• Home
  • »
  • News
  • »
  • state
  • »
  • Evening Digest: ಬೈ ಎಲೆಕ್ಷನ್​​ನಲ್ಲಿ ಕಾಂಗ್ರೆಸ್-BJPಗೆ ಗೆಲುವು, JDSಗೆ ಹೀನಾಯ ಸೋಲು; ಅಪ್ಪು ಮನೆಗೆ ನಾಗಾರ್ಜುನ ಭೇಟಿ; ಪ್ರಮುಖ ಸುದ್ದಿಗಳು

Evening Digest: ಬೈ ಎಲೆಕ್ಷನ್​​ನಲ್ಲಿ ಕಾಂಗ್ರೆಸ್-BJPಗೆ ಗೆಲುವು, JDSಗೆ ಹೀನಾಯ ಸೋಲು; ಅಪ್ಪು ಮನೆಗೆ ನಾಗಾರ್ಜುನ ಭೇಟಿ; ಪ್ರಮುಖ ಸುದ್ದಿಗಳು

evening digest

evening digest

Kannada news Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

  • Share this:

JDS ಠೇವಣಿ ಕಳೆದುಕೊಳ್ಳುತ್ತೆ ಅಂತ ನಾನು ಮೊದಲೇ ಹೇಳಿದ್ದೆ: ಉಪ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಸಿಂದಗಿಯಲ್ಲಿ(Sindagi) ಬಿಜೆಪಿ (BJP) ಜಯ ಗಳಿಸಿದ್ದರೆ ಹಾನಗಲ್​​ನಲ್ಲಿ(Hangal) ಕಾಂಗ್ರೆಸ್(Congress)​ ಗೆಲುವು ಸಾಧಿಸಿದೆ. ಎರಡು ಕ್ಷೇತ್ರಗಳಲ್ಲಿ ಒಂದರಲ್ಲಿ ಗೆಲುವು ಸಾಧಿಸಿರುವುದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಸಂತಸ ವ್ಯಕ್ತಪಡಿಸಿದರು. ಎರಡೂ ಕ್ಷೇತ್ರಗಳಲ್ಲಿ ಸೋಲನ್ನು ಕಂಡಿರುವ ಜೆಡಿಎಸ್(JDS)​ ವಿರುದ್ಧ ವಾಗ್ದಾಳಿ ನಡೆಸಿದರು. ಜೆಡಿಎಸ್ ಠೇವಣಿ ಕಳೆದುಕೊಂಡ ವಿಚಾರವಾಗಿ ವ್ಯಂಗ್ಯವಾಡಿದ ಸಿದ್ದರಾಮಯ್ಯ, ನಾನು ಮೊದಲೇ ಹೇಳಿದ್ದೆ. ಕೋಮುವಾದಿ ಪಕ್ಷದ ಜೊತೆ ಸೇರಿದ್ದಾರೆಂದು, ಈಗ ಎರಡೂ ಕಡೆ ಡೆಪಾಸಿಟ್ ಕಳೆದುಕೊಂಡಿದ್ದಾರೆ ಎಂದರು.


ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗಲೂ ಹೀಗೆ ಆಗಿತ್ತು


ಎರಡೂ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ (Byelection Results) ಹೊರಬಿದ್ದಿದ್ದು, ಸಿಂದಗಿಯಲ್ಲಿ(Sindagi) ಬಿಜೆಪಿ ಹಾಗೂ ಹಾನಗಲ್​ನಲ್ಲಿ (Hangal) ಕಾಂಗ್ರೆಸ್​​ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬೈ ಎಲೆಕ್ಷನ್​ನಲ್ಲಿ ಜನರು ಅರ್ಧ ಚಂದ್ರ ಕೊಟ್ಟಿರುವ ಬಗ್ಗೆ  KRSನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ(CM Basavaraj bommai) ಪ್ರತಿಕ್ರಿಯಿಸಿದರು. ನಾನು ಸೋಲನ್ನ ಒಪ್ಪಿಕೊಳ್ತೇನೆ, ನಮ್ಮ ಪಕ್ಷದ ಹಿರಿಯರು-ಕಾರ್ಯಕರ್ತರು ಕಷ್ಟಪಟ್ಟು ಕೆಲಸ ಮಾಡಿದ್ರು. ಅವರಿಗೂ ನಾನು ಧನ್ಯವಾದ ಹೇಳುತ್ತೇನೆ. ಎಲೆಕ್ಷನ್ ನಲ್ಲಿ ಒಂದರಲ್ಲಿ ಗೆದ್ದು, ಒಂದರಲ್ಲಿ ಸೋತಿದ್ದೇವೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಇದೇ ರೀತಿ ಆಗಿತ್ತು. ಈ ಫಲಿತಾಂಶವನ್ನ ಗಂಭೀರವಾಗಿ ತೆಗೆದುಕೊಳ್ತೇವೆ, ಮುಂದೆ ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಳ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಸಿಎಂ ತವರಲ್ಲಿಯೇ BJPಗೆ ತೀವ್ರ ಮುಖಭಂಗ


ಪ್ರತಿಷ್ಠೆಯ ಕಣವಾಗಿದ್ದ ಹಾವೇರಿ ಜಿಲ್ಲೆ ಹಾನಗಲ್  ಉಪ ಚುನಾವಣೆಯಲ್ಲಿ (Hangal By Election)  ಕಾಂಗ್ರೆಸ್ (Congress) ಪಕ್ಷ ಗೆಲುವಿನ ನಗೆ ಬೀರಿದೆ. ಸಿ ಎಂ ಬಸವರಾಜ್ ಬೊಮ್ಮಾಯಿ (CM Basavaraj bommai) ತವರು  ಜಿಲ್ಲೆಯಲ್ಲಿಯೇ ಬಿಜೆಪಿ(BJP) ಮುಗ್ಗರಿಸಿದ್ದು, ತೀವ್ರ ಮುಖಭಂಗ ಅನುಭವಿಸುವಂತಾಗಿದೆ. ಸ್ವತಃ ಸಿಎಂ ಬೊಮ್ಮಾಯಿ ಸೇರಿದಂತೆ ಹಲವಾರು ಸಚಿವರು ಇಲ್ಲಿಯೇ ಠಿಕಾಣಿ ಹೂಡಿದ್ದರೂ ಬಿಜೆಪಿ ಅಭ್ಯರ್ಥಿಯನ್ನು ಗೆಲುವಿನ ದಡಕ್ಕೆ ಸೇರಿಸಲಾಗಿಲ್ಲ. ಜಿದ್ದಾಜಿದ್ದಿಯ ಕಣವಾಗಿ ಮಾರ್ಪಟ್ಟಿದ್ದ ಹಾನಗಲ್ ಕ್ಷೇತ್ರದ ಫಲಿತಾಂಶ ಪ್ರಕಟಗೊಂಡಿದೆ. ಹಾವೇರಿ ಯ ದೇವಗಿರಿ ಬಳಿಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಒಟ್ಟು 19  ಸುತ್ತುಗಳ ಮತ ಎಣಿಕೆ ಕಾರ್ಯ ನಡೆಯಿತು. ಅಂಚೆ ಮತ ಪತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದನ್ನು ಬಿಟ್ಟರೆ ಬಹುತೇಕ ಸುತ್ತುಗಳಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿತು.  ಅಂತಿಮವಾಗಿ ಕಾಂಗ್ರೆಸ್ ನ ಶ್ರೀನಿವಾಸ ಮಾನೆ ಜಯದ ನಗೆ ಬೀರಿದ್ದಾರೆ.


ದೇವೇಗೌಡರಿಗೆ ಸಿದ್ದು ಕ್ಷಮೆ ಕೇಳಲಿ: ಸಿಟಿ ರವಿ ಸವಾಲು


ಸಿಂದಗಿ ಹಾಗೂ ಹಾನಗಲ್​ (Sindagi & Hanagal )ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ (by election results) ಹೊರ ಬಿದ್ದಿದ್ದು ಸಿಂದಗಿಯಲ್ಲಿ ಬಿಜೆಪಿ, ಹಾನಗಲ್​ನಲ್ಲಿ ಕಾಂಗ್ರೆಸ್(Congress)​ ಗೆಲುವು ಸಾಧಿಸಿದೆ. ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್(JDS)​ ಹೀನಾಯ ಸೋಲು ಕಂಡಿರುವ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ಇಲ್ಲಿ ಲೇವಡಿ ಮಾಡಿದರು. ಆರ್ಗನೈಜೇಷನ್, ಐಡಿಯಾಲಜಿ, ನೇತೃತ್ವ ಮೂರು ಇಲ್ಲದಾಗ ಆಗಬೇಕಾಗಿದ್ದೇ ಆಗಿದೆ ಎಂದು ಜೆಡಿಎಸ್ ಸೋಲನ್ನು ಸಿ.ಟಿ.ರವಿ ವಿಶ್ಲೇಷಿಸಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ತೀವ್ರ ವಾಗ್ದಾಳಿ ನಡೆಸಿದರು. ರಾಜಕೀಯ ಅಸ್ತಿತ್ವ ಕೊಟ್ಟ ದೇವೇಗೌಡರಿಗೆ ಸಿದ್ದು ಕ್ಷಮೆ ಕೇಳಲಿ, ಆಗ ನಾನು ಕ್ಷಮೆ ಕೇಳುತ್ತೇನೆ ಎಂದರು.


ಅಪ್ಪು ಮನೆಗೆ ನಾಗಾರ್ಜುನ ಭೇಟಿ


ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ {Power Star Puneeth rajkumar) ನಮ್ಮನಗಲಿ ಇಂದಿಗೆ ಐದು ದಿನಗಳು ಕಳೆದಿದೆ. ಈ ಹಿನ್ನೆಲೆ ದೊಡ್ಮನೆ ಕುಟುಂಬಸ್ಥರು ಇವತ್ತು ಅಪ್ಪು ಸಮಾಧಿಗೆ ಹಾಲು-ತುಪ್ಪ ಕಾರ್ಯ ನೆರವೇರಿಸಿದರು. ಪುನೀತ್ ರಾಜಕುಮಾರ್ ಮನೆಗೆ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಭೇಟಿ ನೀಡಿ ಸೋದರ ಶಿವಣ್ಣಗೆ ಸಾಂತ್ವನ ತಿಳಿಸಿದರು. ಪುನೀತ್ ನಮ್ಮನ್ನು ಬಿಟ್ಟು ಹೋಗಿರುವುದು ಶಾಕಿಂಗ್, ನನ್ನಿಂದ ಇದನ್ನ ನಂಬಲು ಆಗುತ್ತಿಲ್ಲ. ಪುನೀತ್ ಯಾವಾಗ ಸಿಕ್ಕರೂ ಒಳ್ಳೆಯ ಮಾತನ್ನಷ್ಟೇ ಆಡುತ್ತಿದ್ದರು. ನಾಲ್ಕು ಸಿನಿಮಾಗಳನ್ನ ನಿರ್ಮಾಣ ಮಾಡುತ್ತಿದ್ದರು, ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ರು. ಸ್ಕೂಲ್ ಗಳು ಅನಾಥಾಶ್ರಮ ನಡೆಸುತ್ತಿದ್ದರು. ಇಂತಹವರು ಹೀಗೆ ಆಗಿದ್ದು ನಿಜಕ್ಕೂ ಶಾಕಿಂಗ್. ನನಗೆ ಈಗಲೂ ಅವರು ಕುಟುಂಬಕ್ಕೆ ಏನು ಹೇಳಬೇಕು ಅಂತ ಗೊತ್ತಾಗುತ್ತಿಲ್ಲ. ದೇವರು ಅವರ ಕುಟುಂಬ ಅಭಿಮಾನಿಗಳಿಗೆ ಹಾಗೂ ಅವರ ಕುಟುಂಬಕ್ಕೆ ದುಖ ಭರಿಸುವ ಶಕ್ತಿ ಕೊಡಲಿ ಎಂದರು.

Published by:Kavya V
First published: