Evening Digest: ಕಾಫಿ-ಟೀ ಕೊಟ್ಟಿದ್ದಕ್ಕೆ ಡಿಕೆಶಿ ಫುಲ್ ಗರಂ: ಲಾಕ್​​ಡೌನ್​ ಬಗ್ಗೆ ಸುಳಿವು ಕೊಟ್ಟ ಸಚಿವರು: ಇಂದಿನ ಪ್ರಮುಖ ಸುದ್ದಿ

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಕಾಫಿ-ಟೀ ಕೊಟ್ಟಿದ್ದಕ್ಕೆ ಡಿಕೆಶಿ ಫುಲ್​ ಗರಂ : ನನ್ನ ಭಾಷಣ ವೇಳೆ ಇದೆಲ್ಲ ಬೇಡ ಎಂದು ಕಾಫಿ, ಟೀ ಕೊಡುತ್ತಿದ್ದವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President D K Shivakumar) ಗದರಿದ ದೃಶ್ಯ ಚಾಮರಾಜನಗರದಲ್ಲಿ ಕಂಡು ಬಂತು. ನಾನು ಭಾಷಣ ಮಾಡುವಾಗ ಇದೆಲ್ಲ ಬೇಡ. ಯಾರೂ ತಲೆ ತಿರುಗಿ ಬೀಳೋದಿಲ್ಲ. ಆ ಮೇಲಿಂದ ಕೊಡುವಂತೆ ಬಿಡು ಎಂದು ಕಾಫಿ ಮತ್ತು ಟಿ ಕೊಡುತ್ತಿದ್ದವರನ್ನು ಡಿ.ಕೆ.ಶಿವಕುಮಾರ್ ಗದರಿ ಕಳುಹಿಸಿದರು.  ಬಿಜೆಪಿ (BJP) ಸಮಾಜವನ್ನು ಇಬ್ಭಾಗ ಮಾಡುವ ಕೆಲಸ ಮಾಡುತ್ತಿದೆ. ಕಬ್ಬಿಣದಿಂದ 2 ಕೆಲಸ ಮಾಡಬಹುದು ಒಂದು ಕತ್ತರಿ ಮಾಡಬಹುದು, ಇನ್ನೊಂದು ಸೂಜಿ ಮಾಡಬಹುದು. ಬಿಜೆಪಿ ಕತ್ತರಿ  ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಲಾಕ್​ಡೌನ್​ ಬಗ್ಗೆ ಸುಳಿವು ಕೊಟ್ಟ ಸಚಿವರು

ಕೊರೋನಾ ಸೋಂಕಿನ (COVID Pandemic) ಏರಿಕೆ ಮತ್ತು ಮತ್ತೊಂದು ಕಡೆ ಒಮೈಕ್ರಾನ್ ವೈರಸ್ (Omicron Variant) ನ ಹರಡುವಿಕೆ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆ ಮತ್ತೆ ಲಾಕ್ ಡೌನ್ (Lockdown) ಆಗುತ್ತಾ ಅನ್ನೋದ ಪ್ರಶ್ನೆ ಮೂಡಿದೆ.  ಕೊರೋನಾ ಸೋಂಕು ಹೀಗೆ ಏರಿದ್ರೆ ಮುಂದೆ ಕಠಿಣ ನಿಯಮಗಳನ್ನು ತೆಗೆದುಕೊಳ್ಳಬೇಕು. ಪಾಸಿಟಿವಿಟಿ ದರ (ಸೋಂಕು ಹರಡುವಿಕೆ ಪ್ರಮಾಣ – Positivity Rate) ಎಷ್ಟು ಹೆಚ್ಚಳ ಆದ್ರೆ ಲಾಕ್ ಡೌನ್ ಮಾಡಬೇಕೆಂದು ತಜ್ಞರು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿರುವ ಮಾಹಿತಿ ಲಭ್ಯವಾಗಿದೆ. ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಲಾಕ್ ಡೌನ್ ಬಗ್ಗೆ ಪ್ರಸ್ತಾಪ ಮಾಡಲಾಗಿದೆ ಎನ್ನಲಾಗಿದೆ. ತಾಂತ್ರಿಕ ಸಲಹಾ ಸಮಿತಿ ಈ ಎರಡು ಅಂಶಗಳನ್ನು ಸರ್ಕಾರಕ್ಕೆ ಮನದಟ್ಟು ಮಾಡಿದೆ. ಈ ಹಂತಕ್ಕೆ ಹೋಗಬಾರದು ಅಂದರೆ ಜನ ನಿರ್ಬಂಧಗಳಿಗೆ ರೆಡಿ ಆಗಬೇಕಿದೆ ಕಲರ್ ಕೋಡ್ ಆಧಾರದ ನಿರ್ಭಂಧಗಳಿಗೆ ರಾಜ್ಯ ರೆಡಿಯಾಗಬೇಕಿದೆ. ಯಲ್ಲೋ, ಆರೆಂಜ್, ರೆಡ್ ಅಲರ್ಟ್ ಘೋಷಣೆ ಆದರೆ ನಿರ್ಬಂಧಗಳು ಜಾರಿಯಾಗಲಿದೆ.

ಮೇಕೆದಾಟು ವಿಷಯದಲ್ಲಿ ಸಿಟಿ ರವಿನೇ ಅಣ್ಣಾಮಲೈನ ಎತ್ತಿಕಟ್ಟುತ್ತಿದ್ದಾನೆ

ಮೇಕೆದಾಟು ಪಾದಯಾತ್ರೆ (Mekedatu Padayatra) ಹಮ್ಮಿಕೊಂಡಿರುವ ಕಾಂಗ್ರೆಸ್​​ (Congress) ಜಿಲ್ಲೆಯಲ್ಲಿ ನಡೆಸಿದ ಸಮಾವೇಶದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅಬ್ಬರದ ಭಾಷಣ ಮಾಡಿದರು. ಮೇಕೆದಾಟು ಯೋಜನೆಗೆ ಯಾರೂ ಅಡ್ಡಿಪಡಿಸಲು ಸಾಧ್ಯವಿಲ್ಲ, ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್ ಸಿಗಬೇಕು ಅಷ್ಟೇ. 200 tmc ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತಿದೆ. ತಮಿಳುನಾಡಿನವರು ರಾಜಕೀಯ ಕಾರಣಕ್ಕೆ ಖ್ಯಾತೆ ತೆಗೆಯುತ್ತಿದ್ದಾರೆ. ಅಣ್ಣಾಮಲೈ ಮೇಕೆದಾಟು ಯೋಜನೆ ಆಗಬಾರದು ಎಂದು ಧರಣಿ ಮಾಡ್ತಾನೆ. ಅಣ್ಣಾಮಲೈ ಮಾತು ಕೇಳಿಕೊಂಡು ಕೇಂದ್ರ ಸರ್ಕಾರ ಕ್ಲಿಯರೆನ್ಸ್ ಕೊಡ್ತಾ ಇಲ್ಲ, ಅಣ್ಣಾಮಲೈ ಅಲ್ಲಿನ ಬಿಜೆಪಿ ಅಧ್ಯಕ್ಷನಾಗಿದ್ದಾನೆ.  ತಮಿಳುನಾಡಿನ ಉಸ್ತುವಾರಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಸಿಟಿ ರವಿನೇ ಅಣ್ಣಾಮಲೈನನ್ನು ಎತ್ತಿಕಟ್ತಾ ಇದ್ದಾನೆ ಎಂದು ಗಂಭೀರ ಆರೋಪ ಮಾಡಿದರು.

Renukacharyaರ ನೋಟ್-ವೋಟ್ ವಿಡಿಯೋ ವೈರಲ್

ಕೋವಿಡ್‌‌ ನಿಂದ‌ ಮೃತಪಟ್ಟವರ (Covid Deaths) ಕುಟುಂಬಸ್ಥರಿಗೆ ಸರ್ಕಾರದಿಂದ (State BJP Government) ನೀಡುವ 1 ಲಕ್ಷ ರೂ. ಚೆಕ್ ಅನ್ನು  ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ (MLA MP Renukacharya) ವಿತರಿಸಿದರು. ಈ ವೇಳೆ ಶಾಸಕ ಮಾತನಾಡಿದ ವಿಡಿಯೋ(Video) ಸದ್ಯ ವೈರಲ್(Viral)​ ಆಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ 1 ಲಕ್ಷ ಕೋವಿಡ್ ಪರಿಹಾರ ನೀಡುತ್ತಿದೆ. ಇದರ ಜೊತೆಗೆ ನಾನು ನಿಮಗೆ 10 ಸಾವಿರ ರೂ. ವೈಯಕ್ತಿಕ ಹಣ ನೀಡುತ್ತಿದ್ದೇನೆ. ನೀವು ಮುಂದಿನ ಚುನಾವಣೆಯಲ್ಲಿ ನನಗೆ ವೋಟು ಹಾಕಬೇಕು ಎಂದು ಮನೆ ಬಾಗಿಲಿಗೆ ಕೋವಿಡ್ ಸಂತ್ರಸ್ಥರನ್ನು ಕರೆಸಿಕೊಂಡು ಆಣೆ ಪ್ರಮಾಣ ಮಾಡಿಸಿಕೊಂಡಿದ್ದಾರೆ. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ವಿಡಿಯೋ ಕುರಿತು ಸ್ಪಷ್ಟನೆ ನೀಡಿ ನಾನು ಮತ ಕೇಳಿದ್ದೇನೆ ಎಂದು  ಒಪ್ಪಿಕೊಂಡಿದ್ದಾರೆ. ಕ್ಷೇತ್ರದಲ್ಲಿ ನನ್ನದೇ ಆದ ಕಮಿಟ್ ಮೆಂಟ್ ಇರುತ್ತದೆ, ಹಾಗಾಗಿ ನಾನು ಹೇಳಲೇಬೇಕು. ಸಭೆಯಲ್ಲೇ ಹೇಳಿದ್ದೇನೆ ಮನೆಯ ಹತ್ತಿರ ಬಂದಾಗಲೂ ಹೇಳಿದ್ದೇನೆ. ನಾನು ನನ್ನ ಕ್ಷೇತ್ರಕ್ಕೆ  ಮಾಡಿದ ಸಾಧನೆಯಿಂದ ಮತ ಕೇಳಿದ್ದೇನೆ. ನನಗೆ ಮುಂದಿನ ಚುನಾವಣೆಯಲ್ಲಿ ಮತ ನೀಡಿ ಅಂತ ಕೇಳಿದ್ದು ಸತ್ಯ ಎಂದು ಒಪ್ಪಿಕೊಂಡು, ಅದರಲ್ಲಿ ತಪ್ಪೇನಿದೆ ಎಂಬ ದಾಟಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ.

2021ರಲ್ಲಿ ಭಾರತವು UPI ಮೂಲಕ 70 ಲಕ್ಷ ಕೋಟಿ ವಹಿವಾಟು ನಡೆಸಿದೆ; ಪ್ರಧಾನಿ ಮೋದಿ

2021ಲ್ಲಿ ಯುನೈಟೆಡ್​ ಪೇಮೆಂಟ್ಸ್​ ಇಂಟರ್ಫೇಸ್​​(United Payments Interface- UPI) ಮೂಲಕ ಭಾರತವು 70 ಲಕ್ಷ ಕೋಟಿ ರೂಪಾಯಿಗಳ ವಹಿವಾಟು ನಡೆಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಶನಿವಾರ ಹೇಳಿದರು. ಪ್ರಧಾನಿ ಮೋದಿ ಪಿಎಂ ಕಿಸಾನ್​ ಯೋಜನೆಯ 10ನೇ ಕಂತಿನ ಅಡಿಯಲ್ಲಿ 20,000 ಕೋಟಿ ರೂ. ಹಣವನ್ನು 10 ಕೋಟಿ ರೈತರಿಗೆ ಬಿಡುಗಡೆ ಮಾಡಿದ ಸಮಾವೇಶದಲ್ಲಿ ಮಾತನಾಡಿದರು. ಭಾರತವು ಪ್ರಸ್ತುತ 50,000 ಕ್ಕೂ ಹೆಚ್ಚು ಸ್ಟಾರ್ಟ್​​ಅಪ್(Start up)​​​ಗಳನ್ನು ಹೊಂದಿದೆ. ಇವುಗಳಲ್ಲಿ 10,000 ಸ್ಟಾರ್ಟ್​​ಅಪ್​ಗಳು 2021ರ ಕೊನೆಯ 6 ತಿಂಗಳಲ್ಲಿ ರೂಪುಗೊಂಡಿವೆ ಎಂದು ಹೇಳಿದರು.
Published by:Kavya V
First published: