ಬ್ಯಾಂಕ್ಗಳಲ್ಲಿ ಸ್ಥಳೀಯ ಭಾಷೆ ಬಲ್ಲವರನ್ನೇ ನೇಮಿಸಿ
ಮುಂಬೈ: ದೇಶದ ಎಲ್ಲ ಬ್ಯಾಂಕ್ಗಳಲ್ಲೂ ಸ್ಥಳೀಯ ಭಾಷೆಯನ್ನು (Local Language) ಬಲ್ಲ ಸಿಬ್ಬಂದಿಯನ್ನು ನೇಮಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (FM Nirmala Sitharaman) ಬ್ಯಾಂಕ್‌ಗಳಿಗೆ ಕರೆ ನೀಡಿದ್ದಾರೆ. ಮುಂಬೈನಲ್ಲಿ ನಡೆದ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್‌ನ 75 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸೀತಾರಾಮನ್ ಮಾತನಾಡಿದ ಅವರು, ನಿಮ್ಮ ಶಾಖೆಯ ಮಟ್ಟದಲ್ಲಿ ಪ್ರಾದೇಶಿಕ ಭಾಷೆಯಲ್ಲಿ (Local Language In Banks) ಮಾತನಾಡದ ಮತ್ತು ಗ್ರಾಹಕರ ಬಳಿ ಹಿಂದಿ ಮಾತನಾಡದಿದ್ದರೆ ನೀವು ಭಾರತೀಯರಲ್ಲ ಎಂದು ಹೇಳುವುದು ಯಾವುದೇ ಕಾರಣಕ್ಕೂ ಸರಿಯಲ್ಲ. ಅಲ್ಲದೇ ಬ್ಯಾಂಕ್ಗಳು ವ್ಯಾಪಾರವನ್ನು ಅಭಿವೃದ್ಧಿಗೊಳಿಸಲು ಈ ನೀತಿ ಒಳ್ಳೆಯದು ಅಲ್ಲ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಪುಟಿನ್ ಎದುರೇ ಯುದ್ಧ ಬೇಡ ಎಂದ ಮೋದಿ!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಸೇರಿದಂತೆ ವಿಶ್ವದ ಪ್ರಮುಖ ನಾಯಕರು ನರೇಂದ್ರ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಇದೀಗ ಮತ್ತೊಮ್ಮೆ ಇಡೀ ವಿಶ್ವದ ಪ್ರಮುಖ ಮಾಧ್ಯಮಗಳು (Media) ನರೇಂದ್ರ ಮೋದಿಯವರ ಮಾತಿಗೆ ಮೆಚ್ಚುಗೆ ಸೂಚಿಸಿದೆ ಅಂತ ವರದಿಯಾಗಿದೆ. ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ (Russia Ukraine War) ಮುಂದುವರೆದಿದ್ದು, ಅದನ್ನು ನಿಲ್ಲಿಸುವಂತೆ ಪುಟಿನ್‌ಗೆ ನರೇಂದ್ರ ಮೋದಿ ಸಲಹೆ ನೀಡಿದ್ದರು. ಮೋದಿಯವರ ಇದೇ ಮಾತಿಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ಮೆಚ್ಚುಗೆ ಸೂಚಿಸಿವೆ.
ಇದನ್ನೂ ಓದಿ: Narendra Modi: ಪುಟಿನ್ ಎದುರೇ ಯುದ್ಧ ಬೇಡ ಎಂದ ಮೋದಿ! ಭಾರತದ ಸಲಹೆಗೆ 'ನಮೋ' ಎಂದ ವಿಶ್ವದ ಮಾಧ್ಯಮಗಳು
ಮೈಸೂರು ಭಾಗದಲ್ಲಿ ಅಖಾಡಕ್ಕಿಳೀತಾರೆ ಲೇಡಿ ಲೀಡರ್
ಮೈಸೂರಿನಲ್ಲಿ ಭಾರತ್ ಜೋಡೋ (Bharat Jodo) ಪೂರ್ವಭಾವಿ ಸಭೆಯ ನಡೆಸಲಾಗ್ತಿದೆ. ಸಭೆಯನ್ನು ಉದ್ದೇಶಿಸಿ ಮಾತಾಡಿದ ಸಚಿವ ಡಿ ಕೆ ಶಿವಕುಮಾರ್ (D.K Shivakumar), ಮೈಸೂರು ಭಾಗಕ್ಕೆ ಯಾವತ್ತೂ ಬಾರದ ದೊಡ್ಡ ಮಹಿಳೆ ನಾಯಕಿಯಾಗಿ (Women Leaders) ಬರುತ್ತಾರೆ ಎಂದ್ರು. ಅವತ್ತು ನಾವು ಕಾಂಗ್ರೆಸ್ ಮಹಿಳೆಯರ ಶಕ್ತಿ ಪ್ರದರ್ಶನ (Strength Show) ಮಾಡಬೇಕಿದೆ. ಈ ಭಾಗಕ್ಕೆ ಬರ್ತಿರೋ ನಾಯಕಿ ಯಾರು ಅಂತ ನಾನು ಈಗ ಹೇಳಲ್ಲ. ಆ ನಾಯಕಿ ಬಂದ ದಿನ ದೊಡ್ಡ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಭಾಷಣದ ವೇಳೆ ಮತ್ತೆ ಎಡವಟ್ಟು!
ಬೆಂಗಳೂರು (ಸೆ.18): ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಭಾಷಣದ ವೇಳೆ ಎಡವಟ್ಟು ಮಾಡೋದು ಹೊಸದೇನು ಅಲ್ಲ ಈ ಹಿಂದೆ ಅನೇಕರ ಭಾರೀ ಬಾಯ್ತಪ್ಪಿನಿಂದ ಎಡವಟ್ಟು ಮಾಡಿಕೊಂಡಿದ್ರು. ಈ ಬಾರಿಯೂ ಹಾಗೇ ಆಗಿದೆ. ಮೈಸೂರಿನಲ್ಲಿ ಭಾರತ್ ಜೋಡೋ (Bharat Jodo) ಪೂರ್ವಭಾವಿ ಸಭೆಯ ಭಾಷಣದ ವೇಳೆ ಸಿದ್ದರಾಮಯ್ಯ ರಾಹುಲ್ ಬದಲು ಮೋದಿ ಜಪ ಮಾಡಿದ್ದಾರೆ. ದೇಶದ ಅಭಿವೃದ್ಧಿಗಾಗಿ (Country Development) ನರೇಂದ್ರ ಮೋದಿ (Narendra Modi) ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಹೆಸರಿಗೆ ಬದಲಾಗಿ ಮೋದಿ ಹೆಸರೇಳಿದ್ದಕ್ಕೆ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರೆಲ್ಲಾ ಶಾಕ್ ಆಗಿದ್ದಾರೆ.
ಇದನ್ನೂ ಓದಿ: Siddaramaiah: ಭಾಷಣದ ವೇಳೆ ಮತ್ತೆ ಎಡವಟ್ಟು! ರಾಹುಲ್ ಬದಲು ಮೋದಿ ಪಾದಯಾತ್ರೆ ಎಂದ ಸಿದ್ದು
ಯುವನಟಿ ಆತ್ಮಹತ್ಯೆ
ಚೆನ್ನೈ, ತಮಿಳುನಾಡು: ಭಾರತೀಯ ಚಿತ್ರರಂಗಕ್ಕೆ ಮತ್ತೊಂದು ಆಘಾತ ) ಎದುರಾಗಿದೆ. ಕೊರೋನ ಬಂದ ಬಳಿಕ ಚಿತ್ರರಂಗದ ಅನೇಕಾನೇಕ ನಟ, ನಟಿಯರು, ನಿರ್ದೇಶಕ, ನಿರ್ಮಾಪಕರು, ತಂತ್ರಜ್ಞರ ಅಕಾಲಿಕವಾಗಿ ನಿಧನರಾಗಿದ್ದಾರೆ. ಇದೀಗ ಆ ಸಾವಿನ ಸರಣಿ (Death Series) ಮತ್ತೆ ಮುಂದುವರೆದಿದೆ. ತಮಿಳು ಚಿತ್ರರಂಗದ ಪ್ರತಿಭಾನ್ವಿತ ಯುವನಟಿಯೊಬ್ಬಳು (Young Actress) ಇದೀಗ ಆತ್ಮಹತ್ಯೆಗೆ (Suicide) ಶರಣಾಗಿದ್ದಾಳೆ. ಚೆನ್ನೈನಲ್ಲಿರುವ (Chennai) ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ (Apartment) ಇಂದು ಮಧ್ಯಾಹ್ನ ಆ ಯುವನಟಿ ನೇಣಿಗೆ ಶರಣಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ