Evening Digest: ಸಿಎಂ ಆಗುವ ಬಗ್ಗೆ ಡಿಕೆಶಿ ಖಡಕ್ ಮಾತು: ಹೆಂಡತಿಗೆ ಅಶ್ಲೀಲ ಚಿತ್ರ ತೋರಿಸಿ ಟಾರ್ಚರ್: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಸಿಎಂ ಆಗುವ ಬಗ್ಗೆ ಡಿಕೆಶಿ ಖಡಕ್​ ಮಾತು : ಚುನಾವಣೆಗೆ (Election) ಹಲವು ತಿಂಗಳಿದ್ರೂ ಕಾಂಗ್ರೆಸ್​ನಲ್ಲಿ ಸಿಎಂ ಖುರ್ಚಿಗಾಗಿ ಈಗಾಗಲೇ ಪೈಪೋಟಿ ಶುರುವಾಗಿದೆ. ಸಿದ್ದರಾಮಯ್ಯ (Siddaramaiah), ಡಿ.ಕೆ ಶಿವಕುಮಾರ್ (D K Shivakumar)​ ನಡುವಿನ ಮುಸುಕಿನ ಗುದ್ದಾಟ ತೆರೆಮರೆಯಲ್ಲಿ ನಡೆಯುತ್ತಲೇ ಇದೆ.  ಈ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಡೆದಿರಲು ನಾನು ಸನ್ಯಾಸಿಯಲ್ಲ, ಕಾವಿ ಬಟ್ಟೆ ತೊಟ್ಟಿಲ್ಲ ಎಂದು ಮುಖ್ಯಮಂತ್ರಿ (Chief Minister) ಆಗುವ ಅಭಿಲಾಷೆಯನ್ನು ಡಿ.ಕೆ ಶಿವಕುಮಾರ್ ಬಹಿರಂಗವಾಗಿಯೇ ಹೇಳಿದ್ದಾರೆ. ಈ ಮೂಲಕ ಮತ್ತೊಮ್ಮ ನಾನೇ ಸಿಎಂ ಆಗುತ್ತೇನೆ ಎಂದು ಹೇಳಿಕೊಳ್ತಿರೋ ಸಿದ್ದರಾಮಯ್ಯಗೆ ಡಿಕೆಶಿ ಡಿಚ್ಚಿ ಹೊಡೆದಿದ್ದಾರೆ. ಸಿದ್ದರಾಮೋತ್ಸವದ ಮೂಲಕ ಹೈಲೈಟ್ ಆಗಲು ರಾಜಕೀಯ ತಂತ್ರಗಾರಿಕೆ (Political Strategy) ರೂಪಿಸಿರುವ ಸಿದ್ದರಾಮಯ್ಯಗೆ ಡಿಕೆ ಶಿವಕುಮಾರ್​ ಶಾಕ್​ ಕೊಟ್ಟಿದ್ದಾರೆ.

‘ರಾಜಕುಮಾರ ಟಾಕಳೆ ನನ್ನ ಗಂಡ’

ಕಳೆದ ಒಂದು ವಾರದಿಂದ ರಾಮನಗರ ಜಿಲ್ಲೆಯ ಚನ್ನಪಟ್ಟಣ ಮೂಲದ ಸಾಮಾಜಿಕ ಕಾರ್ಯಕರ್ತೆ ನವ್ಯ ಶ್ರೀ ಆರ್ (Social activist Navya Shri R) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗ್ತಿವೆ. ಈ ವಿಡಿಯೋಗೂ ಬೆಳಗಾವಿಗೂ ಲಿಂಕ್ ಇದೆ ಎಂಬ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆದಿತ್ತು. ಇದೆಲ್ಲದರ ಮಧ್ಯೆ ವಿಡಿಯೋದಲ್ಲಿ ಇದ್ದ ನವ್ಯಾ ಶ್ರೀ ವಿರುದ್ಧ ಪ್ರಕರಣ ದಾಖಲಾಗಿದೆ. ದೂರು (Complaint) ಕೊಟ್ಟವರು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ (Rajkumar Takale). ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ (APMC Station) ಪ್ರಕರಣ ದಾಖಲಾಗಿದ್ದು ಹಲವು ಸಂಗತಿಗಳನ್ನು ಟಾಕಳೆ ಉಲ್ಲೇಖಿಸಿದ್ದಾರೆ.

ಪ್ರೀತಿಸಿ ಮದುವೆಯಾಗಿ ಅಶ್ಲೀಲ ಚಿತ್ರ ತೋರಿಸಿ ಟಾರ್ಚರ್

ಪ್ರೀತಿಸಿ ಮದುವೆಯಾಗಿ ಪತ್ನಿಗೆ ಕೊಡಬಾರದ ಹಿಂಸೆ (Torture) ಕೊಟ್ಟು ಇದೀಗ ಜೈಲು ಪಾಲಾಗಿದ್ದಾನೆ. ಮದುವೆಯಾದ (Marriage) 5 ತಿಂಗಳಿಗೆ ಈತನ ಬಣ್ಣ ಬಯಲಾಗಿದೆ. ಪತ್ನಿಗೆ ಅಶ್ಲೀಲ ವಿಡಿಯೋ ತೋರಿಸಿ ಹಿಂಸೆ ನೀಡುತ್ತಿದ್ದ. ಅಷ್ಟೆ ಅಲ್ಲದೇ ಮದ್ಯ ಕುಡಿಸಿ (Drink Alcohol) ದೈಹಿಕವಾಗಿ ಹಿಂಸೆ ಕೊಟ್ಟು ಸಿಗರೇಟ್ (Cigarette)​ನಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದಾನೆ. ಗಂಡನ ಕಿರುಕುಳ ತಾಳಲಾರದೇ ಪತ್ನಿ ಬೆಂಗಳೂರಿನ ಬಾಣಸವಾಡಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಪತ್ನಿ ದೂರಿನ ಮೇರೆಗೆ ಪ್ರದೀಪ್​ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ನೂಪುರ್ ಶರ್ಮಾ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು

ತಮ್ಮ ವಿರುದ್ಧದ ಎಲ್ಲಾ9 ಎಫ್‌ಐಆರ್‌ಗಳನ್ನು ಒಟ್ಟುಗೂಡಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಭಾರತೀಯ ಜನತಾ ಪಕ್ಷದ ಮಾಜಿ ವಕ್ತಾರ ನೂಪುರ್ ಶರ್ಮಾ (Nupur Sharma) ಅವರ ಅರ್ಜಿಗೆ ಸುಪ್ರೀಂ ಕೋರ್ಟ್ (Supreme Court) ಮಂಗಳವಾರ, ಜುಲೈ 19 ರಂದು ಮಧ್ಯಂತರ ಆದೇಶವನ್ನು ನೀಡಿದೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರ ಪೀಠವು ನೂಪುರ್ ಶರ್ಮಾ ವಿರುದ್ಧ ಸದ್ಯ ದಾಖಲಾಗಿರುವ ಎಫ್‌ಐಆರ್​ಗಳಿಗೆ (FIR On Nupur Sharma) ಸಂಬಂಧಿಸಿ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಆದೇಶಿಸಿದೆ. ಈ ಮೂಲಕ ಮಧ್ಯಂತರ ಆದೇಶವನ್ನು ಸುಪ್ರೀಂಕೋರ್ಟ್ ಸೂಚಿಸಿದೆ.

ಕಾಫಿ ಆ್ಯಂಡ್​​ ಬನ್ಸ್ ಉದ್ಯಮಕ್ಕೆ ಮುಂದಾದ ಕಿಚ್ಚ

ಕಿಚ್ಚ ಸುದೀಪ್​ ಹೋಟೆಲ್​ ಉದ್ಯಮದತ್ತ ಮುಖ ಮಾಡಿದ್ದಾರೆ. ಈ ಬಗ್ಗೆ ಇತ್ತೀಚೆಗೆ ವಿಕ್ರಾಂತ್ ರೋಣ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಇರುವ ನಟ ಈ ಉದ್ಯಮಗಳ ಬಗ್ಗೆ ಮಾತನಾಡಿದ್ದಾರೆ. ಹೌದು, ಕಾಫಿ ಆ್ಯಂಡ್ ಬನ್ಸ್​ ಇನೋವೇಷನ್​ ಎನ್ನುವ ಉದ್ಯಮವನ್ನು ಪತ್ನಿ ಪ್ರಿಯ ಜೊತೆ ಸೇರಿ ಆರಂಭಿಸಿದ್ದು, ಈ ಉದ್ಯಮದ ಜೊತೆ ರೆಸ್ಟೋರೆಂಟ್​, ಕೆಫೆ, ಎನ್​ಎಫ್​ಟಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಉದ್ಯಮಗಳನ್ನು ಆರಂಭಿಸಲು ನಿರ್ಧರಿಸಿದ್ದಾರೆ.
Published by:Kavya V
First published: