Evening Digest: ಸಾಂಗ್ ಶೂಟಿಂಗ್ ವೇಳೆ 8 ಮಾಡೆಲ್​​ಗಳ ಮೇಲೆ ರೇಪ್: ಕರಾಳ ರಹಸ್ಯ ಬಿಚ್ಚಿಟ್ಟ ಮಲ್ಲಿಕಾ ಶೆರಾವತ್: ಇಂದಿನ ಪ್ರಮುಖ ಸುದ್ದಿ

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಸಾಂಗ್ ಶೂಟಿಂಗ್ ವೇಳೆ 8 ಮಾಡೆಲ್​​ಗಳ ಮೇಲೆ ​ರೇಪ್ : 8 ಮಂದಿ ಮಾಡೆಲ್​​ಗಳ (Models) ಮೇಲೆ 80 ಮಂದಿ ಪುರುಷರು ಸಾಮೂಹಿಕ ಅತ್ಯಾಚಾರ (Gang Rape) ನಡೆಸಿರುವ ಶಾಕಿಂಗ್​ ಘಟನೆ ಬೆಳಕಿಗೆ ಬಂದಿದೆ. ದಕ್ಷಿಣ ಆಫ್ರಿಕಾದ ಪಟ್ಟಣವಾದ ಕ್ರುಗರ್ಸ್‌ಡಾರ್ಪ್‌ನಲ್ಲಿ (South African town of Krugersdorp) ಶೂಟಿಂಗ್​ಗೆ (Song Shooting) ತೆರಳಿದ್ದಾರೆ. ಆಗ ಎಂಟು ಮಹಿಳೆಯರ ಸಾಮೂಹಿಕ ಅತ್ಯಾಚಾರ ನಡೆದಿದೆ. ಇನ್ನು ಮಾಡೆಲ್​ಗಳ ಜೊತೆ ಇದ್ದ ವೀಡಿಯೊ ನಿರ್ಮಾಣ ಸಿಬ್ಬಂದಿಯ ಸಶಸ್ತ್ರಗಳನ್ನೂ ದರೋಡೆ ಮಾಡಲಾಗಿದೆ. ಅತ್ಯಾಚಾರ ಮತ್ತು ದರೋಡೆ ನಡೆದ ಸ್ಥಳದಲ್ಲೇ ಸಮೀಪವಿರುವ ಗಣಿಗಾರಿಕೆ ಸ್ಥಳದಲ್ಲಿ 80 ಮಂದಿಯನ್ನು ಬಂಧಿಸಲಾಗಿದೆ. 80 ಕ್ಕೂ ಹೆಚ್ಚು ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾದರು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Gang Rape: ಗಣಿಯಲ್ಲಿ ಸಾಂಗ್ ಶೂಟಿಂಗ್ ವೇಳೆ 8 ಮಾಡೆಲ್​​ಗಳ ಮೇಲೆ 80 ಪುರುಷರಿಂದ ಗ್ಯಾಂಗ್​ರೇಪ್​

ಬಂಧಿತ ಮಾಜಿ ಸಚಿವ ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆದ ಮಹಿಳೆ!

ಎಸ್​ಎಸ್​ಸಿ ಹಗರಣ (SSC Scam) ಪಶ್ಚಿಮ ಬಂಗಾಳದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಆಡಳಿತಾರೂಢ ಟಿಎಂಸಿ ಸರ್ಕಾರಕ್ಕೆ (TMC Govt) ತೀವ್ರ ಮುಖಭಂಗವಾಗಿದೆ. ಪ್ರಕರಣದಲ್ಲಿ ಬಂಧಿತರಾಗಿರುವ ಪಾರ್ಥ ಚಟರ್ಜಿ (Partha Chatterjee) ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವ ಮೂಲಕ ಸಿಎಂ ಮಮತಾ ಬ್ಯಾನರ್ಜಿ ಡ್ಯಾಮೇಜ್​ ಕಂಟ್ರೋಲ್​​ ಮಾಡಿದ್ದಾರೆ. ಸದ್ಯ ಪೊಲೀಸರ ವಶದಲ್ಲಿರುವ ಮಾಜಿ ಸಚಿವ ಪಾರ್ಥ ಚಟರ್ಜಿ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಬಂದಾಗ ಮಹಿಳೆಯೊಬ್ಬರು ಅವರ ಮೇಲೆ ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಪ್ಪಲಿ ಎಸೆದ ಮಹಿಳೆಯ ಹೆಸರು ಸುಭ್ರಾ ಘಡುಯಿ ಹಾಗೂ ಆಕೆ ದಕ್ಷಿಣ 24 ಪರಗಣ ಜಿಲ್ಲೆಯ ಅಮತಾಲಾ ನಿವಾಸಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ

ವಿದ್ಯಾರ್ಥಿಗಳಿಗೆ (Students) ಪೂರೈಸುವ ಟೂಲ್ ಕಿಟ್ ನಲ್ಲಿ (Tool Kit) ಬ್ರಹ್ಮಾಂಡ ಭ್ರಷ್ಟಾಚಾರ (Corruption) ನಡೆದಿದೆ ಅನ್ನೋ ಆರೋಪ ಕೇಳಿಬಂದಿದ್ದು, ಸಚಿವ ಅಶ್ವತ್ಥ ನಾರಾಯಣ (Ashwath Narayan) ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಆಮ್ ಆದ್ಮಿ ಪಾರ್ಟಿಯ (Aam Aadmi Party) ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಉಪಾಧ್ಯಕ್ಷ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಮಾಧ್ಯಮ ವಕ್ತಾರ ಕೆ. ಮಥಾಯಿ ನೇತೃತ್ವದಲ್ಲಿ ದೂರು ನೀಡಲಾಗಿದೆ. ನ್ಯಾಯಾಂಗ ತನಿಖೆ ನಡೆಸಿ ಶಿಸ್ತುಕ್ರಮ ಜರುಗಿಸುವಂತೆ ಆಪ್ (APP) ಆಗ್ರಹಿಸಿದೆ. ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಟೂಲ್ ಕಿಟ್ ಪೂರೈಕೆ ಟೆಂಡರ್ ನಲ್ಲಿ ಬೃಹತ್ ಹಗರಣ ನಡೆದಿದೆ. ವಿದ್ಯಾರ್ಥಿಗಳಿಗೆ ನೀಡುವ ಟೂಲ್ ಕಿಟ್ ನಲ್ಲಿ 22 ಕೋಟಿ ಹಗರಣ ನಡೆದಿದೆ. 22 ಕೋಟಿ ಟೆಂಡರ್ ಹಗರಣದಲ್ಲಿ ಸಚಿವ ಅಶ್ವತ್ಥ ನಾರಾಯಣ ನೇರ ಕೈವಾಡ ಇದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ.

ಬಾಲಿವುಡ್‌ನ ಕರಾಳ ಮುಖ ಬಿಚ್ಚಿಟ್ಟ ಮಲ್ಲಿಕಾ ಶೆರಾವತ್

ಬಾಲಿವುಡ್​ನ ಹಾಟ್​ ನಟಿಯರಲ್ಲಿ ಒಬ್ಬರಾದ ನಟಿ ಮಲ್ಲಿಕಾ ಶೆರಾವತ್ (Mallika Sherawat) ಸದ್ಯ ಚಿತ್ರರಂಗದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಇವರು ಬಾಲಿವುಡ್​ ಮಾತ್ರವಲ್ಲದೇ ಹಾಲಿವುಡ್​ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇವರ ನಟನೆಯ 'ಮರ್ಡರ್' ಸಿನಿಮಾ ಅವರ ವೃತ್ತಿಜೀವನದಲ್ಲಿ ಸಖತ್ ಹಿಟ್​ ಆಗುವ ಮೂಲಕ ಸಾಲು ಸಾಲು ಚಿತ್ರಗಳ ಅವಕಾಶ ಸಿಗುವಂತಾಯಿತು. ಆದರೆ ಸದ್ಯ ಕೆಲ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದು, ಹೆಚ್ಚಾಗಿ ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಇದಿಗ ಅವರು ತಾವು ಬಾಲಿವುಡ್​ ನಿಂದ (Bollywood) ಹೀಗೆ ಏಕೆ ದೂರವಾದೆ ಎಂದು ಹೇಳಿಕೊಂಡಿದ್ದು, ಬಾಲಿವುಡ್​ನ ಕರಾಳ ಮುಖವನ್ನು ತೆರೆದಿಟ್ಟಿದ್ದಾರೆ. ಈಗಾಗಲೇ ಅನೇಕ ನಟಿಯರು ಕಾಸ್ಟಿಂಗ್​ ಕೌಚ್ (Casting Couch)​ ಪಿಡುಗಿನ ಬಗ್ಗೆ ಹೇಳಿದ್ದು, ಇದೀಗ ಈ ಸಾಲಿಗೆ ಮಲ್ಲಿಕಾ ಸಹ ಸೇರಿಕೊಂಡಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Mallika Sherawat: ಮಧ್ಯರಾತ್ರಿ ಫೋನ್ ಮಾಡಿ ಮನೆಗೆ ಕರೀತಾರೆ, ಬಾಲಿವುಡ್‌ನ ಕರಾಳ ಮುಖ ಬಿಚ್ಚಿಟ್ಟ ಮಲ್ಲಿಕಾ ಶೆರಾವತ್

ಥೈಲ್ಯಾಂಡ್​ಗೆ ಹಾರಿದ 777 Charlie ಚಿತ್ರತಂಡ

ಚಿತ್ರವು ಸೂಪರ್ ಹಿಟ್​ ಆಗಿದ್ದಲ್ಲದೇ, ಬಾಕ್ಸ್ ಆಫೀಸ್​ನಲ್ಲಿಯೂ ಉತ್ತಮ ಗಳಿಕೆ ಮಾಡಿತು. ಹೀಗಾಗಿ ಚಾರ್ಲಿ ಸಿನಿಮಾದ ಚಿತ್ರತಂಡ ಇದೀಗ ಚಿತ್ರದ ಸಕ್ಸಸ್​ ಅನ್ನು ಸಂಭ್ರಮಿಸಲು ಥೈಲ್ಯಾಂಡ್​ಗೆ ಹಾರಿದೆ. ಚಿತ್ರದ ನಿರ್ದೇಶಕ ಕಿರಣ್ ರಾಜ್​, ನಟ ರಕ್ಷಿತ್ ಶೆಟ್ಟಿ ಸೇರಿದಂತೆ ಚಿತ್ರತಂಡದ ಸರಿಸುಮಾರು ಎಲ್ಲರೂ ಥೈಲ್ಯಾಂಡ್​ ಪ್ರವಾಸದಲ್ಲಿದ್ದಾರೆ. ನಿರ್ದೇಶಕ ಕಿರಿಣ್ ರಾಜ್​ ಅವರು ತಮ್ಮ ಸಾಮಾಜಿಕ ಜಾಲತಾಣವಾದ ಫೇಸ್​ಬುಕ್​ ಮತ್ತು ಟ್ವಿಟರ್​ ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದು, ‘ಶಾಂತಿ ಮತ್ತು ನಗು, ಯಶಸ್ಸಿನ ನಂತರ‘ ಎಂದು ಬರೆದುಕೊಂಡಿದ್ದಾರೆ. ಆದರೆ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದ ಚಾರ್ಲಿ ಎಲ್ಲಿ ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.
Published by:Kavya V
First published: