Evening Digest: ಸಿದ್ದರಾಮಯ್ಯ-ಡಿಕೆಶಿ ಸಂಭಾಷಣೆ ಲೀಕ್; ವೋಟರ್ ಐಡಿ ಸಂಬಂಧ ಹೊಸ ನಿಯಮ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಸಿದ್ದರಾಮಯ್ಯ-ಡಿಕೆಶಿ ಸಂಭಾಷಣೆ ಲೀಕ್ : ನಾನು ಇಲ್ಲದೇ ಇರುವಾಗ ಸಭೆಯನ್ನ ಕರೆಯಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ (KPCC President DK Shivakumar) ಮುಖ ಗಂಟಿಕ್ಕಿಕೊಂಡೇ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah ) ಹೇಳಿದ್ದು ಸುದ್ದಿಗೆ ಗ್ರಾಸವಾಗಿದೆ. ಕಲಾಪ ಆರಂಭಕ್ಕೂ (Belagavi Session) ಮುನ್ನ ಲಾಂಜ್ ನಲ್ಲಿ ಅಶೋಕ್ ಪಟ್ಟಣ್ ಜೊತೆ ಸಿದ್ದರಾಮಯ್ಯ ಕುಳಿತು ಮಾತನಾಡುತ್ತಿದ್ದಾಗ ಡಿಕೆಶಿ ಬಂದರು. ಡಿಕೆಶಿ ಮುಖ ನೋಡುತ್ತಿದ್ದಂತೆ ಏ ಅಧ್ಯಕ್ಷ.. ಬಾರಯ್ಯ ಕುಳಿತುಕೋ.. ಮೈಸೂರಿನಲ್ಲಿ ನೀನು ಸಭೆ ನಡೆಸಬೇಡ. ನನ್ನ ಜಿಲ್ಲೆಯಲ್ಲಿ ಯಾವುದೇ ಸಭೆ ಮಾಡಬೇಡ. ಮೈಸೂರು, ಚಾಮರಾಜನಗರ ಸುದ್ದಿಗೋಷ್ಠಿಯನ್ನೂ ನಡೆಸಬೇಡ, ಕೊಡಗು ಜಿಲ್ಲೆಯಲ್ಲಿ ಬೇಕಾದರೆ ಸಭೆ ಮಾಡಿಕೋ. ಆದರೆ, ನನ್ನ ಜಿಲ್ಲೆಯಲ್ಲಿ ಮಾಡಬೇಡ. ಎಲ್ಲರೂ ಅಧಿವೇಶನದಲ್ಲಿ ಇರುತ್ತಾರೆ. ಇಂತಹ ಸಂದರ್ಭದಲ್ಲಿ ನೀನು ಹೋಗಿ ಸಭೆ ನಡೆಸಬೇಡ. ನಾವಿಬ್ಬರು ಒಟ್ಟಿಗೆ ಇಲ್ಲ ಅಂದ್ರೆ ತಪ್ಪು ಸಂದೇಶ ರವಾನೆಯಾಗಲಿದೆ. ಬೇಕಾದರೆ ಕೊಡಗು ಭಾಗದಲ್ಲಿ ಸಭೆ ಮಾಡಿಕೋ ಎಂದು ಕಲಾಪ ಆರಂಭಕ್ಕೂ ಮುನ್ನ ಡಿಕೆಶಿಗೆ ಸಿದ್ದರಾಮಯ್ಯ ಹೇಳಿದರು. ಮೇಕೆದಾಟು ಯೋಜನೆ ಪಾದಯಾತ್ರೆ ಹಿನ್ನೆಲೆಯಲ್ಲಿ ಮೈಸೂರು, ಚಾಮರಾಜನಗರದಲ್ಲಿ ಡಿಕೆಶಿ ಪೂರ್ವಭಾವಿ ಸಭೆ ಕರೆದಿದ್ದಾರೆ. ಡಿಕೆಶಿ ಏಕಾಏಕಿ ಸಭೆ ಕರೆದಿರುವ ಬಗ್ಗೆ ಹಲ ಶಾಸಕರಿಂದ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಡಿಕೆಶಿಗೆ ಸಲಹೆ ನೀಡಿದರು.

ವೋಟರ್​ ಐಡಿ ಸಂಬಂಧ ಹೊಸ ನಿಯಮ

ಮತದಾರರ ಗುರುತಿನ ಚೀಟಿಯನ್ನು (Voter ID Card) ಆಧಾರ್​ನೊಂದಿಗೆ (Aadhar Card) ಲಿಂಕ್ ಮಾಡುವ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಾಯಿತು. ವಿರೋಧ ಪಕ್ಷಗಳ ವಿರೋಧದ ನಡುವೆಯೂ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು, ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ, 2021 ಅನ್ನು ಮಂಡಿಸಿದರು. ಈ ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಇನ್ನು ಮತದಾರರ ಪಟ್ಟಿಗೆ ಆಧಾರ್ ಅನ್ನು ಜೋಡಿಸಿದರೆ ಅದು ನಾಗರಿಕರ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಜೊತೆಗೆ ಇದು ಮತದಾರರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಮಸೂದೆಯನ್ನು ಕಾಂಗ್ರೆಸ್, ಎಐಎಂಐಎಂ, ಬಿಎಸ್‌ಪಿ ಮತ್ತು ಇತರ ವಿರೋಧ ಪಕ್ಷಗಳು ವಿರೋಧಿಸಿದ್ದವು. ಅಲ್ಲದೇ, ಈ ಮಸೂದೆಯನ್ನು ಆಡಳಿತ ಪಕ್ಷ ಹಿಂಪಡೆಯುವಂತೆ ಒತ್ತಾಯಿಸಿದವು.

ತಾಯಿಯ ಗರ್ಭ, ಸಮಾಧಿ..  ಎರಡೇ ಹೆಣ್ಮಕ್ಕಳಿಗೆ ಸುರಕ್ಷಿತ ತಾಣ

ತಮಿಳುನಾಡಿನ ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ ಲೈಂಗಿಕ ಕಿರುಕುಳವೇ (Sexual Harassment)  ಮುಖ್ಯ ಕಾರಣ ಎಂಬುದು ಆಕೆಯ ಡೆತ್​ನೋಟ್​ ಮೂಲಕ ಬೆಳಕಿಗೆ ಬಂದಿದೆ. ಕಳೆದ 8 ತಿಂಗಳಿನಿಂದ ಎದುರಿಸುತ್ತಿದ್ದ ಲೈಂಗಿಕ ದೌರ್ಜನ್ಯದಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್​​ ನೋಟ್​ನಲ್ಲಿ (Death Note) ಉಲ್ಲೇಖಿಸಿದ್ದಾಳೆ. ಒಂಟಿತನ ಹಾಗೂ ತನ್ನ ವಿರುದ್ದ ನಡೆದ ಲೈಂಕಿಗ ಕಿರುಕುಳದಿಂದ ಶನಿವಾರ ಚೆನ್ನೈನ ಪೂನಮಲ್ಲಿಯಲ್ಲಿ 11ನೇ ತರಗತಿ ವಿದ್ಯಾರ್ಥಿನಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಳು. ಸಾವಿಗೆ ಮುನ್ನ ಆಕೆ ಬರೆದಿರುವ ಪತ್ರದಲ್ಲಿ ಸಮಾಜ ಮಹಿಳೆಗೆ ಹೇಗೆ ಅಸುರಕ್ಷಿತವಾಗಿದೆ. ತಾಯಿಯ ಗರ್ಭದ (Womb) ಹೊರತಾಗಿ ಹುಡುಗಿಯರು, ಮಹಿಳೆಯರು ಸಮಾಜದಲ್ಲಿ ಸುರಕ್ಷಿತರಲ್ಲ. ಹೇಗೆ ತಾನು ಸಂಕಷ್ಟ ಅನುಭವಿಸಿದೆ ಎಂಬುದನ್ನು ಎಳೆ ಎಳೆಯಾಗಿ ಬರೆದಿದ್ದಾಳೆ.

ಯುವತಿಯ ಬೆತ್ತಲೆ ಫೋಟೋಗಳನ್ನು ಹರಿಬಿಟ್ಟ ಹಳೆ ಲವರ್​​!

ನಿಶ್ಚಿತಾರ್ಥವಾಗಿದ್ದ ಯುವತಿಯ ಹಳೆ ಬಾಯ್​​ ಫ್ರೆಂಡ್​​ ಮಾಡಿದ ಕೆಲಸದಿಂದ ಆಕೆಯ ಮದುವೆಯೇ ಮುರಿದು ಬಿದ್ದಿದೆ. ಎಂಗೇಜ್​ ಮೆಂಟ್​ ಆಗುತ್ತಿದ್ದಂತೆ ಮಾಜಿ ಪ್ರೇಮಿ ತನ್ನ ಬಳಿಯಿದ್ದ ಯುವತಿಯ ಬೆತ್ತಲೆ ಫೋಟೋಗಳನ್ನು ಭಾವಿ ಗಂಡನಿಗೆ ಕಳುಹಿಸಿದ್ದಾನೆ. ಇದರಿಂದ ಯುವತಿಯ ಮದುವೆ ರದ್ದಾಗಿದೆ. ಸುಬ್ರಮಣ್ಯಪುರಂ ನಿವಾಸಿ 23 ವರ್ಷದ ಯುವತಿ ಕೆಲ ವರ್ಷಗಳ ಹಿಂದೆ ಸಹಪಾಠಿಯನ್ನು ಪ್ರೀತಿಸುತ್ತಿದ್ದಳು. ನಂತರ ಇಬ್ಬರು ದೂರವಾಗಿದ್ದರು. ಇಬ್ಬರು ಜೊತೆಯಲ್ಲಿದ್ದಾಗ ಕೆಲ ಖಾಸಗಿ ಫೋಟೋಗಳನ್ನು ತೆಗೆದುಕೊಂಡಿದ್ದರು. ಅದನ್ನು ಹಳೆ ಬಾಯ್​​​ ಫ್ರೆಂಡ್​​ ದುರ್ಬಳಕೆ ಮಾಡಿಕೊಂಡಿದ್ದಾನೆ. ಪ್ರೇಮ ಮುರಿದು ಬಿದ್ದ ಬಳಿಕ ಯುವತಿಗೆ ಬೇರೊಬ್ಬರೊಂದಿಗೆ ಮದುವೆ ನಿಶ್ಚಿಯವಾಗಿತ್ತು. ಈ ವೇಳೆ ಪ್ರತ್ಯಕ್ಷನಾದ ಹಳೆ ಬಾಯ್​ ಫ್ರೆಂಡ್​ , ತನ್ನನ್ನೇ ಮದುವೆ ಆಗು ಇಲ್ಲವಾದರೆ ಹಳೆ ಫೋಟೋಗಳನ್ನು ಸೋಷಿಯಲ್​ ಮೀಡಿಯಾಗೆ ಹಾಕುವುದಾಗಿ ಬ್ಲ್ಯಾಕ್​ ಮೇಲ್​ ಮಾಡಿದ್ದಾನೆ. ಹಳೆ ಲವರ್​​ ಬ್ಲ್ಯಾಕ್​ ಮೇಲ್​ ಗೆ ಯುವತಿ ಒಪ್ಪದಿದ್ದಾಗ ಫೋಟೋಗಳನ್ನು ವರನ ಕುಟುಂಬಕ್ಕೆ ಕಳುಹಿಸಲಾಗಿದೆ. ಇದನ್ನು ಕಂಡ ವರನ ಕಡೆಯವರು ಮದುವೆಯನ್ನು ಕ್ಯಾನ್ಸಲ್​ ಮಾಡಿದ್ದಾರೆ. ನೊಂದ ಯುವತಿ ಹಳೆ ಲವರ್​ ವಿರುದ್ಧ ಠಾಣೆ ಮೆಟ್ಟಿಲೇರಿದ್ದಾಳೆ.

ದೀಪಿಕಾ ಪಡುಕೋಣೆ ಕಿಸ್ಸಿಂಗ್​ ವಿಡಿಯೋ ವೈರಲ್​!

ಹೊಸ ಸಿನಿಮಾ ‘ಗೆಹರಾಯಿಯಾ’(Gehraiyaan) ಸಿನಿಮಾದಲ್ಲಿ ಸಖತ್​ ಹಾಟ್ ಆಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಸಹ ನಟನೊಂದಿಗೆ ಕಿಸ್ಸಿಂಗ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಚಿತ್ರದ ಟೀಸರ್​ ರಿಲೀಸ್​ ಆಗಿದೆ. ‘ಗಲ್ಲಿ ಬಾಯ್​’ ಖ್ಯಾತಿಯ ಸಿದ್ಧಾಂತ್ ಚತುರ್ವೇದಿ (Siddhant Chaturvedi), ಅನನ್ಯಾ ಪಾಂಡೆ ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಈ ಸಿನಿಮಾದ ಟೀಸರ್​ನಲ್ಲಿ ಸಿದ್ಧಾಂತ್​ ಚತುರ್ವೇದಿ ಮತ್ತು ದೀಪಿಕಾ ಪಡುಕೋಣೆ ನಡುವಿನ ಕಿಸ್ಸಿಂಗ್​ ದೃಶ್ಯ ಹೈಲೈಟ್​ ಆಗಿದೆ. ಆ ಕಾರಣದಿಂದ ಈ ಟೀಸರ್​ ಸಖತ್​ ವೈರಲ್​ ಆಗುತ್ತಿದೆ. ಈ ಚಿತ್ರದ ಟೀಸರ್​ ಅನ್ನು ಸ್ವತಃ ದೀಪಿಕಾ ಪಡುಕೋಣೆ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಅವರ ಕಿಸ್ಸಿಂಗ್​ ದೃಶ್ಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ದೀಪಿಕಾ ಪಡುಕೋಣೆ ಮದುವೆ ಆದ ಬಳಿಕ ಇಷ್ಟು ಬೋಲ್ಡ್​ ಆಗಿ ಅಭಿನಯಿಸುರುವದು ಇದೇ ಮೊದಲು. ಹೀಗಾಗಿ ನೆಟ್ಟಗರು ಈ ಬಗ್ಗೆ ಸಖತ್​ ಚರ್ಚೆ ಮಾಡುತ್ತಿದ್ದಾರೆ.
Published by:Kavya V
First published: