Evening Digest: ಸಿದ್ದುಗೆ ಟಕ್ಕರ್, ಕುಪೇಂದ್ರ ರೆಡ್ಡಿಗೆ ಬಂಪರ್: ಜಮ್ಮುಕಾಶ್ಮೀರದಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡಿ ಹತ್ಯೆ? ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಸಿದ್ದುಗೆ ಟಕ್ಕರ್, ಕುಪೇಂದ್ರ ರೆಡ್ಡಿಗೆ ಬಂಪರ್ : ರಾಜಕೀಯ ಪಕ್ಷಗಳಲ್ಲಿ (Political Party) ರಾಜ್ಯಸಭೆ ಚುನಾವಣೆಯ (Rajyasabha Election) ಕಾವು ಏರುತ್ತಾ ಇದೆ. ಸಂಸತ್ತಿನ (Parliament) ಮೇಲ್ಮನೆಯ 57 ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದೆ. ಅದೇ ದಿನವೇ ಮತ ಎಣಿಕೆ (Counting) ನಡೆದು, ಫಲಿತಾಂಶ (Result) ಘೋಷಣೆಯಾಗಲಿದೆ. ಇತ್ತ ರಾಜ್ಯದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ಲೆಕ್ಕಾಚಾರಗಳನ್ನು ಉಲ್ಟಾ ಮಾಡಲು ಹಿರಿಯ ಕಾಂಗ್ರೆಸ್ ನಾಯಕ (Senior Congress Leader) ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಭಾರೀ ಪ್ಲಾನ್ ಮಾಡಿದ್ದಾರೆ ಎಂಬ ಎಕ್ಸ್‌ಕ್ಲೂಸಿವ್ (Exclusive) ವಿಚಾರ ನ್ಯೂಸ್ 18ಗೆ (News18) ಲಭ್ಯವಾಗಿದೆ. ಎಐಸಿಸಿ ಅಧ್ಯಕ್ಷೆ (AICC President) ಸೋನಿಯಾಗಾಂಧಿ (Sonia Gandhi) ಅವರನ್ನು ದೆಹಲಿಯ (Delhi) ಅವರ ನಿವಾಸದಲ್ಲಿ ಮಲ್ಲಿಕಾರ್ಜುನ್ ಖರ್ಗೆ ನಿನ್ನೆ ಬೆಳಗ್ಗೆ ಭೇಟಿಯಾಗಿದ್ದಾರೆ (Meet) ಎನ್ನಲಾಗಿದೆ. ಹಾಗಿದ್ರೆ ಮಲ್ಲಿಕಾರ್ಜುನ್ ಖರ್ಗೆ ಭೇಟಿ ಉದ್ದೇಶವೇನು? ಉಭಯ ನಾಯಕರು ಚರ್ಚಿಸಿದ್ದೇನು? ಕಾಂಗ್ರೆಸ್ ಚುನಾವಣಾ ತಂತ್ರವನ್ನೇ ಚೇಂಜ್ ಮಾಡ್ತಾರಾ ಹಿರಿಯ ನಾಯಕ? ಮಲ್ಲಿಕಾರ್ಜುನ್ ಖರ್ಗೆ ಈ ನಡೆಯ ಹಿಂದೆ ಇರುವವರು ಯಾರು?

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Exclusive: ಸಿದ್ದುಗೆ ಟಕ್ಕರ್, ಕುಪೇಂದ್ರ ರೆಡ್ಡಿಗೆ ಬಂಪರ್! ಮಲ್ಲಿಕಾರ್ಜುನ್ ಖರ್ಗೆ, ದೇವೇಗೌಡರಿಂದ ಹೊಸ ದಾಳ

ಹಿಂದೂ ಸಂಘಟನೆಗಳಿಂದ ಜೂನ್ 4ರಂದು ಶ್ರೀರಂಗಪಟ್ಟಣ ಚಲೋಗೆ ಕರೆ

ಜಿಲ್ಲೆಯ ಶ್ರೀರಂಗಪಟ್ಟಣ (Sr) ತಾಲೂಕಿನ ಜಾಮಿಯಾ ಮಸೀದಿ (Jamia Masjid) ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ (Court) ಮೆಟ್ಟಿಲೇರುವುದಕ್ಕೆ ಹಿಂದೂಪರ ಸಂಘಟನೆಗಳು ಮುಂದಾಗಿವೆ. ಇನ್ನೊಂದು ಕಡೆ ಜೂನ್ 4 ರಂದು ಶ್ರೀರಂಗಪಟ್ಟಣ ಚಲೋಗೆ (Srirangapatna Chalo) ಕರೆ ನೀಡಿವೆ. ಜಾಮಿಯಾ ಮಸೀದಿ ಈ ಹಿಂದೆ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವಾಗಿತ್ತು (Anjaneya Temple). ಈ ದೇವಸ್ಥಾನದ ಮೇಲೆ ಟಿಪ್ಪು ಸುಲ್ತಾನ್ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾರೆ. ಇಂದಿಗೂ ಜಾಮಿಯಾ ಮಸೀದಿಯಲ್ಲಿ ದೇವಸ್ಥಾನದ ಹಲವು ಕುರುಹುಗಳು ಇವೆ. ಇಲ್ಲಿ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನದ ಗರ್ಭಗುಡಿ ಇದೆ.

ಜಮ್ಮುಕಾಶ್ಮೀರದಲ್ಲಿ ಹಿಂದೂಗಳನ್ನು ಟಾರ್ಗೆಟ್​​ ಮಾಡಿ ಹತ್ಯೆ?

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ (Jammu and Kashmir's Kulgam) ಕಳೆದ ಮೂರು ದಿನಗಳಲ್ಲಿ ಹಿಂದೂಗಳ ಮೇಲಿನ ಎರಡನೇ ದಾಳಿಯಲ್ಲಿ ರಾಜಸ್ಥಾನದ ಬ್ಯಾಂಕ್ ಮ್ಯಾನೇಜರ್ (Bank Manager ) ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದಾರೆ. ಇಲಾಖಾಹಿ ದೇಹತಿ ಬ್ಯಾಂಕ್‌ನ (Ellaquai Dehati Bank) ಅರೆಹ್ ಶಾಖೆಗೆ ಭಯೋತ್ಪಾದಕ ನುಗ್ಗಿ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಮೇಲೆ ಗುಂಡು ಹಾರಿಸಿದ್ದಾನೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಹಂತಕನು ಶಾಖೆಯೊಳಗೆ ಪ್ರವೇಶಿಸಿ ಗುಂಡು ಹಾರಿಸಿ ಪರಾರಿಯಾಗುವುದನ್ನು ಕಾಣಬಹುದಾಗಿದೆ. ವಿಜಯ್ ಕುಮಾರ್ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದರು. ರಾಜಸ್ಥಾನದ ಹನುಮಾನ್‌ಗಢ್ ಜಿಲ್ಲೆಯ ನಿವಾಸಿಯಾಗಿರುವ ಕುಮಾರ್ ಇತ್ತೀಚೆಗೆ ಕುಲ್ಗಾಮ್‌ನಲ್ಲಿ ತಮ್ಮ ಪೋಸ್ಟಿಂಗ್‌ಗೆ ಸೇರಿದ್ದರು. ಪ್ರದೇಶವನ್ನು ಸುತ್ತುವರಿದಿದ್ದು, ದಾಳಿಯ ಹಿಂದಿನ ಭಯೋತ್ಪಾದಕರ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Bank Manager Shot Dead: ಬ್ಯಾಂಕ್ ಮ್ಯಾನೇಜರನ್ನು ಗುಂಡಿಕ್ಕಿ ಕೊಂದ ಉಗ್ರ, ಹಿಂದೂಗಳನ್ನೇ ಟಾರ್ಗೆಟ್ ಮಾಡಲಾಗ್ತಿದೆಯಾ?

ವಿಸ್ತಾರಾ ಏರ್​​ಲೈನ್ಸ್​​​ಗೆ ₹10 ಲಕ್ಷ ದಂಡ

ಇತ್ತೀಚಿನ ಮಾರ್ಗಸೂಚಿಗಳ ಉಲ್ಲಂಘನೆ ಪ್ರಕರಣದಲ್ಲಿ ವಿಸ್ತಾರಾ ಏರ್‌ಲೈನ್ಸ್‌ಗೆ (Vistara Airlines) ವಾಯುಯಾನ ನಿಯಂತ್ರಕ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) 10 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇಂದೋರ್ ವಿಮಾನ ನಿಲ್ದಾಣದಲ್ಲಿ (Indore Airport) ತರಬೇತಿ ಪಡೆಯದ ಪೈಲಟ್‌ಗೆ ವಿಮಾನವನ್ನು ಇಳಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ವಿಮಾನಯಾನ ಸಂಸ್ಥೆಗೆ ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ವಿಮಾನದಲ್ಲಿ ಮೊದಲ ಅಧಿಕಾರಿಯಾಗಿದ್ದ ಪೈಲಟ್, ಸಿಮ್ಯುಲೇಟರ್‌ನಲ್ಲಿ ಅಗತ್ಯವಾದ ತರಬೇತಿಯನ್ನು ಪಡೆಯದೆ ಇತ್ತೀಚೆಗೆ ಇಂದೋರ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಇಳಿಸಿದರು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. "ಇದು ವಿಮಾನದಲ್ಲಿದ್ದ ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟುಮಾಡುವ ಗಂಭೀರ ಉಲ್ಲಂಘನೆಯಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊನೆಯಾಯ್ತು ಡೆಪ್ ಫ್ಯಾಮಿಲಿ ಡ್ರಾಮಾ! ಮಾಜಿ ಹೆಂಡ್ತಿಯಿಂದ ಸಿಕ್ಕಿದ್ದು 100 ಕೋಟಿ

ಹಾಲಿವುಡ್​ನ 'ಪೈರೇಟ್ಸ್ ಆಫ್ ದಿ ಕೆರಿಬಿಯನ್ ' (Pirates of the Caribbean) ಸಿನಿಮಾ ಸರಣಿಯ ಮೂಲಕ ಪ್ರಸಿದ್ಧಿ ಪಡೆದಿರುವ ಅಮೆರಿಕದ ನಟ ಜಾನಿ ಡೆಪ್ (Johnny Depp) ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಹೌದು ಕೆಲ ದಿನಗಳಿಂದ ಪ್ರಪಂಚದಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದ ಹಾಲಿವುಡ್ (Hollywood) ನಟ ಜಾನಿ ಡೆಪ್ ಮತ್ತು ಅವರ ಪತ್ನಿ ಅಂಬರ್ ಹರ್ಡ್ (Amber Heard) ಅವರ ಪ್ರಕರಣ ಇದೀಗ ಅಂತ್ಯಕಂಡಿದೆ. ಸತತ 6 ವಾರಗಳ ವಿಚಾರಣೆ ಬಳಿಕ ಅಮೇರಿಕಾದ ವರ್ಜೀನಿಯಾದ ಫೇರ್​ಫ್ಯಾಕ್ಸ್ ನಗರದ ಕೋರ್ಟ್​ ತೀರ್ಪು ನೀಡಿದೆ. ಅದರಂತೆ ಜಾನಿ ಡೆಪ್ ಅವರು ಅಂಬರ್ ಅವರ ಮೇಲೆ ಮಾನನಷ್ಟ ಮೊಕದ್ದಮೆ (Defamation Case) ದೂರು ದಾಖಲಿಸಿದ್ದರು. ಇದಾದ ಬಳಿಕೆ ಸುದೀರ್ಘ ವಿಚಾರಣೆ ಬಳಿಕ ಜಾನಿ ಡೆಪ್ ಅವರ ಮೇಲೆ ಅಂಬರ್​ ಅವರು ಮಾನಹಾನಿಗೆ ಯತ್ನಿಸಿದ್ದಾರೆ ಎಂದು ಸಾಕ್ಷಾಧಾರಗಳು ದೊರೆತ ಕಾರಣ ಡೆಫ್ ಅವರ ಪರ ತೀರ್ಪು ಬಂದಿದೆ. ಹೀಗಾಗಿ ಜಾನಿ ಡೆಪ್ ಅವರಿಗೆ ಅವರ ಮಾಜಿ ಪತ್ನಿ ಅಂಬರ್ ಅವರು 15 ಮಿಲಿಯನ್ ಅಮೇರಿಕನ್ ಡಾಲರ್ (ಭಾರತೀಯ ರೂಪಾಯಿಯಲ್ಲಿ 116 ಕೋಟಿ) ಪರಿಹಾರ ನೀಡಬೇಕಿದೆ. ಜೊತೆಗೆ ಜಾನಿ ಡೆಪ್ ಅವರು ಅಂಬರ್​ ಹಾರ್ಡ್ ಅವರಿಗೆ 2 ಮಿಲಿಯನ್ ಡಾಲರ್ (ಭಾರತೀಯ ರೂಪಾಯಿಯಲ್ಲಿ 15 ಕೋಟಿ) ಪರಿಹಾರವನ್ನು ನೀಡಬೇಕಿದೆ.
Published by:Kavya V
First published: