Evening Digest: ದೇಶದಲ್ಲೇ ಮೊದಲ ಓಮಿಕ್ರಾನ್ ಕೇಸ್ ಬೆಂಗಳೂರಲ್ಲಿ ಪತ್ತೆ; ದೇವೇಗೌಡ್ರು ನಾನ್ಸೆನ್ಸ್ ಅಂದಿದ್ದೇಕೆ? ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

Evening digest

Evening digest

  • Share this:
ಓಮಿಕ್ರಾನ್​​ ಕೇಸ್​ ಬೆಂಗಳೂರಲ್ಲಿ ಪತ್ತೆ : ಕಳೆದೊಂದು ವಾರದಿಂದ ವಿಶ್ವದ ಹಲವೆಡೆ ಪತ್ತೆಯಾಗಿ ಆತಂಕ ಹುಟ್ಟಿಸಿದ್ದ ಕೊರೊನಾದ ಬಹು ರೂಪಾಂತರಿ ಸೋಂಕು ಓಮಿಕ್ರಾನ್(Corona Variant Omicron)​ ಭಾರತಕ್ಕೆ ವಕ್ಕರಿಸಿಯೇ ಬಿಟ್ಟಿದೆ. ಅದರಲ್ಲೂ ಮೊದಲ ಪ್ರಕರಣ ನಮ್ಮ ರಾಜ್ಯದಲ್ಲೇ ಪತ್ತೆಯಾಗಿದೆ(First Case in Karnataka). ಬೆಂಗಳೂರಲ್ಲೇ ಎರಡೂ ಓಮಿಕ್ರಾನ್​​ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿದ್ದು(2 Omicron Cases Detected In Bengaluru) , ಸಿಲಿಕಾನ್​ ಸಿಟಿ ಮಂದಿಯನ್ನು ಆತಂಕಕ್ಕೆ ದೂಡಿದೆ. 66 ಹಾಗೂ 46 ವರ್ಷದ ಇಬ್ಬರು ವ್ಯಕ್ತಿಗಳಲ್ಲಿ ಓಮಿಕ್ರಾನ್​​ ರೂಪಾಂತರಿ ಸೋಂಕು ಇರುವುದು ದೃಢಪಟ್ಟಿದೆ. 46 ವರ್ಷದ ವ್ಯಕ್ತಿ ಸ್ಥಳೀಯರಾಗಿದ್ದು, ಯಾವುದೇ ಟ್ರಾವೆಲ್​ ಹಿಸ್ಟರಿ ಇಲ್ಲದಿದ್ದರೂ ಸೋಂಕು ಪತ್ತೆಯಾಗಿದೆ. ಸದ್ಯ ಇವರಿಗೆ ನಗರದ ಬೌರಿಂಗ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು 66 ವರ್ಷದ ವ್ಯಕ್ತಿ ದಕ್ಷಿಣ ಆಫ್ರಿಕಾದ ಮೂಲದವರಾಗಿದ್ದು, ಅವರೀಗ ಬೆಂಗಳೂರಲ್ಲಿ ಇಲ್ಲ. ಕೊರೊನಾ ನೆಗೆಟಿವ್​ ವರದಿ ಹಿನ್ನೆಲೆಯಲ್ಲಿ ದುಬೈಗೆ​ ಹೋಗಿದ್ದಾರೆ. ಆದರೆ ಅವರಿಂದ ಸಂಗ್ರಹಿಸಲಾಗಿದ್ದ ಸ್ಯಾಂಪಲ್​​ನ ರಿಸಲ್ಟ್​ ಈಗ ಬಂದಿದೆ. ಅವರಲ್ಲಿ ಓಮಿಕ್ರಾನ್​ ಇರುವುದು ಪತ್ತೆಯಾಗಿದೆ.

9ನೇ ಕ್ಲಾಸ್ ವಿದ್ಯಾರ್ಥಿಗೆ ಸೋಂಕು ದೃಢ

ವೈದ್ಯಕೀಯ ಕಾಲೇಜಿನಿಂದ (Medical College) ಕೋವಿಡ್ ಶಾಲೆಗೂ (School) ವಿಸ್ತರಿಸಿಕೊಂಡಿದೆ. ಧಾರವಾಡ ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನಿಂದ (SDM Medical College, Dharwad) ಹುಬ್ಬಳ್ಳಿ ಖಾಸಗಿ ಶಾಲೆಗೆ (Private School) ಕೊರೋನಾ ವಿಸ್ತರಣೆಗೊಂಡಿದೆ. 9 ನೇ ತರಗತಿ ವಿದ್ಯಾರ್ಥಿಗೂ ಕೊರೊನಾ (Corona Virus)  ವಕ್ಕರಿಸಿದೆ. ಹುಬ್ಬಳ್ಳಿಯ ಖಾಸಗಿ ಶಾಲೆಯ ವಿದ್ಯಾರ್ಥಿಗೆ ಸೋಂಕು ದೃಢಪಟ್ಟಿದೆ. ಅಶೋಕ ನಗರದ ಸಿಎಂ ನಿವಾಸದ ಕೂಗಳತೆ ದೂರದಲ್ಲಿರೋ ಖಾಸಗಿ ಶಾಲೆಯ ವಿದ್ಯಾರ್ಥಿಗೆ (Student) ಕೊರೋನಾ ಸೋಂಕಿರೋದು ಖಾತ್ರಿಯಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ  ಆತಂಕ ಸೃಷ್ಟಿಯಾಗಿದ್ದು, ಮೂರು ದಿನಗಳ ಕಾಲ ಶಾಲೆಗೆ ರಜೆ ನೀಡಲಾಗಿದೆ. ವಿದ್ಯಾರ್ಥಿಗಳು, ಪೋಷಕರು ಮತ್ತು ಸಿಬ್ಬಂದಿಗೆ ಕೋವಿಡ್ ಟೆಸ್ಟ್ (COVID Test) ಮಾಡಲಾಗುತ್ತಿದೆ. ಕೋವಿಡ್ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದು, ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಆತಂಕ ಮನೆ ಮಾಡಿದೆ.

ಪ್ರಧಾನಿಗಳನ್ನು ಭೇಟಿ ಮಾಡಲು ಸಿದ್ದರಾಮಯ್ಯ ಪರ್ಮಿಷನ್ ಬೇಕಾ.. Nonsense

ವಿಧಾನ ಪರಿಷತ್​ ಚುನಾವಣೆ (MLC Election) ಹಿನ್ನೆಲೆ ಜೆಡಿಎಸ್ (JDS)​ ವರಿಷ್ಠ, ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು (H. D. Deve Gowda) ಶಿಡ್ಲಘಟ್ಟ ಬಾಲಾಜಿ ಕನ್ವೆವೆನ್ಷನ್ ಹಾಲ್ ನಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮತಯಾಚಿಸಿದರು. ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಅಭ್ಯರ್ಥಿ ವಕ್ಕಲೇರಿ ರಾಮು (JDS Candidate Vokkaleri Ramu) ಪರ ಪ್ರಚಾರ ನಡೆಸಿದರು. ಈ ವೇಳೆ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. ಪ್ರಧಾನಿಗಳನ್ನು ಭೇಟಿ ಮಾಡಲು ಸಿದ್ದರಾಮಯ್ಯನ ಪರ್ಮಿಷನ್ ಬೇಕಾ? ಮನಮೋಹನ್ ಸಿಂಗ್ ಅವರನ್ನು  ಭೇಟಿ ಮಡಿದ್ದೇನೆ, ವಾಜಪೇಯಿ ಅವರನ್ನು ಭೇಟಿ ಮಾಡಿದ್ದೇನೆ. ಸಿದ್ದರಾಮಯ್ಯನಿಗೆ ನನ್ನ ಪಕ್ಷವನ್ನು ಸರಂಡರ್ ಮಾಡ್ತೀವಿ ಅಂತ ಹೇಳಿದ್ದೀವಾ ನಾನ್ಸೆನ್ಸ್ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

KSRTC ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕ್

ಸಾಮಾನ್ಯ ಜನರಿಗೆ ಒಂದಾದ ಒಂದರ ನಂತರ ಬೆಲೆ ಏರಿಕೆ (Price Hike) ಹೊಡೆತ ಬೀಳುತ್ತಿದೆ. ಜೇಬಿಗೆ ಕತ್ತರಿ ಬಿದ್ದಂತೆ ಬೆಲೆ ಏರಿಕೆಯಾಗುತ್ತಿದೆ. ನಿನ್ನೆಯಿಂದಲೇ ಬೆಂಗಳೂರಿನಲ್ಲಿ  (Bengaluru) ಆಟೋ ಬೆಲೆಗಳ (Auto Charge) ಏರಿಕೆಯಾಗಿತ್ತು. ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ ನೀಡಿದೆ. ಬಸ್ ಗಳಲ್ಲಿ ಲಗೇಜ್ (Luggage) ದರ ಹೆಚ್ಚಳವನ್ನು KSRTC ಮಾಡಿದೆ. ನೂತನ ದರಗಳು ಡಿಸೆಂಬರ್ 10 ರಿಂದಲೇ ಜಾರಿಗೆ ಬರಲಿವೆ ಎಂಬ ಮಾಹಿತಿಯನ್ನು ನೀಡಿದೆ ನಷ್ಟದ ನೆಪವೊಡ್ಡಿ ಬಸ್ ಗಳಲ್ಲಿ ಲಗೇಜ್ ದರ ಪರಿಷ್ಕರಣೆ ಮಾಡಲಾಗಿದೆ. ಪ್ರತಿ  ಸ್ಟೇಜ್ ಆಧಾರದ ಮೇಲೆ ಲಗೇಜ್ ದರ ನಿಗದಿಪಡಿಸಲಾಗಿದೆ. ಈ ದರ ಏರಿಕೆ ಮಧ್ಯಮ ವರ್ಗಕ್ಕೆ ಹೊರೆಯಾಗಲಿದೆ.  ಶೇ 10 ರಷ್ಟು ಲಗೇಜ್ ದರ ಪರಿಷ್ಕರಣೆ ಮಾಡಲಾಗಿದೆ.

ಹಿರಿಯ ನಟ ಶಿವರಾಮ್ ಆರೋಗ್ಯ ಗಂಭೀರ

ಹಿರಿಯ ನಟ ಶಿವರಾಮ್ ಆರೋಗ್ಯ ಗಂಭೀರವಾದ ಹಿನ್ನೆಲೆ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಶಿವರಾಮ್ ಅವರನ್ನು ವಿದ್ಯಾಪೀಠ ಸರ್ಕಲ್ ಬಳಿ ಇರುವ ಪ್ರಶಾಂತ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ  ನೀಡಲಾಗುತ್ತಿದೆ. ಹೊಸಕೆರೆಹಳ್ಳಿ ಬಳಿ ಕಾರಲ್ಲಿ ಹೋಗಿದ್ದ ವೇಳೆ ಬಿದ್ದು ಗಾಯಗೊಂಡಿದ್ದಾರೆ. ಶಿವರಾಮ್ ಅವರ ತಲೆಗೆ ಗಂಭೀರ ಗಾಯವಾಗಿದ್ದು ಬ್ರೈನ್ ಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ತಿಳಿದು ಬಂದಿದೆ. 84 ವರ್ಷ ವಯಸ್ಸಿನ ಶಿವರಾಮ್ ಅವರ ಅರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹಿರಿಯ ನಟ ಶ್ರೀನಿವಾಸ್ ಮೂರ್ತಿ ಮಾಹಿತಿ ನೀಡಿದ್ದಾರೆ.
Published by:Kavya V
First published: