Evening Digest: ಅನಿರುದ್ಧ್ ವಿರುದ್ಧ ನಿರ್ಮಾಪಕರ ಆರೋಪ, ಮೊಟ್ಟೆ ಎಸೆದವ ಕೈ ಕಾರ್ಯಕರ್ತನಾ? ಇಲ್ಲಿವೆ ಇಳಿ ಸಂಜೆಯ ಬಿಸಿ ಬಿಸಿ ಸುದ್ದಿ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಮಕ್ಕಳ ಮೇಲೆ ಆಣೆ ಮಾಡಿ ಹೇಳಲಿ; ಜೊತೆ ಜೊತೆಯಲಿ ನಿರ್ಮಾಪಕರಿಗೆ ಅನಿರುದ್ಧ್ ಸವಾಲ್

ಜೀ ಕನ್ನಡದ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ (Jote Jotheyali) ನಾಯಕ ನಟ ಅನಿರುದ್ಧ್​​ಗೆ (Aniruddha) ಸೀರಿಯಲ್​ನಿಂದ ಗೇಟ್​ ಪಾಸ್​ ನೀಡಲಾಗಿದೆ. ಅವರನ್ನು ಮುಂದಿನ ಎರಡು ವರ್ಷಗಳ ಕಾಲ ಯಾವುದೇ ಧಾರಾವಾಹಿಗಳಲ್ಲಿ ಅವಕಾಶ ನೀಡದಂತೆ ಎಲ್ಲಾ ನಿರ್ಮಾಪಕರು ನಿರ್ಧರಿಸಿದ್ದಾರೆ.  ಅನಿರುದ್ಧ್​ ವಿರುದ್ಧ ನಿರ್ಮಾಪಕ ಆರೂರು ಜಗದೀಶ್ (Aroor Jagadish)​ ಆರೋಪಗಳ ಸುರಿಮಳೆಗೈದಿದ್ದಾರೆ. ಈ ಆರೋಪಗಳ ಬಗ್ಗೆ ಸುದ್ದಿಗೋಷ್ಠಿ ಕರೆದು ನಟ ಅನಿರುದ್ಧ್​  ಸ್ಪಷ್ಟನೆ ನೀಡಿದ್ದಾರೆ.  ಧಾರಾವಾಹಿ ನಂಗೆ ವೈಯಕ್ತಿಕವಾಗಿ ತುಂಬಾ ಕೊಟ್ಟಿದೆ. ಇದು ನನ್ನ ಅದೃಷ್ಟ ಎಂದು ಭಾವಿಸುವೇ, ಜೊತೆ ಜೊತೆಯಲ್ಲಿ ನನ್ನಿಂದ ನಡೆಯುತ್ತಿದೆ ಎಂದು ನಾನು ಭಾವಿಸಿಲ್ಲ. ದೇವರ ಸ್ವರೂಪ ಆಗಿರೋ ಪ್ರೇಕ್ಷಕರಿಂದ ಈ ಯಶಸ್ಸು ಸಿಕ್ಕಿದೆ ಎಂದು ಹೇಳಿದ್ದಾರೆ.

ಅನಿರುದ್ಧ್‌ಗೆ ಸ್ಟಾರ್‌ ಹೋಟೆಲ್ ಬೇಕು, ಕಾಲು ಹಿಡಿದು ಆ್ಯಕ್ಟ್ ಮಾಡಿಸ್ಬೇಕು! 

ಜೀ ಕನ್ನಡದ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ (Jote Jotheyali) ನಾಯಕ ನಟ ಅನಿರುದ್ಧ್​​ಗೆ (Aniruddha) ಸೀರಿಯಲ್​ನಿಂದ ಗೇಟ್​ ಪಾಸ್​ ನೀಡಲಾಗಿದೆ. ನಟ ಅನಿರುದ್ಧ್​ ವಿರುದ್ಧ ಇಡೀ ಸೀರಿಯಲ್​ ತಂಡ ತಿರುಗಿಬಿದ್ದಿದೆ. ಜೊತೆ ಜೊತೆಯಲಿ ಸೀರಿಯಲ್​ನ ನಿರ್ದೇಶಕ ಹಾಗೂ ನಿರ್ಮಾಪಕ ಆರೂರು  ಜಗದೀಶ್ (Arooru Jagadish)​ ಅವರು ನಟ ಅನಿರುದ್ಧ್​ ಅವರಿಂದ ಸೀರಿಯಲ್​ ಶೂಟಿಂಗ್​ಗೆ ಆಗುತ್ತಿದ್ದ ತೊಂದರೆಯನ್ನು ಸ್ವತಃ ಅವ್ರೇ ಹೇಳಿಕೊಂಡಿದ್ದಾರೆ. ಆಡಿಯೋ ಒಂದನ್ನು ರಿಲೀಸ್​ ಮಾಡೋ ಮೂಲಕ ಆರೂರು ಜಗದೀಶ್​ ಅವರು ತಮ್ಮ ನೋವು ಹೊರಹಾಕಿದ್ದಾರೆ. ಸೀರಿಯಲ್ ಹಿಟ್ ಆಗಿ​ ಸ್ಟಾರ್ ಗಿರಿ ಬರ್ತಿದ್ದಂತೆ ನಟ ಅನಿರುದ್ದ್​​ ಬದಲಾದ್ರು ಎಂದು ಆರೂರು ಜಗದೀಶ್ ಹೇಳಿದ್ದಾರೆ.

ಇದನ್ನೂ ಓದಿ: Jote Jotheyali: ಅನಿರುದ್ಧ್‌ಗೆ ಸ್ಟಾರ್‌ ಹೋಟೆಲ್ ಬೇಕು, ಕಾಲು ಹಿಡಿದು ಆ್ಯಕ್ಟ್ ಮಾಡಿಸ್ಬೇಕು! ಜೊತೆ ಜೊತೆಯಲಿ ನಿರ್ಮಾಪಕರ ಗಂಭೀರ ಆರೋಪ

ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದು ಕಾಂಗ್ರೆಸ್​ ಕಾರ್ಯಕರ್ತ!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕೊಡಗಿಗೆ (Kodagu) ಭೇಟಿ ಕೊಟ್ಟಿದ್ದಾಗ ಅಲ್ಲಿ ಅವರ ಕಾರಿನ ಮೇಲೆ ಮೊಟ್ಟೆ (Egg) ಎಸೆಯಲಾಗಿತ್ತು. ಮಡಿಕೇರಿಯ ಜನರಲ್ ತಿಮ್ಮಯ್ಯ ಸರ್ಕಲ್​ಗೆ ಸಿದ್ದರಾಮಯ್ಯನವರ ಕಾರು (Car) ಬರುತ್ತಿದ್ದಂತೆ ಮೊಟ್ಟೆ ಎಸೆಯಲಾಗಿತ್ತು. ಇದಕ್ಕೆ ಕಾಂಗ್ರೆಸ್​ (Congress) ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯ ಕೂಡ ಸರ್ಕಾರ, ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದರು. ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು. ನಂತರ ಸಿಎಂ ಬೊಮ್ಮಾಯಿ ಪ್ರಕರಣದ ತನಿಖೆಗೆ ಆದೇಶ ಮಾಡಿದ್ದರು. ಈಗ ಮೊಟ್ಟೆ ಎಸೆದ ಪ್ರಕರಣಕ್ಕೆ ಟ್ವಿಸ್ಟ್ (Twist)​ ಸಿಕ್ಕಿದೆ. ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಕಾಂಗ್ರೆಸ್​ ಕಾರ್ಯಕರ್ತನೇ ಅನ್ನೋದು ಗೊತ್ತಾಗಿದೆ.

ಮೊಟ್ಟೆ ಎಸೆದವ ಕಾಂಗ್ರೆಸ್‌ನವನಾಗಿದ್ರೆ ಜೈಲಿಗೆ ಕಳಿಸಿ! 

ವಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮೊಟ್ಟೆ ಎಸೆದ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೆ ಶಾಸಕ ಅಪ್ಪಚ್ಚು ರಂಜನ್ ರಾತೋರಾತ್ರಿ ಪೊಲೀಸ್ ಠಾಣೆಗೆ ಹೋಗಿ ಬಿಡಿಸಿಕೊಂಡು ಯಾಕೆ ಬರಬೇಕಾಗಿತ್ತು? ಕಾಂಗ್ರೆಸ್‌ನವನೆಂದು ಹೇಳಿಕೊಂಡರೆ ಮಾತ್ರ ಪೊಲೀಸರಿಂದ ಬಿಡಿಸ್ತೇನೆ ಎಂದು ಷರತ್ತು ಹಾಕಿ ಬಿಡುಗಡೆ ಮಾಡಿದಿರಾ? ಅಂತ ಖಾರವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Siddaramaiah Tweet: ಮೊಟ್ಟೆ ಎಸೆದವ ಕಾಂಗ್ರೆಸ್‌ನವನಾಗಿದ್ರೆ ಜೈಲಿಗೆ ಕಳಿಸಿ! ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಸರಣಿ ಟ್ವೀಟ್

ಶಾರ್ದೂಲ್ ಠಾಕೂರ್ ಅಬ್ಬರಕ್ಕೆ ನಲುಗಿದ ಜಿಂಬಾಬ್ವೆ, ಸರಣಿ ಕೈವಶ ಮಾಡಿಕೊಂಡ ಟೀಂ ಇಂಡಿಯಾ

ಭಾರತ ಮತ್ತು ಜಿಂಬಾಬ್ವೆ  (IND vs ZIM) ನಡುವಿನ 2ನೇ ಏಕದಿನ ಪಂದ್ಯ ಇಂದು ಹರಾರೆಯ ಸ್ಪೋರ್ಟ್ಸ್​ ಕ್ಲಬ್​ ಮೈದಾನದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್​ ಗೆದ್ದ ಟೀಂ ಇಂಡಿಯಾ ನಾಯಕ ಕೆಎಲ್ ರಾಹುಲ್ (KL Rahul) ​ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್​ ಆಗಮಿಸಿದ ಜಿಂಬಾಬ್ವೆ (Zimbabwe) ತಂಡವು 38.1 ಓವರ್​ ಗಳಲ್ಲಿ  ತನ್ನೆಲ್ಲಾ 10 ವಿಕೆಟ್​ ಗಳನ್ನು ಕಳೆದುಕೊಂಡು ಕೇವಲ 161 ರನ್​ ಗಳಿಗೆ ಕುಸಿಯಿತು. ಈ ಮೂಲಕ ಭಾರತ ತಂಡಕ್ಕೆ ಅಲ್ಪ ಮೊತ್ತದ ಟಾರ್ಗೇಟ್​ ನೀಡಿತು. ಇದನ್ನು ಬೆನ್ನಟ್ಟಿದ ಭಾರತ ತಂಡವು  25 ಓವರ್​ ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 161 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆಲ್ಲುವುದಲ್ಲದೆ 3 ಸರಣಿಗಳ ಪಂದ್ಯದಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆ ಸರಣಿಯನ್ನು ಕೈವಶ ಮಾಡಿಕೊಂಡಿತು. ಈ ಮೂಲಕ ಕೆಎಲ್ ರಾಹುಲ್ ನಾಯಕತ್ವದಲ್ಲಿ ಮೊದಲ ಸರಣಿಯನ್ನು ಗೆದ್ದಂತಾಗಿದೆ.
Published by:Annappa Achari
First published: