Evening Digest: ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್ ಔಟ್, ಅತ್ತ ಕಾಂಗ್ರೆಸ್ ಸೇರ್ತಾರಾ ಮಾಧುಸ್ವಾಮಿ? ಈಗಿನ ಟಾಪ್ ನ್ಯೂಸ್ ಇಲ್ಲಿದೆ

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್‌ಗೆ ಗೇಟ್‌ ಪಾಸ್!

ಬೆಂಗಳೂರು: ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ (Jote Joteyali) ಧಾರಾವಾಹಿಯಲ್ಲಿ (Serial) ಅಲ್ಲೋಲ ಕಲ್ಲೋಲ ಆಗುತ್ತಿದೆ. ರೀಲ್ ಕಥೆಗೂ (Reel Story) ಟ್ವಿಸ್ಟ್ (Twist) ಮೇಲೆ ಟ್ವಿಸ್ಟ್ ಸಿಗುತ್ತಿದ್ದು, ರಿಯಲ್ ಕಥೆಗೂ (Real Story) ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಧಾರಾವಾಹಿಯಲ್ಲಿ ಇಡೀ ಕಥೆ ಸುತ್ತುವುದೇ ಆರ್ಯವರ್ಧನ್ (Aryavardhan) ಎನ್ನುವ ಕ್ಯಾರೆಕ್ಟರ್ (Character) ಮೇಲೆ. ಈ ಪಾತ್ರ ನಿರ್ವಹಿಸುತ್ತಾ ಇರುವವರು ಖ್ಯಾತ ನಟ, ಸಾಹಸಸಿಂಹ ವಿಷ್ಣು ವರ್ಧನ್ (Vishnuvardhan) ಅವರ ಅಳಿಯ ಅನಿರುದ್ಧ್ ಜತ್ಕರ್ (Aniruddh Jatkar). ಆದ್ರೆ ಇದೀಗ ಅನಿರುದ್ಧ್ ಅವರಿಗೆ ಜೊತೆ ಜೊತೆಯಲಿ ಧಾರಾವಾಹಿಯಿಂದ ಗೇಟ್ ಪಾಸ್ (Gate Pass) ನೀಡಲಾಗಿದೆ. ಇದರೊಂದಿಗೆ ಕಳೆದ 2-3 ದಿನಗಳಿಂದ ಜೊತೆ ಜೊತೆಯಲಿ ಧಾರಾವಾಹಿ ಬಗ್ಗೆ, ಅನಿರುದ್ಧ್ ಬದಲಾವಣೆ ಬಗ್ಗೆ ಹುಟ್ಟಿಕೊಂಡಿದ್ದ ಊಹಾಪೋಹಗಳಿಗೆ ಅಂತಿಮ ತೆರೆ ಬಿದ್ದಂತಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಓದಿ: Actor Aniruddh: ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್‌ಗೆ ಗೇಟ್‌ ಪಾಸ್! ಇವ್ರ ಕಿರಿಕ್‌ನಿಂದ ಸುಸ್ತಾಗಿತ್ತಂತೆ ಸೀರಿಯಲ್ ಟೀಂ!

ಪ್ರಿಯಕರನೊಂದಿಗೆ ಮೂರು ಮಕ್ಕಳ ತಾಯಿ ಎಸ್ಕೇಪ್

ತುಮಕೂರು: ಈ ಜಗತ್ತಿನಲ್ಲಿ ಕೆಟ್ಟ ತಂದೆ (Bad Father) ಇರಬಹುದು, ಆದ್ರೆ ಕೆಟ್ಟ ತಾಯಿ (Bad Mother) ಇರಲಿಕ್ಕಿಲ್ಲ ಅಂತಾರೆ. ಆದ್ರೆ ಇಲ್ಲಿ ಎಲ್ಲವೂ ಉಲ್ಟಾ ಆಗಿದೆ. ಗಂಡ (Husband), ಮನೆ (Home), ಮೂವರು ಮಕ್ಕಳು (Children), ನನ್ನ ಸಂಸಾರ (Family) ಅಂತ ಇದ್ದ ಆ ಮಹಿಳೆ ಗಂಡ, ಮನೆ ಅಷ್ಟೇ ಅಲ್ಲ, ಮಕ್ಕಳನ್ನೂ ಬಿಟ್ಟು ಪ್ರಿಯಕರನೊಂದಿಗೆ (Lover) ಪರಾರಿಯಾಗಿದ್ದಾಳೆ. ಮಾನ ಹೋಯ್ತು ಅಂತ ತಲೆ ಮೇಲೆ ಕೈ ಹೊತ್ತು ಕುಳಿತ ಗಂಡ, ದುಡುಕಿ ಮಾಡಬಾರದ ಅನಾಹುತ ಮಾಡಿದ್ದಾನೆ. ಹೆಂಡತಿ ಓಡಿ ಹೋದ ಸಿಟ್ಟೋ, ಮರ್ಯಾದೆ ಹೋಯ್ತು ಎನ್ನುವ ನೋವಿಗೋ ಮಕ್ಕಳಿಗೆ ವಿಷ (Poison) ಕೊಟ್ಟು, ತಾನೂ ವಿಷ ಕುಡಿದಿದ್ದಾನೆ. ಇದೀಗ ಆತ ಪ್ರಾಣ ಬಿಟ್ಟಿದ್ದರೆ, ಮೂವರು ಮಕ್ಕಳು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಚಿರಂಜೀವಿ ಸರ್ಜಾ ಕೊನೆಯದಾಗಿ ಮೇಘನಾ ರಾಜ್​ಗೆ ಹೇಳಿದ್ದೇನು?

ನಟ ಚಿರಂಜೀವಿ ಸರ್ಜಾ (Chiranjeevi Sarja) ಸಾವನ್ನಪ್ಪಿ ವರ್ಷಗಳೇ ಕಳೆದಿದೆ. ಆದ್ರೆ ಪತ್ನಿ ಮೇಘನಾ ರಾಜ್ (Meghana Raj)​ ಅವರು ಮಾತ್ರ ಇಂದಿಗೂ ಪತಿ ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಮತ್ತೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡ ಮೇಘನಾ, ಕೆಲ ದಿನಗಳ ಹಿಂದೆ ಕಲರ್ಸ್ ಕನ್ನಡದಲ್ಲಿ (Colors Kannada) ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ರು. ಹಿಂದೆ ಪ್ರೇಮಿಗಳ ದಿನದ  ವಿಶೇಷ ಸಂಚಿಕೆಯಲ್ಲಿ, ಮೇಘನಾಗೆ ಸಪ್ರೈಸ್​ ಗಿಫ್ಟ್​ಗಳನ್ನು ನೀಡಲಾಗಿತ್ತು. ಈ ವೇಳೆ ಚಿರಂಜೀವಿ ಸರ್ಜಾ ಅವರ ಹಳೆಯ ವೀಡಿಯೋವನ್ನು (Old Video) ಪ್ಲೇ ಮಾಡಿದ್ರು. ಚಿರು ವಿಶೇಷ ಸಂದೇಶದ ವಿಡಿಯೋ ಕೇಳ್ತಿದ್ದಂತೆ ಮೇಘನಾ ಭಾವುಕರಾಗಿ ಕಣ್ಣೀರು ಹಾಕಿದ್ದರು. ಹಿಂದೆ  ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದ ವೇಳೆ ಚಿರು ಕೊನೆಯ ಮಾತುಗಳನ್ನು ಮೇಘನಾ ರಾಜ್​ ನೆನೆದಿದ್ದಾರೆ.

ಇದನ್ನೂ ಓದಿ:  Meghana Raj: ಚಿರಂಜೀವಿ ಸರ್ಜಾ ಕೊನೆಯದಾಗಿ ಮೇಘನಾ ರಾಜ್​ಗೆ ಹೇಳಿದ್ದೇನು? ಚಿರು ನೆನೆದು ನಟಿ ಕಣ್ಣೀರು!

ಕಾಂಗ್ರೆಸ್ ಸೇರ್ತಾರಾ ಸಚಿವ ಮಾಧುಸ್ವಾಮಿ? 

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಬದಲಾಗ್ತಾರೆ, 3ನೇ ಸಿಎಂ (Chief Minister) ಆಗ್ತಾರೆ ಅಂತಾ ಕಾಂಗ್ರೆಸ್ (Congress) ಕಿಚ್ಚು ಹೊತ್ತಿಸಿತ್ತು. ಇದು ಬಿಜೆಪಿಯಲ್ಲೂ (BJP) ಸಂಚಲನ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಸಚಿವ ಮಾಧುಸ್ವಾಮಿಯವರ (Madhuswamy) ಆಡಿಯೋ (Audio) ಸ್ವಪಕ್ಷದಲ್ಲೇ ಕಿಡಿ ಹೊತ್ತಿಸಿದೆ. ಈ ಆಡಿಯೋ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಈ ಆಡಿಯೋ ಲೀಕ್ ಬೆನ್ನಲ್ಲೇ ಮಾಧುಸ್ವಾಮಿ ವಿರುದ್ಧ ಕೆಲ ಸಚಿವರು ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದರು. ಇದೆಲ್ಲದರ ನಡುವೆ ಈಗ ಸಚಿವ ಮಾಧುಸ್ವಾಮಿ ಬಗ್ಗೆ ಗುಸುಗುಸು ಹಬ್ಬಿದೆ. ಮಾಧುಸ್ವಾಮಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ತಾರಾ ಅನ್ನೋ ಪ್ರಶ್ನೆ ಎದ್ದಿದೆ.

ಕೃಷ್ಣನ ನೋಡಿರೋ, ನಮ್ಮ ಮುದ್ದು ದೇವರ ನೋಡಿರೋ!

ಉಡುಪಿ: ನಾಡಿನಾದ್ಯಂತ ಕಡೆಗೋಲು ಕೃಷ್ಣನ ಜನ್ಮಾಷ್ಟಮಿಯ ಸಂಭ್ರಮ. ಪೊಡವಿಗೊಡೆಯನಿಗೆ ಸಂಭ್ರಮದ ಪೂಜೆ ಪುನಸ್ಕಾರ. ಅಲ್ಲಲ್ಲಿ ಮುದ್ದು ಕೃಷ್ಣರು, ಕಣ್ಮನ ಸೆಳೆಯೋ ರಾಧೆಯರು. ಒಟ್ಟಾರೆ ಭೂಮಂಡಲವೇ ನಂದ ಗೋಕುಲದಂತೆ ಕಂಗೊಳಿಸ್ತಾ ಇದೆ. ಶ್ರೀಕೃಷ್ಣ ಪರಮಾತ್ಮನಿಗೆ ನಾಡಿನ ಎಲ್ಲ ಕಡೆಯೂ ವಿಶೇಷ ಪೂಜೆ ಸಲ್ಲಿಸುತ್ತಿರುವ ಭಕ್ತರು ತಮ್ಮ ಇಷ್ಟಾರ್ಥಗಳ ಬೇಡಿಕೆ ಈಡೇರಿಕೆಗೆ ಪ್ರಾರ್ಥಿಸುತ್ತಿದ್ದಾರೆ. ಕೊರೊನಾ ಕಾರಣದಿಂದ ಎರಡು ವರ್ಷ ಕಳೆಗುಂದಿದ ಹಬ್ಬದ ವಾತಾವರಣ ಮತ್ತೆ ಭಕ್ತರು ಮರಳಿ ಪಡೆದಿದ್ದಾರೆ. ಕೃಷ್ಣಾಷ್ಟಮಿ ಹಿನ್ನೆಲೆ ವ್ಯಾಪಾರ, ವಹಿವಾಟುಗಳು ಜೋರಾಗಿವೆ. ಕೃಷ್ಣ ದೇವರ ಅಲಂಕಾರವಂತೂ ಭಕ್ತರಲ್ಲಿ ಧನಾತ್ಮಕ ಪ್ರಭಾವ ಬೀರ್ತಿದೆ.
Published by:Annappa Achari
First published: