Top-5 News: ಕುಡಿದ ಮತ್ತಲ್ಲಿ ವಿಮಾನದಲ್ಲೇ ತೂರಾಡಿದ್ರಾ ಪಂಜಾಬ್​ ಸಿಎಂ? ಡಿಕೆಶಿ​ಗೆ ಸುಪ್ರೀಂ​ನಿಂದ ನೋಟಿಸ್; ಇಂದಿನ ಟಾಪ್‌ ನ್ಯೂಸ್ ಇಲ್ಲಿವೆ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಡಿಕೆ ಶಿವಕುಮಾರ್​ಗೆ ಸುಪ್ರೀಂಕೋರ್ಟ್​ನಿಂದ ನೋಟಿಸ್

ನವದೆಹಲಿ (ಸೆ.19): ತೆರಿಗೆ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್​ ನಾಯಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ (D.K Shivakumar) ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಡಿ.ಕೆ. ಶಿವಕುಮಾರ್​ಗೆ ಸುಪ್ರೀಂಕೋರ್ಟ್ (Supreme Court) ನೋಟಿಸ್ ನೀಡಿದ್ರು, ಡಿಕೆಶಿ ವಿರುದ್ಧ ಐಟಿ ತನಿಖೆಗೂ ಸುಪ್ರೀಂ ಅಸ್ತು ಎಂದಿದೆ. ಈ ಸಂಬಂಧ ಕರ್ನಾಟಕ (Karnataka) ಹೈಕೋರ್ಟ್​ ಈ ಹಿಂದೆಯೇ ಅರ್ಜಿ ವಜಾಗೊಳಿಸಿತ್ತು. ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​​​ ನೋಟಿಸ್​ ಜಾರಿ ಮಾಡಿದೆ. ಇದೇ ವೇಳೆ ಹೈಕೋರ್ಟ್​ (High Court) ನೀಡಿದ್ದ ಆದೇಶಕ್ಕೆ ಜಸ್ಟೀಸ್​​ ಸಂಜೀವ್​ ಖನ್ನಾ ಅವರ ನೇತೃತ್ವದ ಪೀಠ ಮಧ್ಯಂತರ ತಡೆ ನೀಡಿದೆ.

ಇದನ್ನೂ ಓದಿ: Tax Evasion Case: ಡಿಕೆ ಶಿವಕುಮಾರ್​ಗೆ ಮತ್ತೆ ಸಂಕಷ್ಟ; ಸುಪ್ರೀಂಕೋರ್ಟ್​ನಿಂದ ನೋಟಿಸ್​

ರಾಮ ಮಂದಿರ ಹೋರಾಟದ ಆಚಾರ್ಯ ಧರ್ಮೇಂದ್ರ ಇನ್ನಿಲ್ಲ

ಜೈಪುರ: ಶ್ರೀ ರಾಮ ಮಂದಿರ (Ram Mandir) ಹೋರಾಟದಲ್ಲಿ ಸಕ್ರಿಯರಾಗಿದ್ದ ಹಿಂದೂ ಮುಖಂಡ ಆಚಾರ್ಯ ಧರ್ಮೇಂದ್ರ (Hindu leader Acharya Dharmendra) ನಿಧನರಾಗಿದ್ದಾರೆ. ತಮ್ಮ ಆವೇಶಭರಿತ ಭಾಷಣಗಳಿಗೆ ಹೆಸರಾದ 80 ವರ್ಷದ ಹಿಂದೂ ಮುಖಂಡ ಆಚಾರ್ಯ ಧರ್ಮೇಂದ್ರ ಅವರು ಕರುಳಿನ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಜೈಪುರದ (Jaipur)  ಸವಾಯಿ ಮಾನ್ ಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ  ಆಚಾರ್ಯ ಧರ್ಮೇಂದ್ರ ಅವರು ಕೊನೆಯುಸಿರೆಳೆದಿದ್ದಾರೆ.

ಮೈಸೂರಿನ ಪಿಎಸ್‌ಐ ಅಶ್ವಿನಿ ಅಮಾನತು

ಮೈಸೂರು (ಸೆ. 19): ಪಿಎಸ್ಐ ನೇಮಕಾತಿ ಹಗರಣ ಹೊರಬಂದ ಬಳಿಕ ಅನೇಕ ಸರ್ಕಾರಿ ನೌಕರಿಗಳ ನೇಮಕಾತಿಯಲ್ಲಿ (Recruitment of Govt) ನಡೆದ ಅಕ್ರಮಗಳು ಕೂಡ ಒಂದೊಂದಾಗಿಯೇ ಹೊರ ಬರ್ತಿದೆ. ಪ್ರಥಮ ದರ್ಜೆ ಸಹಾಯಕರ ಹುದ್ದೆ (FDA) ಕೊಡಿಸಲು ಅವ್ಯವಹಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಮೈಸೂರಿನ ನರಸಿಂಹರಾಜ ಸಂಚಾರ ಪೊಲೀಸ್‌ ಠಾಣೆಯ ಪಿಎಸ್‌ಐ ಅಶ್ವಿನಿ (PSI Ashwini) ಅನಂತಪುರ ಅವರನ್ನು ಅಮಾನತುಗೊಳಿಸಿ ನಗರ ಪೊಲೀಸ್‌ ಆಯುಕ್ತರು (Police Commissioner) ಇಂದು (ಸೆಪ್ಟೆಂಬರ್​ 19) ಆದೇಶ ಹೊರಡಿಸಿದ್ದಾರೆ.

ಈ ವರ್ಷದಿಂದಲೇ ಭಗವದ್ಗೀತೆ ಬೋಧನೆ

ಬೆಂಗಳೂರು (ಸೆ.19): ವಿದ್ಯಾರ್ಥಿಗಳಿಗೆ ಭಗವದ್ಗೀತೆ ಭೋದನೆಗೆ ಸಂಬಂಧಿಸಿದಂತೆ ಹಲವು ದಿನಗಳಿಂದ ಚರ್ಚೆಯಾಗಿದ್ದು, ಇದೀಗ ಪರಿಷತ್​ನಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಭಗವದ್ಗೀತೆ (Bhagavad Gita) ಬೋಧನೆ ಆರಂಭಿಸುವ ಚಿಂತನೆ ನಡೆದಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ತಿಳಿಸಿದರು. ವಿಧಾನ ಪರಿಷತ್​ನಲ್ಲಿ ಈ ವಿಚಾರವನ್ನು ಸದಸ್ಯ ಎಂ.ಕೆ.ಪ್ರಾಣೇಶ್ (MK Pranesh) ಪ್ರಸ್ತಾಪಿಸಿದರು.

ಇದನ್ನೂ ಓದಿ: BC Nagesh: ಶಾಲೆ-ಕಾಲೇಜುಗಳಲ್ಲಿ ಈ ವರ್ಷದಿಂದಲೇ ಭಗವದ್ಗೀತೆ ಬೋಧನೆ

ಕುಡಿದ ಮತ್ತಲ್ಲಿ ವಿಮಾನದಲ್ಲೇ ತೂರಾಡಿದ್ರಾ ಪಂಜಾಬ್​ ಸಿಎಂ!?

ಪಂಜಾಬ್​ ಮುಖ್ಯಮಂತ್ರಿ ಭಗವಂತ್ ಮನ್ (Bhagwant Mann) ಕುಡಿದು ವಿಮಾನ ಏರಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗಿವೆ. ಪಂಜಾಬ್ ಸಿಎಂ ಭಗವಂತ್ ಮಾನ್ ಪಾನಮತ್ತನಾಗಿದ್ದ (Bhagwant Mann Drunken?) ಕಾರಣ ಫ್ರಾಂಕ್‌ಫರ್ಟ್‌ನಿಂದ ದೆಹಲಿಗೆ ಹೊರಟಿದ್ದ ಲುಫ್ತಾನ್ಸಾ ವಿಮಾನದಿಂದ ಅವರನ್ನು ಕೆಳಗಿಳಿಸಲಾಗಿದೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ. ಪಂಜಾಬ್ ಮುಖ್ಯಮಂತ್ರಿ ವಿಶ್ವದಾದ್ಯಂತ ಇರುವ ಪಂಜಾಬಿಗಳಿಗೆ ನಾಚಿಕೆ ಆಗುವಂತೆ ವರ್ತಿಸಿದ್ದಾರೆ ಎಂದು ಟೀಕೆ ಕೇಳಿಬಂದಿದ್ದು ವಿರೋಧ ಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. ಆದರೆ ಆಪಂಜಾಬ್ ಮುಖ್ಯಮಂತ್ರಿ ಭಗವಂತ್ ಮನ್ ಕುಡಿದು ವಿಮಾನ ಏರಿದ್ದರು ಎಂಬ ವಿರೋಧ ಪಕ್ಷಗಳ ಆರೋಪವನ್ನು ಆಮ್ ಆದ್ಮಿ ಪಾರ್ಟಿ ನಿರಾಕರಿಸಿದೆ.
Published by:ಪಾವನ ಎಚ್ ಎಸ್
First published: