Evening Digest: ಕುಬೇರ ಮೂಲೆಯಲ್ಲಿರೋ 'ಆ' ವ್ಯಕ್ತಿ ಮುಂದಿನ CM ಅಂತೆ: ಹಿಜಾಬ್ ನಿಷೇಧಿಸಿ ಸುತ್ತೋಲೆ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಕುಬೇರ ಮೂಲೆಯಲ್ಲಿರೋ 'ಆ' ವ್ಯಕ್ತಿ ಮುಂದಿನ CM ಅಂತೆ: ವಿಶೇಷವಾಗಿ ರೈತರು ಮೈಲಾರಲಿಂಗೇಶ್ವರ ಕಾರ್ಣಿಕವನ್ನ ಆಲಿಸಿ ಮಳೆ ಬೆಳೆ ನಿರ್ಧರಿಸ್ತಾರೆ. ಪ್ರಸಕ್ತ ವರ್ಷದ ಕಾರ್ಣಿಕವಾಣಿ ಆಲಿಸಿದ ಭಕ್ತರು ರೈತರ ಬದುಕು ಸಮೃದ್ಧವಾಗುತ್ತದೆ ಅಂತಾ ಸಂತಸದಿಂದ ಮನೆಯತ್ತ ಹೆಜ್ಜೆ ಹಾಕಿದ್ರು. ಮಳೆ ಬೆಳೆ ನಿರ್ಧಿಸೋ ಈ ಕಾರ್ಣಿಕವಾಣಿಯನ್ನ ರಾಜಕೀಯವಾಗಿಯೂ ವಿಶ್ಲೇಷಣೆ ಮಾಡಿಕೊಂಡು ಬರಲಾಗ್ತಿದೆ. ಗೊರವಯ್ಯ ನುಡಿದ ಕಾರ್ಣಿಕವನ್ನ ದೇವಸ್ಥಾನದ ಧರ್ಮದರ್ಶಿ ರಾಜಕೀಯವಾಗಿ ವಿಶ್ಲೇಷಣೆ ಮಾಡಿ ಈ ಬಾರಿ ನೈಋತ್ಯ ಭಾಗದ ಕುಬೇರ ಮೂಲೆಯಲ್ಲಿರೋ ಪ್ರಭಾವಿ ವ್ಯಕ್ತಿ ರಾಜ್ಯಭಾರ ಮಾಡಲಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಸುಮಾರು ವರ್ಷಗಳಿಂದ ಮೈಲಾರದಲ್ಲಿ ನಡೆದ ಕಾರ್ಣಿಕೋತ್ಸವದ ವಾಣಿ ಸತ್ಯವಾಗಿವೆ ಅಂತಾ ಭಕ್ತರು ಕಾರ್ಣಿಕವಾಣಿ ಆಲಿಸಿ ಖುಷಿಪಟ್ಟರು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ: Karnikavani: ಮಳೆಬೆಳೆ ಸಂಪಾತಲೆ ಪರಾಕ್: ಕುಬೇರ ಮೂಲೆಯಲ್ಲಿರೋ 'ಆ' ವ್ಯಕ್ತಿ ಮುಂದಿನ CM ಅಂತೆ

ಹಿಜಾಬ್ ನಿಷೇಧಿಸಿ ಅಲ್ಪಸಂಖ್ಯಾತರ ಇಲಾಖೆಯಿಂದ ಸುತ್ತೋಲೆ

ರಾಜ್ಯ ಹಾಗೂ ದೇಶದಲ್ಲಿ ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿರುವ ಹಿಜಾಬ್ ವಿವಾದ (Hijab Controversy) ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಸದ್ಯ ಬೂದಿ ಮುಚ್ಚಿದ ಕೆಂಡದಂತಿರುವ ಈ ವಿವಾದ ನ್ಯಾಯಾಲಯದ (Court) ಮೆಟ್ಟಿಲೇರಿರುವ ನಡುವೆಯೂ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ಈ ನಡುವೆ ರಾಜ್ಯ ಅಲ್ಪಸಂಖ್ಯಾತರ ಇಲಾಖೆಯು ( State Minority Department) ಶಾಲಾ-ಕಾಲೇಜುಗಳಲ್ಲಿ (Schools and Colleges) ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಮತ್ತು ಸ್ಕಾರ್ಫ್ ಧರಿಸುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿದೆ. ರಾಜ್ಯ ಅಲ್ಪಸಂಖ್ಯಾತ ಇಲಾಖೆಯಿಂದ ನಡೆಸಲಾಗುತ್ತಿರುವ ವಸತಿ ಶಾಲೆಗಳು ಮತ್ತು ಆಂಗ್ಲ ಮಾಧ್ಯಮದ ಮೌಲಾನಾ ಆಜಾ಼ದ್ ಶಾಲೆಗಳಲ್ಲಿ ಧಾರ್ಮಿಕ ಉಡುಪುಗಳನ್ನು ಧರಿಸುವುದನ್ನು ನಿಷೇಧಿಸಿ ರಾಜ್ಯ ಅಲ್ಪಸಂಖ್ಯಾತ ಇಲಾಖೆ ಕಾರ್ಯದರ್ಶಿ ಪಿ. ಮಣಿವಣ್ಣನ್ ಅವರು ಫೆ.16ರಂದು ಆದೇಶ ಹೊರಡಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮತ್ತು ಇತರ ಧಾರ್ಮಿಕ ಉಡುಪುಗಳನ್ನ ನಿಷೇಧಿಸುವ ಕರ್ನಾಟಕ ಹೈಕೋರ್ಟ್ನ ಮಧ್ಯಂತರ ಆದೇಶದ ಕಾರ್ಯಕಾರಿ ಭಾಗವನ್ನು ಅಲ್ಪಸಂಖ್ಯಾತ ಇಲಾಖೆಯ ಸುತ್ತೋಲೆ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ ಎಂದು ವರದಿಯೊಂದು ತಿಳಿಸಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:Hijab Row: ಹಿಜಾಬ್ ನಿಷೇಧಿಸಿ ಅಲ್ಪಸಂಖ್ಯಾತರ ಇಲಾಖೆಯಿಂದ ಸುತ್ತೋಲೆ.. ಯಾರಿಗೆಲ್ಲಾ ಇದು ಅನ್ವಯ?

ಕುಂಕುಮ, ಬಳೆ ಮಾತನಾಡಿದರೆ ನಾಲಿಗೆ ಸೀಳುತ್ತೇವೆ ಹುಷಾರ್: Muthalik

ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ವರ್ಸಸ್ ಕೇಸರಿ ಶಾಲು (Hijab vs Saffron Shawl ) ಸಂಘರ್ಷ ಸಂಬಂಧ ಶ್ರೀರಾಮ ಸೇನೆ (Sri Ram Sene) ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಅಬ್ಬರಿಸಿದ್ದಾರೆ. ಕುಂಕುಮ, ಬಳೆ, ಗಣಪತಿ ಪೂಜೆ, ಸರಸ್ವತಿ ಪೂಜೆ ಬಗ್ಗೆ ಮಾತನಾಡಿದರೆ ನಾಲಿಗೆ ಸೀಳಿ ಹಾಕ್ತಿವಿ ಹುಷಾರ್ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಸದ್ಯ ಆಗುತ್ತಿರುವುದು ಹಿಜಾಬ್ ಪ್ರಶ್ನೆಯಲ್ಲ, ಇದರ ಹಿಂದೆ ಇಸ್ಲಾಮಿಕರಣ ಇದೆ. ಈಗ ಒಂದೊಂದೇ ಹೊರಗೆ ಬರ್ತಿದೆ, ಬರಿ ಹಿಜಾಬ್ ಅಷ್ಟೇ ಅಲ್ಲ. ಇಡೀ ಮೈ ಮುಚ್ಚೋ ಬುರ್ಕಾ ಹಾಕಿಕೊಂಡು ಬರ್ತಿದ್ದಾರೆ. ಮುಂದಿನ ದಿನಗಳಲ್ಲಿ ನಮಗೆ ನಮಾಜ್ ಮಾಡೋಕೆ ಅವಕಾಶ ಕೊಡಿ ಅಂತಾರೆ. ಹೀಗೆ ಒಂದೊಂದೇ ಮುನ್ನುಗ್ಗುವ ಪ್ರವೃತ್ತಿ ಇಡೀ ಇಸ್ಲಾಮಿಕ್ ಇತಿಹಾಸ ಹೇಳುತ್ತೆ. ನಮ್ಮ ದೇಶವನ್ನು ನುಂಗಿ ನೀರು ಕುಡಿಯಲು ಈ ಪ್ರವೃತ್ತಿ ಮಾಡ್ತಿದ್ದಾರೆ ಎಂದು ಅಪಾದಿಸಿದರು.

ಈ ಬಾರಿ ಫ್ರೀ ಆಗಿ ನೋಡಿ ತಾಜ್ ಮಹಲ್!

ತಾಜ್ ಮಹಲ್ ನೋಡ್ಬೇಕು ಅಲ್ಲೇ ತಮ್ಮ ಪ್ರೇಮಿಗೆ ಪ್ರಪೋಸ್ (Propose) ಮಾಡ್ಬೇಕು ಅನ್ನೋದು ಹಲವು ಪ್ರೇಮಿಗಳ (Lovers) ಬಯಕೆಯಾಗಿರುತ್ತೆ. ಪ್ರತಿಯೊಬ್ಬ ಪತಿಯು ತನ್ನ ಹೆಂಡತಿಯೊಂದಿಗೆ ಒಮ್ಮೆಯಾದರೂ ತಾಜ್ ಮಹಲ್ ಗೆ ಹೋಗಬೇಕು ಎಂದು ಬಯಸುತ್ತಾನೆ. ಇನ್ನು ವಿಶ್ವದ ಏಳು ಅದ್ಭುತಗಳಲ್ಲಿ (7 wonders of the world) ಒಂದಾಗಿರುವ ತಾಜ್ ಮಹಲ್ ಮುಂದೆ ನಿಂತು ಫ್ಯಾಮಿಲಿ ಫೋಟೋ ತೆಗೆದುಕೊಳ್ಳೋ ಆಸೆ ಕೂಡ ಅಧಿಕ ಮಂದಿಗಿದೆ. ಪ್ರೀತಿಯ ಸಂಕೇತವಾಗಿರುವ ಈ ತಾಜ್ ಮಹಲ್ ವೀಕ್ಷಣೆಗೆ ಪ್ರತಿನಿತ್ಯ ಪ್ರಪಂಚದ ಮೂಲೆ ಮೂಲೆಯಿಂದ ಜನರು ಬರುತ್ತಾರೆ. ಪ್ರವಾಸಿಗರಿಗೆ ಭಾರತೀಯ ಪುರಾತತ್ವ ಇಲಾಖೆ (ISI) ಒಂದು ಗುಡ್ ನ್ಯೂಸ್ (Good news) ನೀಡಿದೆ. ಫೆಬ್ರವರಿ 27, 28 ಹಾಗೂ ಮಾರ್ಚ್ 1ರಂದು ಪ್ರವಾಸಿಗರಿಗೆ ಉಚಿತ ಪ್ರವೇಶ ನೀಡುವುದಾಗಿ ತಿಳಿಸಿದೆ.

ಮಣ್ಣಲ್ಲಿ ಮಣ್ಣಾದ ರಾಜೇಶ್.. `ಕಲಾ ತಪಸ್ವಿ’ಗೆ ಭಾವಪೂರ್ಣ ವಿದಾಯ!

ಕನ್ನಡದ ಖ್ಯಾತ ಹಿರಿಯ ನಟ 'ಕಲಾ ತಪಸ್ವಿ' ರಾಜೇಶ್ಅವರು ಇನ್ನು ನೆನಪು ಮಾತ್ರ. ಕನ್ನಡ ಚಿತ್ರರಂಗ(Sandalwood) ಕಂಡ ಶ್ರೇಷ್ಠ ನಟ.. ತಪ್ಪಸ್ಸು ಮಾಡಿದಂತೆ, ಕಲೆಯನ್ನ ಆರಾಧಿಸಿ, ಕಲಾ ಸರಸ್ವತಿಯನ್ನ ಒಲಿಸಿಕೊಂಡ ಕಲಾತಪಸ್ವಿ. ರವಿವರ್ಮನ ಕುಂಚದಿಂದ ಬಣ್ಣಗಳ ಚಿತ್ತಾರ ಮೂಡಿದಂತೆ, ರಾಜೇಶ್(Rajesh) ತಮ್ಮ ನಟನೆಯಲ್ಲಿ ಭಾವನೆಗಳನ್ನ ಬಂಧಿಸಿದ ಮಹಾನ್ ನಾಯಕ ಇನ್ನೂ ಬಾರದ ಲೋಕಕ್ಕೆ ತೆರಳಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ನೆಲಮಂಗಲದ ಗೋವಿಂದಪುರದಲ್ಲಿ ಅಂತ್ಯ ಸಂಸ್ಕಾರ ನೆರವೇರಿದೆ. ಸ್ನೇಹಿತ ಸಿದ್ದಲಿಂಗಯ್ಯ ತೋಟದಲ್ಲಿ ರಾಜೇಶ್ ಅಂತ್ಯಸಂಸ್ಕಾರ ನೆರವೇರಿದೆ. ಪೊಲೀಸ್ ಗೌರವಗಳೊಂದಿಗೆ ರಾಜೇಶ್ ಅವರ ಅಂತ್ಯ ಸಂಸ್ಕಾರ ಮಾಡಲಾಗಿದೆ. ಇನ್ನೂ ಇದೇ ಸ್ಥಳದಲ್ಲಿ ಸ್ಮಾರಕ ಸ್ಥಾಪಿಸುವುದಾಗಿ ಕುಟುಂಬಸ್ಥರು ಹೇಳಿದ್ದಾರೆ.
Published by:Kavya V
First published: