲ್ಲೂ ಒಬ್ಬಾತ ಬಹಳ ಗಲಾಟೆ ಮಾಡಿದ. ಹುಡುಗಿಯರ ಬಗ್ಗೆ ತೀರ ಅಸಭ್ಯವಾಗಿ, ಸೊಂಟದ ಕೆಳಗಿನ ಭಾಷೆ ಬಳಸಿ ಮಾತನಾಡಿದ. ಆಗ ಅವನಿಗೆ ಸ್ವಲ್ಪ ಬುದ್ಧಿ ಹೇಳಿದೆ. ಆತ ಬಹಳ ನಶೆಯಲ್ಲಿದ್ದ ಇದಾದ ಬಳಿಕ ನಾನು ಅಲ್ಲಿಂದ ಒಳಗೆ ಹೋದೆ’ ಎಂದು ನಟ ಧನ್ವೀರ್​ ಹೇಳಿದ್ದಾರೆ.
Published by:Kavya V
First published: