Evening Digest: ‘ಅಗ್ನಿ’ ಹೊತ್ತಿಸಿದವರಿಗೆ ಸೇನೆ ಬಾಗಿಲು ಬಂದ್; ನಾಳೆ ಮೋದಿ ಭೇಟಿ ಹಿನ್ನೆಲೆ ಈ ನಿಯಮಗಳನ್ನು ಪಾಲಿಸಬೇಕು: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
‘ಅಗ್ನಿ’ ಹೊತ್ತಿಸಿದವರಿಗೆ ಸೇನೆ ಬಾಗಿಲು ಬಂದ್ : ರಕ್ಷಣಾ ಸಚಿವಾಲಯವು (Ministry of Defense) (ಸೇನೆ, ನೌಕಾಪಡೆ ಮತ್ತು ವಾಯುಪಡೆ) ಭಾನುವಾರ ಜಂಟಿಯಾಗಿ ಮಾಧ್ಯಮಗಳನ್ನು ಉದ್ದೇಶಿಸಿ, ಕೇಂದ್ರದ ಅಗ್ನಿಪಥ್ ಯೋಜನೆಯಡಿ (Agnipath scheme) ಸೈನಿಕರ ನೇಮಕಾತಿ ಕುರಿತು ಸ್ಪಷ್ಟನೆ ನೀಡಿದೆ. ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ (Lt General Anil Puri) ಅವರು ಭಾರತೀಯ ಸೇನೆಯ ಶಿಸ್ತಿನ ಮೌಲ್ಯಗಳನ್ನು ಒತ್ತಿ ಹೇಳಿದರು. ಮುಂದು ಸೇನೆ ಸೇರುವ ಎಲ್ಲಾ ಆಕಾಂಕ್ಷಿಗಳು ತಾವು ಯಾವುದೇ ಪ್ರತಿಭಟನೆ ಅಥವಾ ವಿಧ್ವಂಸಕತೆಯ ಭಾಗವಾಗಿಲ್ಲ ಎಂದು ಸಾಬೀತುಪಡಿಸುವ ಪ್ರಮಾಣಪತ್ರವನ್ನು ಒದಗಿಸಬೇಕಾಗುತ್ತದೆ ಎಂದು ಹೇಳಿದರು. ಯೋಜನೆಯನ್ನು 'ವಿಶ್ಲೇಷಿಸಲು' 46,000 ಸೇನಾ ಆಕಾಂಕ್ಷಿಗಳ ನೇಮಕಾತಿಯೊಂದಿಗೆ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು. ಕೇಂದ್ರ ಜಾರಿಗೆ ತಂದಿರುವ ಯೋಜನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Agnipath ಹಿಂಸಾತ್ಮಕ ಹೋರಾಟದಲ್ಲಿ ಭಾಗಿಯಾದವರಿಗೆ ಸೇನೆ ಸೇರಲು ಅವಕಾಶವಿಲ್ಲ: ಲೆಫ್ಟಿನೆಂಟ್ ಜನರಲ್

ಉದ್ಘಾಟನೆ ಬಳಿಕ ಸುರಂಗದಲ್ಲಿ ಕಸ ಎತ್ತಿದ ಪ್ರಧಾನಿ ಮೋದಿ!

ಇಲ್ಲಿನ ಪ್ರಗತಿ ಮೈದಾನ ಇಂಟಿಗ್ರೇಟೆಡ್ ಟ್ರಾನ್ಸಿಟ್ ಕಾರಿಡಾರ್ (Pragati Maidan Integrated Transit Corrido) ಅಡಿಯಲ್ಲಿ ನಿರ್ಮಿಸಲಾದ ಹೊಸದಾಗಿ ಪ್ರಾರಂಭಿಸಲಾದ ಐಟಿಪಿಒ ಸುರಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಕಸವನ್ನು ಎತ್ತುವ (Picks up Litter) ಮೂಲಕ ಆದರ್ಶ ಮೆರೆದರು. ಸ್ವಚ್ಛ ಭಾರತ ಅಭಿಯಾನದ ಕಟ್ಟಾ ಪ್ರತಿಪಾದಕರಾಗಿರು ಮೋದಿ ಅವರು ನಡೆದುಕೊಂಡು ಹೋಗುವಾಗ ಖಾಲಿ ನೀರಿನ ಬಾಟಲಿ ಮತ್ತು ಇತರ ಕಸದ ತುಂಡುಗಳನ್ನು ಎತ್ತಿಕೊಂಡು ಹೋಗುತ್ತಿರುವುದು ಕಂಡುಬಂದಿತು. ಪ್ರಧಾನಮಂತ್ರಿಯವರು ಇಂದು ನವದೆಹಲಿಯಲ್ಲಿ ಪ್ರಗತಿ ಮೈದಾನ ಇಂಟಿಗ್ರೇಟೆಡ್ ಟ್ರಾನ್ಸಿಟ್ ಕಾರಿಡಾರ್ ಯೋಜನೆಯ ಮುಖ್ಯ ಸುರಂಗ ಮತ್ತು ಐದು ಅಂಡರ್‌ಪಾಸ್‌ಗಳನ್ನು ಉದ್ಘಾಟಿಸಿದರು.

ನಾಳೆ ಮೋದಿ ಭೇಟಿ ಹಿನ್ನೆಲೆ ಈ ನಿಯಮಗಳನ್ನು ಪಾಲಿಸಬೇಕು

ಸಾಂಸ್ಕೃತಿಕ ನಗರಿಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ವಿಶ್ವ ಯೋಗದಿನದಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಮೈಸೂರಿಗೆ ಮೋದಿ ಅಗಮನ ಹಿನ್ನೆಲೆ ಮೈಸೂರಿನಲ್ಲಿ ಭಾರೀ ಬಿಗಿ ಭದ್ರತೆ ಮಾಡಲಾಗಿದೆ. ಮಹಾರಾಜ ಕಾಲೇಜು ಮೈದಾನದಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾರ್ವಜನಿಕರಿಗೆ ಮೈಸೂರು ನಗರ ಪೊಲೀಸರು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Mysuru: ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿದ್ದೀರಾ? ವಾಟರ್‌ ಬಾಟಲ್‌, ವ್ಯಾನಿಟಿ ಬ್ಯಾಗ್ ತರಬೇಡಿ; ಬರೋ ಮುನ್ನ ಮೊಬೈಲ್ ಸ್ವಿಚ್ಛ್​ ಆಫ್ ಮಾಡಿ!

ಮೋದಿ ಬಂದಾಗ ಜನ ಸೇರಿದ್ರೆ ಕೋವಿಡ್ ಹೆಚ್ಚಾಗಲ್ವಾ?

ಧಾನಿ ನರೇಂದ್ರ ಮೋದಿ (PM Modi) ಬಂದಾಗ ಜನ ಸೇರಿಸಿದ್ರೆ ಕೋವಿಡ್ (Covid) ಹೆಚ್ಚಾಗಲ್ವಾ ಅನ್ನೋ ಪತ್ರಕರ್ತರ ಪ್ರಶ್ನೆಗೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಸಿಡಿಮಿಡಿಗೊಂಡರು. ಉತ್ತರಿಸದೇ ಹೊರಟು ಹೋದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಪ್ರತಿಭಟನೆ ಮಾಡಿದ್ರೆ ಕೋವಿಡ್ ಹೆಚ್ಚಾಗುತ್ತೆ. ಪ್ರಧಾನಿ ಮೋದಿ ಬಂದಾಗ ಜನ ಸೇರಿದರೆ ಕೋವಿಡ್ ಹೆಚ್ಚಾಗಲ್ವಾ ಎಂದು ಕೇಳಿದ ಪ್ರಶ್ನೆಗೆ ಅಸಮಾಧಾನಗೊಂಡ ಸಿಎಂ ಉತ್ತರಿಸದೇ ಹೊರಟು ಹೋದರು.

ಕಿಚ್ಚನ ಹಾಡಿಗೆ ರಾಯನ್ ಹೆಜ್ಜೆ

ರಾಯನ್ ರಾಜ್ ಸರ್ಜಾ ಕಿಚ್ಚ ಸುದೀಪ್ (Sudeep) ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ (Vikrant Rona) ಚಿತ್ರದ ರಕ್ಕಮ್ಮಾ ಹಾಡಿಗೆ ಹೆಜ್ಜೆ ಹಾಕಿದ್ದಾನೆ. ಈ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕನ್ನಡ ಗಾಯಕಿ ಗೌರಿ ಶ್ರುತಿ ಅವರು ತಮ್ಮ ಗಾಯನದ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯರಾಗಿರುತ್ತಾರೆ. ಅದರಂತೆ ಅವರು ಪಾರ್ಟಿಯೊಂದರಲ್ಲಿ ಮೇಘನಾ ರಾಜ್ ಅವರ ಪುತ್ರ ರಾಯನ್ ರಾಜ್ ಸರ್ಜಾ ಅವರೊಂದಿಗೆ ಸಖತ್ ಎಂಜಾಯ್ ಮಾಡಿದ್ದಾರೆ. ಅಲ್ಲದೇ ರಾಯನ್ ರಾಜ್ ಸರ್ಜಾ ಜೊತೆ ರೀಲ್ಸ್ ಮಾಡಿದ್ದು ಸಖತ್ ವೈರಲ್ ಆಗುತ್ತಿದೆ. ಹೌದು, ರಾಯನ್ ಜೊತೆ ಗೌರಿ ಅವರು ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರದ ರಾ.. ರಾ.. ರಕ್ಕಮ್ಮಾ ಹಾಡಿಗೆ ರೀಲ್ಸ್ ಮಾಡಿದ್ದಾರೆ.
Published by:Kavya V
First published: