Evening Digest: ಮೋದಿ ಬಗ್ಗೆ ಮಕ್ಕಳು ತಮಾಷೆ ಮಾಡಿದ್ದಕ್ಕೆ ನೋಟಿಸ್: ಧನುಷ್ ಡಿವೋರ್ಸ್ ಬಗ್ಗೆ ಶಾಕಿಂಗ್ ಸುದ್ದಿ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಮೋದಿ ಬಗ್ಗೆ ಮಕ್ಕಳು ತಮಾಷೆ ಮಾಡಿದ್ದಕ್ಕೆ ನೋಟಿಸ್ : ಜನವರಿ 15ರಂದು ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ನಲ್ಲಿ ಪ್ರಸಾರಗೊಂಡ ರಿಯಾಲಿಟಿ ಶೋ(Reality Show)ದಲ್ಲಿ 2 ಮಕ್ಕಳು ನೋಟು ಅಮಾನ್ಯೀಕರಣದ ಮೇಲೆ ವಿಡಂಬನೆ ನಡೆಸುವ ಪ್ರದರ್ಶನವನ್ನು ಪ್ರಸಾರ ಮಾಡಿದ್ದು ಪ್ರಧಾನಿ ಮೋದಿ(PM Modi) ಮತ್ತು ಅವರ ಉಡುಪನ್ನು ಅಪಹಾಸ್ಯ ಮಾಡಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ. ಈ ಸಂಬಂಧಿತವಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ವಿವರಣೆ ನೀಡುವಂತೆ ಸಂಸ್ಥೆಯನ್ನು ಕೋರಿದೆ ಎನ್ನಲಾಗಿದೆ. ಜೀ ತಮಿಳಿನಲ್ಲಿ ಪ್ರಸಾರವಾದ ‘ಜೂನಿಯರ್ ಸೂಪರ್ಸ್ಟಾರ್ಸ್ ಸೀಸನ್ 4’ ರಿಯಾಲಿಟಿ ಶೋನ ಇತ್ತೀಚೆಗೆ ಪ್ರಸಾರವಾದ ಸಂಚಿಕೆಯಲ್ಲಿ ಪ್ರಧಾನಿ ಮೋದಿಯವರನ್ನು ಅಣಕಿಸುವ ನಾಟಕವನ್ನು ಮಕ್ಕಳು ಪ್ರದರ್ಶಿಸಿದ್ದು, ಸಂಸ್ಥೆಯು ಈ ಸಂಬಂಧಿತವಾಗಿ ಹೆಚ್ಚಿನ ವಿವರಣೆ ನೀಡಬೇಕು ಎಂದು ತಮಿಳುನಾಡಿನ ಬಿಜೆಪಿ ಪಕ್ಷ ಸಹ ಒತ್ತಾಯಪಡಿಸಿದೆ.

ಪೂರ್ತಿ ಓದಿಗಾಗಿ:Modi: ಮಕ್ಕಳ ರಿಯಾಲಿಟಿ ಶೋನಲ್ಲಿ ನೋಟ್​ ಬ್ಯಾನ್​ ಮತ್ತು ಮೋದಿ ಬಗ್ಗೆ ತಮಾಷೆ; ಖಾಸಗಿ ವಾಹಿನಿಗೆ ಕೇಂದ್ರದಿಂದ ನೋಟಿಸ್​

ಮದುವೆಯ ಬಳಿಕವೂ ಸಂಬಂಧಿ ಜೊತೆಗೆ ಲವ್ವಿಡವ್ವಿ
ರಾಯಚೂರು ಮೂಲದ ಬಸವರಾಜ್ ( 28 ) ಜ್ಯೋತಿ (26). ಇಬ್ಬರೂ ಸಂಬಂಧಿಕರೇ. ಮೊದಲಿಂದಲೇ ಪ್ರೇಮವಿತ್ತೋ, ಮದುವೆಯ ಬಳಿಕ ಮೋಹಕ್ಕೆ ಬಿದ್ದರೋ ಗೊತ್ತಿಲ್ಲ. ವಿವಾಹಿತೆ ಜ್ಯೋತಿ ಗಂಡನನ್ನು ಬಿಟ್ಟು, ಪ್ರೇಮಿ ಬಸವರಾಜನೊಂದಿಗೆ ಬೆಂಗಳೂರಿಗೆ ಬಂದು ಬಿಟ್ಟಿದ್ದಳು. ಹೊಸದಾಗಿ ಇಬ್ಬರು ಜೀವನ ಕಟ್ಟಿಕೊಳ್ಳುವ ಆಸೆಯಲ್ಲಿದ್ದರು ಅನಿಸುತ್ತೆ. ಅದಕ್ಕಾಗಿಯೇ 20 ದಿನಗಳಿಂದಷ್ಟೆ ತಾವು ಗಂಡ, ಹೆಂಡತಿ ಅಂತ ಹೇಳಿಕೊಂಡು ದೇವನಹಳ್ಳಿ ಪಟ್ಟಣದ ಶಾಂತಿನಗರದಲ್ಲಿ ಮನೆ ಬಾಡಿಗೆಗೆ ಪಡೆದುಕೊಂಡಿದ್ದರು. ಹೊಸದಾಗಿ ಬದುಕುವ ಕನಸ್ಸು ಕೇವಲ 20 ದಿನಗಳನ್ನೂ ಪೂರೈಸಲಿಲ್ಲ. ಅದೇನಾಯಿತೋ ಏನೋ ಇಬ್ಬರು ಮನೆಯಲ್ಲಿ ಭಾನುವಾರವೇ ನೇಣಿಗೆ ಶರಣಾಗಿ ಬಿಟ್ಟಿದ್ದಾರೆ.

ತಂದೆ-ಮಗನ ದಾರುಣ ಸಾವು
ಬೆಂಗಳೂರಿನಲ್ಲಿ ಸಂಪ್ ಗೆ ಬಿದ್ದು ತಂದೆ, ಮಗ ಮೃತಪಟ್ಟಿರುವ ದಾರುಣ ಘಟನೆ ಆರ್ ಟಿನಗರದ ಸುಲ್ತಾನ್ ಪಾಳ್ಯದಲ್ಲಿ ನಡೆದಿದೆ. ತಂದೆ ರಾಜು (36), ಮಗ ಸೈನತ್ (10) ಮೃತ ದುರ್ದೈವಿಗಳು. ಆರ್ ಟಿ ನಗರದ ರಾಮಕೃಷ್ಣ ಅಪಾರ್ಟ್ ಮೆಂಟ್ ನಲ್ಲಿ ಬೆಳಗ್ಗೆ ನಡೆದಿರೋ ಘಟನೆಯಲ್ಲಿ ಇಬ್ಬರೂ ಪ್ರಾಣ ಬಿಟ್ಟಿದ್ದಾರೆ. ಸಂಪ್ ಕ್ಲೀನ್ ಮಾಡೋಕೆ ಹೋಗಿದ್ದಾಗ ಕರೆಂಟ್ ಶಾಕ್ ಹೊಡೆದಿದ್ದು, ರಾಜು ಚೀರಾಡಿದ್ದಾರೆ. ಅಪ್ಪನ ಚೀರಾಟ ಕಂಡು ಸಂಪ್ ಬಳಿ 11 ವರ್ಷದ ಬಾಲಕ ಸಾಯಿ ಕೂಡ ಹೋಗಿದ್ದಾನೆ. ಈ ವೇಳೆ ಆತನಿಗೂ ಕರೆಂಟ್ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ. ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ದಾಖಲಾಗಿದೆ.

ಧನುಷ್ ಡಿವೋರ್ಸ್ ಬಗ್ಗೆ ಶಾಕಿಂಗ್ ಸುದ್ದಿ
ಸೂಪರ್ ಸ್ಟಾರ್ ರಜನಿಕಾಂತ್(Super Star Rajinikanth) ಅವರ ಪುತ್ರಿ ಐಶ್ವರ್ಯ(Aishwarya) ಅವರನ್ನು ವಿವಾಹವಾಗಿದ್ದ(Marriage) ತಮಿಳು ನಟ ಧನುಷ್(Actor Dhanush) ವಿವಾಹ ವೀಚ್ಚೆಧನ(Divorce) ನೀಡಿದ್ದಾರೆ.. ಈ ಜೋಡಿಯ ವೀಚ್ಚೆಧನದ ಸುದ್ದಿ ಈಗ ಎಲ್ಲಾ ಕಡೆ ಸಾಕಷ್ಟು ಸದ್ದು ಮಾಡುತ್ತಿದೆ.. ಅಲ್ಲದೆ 18 ವರ್ಷ ಸಂಸಾರ ಮಾಡಿದ ಬಳಿಕ ಈ ಜೋಡಿ ವೀಚ್ಚೆಧನ ಪಡೆದುಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಒಂದು ಕಡೆ ಧನುಷ್ ಗೆ ಕೆಲವು ನಟಿ ಮಣಿಯರ(Actress) ಜೊತೆ ಡೇಟಿಂಗ್ ನಲ್ಲಿ(Dating) ಇದ್ದರು ಎನ್ನುವುದೇ ಕಾರಣ ಎನ್ನುವ ಸುದ್ದಿ ಕೇಳಿಬರುತ್ತಿದೆ. ಇದರ ನಡುವೆ ಧನುಷ್ ಆಪ್ತ ಸ್ನೇಹಿತರೊಬ್ಬರು(Friend) ಐಶ್ವರ್ಯ ಹಾಗೂ ಧನುಷ್ ದಂಪತಿ ವೀಚ್ಚೆಧನ ಇದಕ್ಕೆ ಕಾರಣ ಏನು ಎನ್ನುವ ಮಾಹಿತಿ ಬಹಿರಂಗಪಡಿಸಿದ್ದಾರೆ.

ಪೂರ್ತಿ ಓದಿಗಾಗಿ:Dhanush ಮತ್ತು ಐಶ್ವರ್ಯಾ ವಿಚ್ಛೇದನದ ಬಗ್ಗೆ ಆಪ್ತ ಗೆಳೆಯ ಹೇಳಿದ ಶಾಕಿಂಗ್ ಸುದ್ದಿ!

ನಿವೃತ್ತಿ ಘೋಷಿಸಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ
ಮುಗೂತಿ ಸುಂದರಿ ಸಾನಿಯಾ ಮಿರ್ಜಾ (Sania Mirza) ತಮ್ಮ ಟೆನಿಸ್ (Tennis) ವೃತ್ತಿ ಜೀವನದ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ಆಸ್ಟ್ರೇಲಿಯನ್ ಓಪನ್ ಟೆನಿಸ್ ಆಡುತ್ತಿರುವ ಅವರು ಇದೇ ತಮ್ಮ ವೃತ್ತಿ ಜೀವನದ ಕಡೆಯ ಸೀಸನ್ ಎಂದಿದ್ದಾರೆ. ಆಸ್ಟ್ರೇಲಿಯನ್ ಓಪನ್ನಲ್ಲಿ ಮಹಿಳೆಯರ ಡಬಲ್ಸ್ನಲ್ಲಿ ಮೊದಲ ಸುತ್ತಿನಲ್ಲೇ ಸೋಲು ಕಂಡ ಸಾನಿಯಾ ತಮ್ಮ ನಿವೃತ್ತಿ ಕುರಿತು ತಿಳಿಸಿದ್ದಾರೆ. ಇದು ನನ್ನ ಕೊನೆಯ ಸೀಸನ್ ಆಗಲಿದೆ. ನನಗೆ ಇನ್ಮುಂದೆ ಆಡುವುದು ಸರಳವಾಗಿಲ್ಲ. ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
Published by:Kavya V
First published: